Kapil Sharma: ನ್ಯಾಯಾಲಯದ ಗೌರವಕ್ಕೆ ಅಪಮಾನದ ಆರೋಪ; ಕಪಿಲ್ ಶರ್ಮಾ ಶೋ ವಿರುದ್ಧ ಬಿತ್ತು FIR!

Kapil Sharma Show: ಖ್ಯಾತ ನಿರೂಪಕ ಕಪಿಲ್ ಶರ್ಮಾ ಹಾಗೂ ಕಪಿಲ್ ಶರ್ಮಾ ಶೋದ ತಂಡಕ್ಕೆ ಹೊಸ ಸಮಸ್ಯೆ ಎದುರಾಗಿದೆ. ನ್ಯಾಯಾಲಯದ ದೃಶ್ಯವೊಂದನ್ನು ತೋರಿಸುವ ವೇಳೆ, ನ್ಯಾಯಾಲಯದ ಗೌರವಕ್ಕೆ ಚ್ಯುತಿ ತಂದಿದ್ದಾರೆ ಎಂಬ ದೂರಿನ ಆಧಾರದ ಮೇಲೆ ಎಫ್​ಐಆರ್ ದಾಖಲಾಗಿದೆ.

ಹಿಂದಿಯ ಜನಪ್ರಿಯ ಶೋಗಳಲ್ಲಿ ಒಂದಾದ ‘ದಿ ಕಪಿಲ್ ಶರ್ಮಾ ಶೋ’ ನಿರ್ಮಾಪಕರಿಗೆ ಸಂಕಷ್ಟ ಎದುರಾಗಿದೆ. ನ್ಯಾಯಾಲಯದ ದೃಶ್ಯವನ್ನು ತೋರಿಸುವಾಗ ಪಾತ್ರವು ಕುಡಿದಿದ್ದಂತೆ ವರ್ತಿಸಿತ್ತು. ಇದು ನ್ಯಾಯಾಲಯದ ಗೌರವಕ್ಕೆ ಧಕ್ಕೆ ತಂದೊಡ್ಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 2020ರ ಜನವರಿ 19ರ ಸಂಚಿಕೆಯಲ್ಲಿ ಈ ದೃಶ್ಯವಿತ್ತು. ಈ ಸಂಚಿಕೆಯನ್ನು 24 ಏಪ್ರಿಲ್ 2021 ರಂದು ಮರುಪ್ರಸಾರ ಮಾಡಲಾಗಿದೆ.

ಈ ಬಗ್ಗೆ ತನಿಖೆ ನಡೆಸಲು ಪೊಲೀಸರಿಗೆ ಆದೇಶಿಸಬೇಕು ಎಂದು ಮಧ್ಯಪ್ರದೇಶದ ಶಿವಪುರಿಯ ವಕೀಲರು ನ್ಯಾಯಾಲಯವನ್ನು ಕೋರಿದ್ದು, ದೂರನ್ನು ದಾಖಲಿಸಿದ್ದಾರೆ. ಕಪಿಲ್ ಶರ್ಮಾ, ಕಪಿಲ್ ಶರ್ಮಾ ಶೋ ಹಾಗೂ ಆ ಸಂಚಿಕೆಯ ಕಲಾವಿದರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಈ ಸಂಚಿಕೆಯಲ್ಲದೇ ಇತರ ಹಲವು ಸಂಚಿಕೆಗಳಲ್ಲಿ ಮಹಿಳೆಯರನ್ನು ಅವಮಾನಿಸುವ ದೃಶ್ಯಗಳನ್ನು ತೋರಿಸಲಾಗಿದೆ ಎಂದು ಕೂಡ ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣದ ವಿಚಾರಣೆ ಅಕ್ಟೋಬರ್ 1 ರಂದು ನಡೆಯಲಿದೆ.

ಇದನ್ನೂ ಓದಿ:

KL Rahul and Athiya Shetty: ಮುಂದುವರೆದಿದೆ ರಾಹುಲ್- ಆಥಿಯಾ ತುಂಟಾಟ; ಈ ಬಾರಿ ಏನು ಸಮಾಚಾರ?

‘ಗೂಳಿ’ ನಟಿಯ ಮನೆಗೆ ಬಂತು ಎರಡು ಕೋಟಿ ಮೌಲ್ಯದ ಐಷಾರಾಮಿ ಕಾರು

‘ಪುಕ್ಸಟ್ಟೆ ಲೈಫು’ ವಿಮರ್ಶೆ: ಭರಪೂರ ನಗಿಸಿ ಚೆಂದದ ಸಂದೇಶ ಕೊಟ್ಟುಹೋದ ಸಂಚಾರಿ ವಿಜಯ್​

(A case filed in Madhya Pradesh against Kapil Sharma and Kapil Sharma Show)

Click on your DTH Provider to Add TV9 Kannada