ಶಮಿತಾ ಜೊತೆಗಿನ ಸಂಬಂಧ ಸ್ನೇಹಕ್ಕೂ ಮೀರಿದ್ದು ಎಂದು ಸತ್ಯ ಒಪ್ಪಿಕೊಂಡ ರಾಕೇಶ್ ಬಾಪಟ್; ಮುಂದೇನು?

TV9 Digital Desk

| Edited By: shivaprasad.hs

Updated on: Sep 23, 2021 | 2:39 PM

Shamita Shetty and Raqesh Bapat: ರಾಕೇಶ್ ಬಾಪಟ್ ತಮ್ಮ ಹಾಗೂ ಶಮಿತಾ ಶೆಟ್ಟಿ ನಡುವಿನ ಸಂಬಂಧದ ಕುರಿತು ಮಾತನಾಡಿದ್ದು, ಅಚ್ಚರಿಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಶಮಿತಾ ಜೊತೆಗಿನ ಸಂಬಂಧ ಸ್ನೇಹಕ್ಕೂ ಮೀರಿದ್ದು ಎಂದು ಸತ್ಯ ಒಪ್ಪಿಕೊಂಡ ರಾಕೇಶ್ ಬಾಪಟ್; ಮುಂದೇನು?
ರಾಕೇಶ್ ಹಾಗೂ ಶಮಿತಾ

ಬಿಗ್​ಬಾಸ್ ಒಟಿಟಿಯಲ್ಲಿ ಹೆಚ್ಚು ಆಪ್ತರಾಗಿದ್ದು, ಎಲ್ಲರ ಗಮನ ಸೆಳೆದವರೆಂದರೆ ಅದು ಶಮಿತಾ ಶೆಟ್ಟಿ ಹಾಗೂ ರಾಕೇಶ್ ಬಾಪಟ್ ಜೋಡಿ. ಒಟಿಟಿಯಾಗಿದ್ದರಿಂದ ಬೋಲ್ಡ್ ಆಗಿ ಮೂಡಿಬರುತ್ತಿದ್ದ ಕಾರ್ಯಕ್ರಮದಲ್ಲಿ ಶಮಿತಾ ಹಾಗೂ ರಾಕೇಶ್ ಆಪ್ತತೆಗೆ ವೀಕ್ಷಕರು ಸಾಕ್ಷಿಯಾಗಿದ್ದರು. ಅನೇಕ ಅಭಿಮಾನಿಗಳಿಗೆ ಅವರ ಸಂಬಂಧ ಬಿಗ್​ಬಾಸ್​ನಾಚೆಗೂ ಮುಂದುವರೆಯುತ್ತದೆಯೇ ಎಂಬ ಕುತೂಹಲವೂ ಇತ್ತು. ಇದಕ್ಕೆ ರಾಕೇಶ್ ಬಾಪಟ್ ಪ್ರತಿಕ್ರಿಯೆ ನೀಡಿದ್ದು, ಸಂಬಂಧದ ಕುರಿತು ಯಾವುದೇ ಮುಚ್ಚುಮರೆಯಿಲ್ಲದೇ ಮಾತನಾಡಿದ್ದಾರೆ.

ಬಾಲಿವುಡ್​ ಬಬಲ್​​ಗೆ ನೀಡಿರುವ ಸಂದರ್ಶನದಲ್ಲಿ ರಾಕೇಶ್ ಬಾಪಟ್ ತಮ್ಮ ಮತ್ತು ಶಮಿತಾ ಸಂಬಂಧವನ್ನು ತೆರೆದಿಟ್ಟಿದ್ದಾರೆ. ಶಮಿತಾಗೆ ಒಳ್ಳೆಯ ಮನಸ್ಸಿದೆ. ಜೊತೆಗೆ ಆಕೆ ದೃಢವಾದ ಮಹಿಳೆ. ತಾನು ಆಕೆಯ ಜೊತೆಗಿರಲು ಬಯಸುತ್ತೇನೆ ಎಂದು ಅವರು ನುಡಿದಿದ್ದಾರೆ. ‘‘ನಿಸ್ಸಂಶಯವಾಗಿ ಶಮಿತಾ ವಿಶೇಷ ವ್ಯಕ್ತಿ. ನಮ್ಮೀರ್ವರ ಸಂಬಂಧ ಗೆಳೆತನಕ್ಕೂ ಮೀರಿದ್ದು. ಇದು ಶೋನಲ್ಲೂ ಸ್ಪಷ್ಟವಾಗಿತ್ತು. ನನ್ನೊಂದಿಗೆ ಸಮಯ ಕಳೆಯಲು. ಮಾತನಾಡಲು ಆಕೆಯೂ ಇಷ್ಟಪಡುತ್ತಾರೆ’’ ಎಂದು ರಾಕೇಶ್ ನುಡಿದಿದ್ದಾರೆ. ಅಲ್ಲಿಗೆ ಅವರೀರ್ವರ ಸಂಬಂಧ ಗೆಳೆತನಕ್ಕೂ ಮೀರಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.

