KL Rahul and Athiya Shetty: ಮುಂದುವರೆದಿದೆ ರಾಹುಲ್- ಆಥಿಯಾ ತುಂಟಾಟ; ಈ ಬಾರಿ ಏನು ಸಮಾಚಾರ?

ಕ್ರಿಕೆಟಿಗ ಕೆ.ಎಲ್ ರಾಹುಲ್ ಹಾಗೂ ನಟಿ ಆಥಿಯಾ ಶೆಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಈ ಗಾಸಿಪ್ ಜೋಡಿಯ ಮಾತುಕತೆ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ.

KL Rahul and Athiya Shetty: ಮುಂದುವರೆದಿದೆ ರಾಹುಲ್- ಆಥಿಯಾ ತುಂಟಾಟ; ಈ ಬಾರಿ ಏನು ಸಮಾಚಾರ?
ಕೆ.ಎಲ್.ರಾಹುಲ್ ಮತ್ತು ಆಥಿಯಾ ಶೆಟ್ಟಿ
Follow us
TV9 Web
| Updated By: shivaprasad.hs

Updated on:Sep 24, 2021 | 5:25 PM

ಕ್ರಿಕೆಟಿಗರಾದ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ನಡುವಿನ ಗಾಸಿಪ್ ಅಭಿಮಾನಿಗಳಿಗೆ ಹೊಸದಲ್ಲ. ಆದರೆ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಕೀಟಲೆ ಮಾಡುತ್ತಾ, ಎಲ್ಲರ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ರಾಹುಲ್ ಅಭಿಮಾನಿಗಳೊಂದಿಗೆ ಇನ್ಸ್ಟಾಗ್ರಾಂನಲ್ಲಿ ಸಂವಹನ ನಡೆಸಿದ್ದು, ಅಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಇದೇ ವೇಳೆ ಆಥಿಯಾ ಶೆಟ್ಟಿ ಕೂಡ ಪ್ರಶ್ನೆ ಕೇಳಿದ್ದು, ಅದಕ್ಕೆ ರಾಹುಲ್ ನೀಡಿರುವ ಉತ್ತರ ಬಹಳ ಮಜವಾಗಿದೆ.

ಆಥಿಯಾ ಪ್ರಶ್ನೆಯಲ್ಲಿ ‘ನೀವು ನನಗೆ ವಿಡಿಯೊ ಕರೆ ಮಾಡಿ’ ಎಂದು ಕೋರಿಕೊಂಡಿದ್ದಾರೆ. ಇದಕ್ಕೆ ರಾಹುಲ್ ಉತ್ತರ ಬರೆದಿದ್ದು, ‘ನೀವು ನನ್ನ ವಿಡಿಯೊ ಕರೆಯನ್ನು ಸ್ವೀಕರಿಸದಿದ್ದಾಗ’ ಎಂದು ಬರೆದು ಅವರ ಬೇಸರದ ಮುಖದ ಚಿತ್ರವನ್ನು ಹಾಕಿದ್ದಾರೆ. ಈ ಚಿತ್ರ ಬಹಳ ಮಜವಾಗಿದ್ದು, ಪ್ರಾಣಿ ವೇಷಧಾರಿಯೊಬ್ಬನೊಂದಿಗೆ ರಾಹುಲ್ ಮಿಕಮಿಕ ನೋಡುತ್ತಿರುವ ಚಿತ್ರವಾಗಿದೆ. ರಾಹುಲ್ ಉತ್ತರವನ್ನು ನೋಡಿದ ಅಭಿಮಾನಿಗಳು ಬಿದ್ದು ಬಿದ್ದು ನಕ್ಕಿದ್ದು, ಈ ಗಾಸಿಪ್ ಜೋಡಿಯ ತರಲೆಗೆ ಮಾರು ಹೋಗಿದ್ದಾರೆ.

