AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valimai: ಬೈಕ್​ ಸ್ಟಂಟ್​ ಮಾಡುತ್ತ ಫ್ಯಾನ್ಸ್​ ಎದೆಬಡಿತ ಹೆಚ್ಚಿಸಿದ ಅಜಿತ್​; ಹೇಗಿದೆ ಗೊತ್ತಾ ‘ವಲಿಮೈ’ ಝಲಕ್​​?

Ajith Kumar: ‘ವಲಿಮೈ’ ಚಿತ್ರದಲ್ಲಿ ಅಜಿತ್​ ಸಿಕ್ಕಾಪಟ್ಟೆ ಆ್ಯಕ್ಷನ್​ ಮಾಡಿದ್ದಾರೆ. ಸಾಹಸ ದೃಶ್ಯಗಳೇ ಈ ಸಿನಿಮಾದಲ್ಲಿ ಹೈಲೈಟ್​ ಆಗಿರಲಿವೆ ಎಂಬುದಕ್ಕೆ ವಿಡಿಯೋ​ ಮೂಲಕ ಸಾಕ್ಷಿ ಸಿಕ್ಕಿದೆ. ಅಜಿತ್​ ವಿಶೇಷವಾಗಿ ಬೈಕ್​ ಸ್ಟಂಟ್​ ಮಾಡಿದ್ದಾರೆ.

Valimai: ಬೈಕ್​ ಸ್ಟಂಟ್​ ಮಾಡುತ್ತ ಫ್ಯಾನ್ಸ್​ ಎದೆಬಡಿತ ಹೆಚ್ಚಿಸಿದ ಅಜಿತ್​; ಹೇಗಿದೆ ಗೊತ್ತಾ ‘ವಲಿಮೈ’ ಝಲಕ್​​?
‘ವಲಿಮೈ’ ಚಿತ್ರದಲ್ಲಿ ಅಜಿತ್​ ಕುಮಾರ್​
TV9 Web
| Edited By: |

Updated on: Sep 24, 2021 | 8:27 AM

Share

ನಟ ಅಜಿತ್​ ಅಜಿತ್​ ಕುಮಾರ್​ ಅಭಿಮಾನಿಗಳು ಬಹುಕಾಲದಿಂದ ‘ವಲಿಮೈ’ ಚಿತ್ರದ ಅಪ್​ಡೇಟ್​ಗಾಗಿ ಕಾಯುತ್ತಿದ್ದರು. ಸೋಶಿಯಲ್​ ಮೀಡಿಯಾ ಮೂಲಕ ಪದೇಪದೇ ನಿರ್ಮಾಪಕ ಬೋನಿ ಕಪೂರ್​ಗೆ ಒತ್ತಾಯ ಹೇರುತ್ತಿದ್ದರು. ಅಂತಹ ಎಲ್ಲ ಅಪ್ಪಟ ಅಭಿಮಾನಿಗಳಿಗೆ ಚಿತ್ರತಂಡದ ಕಡೆಯಿಂದ ಈಗ ಒಂದು ಅಪ್​ಡೇಟ್​ ಸಿಕ್ಕಿದೆ. ಟೀಸರ್ ರೀತಿಯ​ ಚಿಕ್ಕ ತುಣುಕು ಬಿಡುಗಡೆ ಮಾಡುವ ಮೂಲಕ ಚಿತ್ರದ ಬಗೆಗಿನ ಕ್ರೇಜ್​ ಹೆಚ್ಚಿಸಲಾಗಿದೆ. ಅಲ್ಲದೇ ‘ವಲಿಮೈ’ ರಿಲೀಸ್​ ದಿನಾಂಕ ಕೂಡ ಅನೌನ್ಸ್​ ಮಾಡಲಾಗಿದೆ. 2022ರ ಸಂಕ್ರಾಂತಿ ಹಬ್ಬಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ.

