AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಮಿತಾ ಶೆಟ್ಟಿ ಬಿಗ್​ ಬಾಸ್​ ಆಟ ಇನ್ನೂ ನಿಂತಿಲ್ಲ; ದೊಡ್ಮನೆಯಲ್ಲಿ ಮತ್ತೆ ಸೌಂಡು ಮಾಡಲಿರುವ ಶಿಲ್ಪಾ ತಂಗಿ

ಶಮಿತಾ ಶೆಟ್ಟಿ ಅವರನ್ನು ಬಿಗ್​ ಬಾಸ್​ ಹೊಸ ಸೀಸನ್​ಗೆ ಆಯ್ಕೆ ಮಾಡಿಕೊಂಡರೆ ಒಂದಷ್ಟು ಟಿಆರ್​ಪಿ ಖಂಡಿತವಾಗಿ ಬರಲಿದೆ ಎಂದು ಆಯೋಜಕರು ಪ್ಲ್ಯಾನ್​ ಮಾಡಿಕೊಂಡಂತಿದೆ. ರಾಕೇಶ್​ ಬಾಪಟ್​ಗೆ ಈ ಬಾರಿ ಅವಕಾಶ ಇದೆಯೋ ಇಲ್ಲವೋ ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

ಶಮಿತಾ ಶೆಟ್ಟಿ ಬಿಗ್​ ಬಾಸ್​ ಆಟ ಇನ್ನೂ ನಿಂತಿಲ್ಲ; ದೊಡ್ಮನೆಯಲ್ಲಿ ಮತ್ತೆ ಸೌಂಡು ಮಾಡಲಿರುವ ಶಿಲ್ಪಾ ತಂಗಿ
ಶಮಿತಾ ಶೆಟ್ಟಿ, ಶಿಲ್ಪಾ ಶೆಟ್ಟಿ
TV9 Web
| Edited By: |

