AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

400 ಕೋಟಿ ರೂ. ಆಸೆ ತೋರಿಸಿದ್ರೂ ಕರಗಲಿಲ್ಲ ನಿರ್ಮಾಪಕನ ಮನಸ್ಸು; ಏನಿದು ಬಗೆಹರಿಯದ ಬಿಗ್​ ಡೀಲ್​?

ತಮ್ಮ ಸಿನಿಮಾಗಳನ್ನು ಓಟಿಟಿ ಮೂಲಕ ಬಿಡುಗಡೆ ಮಾಡುವಂತೆ ಯಶ್​ ರಾಜ್​ ಫಿಲ್ಮ್ಸ್​ ಸಂಸ್ಥೆಯ ಮಾಲೀಕ ಆದಿತ್ಯ ಚೋಪ್ರಾಗೆ ಒತ್ತಾಯ ಹೇರಲಾಗುತ್ತಿದೆ. ಅಮೇಜಾನ್​ ಪ್ರೈಂ ಕಡೆಯಿಂದ ಆದಿತ್ಯಗೆ ಬರೋಬ್ಬರಿ 400 ಕೋಟಿ ರೂ. ಆಫರ್​ ನೀಡಲಾಗಿದೆ ಎಂಬ ಮಾತು ಕೇಳಿಬಂದಿದೆ.

400 ಕೋಟಿ ರೂ. ಆಸೆ ತೋರಿಸಿದ್ರೂ ಕರಗಲಿಲ್ಲ ನಿರ್ಮಾಪಕನ ಮನಸ್ಸು; ಏನಿದು ಬಗೆಹರಿಯದ ಬಿಗ್​ ಡೀಲ್​?
ತಂದೆ ಯಶ್​ ಚೋಪ್ರಾ ಜೊತೆ ಆದಿತ್ಯ ಚೋಪ್ರಾ
TV9 Web
| Edited By: |

Updated on: Sep 24, 2021 | 11:55 AM

Share

ಈಗ ಎಲ್ಲೆಲ್ಲೂ ಓಟಿಟಿ ಹವಾ ಜೋರಾಗಿದೆ. ಹಲವಾರು ಓಟಿಟಿ ಸಂಸ್ಥೆಗಳ ನಡುವೆ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ಅದರಲ್ಲೂ ಮೊದಲ ಬಾರಿಗೆ ಲಾಕ್​ಡೌನ್​ ಜಾರಿಯಾದ ಬಳಿಕ ಎಲ್ಲರೂ ಮನೆಯಲ್ಲೇ ಕುಳಿತು ಸಿನಿಮಾ ನೋಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಹಾಗಾಗಿ ಹೊಸ ಹೊಸ ಸಿನಿಮಾಗಳನ್ನು ತಮ್ಮ ತೆಕ್ಕೆಗೆ ಪಡೆದುಕೊಳ್ಳಲು ಓಟಿಟಿ ಸಂಸ್ಥೆಗಳು ಭಾರಿ ಹಣಾಹಣಿ ನಡೆಸುತ್ತಿವೆ. ಅಮೇಜಾನ್​ ಪ್ರೈಂ ವಿಡಿಯೋ, ನೆಟ್​ಫ್ಲಿಕ್ಸ್​, ಜೀ5, ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ ಸೇರಿದಂತೆ ಅನೇಕ ಸಂಸ್ಥೆಗಳು ಜಿದ್ದಿಗೆ ಬಿದ್ದಿವೆ. ದೊಡ್ಡ ದೊಡ್ಡ ನಿರ್ಮಾಪಕರಿಗೆ ಈ ಓಟಿಟಿಗಳಿಂದ ಭಾರಿ ಆಫರ್​ ನೀಡಲಾಗುತ್ತಿದೆ. ಅಂಥ ಒಂದು ಆಫರ್​ ಅನ್ನು ನಿರ್ಮಾಪಕ ಆದಿತ್ಯ ಚೋಪ್ರಾ ತಿರಸ್ಕರಿಸಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ಬಾಲಿವುಡ್​ನಲ್ಲಿ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಆಗಿರುವ ‘ಯಶ್​ ರಾಜ್​ ಫಿಲ್ಮ್ಸ್​’ ಸಾಕಷ್ಟು ಸಿನಿಮಾಗಳಿಗೆ ಬಂಡವಾಳ ಹೂಡಿವೆ. ಆ ಪೈಕಿ ಕೆಲವು ಸಿನಿಮಾಗಳು ಬಿಡುಗಡೆಯ ಹೊಸ್ತಿಲಿನಲ್ಲಿವೆ. ಅವುಗಳನ್ನು ಓಟಿಟಿ ಮೂಲಕ ಬಿಡುಗಡೆ ಮಾಡಿ ಎಂದು ಯಶ್​ ರಾಜ್​ ಫಿಲ್ಮ್ಸ್​ ಸಂಸ್ಥೆಯ ಮಾಲೀಕ ಆದಿತ್ಯ ಚೋಪ್ರಾಗೆ ಒತ್ತಾಯ ಹೇರಲಾಗುತ್ತಿದೆ. ಮೂಲಗಳ ಪ್ರಕಾರ ಅಮೇಜಾನ್​ ಪ್ರೈಂನವರು ಆದಿತ್ಯ ಚೋಪ್ರಾಗೆ ಬರೋಬ್ಬರಿ 400 ಕೋಟಿ ರೂ. ಆಫರ್​ ನೀಡಿದ್ದಾರೆ. ಆದರೆ ಅದನ್ನು ಅವರು ಒಪ್ಪಿಕೊಂಡಿಲ್ಲ ಎನ್ನಲಾಗುತ್ತಿದೆ.

ಆದಿತ್ಯ ಚೋಪ್ರಾ ನಿರ್ಮಾಣ ಮಾಡಿರುವ ‘ಬಂಟಿ ಔರ್​ ಬಬ್ಲಿ 2’, ‘ಶಂಷೇರಾ’, ‘ಪೃಥ್ವಿರಾಜ್​’, ‘ಜಯೇಶ್​ ಭಾಯ್​ ಜೋರ್ದಾರ್​’ ಸಿನಿಮಾಗಳನ್ನು ಒಟ್ಟು 400 ಕೋಟಿ ರೂ. ಕೊಟ್ಟು ಖರೀದಿಸಲು ಅಮೇಜಾನ್​ ಪ್ರೈಂ ಸಂಸ್ಥೆ ಮುಂದೆ ಬಂದಿತ್ತು. ಆ ಡೀಲ್​ಗೆ ಆದಿತ್ಯ ಚೋಪ್ರಾ ಸಹಿ ಹಾಕಿಲ್ಲ. ಏನಾದರೂ ಪರವಾಗಿಲ್ಲ, ಚಿತ್ರಮಂದಿರದಲ್ಲಿಯೇ ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡುವುದಾಗಿ ಅವರು ಪಟ್ಟು ಹಿಡಿದು ಕುಳಿತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ಸದ್ಯಕ್ಕಂತೂ ಸರ್ಕಾರದ ಕಡೆಯಿಂದ ಚಿತ್ರಮಂದಿರಗಳಲ್ಲಿ ಶೇ. 100 ಆಸನ ಭರ್ತಿಗೆ ಅವಕಾಶ ಸಿಕ್ಕಿಲ್ಲ. ಹಾಗಾಗಿ ಅನೇಕ ಸಿನಿಮಾಗಳು ಬಿಡುಗಡೆ ಆಗದೇ ಉಳಿದುಕೊಂಡಿವೆ. ಸರ್ಕಾರದಿಂದ ಹೌಸ್​ಫುಲ್​ ಪ್ರದರ್ಶನಕ್ಕೆ ಅನುಮತಿ ಸಿಕ್ಕ ಕೂಡಲೇ ಅನೇಕ ಸ್ಟಾರ್​ ಸಿನಿಮಾಗಳು ರಿಲೀಸ್​ ಆಗಲಿವೆ.

ಇದನ್ನೂ ಓದಿ:

ಸೋತು ಸುಣ್ಣವಾದ ಶಾರುಖ್​ಗೆ ಈಗ ಓಟಿಟಿ ಅನಿವಾರ್ಯ; ಸತ್ಯ ಒಪ್ಪಿಕೊಂಡು ವಿಡಿಯೋ ಶೇರ್​ ಮಾಡಿದ ನಟ

ಶೀಘ್ರವೇ ಬರಲಿದೆ ಶಕೀಲಾ ಓಟಿಟಿ; ಇಲ್ಲಿರುವ ಸಿನಿಮಾ ಎಂಥವು? ಯಾರಿಗೆಲ್ಲ ಸಿಗಲಿದೆ ಚಾನ್ಸ್​?