AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anushka Sharma: ಇಂಗ್ಲೆಂಡ್ ಪ್ರವಾಸದಿಂದ ಮರಳಿ, ವರ್ಕೌಟ್ ಆರಂಭಿಸಿದ ಅನುಷ್ಕಾ; ಹೊಸ ಪ್ರಶ್ನೆ ಮುಂದಿಟ್ಟ ಫ್ಯಾನ್ಸ್

Virat Kohli: ಪತಿ ವಿರಾಟ್ ಕೊಹ್ಲಿ ಜೊತೆ ಇಂಗ್ಲೆಂಡ್​ಗೆ ತೆರಳಿದ್ದ ಅನುಷ್ಕಾ ಶರ್ಮಾ ಹಾಗೂ ಪುತ್ರಿ ವಮಿಕಾ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಅನುಷ್ಕಾ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು, ಅದನ್ನು ವೀಕ್ಷಿಸಿದ ಅಭಿಮಾನಿಗಳು ಅವರಿಗೆ ಹೊಸ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ.

Anushka Sharma: ಇಂಗ್ಲೆಂಡ್ ಪ್ರವಾಸದಿಂದ ಮರಳಿ, ವರ್ಕೌಟ್ ಆರಂಭಿಸಿದ ಅನುಷ್ಕಾ; ಹೊಸ ಪ್ರಶ್ನೆ ಮುಂದಿಟ್ಟ ಫ್ಯಾನ್ಸ್
ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ
TV9 Web
| Updated By: shivaprasad.hs|

Updated on:Sep 22, 2021 | 4:16 PM

Share

ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಕಳೆದ ಕೆಲವು ತಿಂಗಳುಗಳಿಂದ ಪತಿ ವಿರಾಟ್ ಕೊಹ್ಲಿಯೊಂದಿಗೆ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದರು. ಪ್ರಸ್ತುತ ವಿರಾಟ್ ಕೊಹ್ಲಿ ಐಪಿಎಲ್ 2021ರ ಮುಂದುವರೆದ ಭಾಗವಾಗಿ ಯುಎಇನಲ್ಲಿದ್ದಾರೆ. ಆದರೆ ಅನುಷ್ಕಾ ಅಲ್ಲಿಗೆ ತೆರಳಿರಲಿಲ್ಲ. ಇದೀಗ ಅವರು ಫೋಟೋವೊಂದನ್ನು ಹಂಚಿಕೊಂಡಿದ್ದು, ಆ ಮೂಲಕ ತಾವು ಇರುವ ಸ್ಥಳದ ಕುರಿತು ಸುಳಿವು ಬಿಟ್ಟುಕೊಟ್ಟಿದ್ದಾರೆ. ಅನುಷ್ಕಾ ತಮ್ಮ ಮಗಳು ವಮಿಕಾಳೊಂದಿಗೆ ಮುಂಬೈಗೆ ವಾಪಾಸ್ಸಾಗಿದ್ದಾರೆ. ಪ್ರಸ್ತುತ ಕ್ವಾರಂಟೈನ್ ನಿಯಮಗಳನ್ನು ಮುಗಿಸಿರುವ ಅವರು, ತಮ್ಮ ಫಿಟ್​ನೆಸ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅನುಷ್ಕಾ, ತಮ್ಮ ಮನೆಯಿಂದ ಕಾಣುವ ಸಮುದ್ರದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ವ್ಯಾಯಾಮ ಮುಗಿಸಿದ ನಂತರದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ವೀಕ್ಷಿಸಿದ ನಂತರ ಅಭಿಮಾನಿಗಳು, ಅನುಷ್ಕಾ ಮತ್ತೆ ಚಿತ್ರರಂಗಕ್ಕೆ ಮರಳುತ್ತೀರಾ? ಎಂದು ಪ್ರಶ್ನಿಸುತ್ತಿದ್ದಾರೆ.

ಅನುಷ್ಕಾ ಅಭಿಮಾನಿ ಪೇಜ್ ಒಂದು ಹಂಚಿಕೊಂಡ ಚಿತ್ರ:

ಭಾರತ ಲಾರ್ಡ್ಸ್​ ಹಾಗೂ ಓವಲ್ ಟೆಸ್ಟ್​ನಲ್ಲಿ ಜಯಭೇರಿ ಬಾರಿಸಿದಾಗ ಅನುಷ್ಕಾ ಹಂಚಿಕೊಂಡಿದ್ದ ಚಿತ್ರಗಳು, ಸ್ಟೇಟಸ್​ಗಳು ಸಖತ್ ವೈರಲ್ ಆಗಿದ್ದವು. ಹಾಗೆಯೇ ಜಯದ ನಂತರ ವಿರಾಟ್ ಜೊತೆ ಔತಣ ಕೂಟಕ್ಕೆ ತೆರಳಿದ ಸಂದರ್ಭದ ಚಿತ್ರಗಳೂ ಸುದ್ದಿ ಮಾಡಿದ್ದವು. ಪ್ರಸ್ತುತ ದುಬೈನಲ್ಲಿ ಐಪಿಎಲ್​ ನಡೆಯುತ್ತಿದ್ದು, ನಂತರ ಟಿ20 ವಿಶ್ವಕಪ್ ಕೂಡ ಅಲ್ಲಿಯೇ ನಡೆಯಲಿದೆ. ಆದರೆ ದುಬೈನಲ್ಲಿ ವಿಪರೀತ ಸೆಖೆಯ ವಾತಾವರಣ ಇದೆ. ಇದರಿಂದಾಗಿ ಮಗುವಿನ ಆರೋಗ್ಯದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅನುಷ್ಕಾ ಮರಳಿದ್ದಾರೆ ಎನ್ನಲಾಗಿದೆ. ಜೊತೆಗೆ ಅವರು ಚಿತ್ರರಂಗದಲ್ಲಿ ಮತ್ತೆ ಕಾಣಿಸಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆಯೇ ಎಂಬ ಚರ್ಚೆಗಳೂ ಹುಟ್ಟಿಕೊಂಡಿವೆ.

ಚಿತ್ರಗಳ ವಿಷಯಕ್ಕೆ ಬಂದರೆ ಅನುಷ್ಕಾ ಕೊನೆಯದಾಗಿ ಕಾಣಿಸಿಕೊಂಡಿದ್ದು ಶಾರುಖ್ ನಟನೆಯ ‘ಜೀರೋ’ ಚಿತ್ರದಲ್ಲಿ. ಆದರೆ ನಿರ್ಮಾಣದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವ ಅವರು, ಕಳೆದ ವರ್ಷ ಅಗಲಿದ ನಟ ಇರ್ಫಾನ್​ ಖಾನ್​ರ ಪುತ್ರ ಬಬಿಲ್ ಕಾಣಿಸಿಕೊಳ್ಳುತ್ತಿರುವ ‘ಕಾಲ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅವರ ನಿರ್ಮಾಣದ ವೆಬ್ ಸಿರೀಸ್ ‘ಪಾತಾಳ್ ಲೋಕ್’ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿತ್ತು. ಹಾಗೆಯೇ ನೆಟ್​ಫ್ಲಿಕ್ಸ್​ನಲ್ಲಿ ತೆರೆಕಂಡ ‘ಬುಲ್​ಬುಲ್’ ವಿಮರ್ಶಕರಿಂದ ಮೆಚ್ಚುಗೆ ಪಡೆದಿತ್ತು.

ಇದನ್ನೂ ಓದಿ:

ಜಿಮ್​ನಲ್ಲಿ ಒಟ್ಟಾಗಿ ವರ್ಕೌಟ್​ ಮಾಡಿದ ರಶ್ಮಿಕಾ ಮಂದಣ್ಣ-ವಿಜಯ್​ ದೇವರಕೊಂಡ; ಫೋಟೋ ವೈರಲ್

Hombale Films: ಹೊಂಬಾಳೆ 12ನೇ ಸಿನಿಮಾ ‘ರಾಘವೇಂದ್ರ ಸ್ಟೋರ್ಸ್’​ಗೆ ಜಗ್ಗೇಶ್​ ಹೀರೋ; ನಿರ್ದೇಶನ ಯಾರದ್ದು?

ಮಹೇಶ್​ ಬಾಬುಗೆ ಸಿಕ್ತು 25 ಲಕ್ಷ ಬಹುಮಾನ​ ಹಣ; ಅವರು ಪಾಲ್ಗೊಂಡ ಸ್ಪರ್ಧೆ ಯಾವುದು?

(Anushka Sharma returns to Mumbai and starts to workout see pics)

Published On - 4:15 pm, Wed, 22 September 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