Malaika Arora: ಬಾತುಕೋಳಿಯಂತೆ ನಡೆದು ಟ್ರಾಲ್​ಗೆ ಒಳಗಾದ ಮಲೈಕಾ; ವಿಡಿಯೊ ನೋಡಿ

ಬಾಲಿವುಡ್​ನಲ್ಲಿ ಸದಾ ಸುದ್ದಿಯಲ್ಲಿರುವ ಮಲೈಕಾ ಅರೋರಾ, ಇದೀಗ ಬಾತುಕೋಳಿಯಂತೆ ನಡೆದು ನೆಟ್ಟಿಗರ ಚರ್ಚೆಯ ಮೂಲವಾಗಿದ್ದಾರೆ.

Malaika Arora: ಬಾತುಕೋಳಿಯಂತೆ ನಡೆದು ಟ್ರಾಲ್​ಗೆ ಒಳಗಾದ ಮಲೈಕಾ; ವಿಡಿಯೊ ನೋಡಿ
ಮಲೈಕಾ ಅರೋರಾ

ಬಾಲಿವುಡ್ ನಟಿ, ಡಾನ್ಸರ್ ಮಲೈಕಾ ಅರೋರಾ ಸದ್ಯ ಬಿಟೌನ್​ನಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಕಾರಣ, ಇತ್ತೀಚೆಗೆ ಛಾಯಾಗ್ರಾಹಕರಿಗೆ ಪೋಸ್ ನೀಡುವಾಗ ಅವರು ಬಾತುಕೋಳಿಯಂತೆ ನಡೆದಿದ್ದಾರೆ. ವಿಚಿತ್ರವಾಗಿ ಪೋಸ್ ಕೊಡಲು ಹೋಗಿದ್ದು ಅವರ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಆದ್ದರಿಂದಲೇ ಮಲೈಕಾ ನಡಿಗೆಯ ವಿಡಿಯೊ ಸದ್ಯ ವೈರಲ್ ಆಗಿದ್ದು, ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.

47 ವರ್ಷದ ಮಲೈಕಾ ದಿನವೂ ಜಿಮ್​ಗೆ ತೆರಳುವಾಗ ನೆರೆದಿರುವ ಪಾಪರಾಜಿಗಳಿಗೆ ಪೋಸ್ ನೀಡುತ್ತಾರೆ. ಅಂತೆಯೇ ಇತ್ತೀಚೆಗೆ ಕೂಡ ಪೋಸ್ ನೀಡಿದ್ದಾರೆ. ಅದರೊಂದಿಗೆ ವಿಚಿತ್ರವಾಗಿ ನಡೆದಿದ್ದಾರೆ. ಇದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಇದನ್ನು ಮಲೈಕಾ ಅವರ ಅಭಿಮಾನಿ ಪೇಜ್​ಗಳು ಕೂಡ ಹಂಚಿಕೊಂಡಿವೆ. ಆದರೆ ಬಹಳಷ್ಟು ನೆಟ್ಟಿಗರಿಗೆ ಇದು ಇಷ್ಟವಾಗಿಲ್ಲ. ಅವರು ‘ಬಾತುಕೋಳಿ ನಡಿಗೆ’ ಎಂದು ಕಾಲೆಳೆದಿದ್ದಾರೆ. ಮತ್ತೆ ಹಲವರು ‘ಆಕೆ ಏಕೆ ಹಾಗೆ ನಡೆಯುತ್ತಿದ್ದಾರೆ?’ ಎಂದು ಪ್ರಶ್ನಿಸಿದ್ದಾರೆ.

