ಅದ್ಭುತವಾಗಿ ಕಿಸ್​ ಮಾಡುವ ಪುರುಷರೆಂದರೆ ಇಷ್ಟ ಎಂದ ಮಲೈಕಾ ಅರೋರಾ; ಮದುವೆ ವಿಚಾರದಲ್ಲಿ ಮೌನ

TV9 Digital Desk

| Edited By: Rajesh Duggumane

Updated on:Sep 23, 2021 | 2:17 PM

ಮಲೈಕಾ ಇತ್ತೀಚೆಗೆ ಮಾಧ್ಯಮ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೆಳೆ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇದು ಅವರ ಅಭಿಮಾನಿಗಳಿಗೂ ಅಚ್ಚರಿ ನೀಡಿದೆ.

ಅದ್ಭುತವಾಗಿ ಕಿಸ್​ ಮಾಡುವ ಪುರುಷರೆಂದರೆ ಇಷ್ಟ ಎಂದ ಮಲೈಕಾ ಅರೋರಾ; ಮದುವೆ ವಿಚಾರದಲ್ಲಿ ಮೌನ
ಅದ್ಭುತವಾಗಿ ಕಿಸ್​ ಮಾಡುವ ಪುರುಷರೆಂದರೆ ಇಷ್ಟ ಎಂದ ಮಲೈಕಾ ಅರೋರಾ; ಮದುವೆ ವಿಚಾರದಲ್ಲಿ ಮೌನ

ನಟಿ ಮಲೈಕಾ ಅರೋರಾ ವಯಸ್ಸು 47. ಆದರೆ, ಫಿಟ್​ನೆಸ್​ ಹಾಗೂ ಹಾಟ್​ನೆಸ್​ ವಿಚಾರದಲ್ಲಿ ಯುವ ನಟಿಯರನ್ನೂ ಅವರು ನಾಚಿಸುತ್ತಾರೆ. ಇನ್ನೂ ಯಂಗ್​ ನಟಿಯರಂತೆ ಕಾಣುವ ಅವರು, ನಟ ಅರ್ಜುನ್​ ಕಪೂರ್ ಜತೆ ಸುತ್ತಾಟ ನಡೆಸುತ್ತಿದ್ದಾರೆ. ಆರಂಭದಲ್ಲಿ ಈ ವಿಚಾರವನ್ನು ಇಬ್ಬರೂ ಸೀಕ್ರೆಟ್​ ಆಗಿ ಇಟ್ಟಿದ್ದರು. ಆದರೆ, ಈಗ ಅವರ ರಿಲೇಶನ್​ಶಿಪ್​ ವಿಚಾರದಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಇಬ್ಬರೂ ಯಾವುದೇ ಅಂಜಿಕೆ ಇಲ್ಲದೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಮಲೈಕಾ ಯಾವ ರೀತಿಯ ಪುರಷರು ಹೆಚ್ಚು ಇಷ್ಟವಾಗುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ಮಲೈಕಾ ಇತ್ತೀಚೆಗೆ ಮಾಧ್ಯಮ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೆಳೆ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇದು ಅವರ ಅಭಿಮಾನಿಗಳಿಗೂ ಅಚ್ಚರಿ ನೀಡಿದೆ. ಅದ್ಭುತವಾಗಿ ಕಿಸ್​ ಮಾಡುವ ಪುರುಷರು ಎಂದರೆ ನನಗೆ ಇಷ್ಟ ಎಂದಿದ್ದಾರೆ ಅವರು.

‘ಮುಖ ಸ್ವಲ್ಪ ಒರಟಾಗಿರಬೇಕು. ಗಡ್ಡ ಇರಬೇಕು. ಸಂಪೂರ್ಣವಾಗಿ ಶೇವ್​ ಮಾಡಿಕೊಂಡರೆ ಇಷ್ಟ ಆಗುವುದಿಲ್ಲ. ಯಾವ ಪುರುಷ ಅದ್ಭುತವಾಗಿ ಕಿಸ್​ ಮಾಡುತ್ತಾನೋ ಅವರನ್ನು ನಾನು ಇಷ್ಟಪಡುತ್ತೇನೆ’ ಎಂದಿದ್ದಾರೆ ಮಲೈಕಾ.