ಅಜಿತ್​ ಕುಮಾರ್​ಗೆ ತಮಿಳುನಾಡಿನಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಅಭಿಮಾನಿಗಳಿದ್ದಾರೆ. 2019ರ ಆಗಸ್ಟ್​ನಲ್ಲಿ ಬಿಡುಗಡೆಯಾದ ‘ನೇರ್ಕೊಂಡ ಪಾರ್ವೈ’ ಬಳಿಕ ಅವರ ಬೇರೆ ಯಾವುದೇ ಸಿನಿಮಾ ತೆರೆಕಂಡಿಲ್ಲ. ಹಾಗಾಗಿ ಅಜಿತ್​ ಅವರನ್ನು ದೊಡ್ಡ ಪರದೆ ಮೇಲೆ ನೋಡಲು ಫ್ಯಾನ್ಸ್​ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಆದಷ್ಟು ಬೇಗ ‘ವಲಿಮೈ’ ಬಿಡುಗಡೆಯಾಗಲಿ ಎಂದು ಹಂಬಲಿಸುತ್ತಿದ್ದ ಅಭಿಮಾನಿಗಳಿಗೆಲ್ಲ ಈ ವಿಡಿಯೋ ತುಣುಕಿನ​ ಮೂಲಕ ಸಿಹಿ ಸುದ್ದಿ ನೀಡಲಾಗಿದೆ. ಈ ಸಿನಿಮಾದಲ್ಲಿ ಆ್ಯಕ್ಷನ್​ ಹೇಗಿರಲಿದೆ ಎಂಬುದರ ಝಲಕ್​ ಕೂಡ ಈ ವಿಡಿಯೋದಲ್ಲಿ ತೋರಿಸಲಾಗಿದೆ.

‘ವಲಿಮೈ’ ಚಿತ್ರದಲ್ಲಿ ಅಜಿತ್​ ಸಿಕ್ಕಾಪಟ್ಟೆ ಆ್ಯಕ್ಷನ್​ ಮಾಡಿದ್ದಾರೆ. ಸಾಹಸ ದೃಶ್ಯಗಳೇ ಸಿನಿಮಾದ ಹೈಲೈಟ್​ ಆಗಿರಲಿವೆ ಎಂಬುದಕ್ಕೆ ವಿಡಿಯೋ​ ಮೂಲಕ ಸಾಕ್ಷಿ ಸಿಕ್ಕಿದೆ. ಅದರಲ್ಲೂ ಅಜಿತ್​ ವಿಶೇಷವಾಗಿ ಬೈಕ್​ ಸ್ಟಂಟ್​ ಮಾಡಿದ್ದಾರೆ. ಅದನ್ನು ಕಂಡರೆ ಮೈನವಿರೇಳುವಂತಿದೆ. ದೊಡ್ಡ ಪರದೆಯಲ್ಲಿ ಈ ಸಾಹಸ ದೃಶ್ಯಗಳನ್ನು ನೋಡಿದರೆ ಪ್ರೇಕ್ಷಕರ ಎದೆಬಡಿತ ಹೆಚ್ಚುವುದು ಗ್ಯಾರಂಟಿ. ಯೂಟ್ಯೂಬ್​ನಲ್ಲಿ​ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 52 ಲಕ್ಷಕ್ಕೂ ಅಧಿಕ ಬಾರಿ ಈ ವಿಡಿಯೋ ವೀಕ್ಷಣೆ ಕಂಡಿದೆ. ಇದನ್ನು ಚಿತ್ರತಂಡ ಟೀಸರ್​ ಎಂದು ಕರೆದಿಲ್ಲ. ಮುಂದಿನ ದಿನಗಳಲ್ಲಿ ಟೀಸರ್​ ಮತ್ತು ಟ್ರೇಲರ್​ ಬಿಡುಗಡೆ ಆಗಲಿದೆ. ಅದಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

‘ನೇರ್ಕೊಂಡ ಪಾರ್ವೈ’ ಚಿತ್ರಕ್ಕೆ ಆ್ಯಕ್ಷನ್​-ಕಟ್ ಹೇಳಿದ್ದ ಎಚ್​. ವಿನೋದ್​ ಅವರೇ ‘ವಲಿಮೈ’ ಚಿತ್ರಕ್ಕೂ ನಿರ್ದೇಶನ ಮಾಡಿದ್ದಾರೆ. ಬೋನಿ ಕಪೂರ್​ ಬಂಡವಾಳ ಹೂಡಿದ್ದಾರೆ. ಹಾಗಾಗಿ ಈ ಕಾಂಬಿನೇಷನ್​ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ನಾಯಕಿಯಾಗಿ ಹುಮಾ ಖುರೇಶಿ ನಟಿಸಿದ್ದಾರೆ.

ಇದನ್ನೂ ಓದಿ:

Ajith Kumar: ನಟ ಅಜಿತ್​ ಮನೆಗೆ ಬಾಂಬ್​ ಬೆದರಿಕೆ ಕರೆ; ಪೊಲೀಸ್​ ತಪಾಸಣೆಯಿಂದ ಬಯಲಾದ ಸತ್ಯವೇನು?

Viral Video: ಚೆನ್ನೈನಲ್ಲಿ ಆಟೋದಲ್ಲಿ ಪ್ರಯಾಣಿಸಿದ ಸ್ಟಾರ್​ ನಟನ ಸರಳತೆ ನೋಡಿ ಅಭಿಮಾನಿಗಳು ಫುಲ್​ ಖುಷ್​

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್