ಮಲೈಕಾ ನಡಿಗೆಯ ವಿಡಿಯೊ ಇಲ್ಲಿದೆ:

ಮಲೈಕಾ ಅರೋರಾಗೆ ಇನ್ಸ್ಟಾಗ್ರಾಂನಲ್ಲಿ ಸಖತ್ ಅಭಿಮಾನಿಗಳಿದ್ದಾರೆ. ಆದ್ದರಿಂದ ಅವರು ಅಲ್ಲಿ ಆಕ್ಟೀವ್ ಆಗಿರುತ್ತಾರೆ. ಸದಾ ಚಿತ್ರಗಳನ್ನು, ಫೋಟೋಗಳನ್ನು ಹಂಚಿಕೊಂಡು ಅವರು ಫ್ಯಾನ್ಸ್ ಜೊತೆ ಸಂಪರ್ಕದಲ್ಲಿರುತ್ತಾರೆ. ಮಲೈಕಾ ಹಾಗೂ ನಟ ಅರ್ಜುನ್ ಬಹಳ ಕಾಲದಿಂದ ರಿಲೇಶನ್​ಶಿಪ್​ನಲ್ಲಿದ್ದಾರೆ. ಇತ್ತೀಚೆಗಷ್ಟೇ ಗೆಳತಿಯ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅರ್ಜುನ್ ಕಪೂರ್, ‘‘ನಾನು ದುಃಖದಲ್ಲಿದ್ದಾಗ, ಖುಷಿಯಲ್ಲಿದಾಗ- ಯಾವುದೇ ಸಂದರ್ಭವಿರಲಿ ಅದು ಆಕೆಗೆ ತಿಳಿಯುತ್ತದೆ. ಒಂದು ವೇಳೆ ನಾನು ಕದ್ದು ಕುಳಿತರೂ ಅದು ಆಕೆಗೆ ತಿಳಿದಿರುತ್ತದೆ’’ ಎಂದು ಮಲೈಕಾ ಕುರಿತು ಹೇಳಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಈ ಜೋಡಿ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಧಿಕೃತವಾಗಿ ಈರ್ವರು ಇನ್ನೂ ದಾಂಪತ್ಯಕ್ಕೆ ಕಾಲಿಟ್ಟಿಲ್ಲವಾದರೂ, ಇಬ್ಬರೂ ಜೊತೆಯಾಗಿಯೇ ಸುತ್ತಾಡುವುದನ್ನು ಒಪ್ಪಿಕೊಂಡಿದ್ದಾರೆ.

ಅರ್ಜುನ್ ಜೊತೆ ಇರುವ ಚಿತ್ರ ಹಂಚಿಕೊಂಡಿದ್ದ ಮಲೈಕಾ:

 

View this post on Instagram

 

A post shared by Malaika Arora (@malaikaaroraofficial)

ವೃತ್ತಿ ಜೀವನದ ವಿಷಯಕ್ಕೆ ಬಂದರೆ, ಮಲೈಕಾ ಖಾಸಗಿ ಚಾನಲ್ ಒಂದರಲ್ಲಿ ‘ಸೂಪರ್ ಮಾಡೆಲ್ ಆಫ್ ದಿ ಇಯರ್ ಸೀಸನ್ 2’ ಕಾರ್ಯಕ್ರಮದಲ್ಲಿ ಮಿಲಿಂದ್ ಸೋಮನ್ ಹಾಗೂ ಅನುಷಾ ದಂಡೇಕರ್ ಅವರೊಂದಿಗೆ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಹಲವು ಸೀರೀಸ್​ಗಳಲ್ಲಿ, ಕಿರುತೆರೆಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

‘ದುಡ್ಡಿಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಆ ಕೆಲಸ ಮಾಡಿದೆ; ನಂತರ ಅದೇ ಜೀವನ ಆಯ್ತು’: ಮಲೈಕಾ ಅರೋರಾ

ZEEL- Sony Pictures Merger: ಭಾರತದ ಮನರಂಜನಾ ಲೋಕದಲ್ಲಿ ಮಹಾವಿಲೀನ, ಒಂದಾಗುತ್ತಿವೆ ಝೀ ಹಾಗೂ ಸೋನಿ

‘ರಾಧೆ ಶ್ಯಾಮ್’ ಸೆಟ್​ನಲ್ಲಿ ಪೂಜಾ ಹೆಗ್ಡೆ ನಡವಳಿಕೆಯಿಂದ ಪ್ರಭಾಸ್​ ಕಿರಿಕಿರಿಗೊಂಡಿದ್ದರೇ?; ಸುದ್ದಿಯ ಅಸಲಿಯತ್ತು ಇಲ್ಲಿದೆ

Read Full Article

Click on your DTH Provider to Add TV9 Kannada