ರಾಹುಲ್ ಹಂಚಿಕೊಂಡ ಚಿತ್ರ:

KL Rahul

ಕೆಎಲ್ ರಾಹುಲ್ ಹಂಚಿಕೊಂಡ ಚಿತ್ರ

ಕೆಲವು ಸಮಯದ ಹಿಂದೆ ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗ, ಅಥಿಯಾ ಕೂಡ ಅಲ್ಲಿ ಹಾಜರಿದ್ದರು. ಇಬ್ಬರ ಪೋಸ್ಟ್‌ಗಳು ಕೂಡ ಇದನ್ನು ಹಲವು ಬಾರಿ ಸಾಬೀತುಪಡಿಸಿದ್ದವು. ಅಂದಹಾಗೆ, ಇತ್ತೀಚೆಗೆ ಇಬ್ಬರ ನಡುವಿನ ಬಾಂಧವ್ಯ ಬಲಗೊಳ್ಳುತ್ತಿದೆ. ಇಬ್ಬರೂ ತಾರೆಯರು ತಮ್ಮ ವೈಯಕ್ತಿಕ ಜೀವನದ ಕುರಿತು ಮಾತನಾಡದಿದ್ದರೂ, ಸಂಬಂಧವನ್ನು ನಿರಾಕರಿಸಿಯೂ ಇಲ್ಲ. ಇದಕ್ಕೆ ಪುಷ್ಟಿ ನೀಡುವಂತೆ ಆಥಿಯಾ ತಂದೆ ಸುನೀಲ್ ಶೆಟ್ಟಿ ಕೂಡ ರಾಹುಲ್ ಗುಣಗಾನ ಮಾಡಿದ್ದರು. ‘‘ಇಬ್ಬರೂ (ರಾಹುಲ್, ಆಥಿಯಾ) ತೆರೆಯ ಮೇಲೆ ಬಹಳ ಒಳ್ಳೆಯ ಜೋಡಿ’’ ಎಂದು ಹೇಳಿ ಅವರು ಒಮ್ಮೆ ನಕ್ಕಿದ್ದರು. ಜೊತೆಗೆ ಇನ್ಸ್ಟಾಗ್ರಾಂನಲ್ಲಿ ರಾಹುಲ್ ಹಾಗೂ ಸುನೀಲ್ ಹುಟ್ಟುಹಬ್ಬಕ್ಕೆ ಪರಸ್ಪರ ಶುಭ ಹಾರೈಸಿದ್ದರು. ಈ ಎಲ್ಲಾ ಅಂಶಗಳು ರಾಹುಲ್- ಆಥಿಯಾ ಸಂಬಂಧವನ್ನು ಮತ್ತಷ್ಟು ಪುಷ್ಟೀಕರಿಸಿದ್ದವು.

ಆಥಿಯಾ 2015 ರಲ್ಲಿ ‘ಹೀರೋ’ ಚಿತ್ರದ ಮೂಲಕ ಬಾಲಿವುಡ್​ಗೆ ಪ್ರವೇಶಿಸಿದರು. ನಟ ಸೂರಜ್ ಪಂಚೋಲಿ ಜೊತೆಯಾಗಿ ಅಥಿಯಾ ನಟಿಸಿದ್ದರು. ಆದರೆ  ಚಿತ್ರ ಹೆಚ್ಚು ಸುದ್ದಿ ಮಾಡಿರಲಿಲ್ಲ. ಇದಲ್ಲದೇ ಅವರು ‘ಮುಬಾರಕನ್’ ಮತ್ತು ‘‘ಮೋತಿಚೋರ್ ಚಕ್ನಚೋರ್’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ಧಾರೆ. ಅವರು ತಮ್ಮ ಮುಂದಿನ ಚಿತ್ರವನ್ನು ಇನ್ನೂ ಘೋಷಿಸಿಲ್ಲ.

ಇದನ್ನೂ ಓದಿ:

‘ಪುಕ್ಸಟ್ಟೆ ಲೈಫು’ ವಿಮರ್ಶೆ: ಭರಪೂರ ನಗಿಸಿ ಚೆಂದದ ಸಂದೇಶ ಕೊಟ್ಟುಹೋದ ಸಂಚಾರಿ ವಿಜಯ್​

ಶಮಿತಾ ಶೆಟ್ಟಿ ಬಿಗ್​ ಬಾಸ್​ ಆಟ ಇನ್ನೂ ನಿಂತಿಲ್ಲ; ದೊಡ್ಮನೆಯಲ್ಲಿ ಮತ್ತೆ ಸೌಂಡು ಮಾಡಲಿರುವ ಶಿಲ್ಪಾ ತಂಗಿ

(KL Rahul shares his expression when Athiya Shetty does not pick up his video call)

Published On - 5:24 pm, Fri, 24 September 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