AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಚೆನ್ನೈನಲ್ಲಿ ಆಟೋದಲ್ಲಿ ಪ್ರಯಾಣಿಸಿದ ಸ್ಟಾರ್​ ನಟನ ಸರಳತೆ ನೋಡಿ ಅಭಿಮಾನಿಗಳು ಫುಲ್​ ಖುಷ್​

Valimai ಸಿನಿಮಾ ಬಗ್ಗೆ ಅಜಿತ್ ಅಭಿಮಾನಿಗಳು ಸಿಕ್ಕಾಪಟೆ ಕಾತರದಿಂದ ಕಾಯುತ್ತಿದ್ದು, ಮೇ 1, ಅಜಿತ್​ ಕುಮಾರ್​ ಅವರ 50ನೇ ಹುಟ್ಟುಹಬ್ಬದ ದಿನ ಚಿತ್ರದ ಫಸ್ಟ್​ ಲುಕ್​ನ್ನು ಬಿಡುಗಡೆ ಮಾಡುವುದಾಗಿ ಬೋನಿಕಪೂರ್ ಇತ್ತೀಚೆಗಷ್ಟೇ ತಿಳಿಸಿದ್ದಾರೆ.

Viral Video: ಚೆನ್ನೈನಲ್ಲಿ ಆಟೋದಲ್ಲಿ ಪ್ರಯಾಣಿಸಿದ ಸ್ಟಾರ್​ ನಟನ ಸರಳತೆ ನೋಡಿ ಅಭಿಮಾನಿಗಳು ಫುಲ್​ ಖುಷ್​
ಆಟೋದಲ್ಲಿ ಪ್ರಯಾಣಿಸುತ್ತಿರುವ ತಮಿಳು ಸ್ಟಾರ್ ನಟ
Lakshmi Hegde
|

Updated on: Mar 20, 2021 | 5:59 PM

Share

ತಮಿಳು ಸ್ಟಾರ್​ ನಟ ಅಜಿತ್​ ಕುಮಾರ್​ ತುಂಬ ಸರಳ ವ್ಯಕ್ತಿ. ಅಷ್ಟು ದೊಡ್ಡ ಸ್ಟಾರ್ ಆದರೂ ಸಾಮಾನ್ಯರಂತೆ ಇರುತ್ತಾರೆ. ಇದೇ ಕಾರಣಕ್ಕೆ ಅಭಿಮಾನಿಗಳಿಗೂ ಹತ್ತಿರವಾಗಿದ್ದಾರೆ. ಅಜಿತ್​ ಸಿನಿಲೋಕಕ್ಕೆ ಬಂದ ಪ್ರಾರಂಭದ ದಿನಗಳಲ್ಲಿ ಬಹುತೇಕ ಲವರ್ ಬಾಯ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅವರ ಬಹುತೇಕ ಸಿನಿಮಾಗಳು ತೆಲುಗು ಭಾಷೆಯಲ್ಲಿ ಡಬ್​ ಆಗಿವೆ. ಎಷ್ಟೇ ದೊಡ್ಡ ನಟನಾದರೂ ಇವರು ಮ್ಯಾನ್​ ಆಫ್​ ಸಿಂಪ್ಲಿಸಿಟಿ (ಸರಳ ವ್ಯಕ್ತಿ)ಎಂದೇ ಪ್ರಸಿದ್ಧರಾಗಿದ್ದಾರೆ. ಇವರ ಸರಳತೆಗೆ ಸಾಕ್ಷಿಯಾಗುವ ವಿಡಿಯೋಗಳನ್ನು ಅವರ ಅಭಿಮಾನಿಗಳು ಆಗಾಗ ಟ್ವಿಟರ್​, ಇನ್​ಸ್ಟಾಗ್ರಾಂನಲ್ಲಿ ಆಗಾಗ ಶೇರ್​ ಮಾಡುತ್ತಿರುತ್ತಾರೆ.

ಇತ್ತೀಚೆಗಷ್ಟೇ ಹೈದರಾಬಾದ್​ನ ರಸ್ತೆಗಳಲ್ಲಿ ಅಜಿತ್ ಅವರು ಸೈಕಲ್​ ಹೊಡೆಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಹಾಗೇ ಇದೀಗ ಅಜಿತ್ ಸಾಮಾನ್ಯರಂತೆ ಆಟೋದಲ್ಲಿ ಪ್ರಯಾಣ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ಸದ್ದುಮಾಡುತ್ತಿದೆ. ಅಜಿತ್​ ನಟನೆಯ ಥ್ರಿಲ್ಲರ್ ಸಿನಿಮಾ ವಲಿಮೈ ಮುಂಬರುವ ಆಗಸ್ಟ್​ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

ಬೋನಿಕಪೂರ್​ ನಿರ್ಮಾಣ ಮಾಡಿ, ಎಚ್​.ವಿನೋದ್​ ನಿರ್ದೇಶಿಸಿರುವ ವಲಿಮೈ ಬಿಡುಗಡೆಗೆ ಕೊವಿಡ್-19 ಅಡ್ಡಿಯಾಗುತ್ತಿದೆ. ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್ಸ್​ ಸಿಗುತ್ತಿಲ್ಲ ಎಂದು ಬೇಸರದಲ್ಲಿದ್ದ ಅಭಿಮಾನಿಗಳು ಅಜಿತ್ ಕುಮಾರ್​​ರನ್ನು​ ಚೆನ್ನೈನಲ್ಲಿ ಆಟೋದಲ್ಲಿ ನೋಡಿ ಫುಲ್ ಖುಷಿಯಾಗಿದ್ದಾರೆ. ಸಂಪೂರ್ಣ ಕಪ್ಪು ಬಟ್ಟೆಯನ್ನೇ ಧರಿಸಿದ್ದ ಅಜಿತ್ ಕುಮಾರ್​, ಮುಖಕ್ಕೆ ಮಾಸ್ಕ್​ ಹಾಕಿದ್ದರು. ಆಟೋದಲ್ಲಿ ಒಬ್ಬರೇ ಇದ್ದ ಅವರ ವಿಡಿಯೋವನ್ನು ಸಾರ್ವಜನಿಕರು ಯಾರೋ ಚಿತ್ರೀಕರಿಸಿ, ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಅದನ್ನೀಗ ಅನೇಕರು ಶೇರ್ ಮಾಡಿಕೊಂಡಿದ್ದಾರೆ.

ವಲಿಮೈ ಬಗ್ಗೆ ಅಜಿತ್ ಅಭಿಮಾನಿಗಳು ಸಿಕ್ಕಾಪಟೆ ಕಾತರದಿಂದ ಕಾಯುತ್ತಿದ್ದು, ಮೇ 1, ಅಜಿತ್​ ಕುಮಾರ್​ ಅವರ 50ನೇ ಹುಟ್ಟುಹಬ್ಬದ ದಿನ ಚಿತ್ರದ ಫಸ್ಟ್​ ಲುಕ್​ನ್ನು ಬಿಡುಗಡೆ ಮಾಡುವುದಾಗಿ ಬೋನಿಕಪೂರ್ ಇತ್ತೀಚೆಗಷ್ಟೇ ತಿಳಿಸಿದ್ದಾರೆ.

Follow Us
Lakshmi Hegde
Lakshmi Hegde
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​