Updated on: Sep 24, 2021 | 1:19 PM

Share

ಇತ್ತೀಚೆಗಷ್ಟೇ ಬಿಗ್​ ಬಾಸ್​ ಓಟಿಟಿ ಕಾರ್ಯಕ್ರಮ ಅಂತ್ಯವಾಯಿತು. ನಟಿ ದಿವ್ಯಾ ಅಗರ್​ವಾಲ್ ಅವರು ಈ ಶೋನ ಮೊದಲ ಸೀಸನ್​ ವಿನ್ನರ್​ ಆಗಿ ಟ್ರೋಫಿ ಪಡೆದು ಸಂಭ್ರಮಿಸಿದರು. ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಕೂಡ ಈ ಕಾರ್ಯಕ್ರಮದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. ರಾಕೇಶ್​ ಬಾಪಟ್​ ಜೊತೆಗಿನ ಅವರ ಪ್ರೀತಿ-ಪ್ರೇಮ-ಪ್ರಯಣದ ಸಂಗತಿಗಳು ಎಲ್ಲರ ಗಮನ ಸೆಳೆದಿದ್ದವು. ಇಷ್ಟಕ್ಕೇ ಮುಗಿಯಿತು ಎಂದುಕೊಳ್ಳುವಂತಿಲ್ಲ. ಶಮಿತಾ ಶೆಟ್ಟಿ ಮತ್ತೆ ಆಟ ಮುಂದುವರಿಸಲಿದ್ದಾರೆ. ಅಂದರೆ ಸಲ್ಮಾನ್​ ಖಾನ್​ ನಡೆಸಿಕೊಡುವ ಹೊಸ ಬಿಗ್​ ಬಾಸ್​ ಸೀಸನ್​ನಲ್ಲಿ ಶಮಿತಾ ಶೆಟ್ಟಿ ಮತ್ತೆ ಭಾಗವಹಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ಬಿಗ್​ ಬಾಸ್​ ಓಟಿಟಿ ಕಾರ್ಯಕ್ರಮದಲ್ಲಿ ಟ್ರೋಫಿ ಗೆಲ್ಲುವ ಅವಕಾಶವನ್ನು ಬಿಟ್ಟುಕೊಟ್ಟ ಪ್ರತೀಕ್ ಸೆಹಜ್ಪಾಲ್​ ಅವರು ನೇರವಾಗಿ ‘ಬಿಗ್​ ಬಾಸ್​ 15’ ಪ್ರವೇಶಿಸುವ ಚಾನ್ಸ್​ ಪಡೆದುಕೊಂಡರು. ಆ ಮೂಲಕ ಅವರ ಎಂಟ್ರಿ ಖಚಿತವಾಯಿತು. ಈಗ ಬಿಗ್​ ಬಾಸ್​ನ ಸುದ್ದಿಗೋಷ್ಠಿ ನಡೆದಿದ್ದು, ಅದರಲ್ಲಿ ಕೆಲವು ವಿಚಾರಗಳು ಬಹಿರಂಗ ಆಗಿವೆ. ಶಮಿತಾ ಶೆಟ್ಟಿ, ನಿಶಾಂತ್​ ಭಟ್​, ಉಮರ್​ ರಿಯಾಜ್​ ಮುಂತಾದವರು ‘ಬಿಗ್​ ಬಾಸ್​ 15’​ರಲ್ಲಿ ಸ್ಪರ್ಧಿಸುತ್ತಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಬಿಗ್​ ಬಾಸ್​ ಓಟಿಟಿಯಲ್ಲಿ ಶಮಿತಾ ಶೆಟ್ಟಿ ಸೆಕೆಂಡ್​ ರನ್ನರ್​ ಅಪ್​ ಆಗಿ ಹೊರಹೊಮ್ಮಿದರು. ಬಿಗ್​ ಬಾಸ್​ ಮನೆಯಲ್ಲಿ ಇದ್ದಷ್ಟು ದಿನವೂ ಅವರು ವೀಕ್ಷಕರ ಗಮನ ಸೆಳೆಯೋಕೆ ಒಂದಿಲ್ಲೊಂದು ಡ್ರಾಮಾ ಮಾಡುತ್ತಲೇ ಇದ್ದರು. ಅವರನ್ನು ಬಿಗ್​ ಬಾಸ್​ ಹೊಸ ಸೀಸನ್​ಗೆ ಆಯ್ಕೆ ಮಾಡಿಕೊಂಡರೆ ಒಂದಷ್ಟು ಟಿಆರ್​ಪಿ ಖಂಡಿತವಾಗಿ ಬರಲಿದೆ ಎಂದು ಆಯೋಜಕರು ಪ್ಲ್ಯಾನ್​ ಮಾಡಿಕೊಂಡಂತಿದೆ. ಹಾಗಾಗಿ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬ ಸುದ್ದಿ ಕೇಳಿಬಂದಿದೆ. ಶಮಿತಾ ಜೊತೆ ಅತಿ ಹೆಚ್ಚು ಆಪ್ತವಾಗಿದ್ದ ರಾಕೇಶ್​ ಬಾಪಟ್​ಗೆ ಈ ಬಾರಿ ಅವಕಾಶ ಇದೆಯೋ ಇಲ್ಲವೋ ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

ಅ.2ರಂದು ‘ಹಿಂದಿ ಬಿಗ್​ ಬಾಸ್​ ಸೀಸನ್​ 15’ ಆರಂಭ ಆಗಲಿದೆ. ಅಂತಿಮವಾಗಿ ಯಾರೆಲ್ಲ ಈ ಶೋನಲ್ಲಿ ಭಾಗವಹಿಸುವ ಚಾನ್ಸ್​ ಪಡೆದಿದ್ದಾರೆ ಎಂಬುದು ಅಂದು ಖಚಿತ ಆಗಲಿದೆ. ಈ ಬಾರಿ ಒಂದಷ್ಟು ಹೊಸ ಅಂಶಗಳನ್ನು ಪರಿಚಯಿಸಲು ಆಯೋಜಕರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಬಿಗ್​ ಬಾಸ್​ ಮೇಲೆ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ:

‘ಅನುಭವ ಪಡೆಯೋಕೆ ಬಂದಿದೀನಿ’; ಶಮಿತಾ ಶೆಟ್ಟಿ ಎದುರು ಸತ್ಯ ಒಪ್ಪಿಕೊಂಡ ರಾಕೇಶ್​ ಬಾಪಟ್​

ಅಳುಮುಖ ಹೊತ್ತುಕೊಂಡು ಮನೆಗೆ ಬಂದ ರಾಜ್​ ಕುಂದ್ರಾ: ಶಿಲ್ಪಾ ಶೆಟ್ಟಿ ಪತಿಗೆ ಸದ್ಯಕ್ಕೆ ರಿಲೀಫ್​

Follow Us
Web contact
Web contact

TV9 Kannada

Read More
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