AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹೇಶ್​ ಬಾಬುಗೆ ಸಿಕ್ತು 25 ಲಕ್ಷ ಬಹುಮಾನ​ ಹಣ; ಅವರು ಪಾಲ್ಗೊಂಡ ಸ್ಪರ್ಧೆ ಯಾವುದು?

ಈ ಶೋಗೆ ಅತಿಥಿಗಳಾಗಿ ಬರುವ ಸೆಲೆಬ್ರಿಟಿಗಳು ಗೆಲ್ಲುವ ಹಣವನ್ನು ಯಾವುದಾದರೂ ಚಾರಿಟಿಗೆ ನೀಡಬೇಕು ಎನ್ನುವ ನೀತಿ ಇದೆ. ಹೀಗಾಗಿ, ಗೆದ್ದ 25 ಲಕ್ಷ ರೂಪಾಯಿ ಹಣವನ್ನು ಮಹೇಶ್​ ತಾವು ದತ್ತು ಪಡೆದ ಹಳ್ಳಿಯ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲಿದ್ದಾರೆ.

ಮಹೇಶ್​ ಬಾಬುಗೆ ಸಿಕ್ತು 25 ಲಕ್ಷ ಬಹುಮಾನ​ ಹಣ; ಅವರು ಪಾಲ್ಗೊಂಡ ಸ್ಪರ್ಧೆ ಯಾವುದು?
ಮಹೇಶ್​ ಬಾಬು
TV9 Web
| Edited By: |

Updated on: Sep 22, 2021 | 2:41 PM

Share

ಮಹೇಶ್​ ಬಾಬು ಸಾಕಷ್ಟು ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಪ್ರತಿ ಸಿನಿಮಾಗೆ ಅವರು ಕೋಟಿ ಮೊತ್ತದಲ್ಲಿ ಸಂಭಾವನೆ ಪಡೆಯುತ್ತಾರೆ. ನಾನಾ ಕಡೆಗಳಲ್ಲಿ ಅವರು ಹೂಡಿಕೆ ಕೂಡ ಮಾಡಿದ್ದಾರೆ. ಹೀಗಾಗಿ, ಅವರ ಆಸ್ತಿ ಮೌಲ್ಯ ನೂರಾರು ಕೋಟಿ ರೂಪಾಯಿ ಇದೆ. ಈ ಮಧ್ಯೆ ಮಹೇಶ್​ ಬಾಬು ಸ್ಪರ್ಧೆಯೊಂದರಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ಅವರು 25 ಲಕ್ಷ ರೂಪಾಯಿ ಗೆದ್ದಿದ್ದಾರೆ. ಈ ಮೊತ್ತ ಅವರಿಗೆ ಸಣ್ಣದೇ. ಆದರೆ, ಸ್ಪರ್ಧೆ ಮಾಡಿ ಈ ಹಣ ಗೆದ್ದಿದ್ದರಿಂದ ಅವರಿಗೆ ಈ ಬಗ್ಗೆ ಹೆಮ್ಮೆ ಇದೆ. ಅಲ್ಲದೆ, ಇದನ್ನು ಸಮಾಜಮುಖಿ ಕೆಲಸಗಳಿಗೆ ಬಳಕೆ ಮಾಡಿಕೊಂಡಿದ್ದಾರೆ.

ಜೆಮಿನಿ ಟಿವಿಯಲ್ಲಿ ‘ಎವರು ಮೀಲೊ ಕೋಟಿಶ್ವರುಲು’ ಶೋ ಪ್ರಸಾರವಾಗುತ್ತಿದೆ. ‘ಕೌನ್​ ಬನೇಗಾ ಕರೋಡ್​​ಪತಿಯ’ ತೆಲುಗು ವರ್ಷನ್​ ಇದು. ಇದನ್ನು ಖ್ಯಾತ ನಟ ಜ್ಯೂ.ಎನ್​ಟಿಆರ್​ ನಡೆಸಿಕೊಡುತ್ತಿದ್ದಾರೆ. ಈ ಶೋಗೆ ಮಹೇಶ್​ ಬಾಬು ಅವರು ಅತಿಥಿಯಾಗಿ ಆಗಮಿಸಿದ್ದರು. ಇತ್ತೀಚೆಗೆ ಇದರ ಶೂಟಿಂಗ್​ ಪೂರ್ಣಗೊಂಡಿದೆ. ಮಹೇಶ್​ ಬಾಬು ಈ ಸ್ಪರ್ಧೆಯಲ್ಲಿ 25 ಲಕ್ಷ ರೂಪಾಯಿ ಗೆದ್ದಿದ್ದಾರೆ. ಈ ಎಪಿಸೋಡ್​ ಟಿವಿಯಲ್ಲಿ ದಸರಾ ಹಬ್ಬದ ಸಮಯದಲ್ಲಿ ಪ್ರಸಾರವಾಗಲಿದೆ.

ಈ ಶೋಗೆ ಅತಿಥಿಗಳಾಗಿ ಬರುವ ಸೆಲೆಬ್ರಿಟಿಗಳು ಗೆಲ್ಲುವ ಹಣವನ್ನು ಯಾವುದಾದರೂ ಚಾರಿಟಿಗೆ ನೀಡಬೇಕು ಎನ್ನುವ ನೀತಿ ಇದೆ. ಹೀಗಾಗಿ, ಗೆದ್ದ 25 ಲಕ್ಷ ರೂಪಾಯಿ ಹಣವನ್ನು ಮಹೇಶ್​ ತಾವು ದತ್ತು ಪಡೆದ ಹಳ್ಳಿಯ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲಿದ್ದಾರೆ.

ವರ್ಷಕ್ಕೆ ಒಂದು ಅಥವಾ ಎರಡು ಸಿನಿಮಾಗಳನ್ನು ಮಾತ್ರ ಮಾಡುವುದು ಮಹೇಶ್​ ಬಾಬು ರೂಢಿ. ಕಳೆದ ವರ್ಷ ಆರಂಭದಲ್ಲಿ, ಅಂದರೆ 2020ರ ಜನವರಿಯ 11ರಂದು ‘ಸರಿಲೇರು ನೀಕೆವ್ವರು’ ಸಿನಿಮಾ ಬಿಡುಗಡೆ ಆಗಿತ್ತು. ಆದರೆ ಕೊರೊನಾ ಲಾಕ್​ಡೌನ್​ ಕಾರಣದಿಂದ 2021ರಲ್ಲಿ ಮಹೇಶ್​ ಬಾಬು ನಟನೆಯ ಯಾವ ಚಿತ್ರವೂ ತೆರೆಕಂಡಿಲ್ಲ. 2022ರ ಜ.13ರಂದು ‘ಸರ್ಕಾರು ವಾರಿ ಪಾಟ’ ತೆರೆಕಾಣಲಿದೆ. ಅದಕ್ಕೂ ಮುನ್ನ ಕೇವಲ ಫಸ್ಟ್​ಲುಕ್​ನಲ್ಲಿಯೇ ಈ ಸಿನಿಮಾ ಒಂದು ದಾಖಲೆ ಬರೆದಿದೆ.

ಇದನ್ನೂ ಓದಿ: ದಳಪತಿ ವಿಜಯ್​ ಮತ್ತು ಮಹೇಶ್​ ಬಾಬು ಪತ್ನಿ ನಮ್ರತಾ ಹಳೇ ವಿಚಾರ ಎಳೆದು ತಂದ ಫ್ಯಾನ್ಸ್​

ಮಹೇಶ್​ ಬಾಬು ಮನೆಯಲ್ಲಿರುವ ಐಷಾರಾಮಿ ಹೋಮ್​ ಥಿಯೇಟರ್ ಹೇಗಿದೆ ಗೊತ್ತಾ?; ಇಲ್ಲಿದೆ ಫೋಟೋ

Follow Us
TV9 Web
TV9 Web

TV9 Kannada

Read More
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