ಅರ್ಜುನ್​ ಕಪೂರ್​ ಹಾಗೂ ಮಲೈಕಾ ಸಾಕಷ್ಟು ಬಾರಿ ಪಬ್ಲಿಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಶೀಘ್ರವೇ ಮದುವೆ ಆಗುತ್ತಾರೆ ಎನ್ನುವ ಮಾತಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಕೂಡ ನಡೆದಿದೆ. ಆದರೆ, ಈ ಬಗ್ಗೆ ಮಲೈಕಾ ಹೇಳೋದೇ ಬೇರೆ. ‘ನಮ್ಮಿಬ್ಬರ ನಡುವೆ ಮದುವೆ ವಿಚಾರವೇ ಬಂದಿಲ್ಲ. ನಾವಿಬ್ಬರೂ ಪರಸ್ಪರ ನಮ್ಮ ಸಾಂಗತ್ಯವನ್ನು ಎಂಜಾಯ್​ ಮಾಡುತ್ತಿದ್ದೇವೆ’  ಎಂದು ಹೇಳುವ ಮೂಲಕ ಅವರು ಅಚ್ಚರಿ ಮೂಡಿಸಿದ್ದಾರೆ.

ಟಾಪ್​ ಐಟಂ ಡ್ಯಾನ್ಸರ್​ ಆಗಿದ್ದ ಮಲೈಕಾ ಅರೋರಾ ಅವರಿಗೆ ಈಗ 47 ವರ್ಷ ವಯಸ್ಸು. ಅವರನ್ನು ಪ್ರೀತಿಸುತ್ತಿರುವ ನಟ ಅರ್ಜುನ್​ ಕಪೂರ್​ಗೆ 35ರ ಪ್ರಾಯ. ಮಲೈಕಾಗೆ ಮದುವೆ ಆಗಿ ಒಂದು ಮಗು ಕೂಡ ಇದೆ. ನಟ, ನಿರ್ಮಾಪಕ ಅರ್ಬಾಜ್​ ಖಾನ್​​ ಜೊತೆ ಮದುವೆ ಆಗಿದ್ದ ಮಲೈಕಾ ನಂತರ ವಿಚ್ಛೇದನ ಪಡೆದಿದ್ದರು. ಬಾಂದ್ರಾ ಸಮೀಪದಲ್ಲೇ ಅರ್ಜುನ್​ ಕಪೂರ್​ ವಿಲ್ಲಾ ಖರೀದಿ ಮಾಡಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಇದಕ್ಕಾಗಿ ಅವರು 20 ಕೋಟಿ ರೂಪಾಯಿ ನೀಡಿದ್ದರು. ಇದು ಮಲೈಕಾ ಅರೋರ ಅವರ ಲಕ್ಸುರಿ ಮನೆ ಸಮೀಪವೇ ಇದೆ. ಈ ವಿಲ್ಲಾವನ್ನು ಮಲೈಕಾ ತುಂಬಾನೇ ಇಷ್ಟಪಟ್ಟಿದ್ದರು ಎನ್ನಲಾಗಿದೆ. ಶಾರುಖ್​ ಖಾನ್​, ಸಲ್ಮಾನ್​ ಖಾನ್​, ಕರೀನಾ ಕಪೂರ್​, ರಣಬೀರ್​ ಕಪೂರ್​ ಮನೆ ಕೂಡ ಇದೇ ಭಾಗದಲ್ಲಿದೆ.

ಇದನ್ನೂ ಓದಿ: Bhoot Police: ಗೆಳೆಯ ಅರ್ಜುನ್ ಕಪೂರ್ ನಟನೆಯ ‘ಭೂತ್ ಪೊಲೀಸ್’ ಚಿತ್ರಕ್ಕೆ ಮಲೈಕಾ ರಿಯಾಕ್ಷನ್ ಏನು?

Malaika Arora: ಬಾತುಕೋಳಿಯಂತೆ ನಡೆದು ಟ್ರಾಲ್​ಗೆ ಒಳಗಾದ ಮಲೈಕಾ; ವಿಡಿಯೊ ನೋಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada