- Kannada News Photo gallery Sara Ali Khan shares pics of her Temple church Mosque Gurudwar visit while Kashmir trip
Sara Ali Khan: ಸರ್ವ ಧರ್ಮ ಸಮಭಾವದ ಸಂದೇಶ ಸಾರಿದ ಸಾರಾ ಅಲಿ ಖಾನ್; ಚಿತ್ರಗಳನ್ನು ನೋಡಿ
ಬಾಲಿವುಡ್ ನಟಿ ಸಾರಾ ಅಲಿ ಖಾನ್ ತಮ್ಮ ಕಾಶ್ಮೀರದ ಪ್ರವಾಸದಲ್ಲಿ ಭೆಟಿ ನೀಡಿದ ಹಲವು ಧರ್ಮಗಳ ಧಾರ್ಮಿಕ ಸ್ಥಳಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಅವರು ‘ಸರ್ವ ಧರ್ಮ ಸಮಭಾವ’ ಎಂಬ ಕ್ಯಾಪ್ಶನ್ ನೀಡಿದ್ದು, ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
Updated on: Sep 22, 2021 | 6:50 PM

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಅವರು ತಮ್ಮ ಕಾಶ್ಮೀರ ಪ್ರವಾಸದ ಚಿತ್ರಗಳನ್ನು ಹಂಚಿಕೊಂಡಿದ್ದು ಅಭಿಮಾನಿಗಳ ಮನಗೆದ್ದಿದೆ. (Credits: Sara Ali Khan/ Instagram)

ಕಾಶ್ಮೀರದಲ್ಲಿ ವಿವಿಧ ಧರ್ಮಗಳ ಧಾರ್ಮಿಕ ಕ್ಷೇತ್ರಗಳಿಗೆ ತೆರಳಿರುವ ಸಾರಾ, ಆ ಸಂದರ್ಭದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. (Credits: Sara Ali Khan/ Instagram)

ದೇವಾಲಯ, ಗುರುದ್ವಾರ, ಮಸೀದಿ, ಚರ್ಚ್ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಾರಾ ಭೇಟಿ ನೀಡಿ, ಪ್ರಾರ್ಥಿಸಿದ್ದಾರೆ. (Credits: Sara Ali Khan/ Instagram)

ಈ ಚಿತ್ರಗಳನ್ನು ಇನ್ಸ್ಟಾಗ್ರಾಂ ಮುಖಾಂತರ ಹಂಚಿಕೊಮಡಿರುವ ಸಾರಾ, ‘ಎಲ್ಲಾದರೂ ಸ್ವರ್ಗವೆನ್ನುವುದು ಇದ್ದರೆ, ಅದು ಇಲ್ಲೇ...’ ಎಂದು ಬರೆದುಕೊಂಡಿದ್ದಾರೆ. (Credits: Sara Ali Khan/ Instagram)

ಜೊತೆಗೆ ಅವರು ಪೋಸ್ಟ್ನಲ್ಲಿ ಸರ್ವಧರ್ಮವನ್ನೂ ಸಮನಾಗಿ ಕಾಣುವ ಸಾಲೊಂದನ್ನು ಬರೆದಿದ್ದು, ‘ಸರ್ವಧರ್ಮ ಸಮಭಾವ್’ ಎಂದು ಬರೆದಿದ್ದಾರೆ. (Credits: Sara Ali Khan/ Instagram)

ಬಾಲಿವುಡ್ನ ಖ್ಯಾತ ನಟ ಸೈಫ್ ಅಲಿ ಖಾನ್ ಹಾಗೂ ಅವರ ಮೊದಲ ಪತ್ನಿಅಮೃತಾ ಸಿಂಗ್ ಅವರ ಪುತ್ರಿ ಸಾರಾ ಅಲಿ ಖಾನ್. (Credits: Sara Ali Khan/ Instagram)

ಬಾಲಿವುಡ್ನಲ್ಲಿ ಈಗಾಗಲೇ ತನ್ನ ಪ್ರತಿಭೆಯಿಂದ ಸಾಕಷ್ಟು ಹೆಸರು ಮಾಡಿರುವ ಸಾರಾ ಬತ್ತಳಿಕೆಯಲ್ಲಿ ಹಲವಾರು ಚಿತ್ರಗಳಿವೆ. (Credits: Sara Ali Khan/ Instagram)




