‘ಗೂಳಿ’ ನಟಿಯ ಮನೆಗೆ ಬಂತು ಎರಡು ಕೋಟಿ ಮೌಲ್ಯದ ಐಷಾರಾಮಿ ಕಾರು
ಮಮತಾ ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ. ಹಿಂದಿಯಲ್ಲಿ ತೆರೆಗೆ ಬಂದ ‘ಅಂಧಾಧೂನ್’ ಸಿನಿಮಾ ಇತ್ತೀಚೆಗೆ ತೆಲುಗಿಗೆ ರಿಮೇಕ್ ಆಗಿ ಮೆಚ್ಚುಗೆ ಪಡೆದುಕೊಂಡಿತ್ತು. ಈ ಸಿನಿಮಾ ಈಗ ಮಲಯಾಳಂನಲ್ಲೂ ತೆರೆಗೆ ಬರುತ್ತಿದೆ.
ಕಿಚ್ಚ ಸುದೀಪ್ ನಟನೆಯ ‘ಗೂಳಿ’ ಸಿನಿಮಾದಲ್ಲಿ ನಟಿಸಿದ್ದ ಮಮತಾ ಮೋಹನ್ದಾಸ್ ಅವರ ಬಹಳ ವರ್ಷಗಳ ಕನಸು ಈಗ ನನಸಾಗಿದೆ. ಅವರು ಐಷಾರಾಮಿ ಪೋರ್ಷಾ 911 ಕ್ಯಾರೆರಾ ಕಾರನ್ನು ಖರೀದಿಸಿದ್ದಾರೆ. ಇದರ ಮಾರುಕಟ್ಟೆ ಬೆಲೆ ಸುಮಾರು ಎರಡು ಕೋಟಿ ರೂಪಾಯಿ ಇದೆ. ಕಾರಿನ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
‘ಕನಸು ಇಂದು ನನಸಾಗಿದೆ. ನಾನು ಇದಕ್ಕಾಗಿ ದಶಕದಿಂದ ಕಾಯುತ್ತಿದೆ. ನನ್ನ ಕುಟುಂಬದ ಹೊಸ ಮಗುವನ್ನು ಪರಿಚಯಿಸಲು ಖುಷಿಯಾಗುತ್ತಿದೆ. ಪೋರ್ಷಾ 911 ಕ್ಯಾರೆರಾ’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಈ ಕಾರಿನ ಬೆಲೆ 1.80 ಕೋಟಿ ರೂಪಾಯಿ ಇದೆ. ಟ್ಯಾಕ್ಸ್ ಮೊತ್ತ ಸೇರಿದರೆ ಎರಡು ಕೋಟಿ ರೂಪಾಯಿ ದಾಟಲಿದೆ.
ಮಮತಾ ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ. ಹಿಂದಿಯಲ್ಲಿ ತೆರೆಗೆ ಬಂದ ‘ಅಂಧಾಧೂನ್’ ಸಿನಿಮಾ ಇತ್ತೀಚೆಗೆ ತೆಲುಗಿಗೆ ರಿಮೇಕ್ ಆಗಿ ಮೆಚ್ಚುಗೆ ಪಡೆದುಕೊಂಡಿತ್ತು. ಈ ಸಿನಿಮಾ ಈಗ ಮಲಯಾಳಂನಲ್ಲೂ ತೆರೆಗೆ ಬರುತ್ತಿದೆ. ಹಿಂದಿಯಲ್ಲಿ ಟಬು ಮಾಡಿದ ಪಾತ್ರವನ್ನು ಮಮತಾ ಮಲಯಾಳಂನಲ್ಲಿ ನಿರ್ವಹಿಸುತ್ತಿದ್ದಾರೆ. ಪೃಥ್ವಿರಾಜ್ ಹಾಗೂ ರಾಶಿ ಖನ್ನಾ ಕೂಡ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಸಿನಿಮಾ ನೇರವಾಗಿ ಒಟಿಟಿಯಲ್ಲಿ ತೆರೆಗೆ ಬರಲಿದೆ.
ಮಮತಾ 2005ರಲ್ಲಿ ಚಿತ್ರರಂಗಕ್ಕೆ ಬಂದರು. ‘ಮಯೂಖಮ್’ ಅವರ ಮೊದಲ ಸಿನಿಮಾ. ಮಲಯಾಳಂನಲ್ಲಿ ಸಾಕಷ್ಟು ಚಿತ್ರ ಮಾಡಿದ ನಂತರ ಮಮತಾ ತಮಿಳು ಹಾಗೂ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟರು. 2008ರಲ್ಲಿ ತೆರೆಗೆ ಬಂದ ಸುದೀಪ್ ನಟನೆಯ ‘ಗೂಳಿ’ ಚಿತ್ರದಲ್ಲೂ ನಾಯಕಿಯಾಗಿ ಕಾಣಿಸಿಕೊಂಡರು ಮಮತಾ. ಈ ಚಿತ್ರವೇ ಮೊದಲು ಮತ್ತು ಕೊನೆ. ನಂತರ ಅವರು ಕನ್ನಡಕ್ಕೆ ಮರಳಲೇ ಇಲ್ಲ. ಮಮತಾ ವಿದ್ಯಾಭ್ಯಾಸ ಮಾಡಿದ್ದು ಬೆಂಗಳೂರಿನಲ್ಲಿ. ಮಮತಾಗೆ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಅವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 2014ರಿಂದ ಅಮೆರಿಕದ ಲಾಸ್ ಏಂಜಲೀಸ್ನಲ್ಲೇ ಅವರು ವಾಸವಾಗಿದ್ದಾರೆ.
ಇದನ್ನೂ ಓದಿ: ದುಬೈನಲ್ಲಿ ಕಿಚ್ಚ; ಬುರ್ಜ್ ಖಲೀಫಾ ಫೋಟೋ ಹಾಕಿ ‘ವಿಕ್ರಾಂತ್ ರೋಣ’ ಟೈಟಲ್ ಲಾಂಚ್ ನೆನಪಿಸಿಕೊಂಡ ಸುದೀಪ್
Kichcha Sudeep: ಐಪಿಎಲ್ನಲ್ಲಿ ಮಿಂಚುತ್ತಿರುವ ಕಿಚ್ಚ ಸುದೀಪ್; ಇಲ್ಲಿವೆ ಫೋಟೋಗಳು