ರಾಕೇಶ್ ಅವರಲ್ಲಿ ಪ್ರಸ್ತುತ ಅವರ ಸಂಬಂಧದ ಸ್ಥಿತಿಗಳನ್ನು ಕೇಳಿದಾಗ ಅವರು ಉತ್ತರಿಸಿದ್ದು ಹೀಗೆ. ‘‘ನಮ್ಮ ಸಂಬಂಧ ನಿಧಾನಕ್ಕೆ ಬೆಳೆಯುತ್ತಿದ್ದು ಸ್ಥಿರವಾಗಿದೆ. ನಾವು ಒಟ್ಟಿಗೆ ಸ್ವಲ್ಪ ಸಮಯ ಕಳೆದಿದ್ದೇವೆ. ಆದರೆ ಇನ್ನೂ ಸಾಕಷ್ಟು ಸಮಯವನ್ನು ಜೊತೆಯಲ್ಲಿ ಕಳೆಯಬೇಕಾಗಿದೆ. ಆಗ ನಮಗೆ ಒಬ್ಬರನ್ನೊಬ್ಬರು ಹೆಚ್ಚು ತಿಳಿದುಕೊಳ್ಳಲು ಸಹಾಯವಾಗುತ್ತದೆ. ನಾನು ನೇರವಾಗಿ ತೀರ್ಮಾನಕ್ಕೆ ಬರುವುದಿಲ್ಲ ಮತ್ತು ಆಕೆ ಕೂಡ ಅದನ್ನು ಬಯಸುವುದಿಲ್ಲ ಎಂದು ಖಾತ್ರಿಯಿದೆ. ಈ ರೀತಿಯ ವಿಷಯಗಳು ಬಹಳ ಸೂಕ್ಷ್ಮವಾಗಿದ್ದು, ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಆದ್ದರಿಂದ, ಇದು ಎಲ್ಲಿಗೆ ತಲುಪಬಹುದು ಎಂದು ಕಾದು ನೋಡಬೇಕು. ನಾವು ಒಬ್ಬರನ್ನೊಬ್ಬರು ತಿಳಿದುಕೊಳ್ಳುವ ಪ್ರಯತ್ನವನ್ನಂತೂ ಖಂಡಿತವಾಗಿ ಮಾಡುತ್ತೇವೆ. ಇದೀಗ, ನೀವು ನಮ್ಮಿಬ್ಬರ ಸಂಬಂಧದ ಬಗ್ಗೆ ಕೇಳಿದರೆ, ನಾವು ಉತ್ತಮ ಸ್ನೇಹಿತರು, ಪರಸ್ಪರ ಇಷ್ಟಪಟ್ಟಿದ್ದೇವೆ. ಮುಂದೆ ಏನಾದರೂ ಸಂಭವಿಸಿದರೆ ಖಂಡಿತಾ ನಿಮಗೆಲ್ಲಾ ತಿಳಿಯಲಿದೆ’’ ಎಂದು ನಸು ನಕ್ಕಿದ್ದಾರೆ.

ರಾಕೇಶ್ ಹಾಗೂ ಶಮಿತಾರನ್ನು ಅಭಿಮಾನಿಗಳು ಪ್ರೀತಿಯಿಂದ ‘ಶರಾ’ ಎಂದು ಕರೆಯುತ್ತಾರೆ. ಇದುವರೆಗೆ ಶಮಿತಾ ಕೂಡ ಸಂಬಂಧವನ್ನು ನಿರಾಕರಿಸಿಲ್ಲ. ಜೊತೆಗೆ ಬಿಗ್​ಬಾಸ್​ನಲ್ಲಿ ಅವರು ರಾಕೇಶ್ ಬಳಿ ಕೇಳಿ ಕಿಸ್ ಪಡೆದಿದ್ದರು. ಆ ಸಂದರ್ಭದ ವಿಡಿಯೊಗಳು ಎಲ್ಲೆಡೆ ವೈರಲ್ ಆಗಿದ್ದವು. ಶಮಿತಾ ತಾಯಿ ಸುನಂದಾ ಕೂಡ ರಾಕೇಶ್ ಉತ್ತಮ ವ್ಯಕ್ತಿ ಎಂದು ಸರ್ಟಿಫಿಕೇಟ್ ಕೊಟ್ಟಿದ್ದರು. ಆದರೆ ಬಿಗ್​ಬಾಸ್​ನ ಕೊನೆಯ ದಿನಗಳಲ್ಲಿ ಒಮ್ಮೆ ಶಮಿತಾ, ರಾಕೇಶ್ ಒಳ್ಳೆಯ ವ್ಯಕ್ತಿಯೇ. ಆದರೆ ಸಂಪೂರ್ಣ ಜೀವನವನ್ನು ಅಂತಹ ವ್ಯಕ್ತಿತ್ವದವರೊಂದಿಗೆ ಕಳೆಯಲು ಸಾಧ್ಯವಿಲ್ಲ ಎಂದಿದ್ದರು. ಇದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ರಾಕೇಶ್ ಹೇಳಿಕೆ ನೀಡಿದ್ದು, ಮುಂದೆ ಏನಾಗಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಇದನ್ನೂ ಓದಿ:

ಅದ್ಭುತವಾಗಿ ಕಿಸ್​ ಮಾಡುವ ಪುರುಷರೆಂದರೆ ಇಷ್ಟ ಎಂದ ಮಲೈಕಾ ಅರೋರಾ; ಮದುವೆ ವಿಚಾರದಲ್ಲಿ ಮೌನ

RSS ಬಗ್ಗೆ ಅವಹೇಳನಕಾರಿ ಹೇಳಿಕೆ: ಜಾವೇದ್​ ಅಖ್ತರ್​ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ

KBC 13: ಕನ್ನಡದಲ್ಲಿ ಮಿಂಚಿದ್ದ ಖ್ಯಾತ ನಟ ಕೆಬಿಸಿಯ ಈ ವಾರದ ಅತಿಥಿ; ಆ ತಾರೆ ಯಾರು? ಇಲ್ಲಿದೆ ಮಾಹಿತಿ

(Raqesh Bapat opens up about Shamita Shetty and says they are more than friends)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada