AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹೇಶ್​ ಬಾಬು ಮನೆಯಲ್ಲಿರುವ ಐಷಾರಾಮಿ ಹೋಮ್​ ಥಿಯೇಟರ್ ಹೇಗಿದೆ ಗೊತ್ತಾ?; ಇಲ್ಲಿದೆ ಫೋಟೋ

ಮಹೇಶ್​ ಬಾಬು ಹೈದರಾಬಾದ್​ನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಕುಟುಂಬದ ಜತೆ ಹಾಯಾಗಿ ಸಮಯ ಕಳೆಯೋಕೆ ಏನೆಲ್ಲ ವ್ಯವಸ್ಥೆ ಬೇಕೋ ಅದನ್ನು ಮನೆಯಲ್ಲೇ ಮಾಡಿಕೊಂಡಿದ್ದಾರೆ.

ಮಹೇಶ್​ ಬಾಬು ಮನೆಯಲ್ಲಿರುವ ಐಷಾರಾಮಿ ಹೋಮ್​ ಥಿಯೇಟರ್ ಹೇಗಿದೆ ಗೊತ್ತಾ?; ಇಲ್ಲಿದೆ ಫೋಟೋ
ಮಹೇಶ್​ ಬಾಬು ಮನೆಯಲ್ಲಿರುವ ಐಷಾರಾಮಿ ಹೋಮ್​ ಥೀಯೇಟರ್ ಹೇಗಿದೆ ಗೊತ್ತಾ?; ಇಲ್ಲಿದೆ ಫೋಟೋ
TV9 Web
| Edited By: |

Updated on: Aug 28, 2021 | 2:58 PM

Share

ದೊಡ್ಡದೊಡ್ಡ ಸೆಲೆಬ್ರಿಟಿಗಳು ತಾವು ಕಟ್ಟಿಸುವ ಮನೆಯ ಬಗ್ಗೆ ಸಾಕಷ್ಟು ಕನಸು ಕಂಡಿರುತ್ತಾರೆ. ಫಿಟ್​ನೆಸ್ ಕಾಯ್ದುಕೊಳ್ಳೋಕೆ ಜಿಮ್​, ರೆಕಾರ್ಡಿಂಗ್​ ಸ್ಟುಡಿಯೋ, ಸಿನಿಮಾ ವೀಕ್ಷಣೆಗೆ ಹೋಮ್​ ಥಿಯೇಟರ್​ ಅನ್ನು ಮನೆಯಲ್ಲೇ ಹೊಂದಿರುತ್ತಾರೆ. ಇದಕ್ಕೆ ಟಾಲಿವುಡ್​ ನಟ ಮಹೇಶ್​ ಬಾಬು ಕೂಡ ಹೊರತಾಗಿಲ್ಲ. ಅವರು ತಮ್ಮ ಮನೆಯಲ್ಲೇ ಐಷಾರಾಮಿ ಹೋಮ್​ ಥಿಯೇಟರ್​ ಹೊಂದಿದ್ದಾರೆ. ಈ ಫೋಟೋ ಈಗ ವೈರಲ್​ ಆಗಿದೆ.

ಮಹೇಶ್​ ಬಾಬು ಹೈದರಾಬಾದ್​ನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಕುಟುಂಬದ ಜತೆ ಹಾಯಾಗಿ ಸಮಯ ಕಳೆಯೋಕೆ ಏನೆಲ್ಲ ವ್ಯವಸ್ಥೆ ಬೇಕೋ ಅದನ್ನು ಮನೆಯಲ್ಲೇ ಮಾಡಿಕೊಂಡಿದ್ದಾರೆ. ಕುಟುಂಬದ ಜತೆ ಸಿನಿಮಾ ವೀಕ್ಷಿಸೋಕೆ ಮನೆಯಲ್ಲಿ ವಿಶೇಷ ಥಿಯೇಟರ್​ ವ್ಯವಸ್ಥೆ ಕೂಡ ಇದೆ. ಈ ಫೋಟೋವನ್ನು ನಟ ಸುಧೀರ್ ಬಾಬು ಹಂಚಿಕೊಂಡಿದ್ದಾರೆ.

ಸುಧೀರ್ ಬಾಬು ನಟನೆಯ ‘ಶ್ರೀದೇವಿ ಸೋಡಾ ಸೆಂಟರ್​’ ಸಿನಿಮಾ ತೆರೆಗೆ ಬಂದಿದೆ. ಈ ಸಿನಿಮಾವನ್ನು ಮಹೇಶ್​ ಬಾಬು ರಿಲೀಸ್​ಗೂ ಮೊದಲೇ ಹೋಮ್​ ಥಿಯೇಟರ್​ನಲ್ಲಿ ವೀಕ್ಷಣೆ ಮಾಡಿದ್ದಾರೆ. ಈ ಸಿನಿಮಾ ವಿಮರ್ಶೆ ಮಾಡಿರುವ ಅವರು ಅಭಿಮಾನಿಗಳ ಬಳಿ ಸಿನಿಮಾ ನೋಡುವಂತೆ ಮನವಿ ಮಾಡಿದ್ದಾರೆ. ಮಹೇಶ್​ ಬಾಬು ಸಿನಿಮಾ ವೀಕ್ಷಿಸುತ್ತಿರುವ ಫೋಟೋವನ್ನು ಸುಧೀರ್ ಬಾಬು ಹಂಚಿಕೊಂಡಿದ್ದಾರೆ.

‘ಮಹೇಶ್​ ಬಾಬು ಅವರು ನಮ್ಮ ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ’ ಎಂದು ಸುಧೀರ್​ ಬಾಬು ಬರೆದುಕೊಂಡಿದ್ದಾರೆ. ಇದರಲ್ಲಿ ಮಹೇಶ್​ ಅವರ ಮನೆಯ ಹೋಮ್​ ಥಿಯೇಟರ್​ ಎಲ್ಲರ ಗಮನ ಸೆಳೆಯುತ್ತಿದೆ. ‘ಶ್ರೀದೇವಿ ಸೋಡಾ ಸೆಂಟರ್ ವೀಕ್ಷಣೆ ಮಾಡಿದ ನಂತರದಲ್ಲಿ ಸಿನಿಮಾ ಬಗ್ಗೆ ಮಹೇಶ್​ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸುಧೀರ್ ಬಾಬು ಅದ್ಭುತವಾಗಿ ನಟಿಸಿದ್ದಾರೆ ಎಂದಿದ್ದಾರೆ ಮಹೇಶ್​.

‘ಶ್ರೀದೇವಿ ಸೋಡಾ ಸೆಂಟರ್’​ ಸಿನಿಮಾ ಆಗಸ್ಟ್ 27ರಂದು ರಿಲೀಸ್​ ಆಗಿದೆ. ಕೊವಿಡ್​ ಕಾರಣದಿಂದ ಕೆಲ ರಾಜ್ಯಗಳ ಚಿತ್ರಮಂದಿರದಲ್ಲಿ ಶೇ.50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಲಾಗಿದೆ. ಇದರ ಮಧ್ಯೆಯೂ ಸಿನಿಮಾ ರಿಲೀಸ್​ ಮಾಡುವ ಸಾಹಸ ಮಾಡಿದ್ದಾರೆ. ಅಕ್ಷಯ್​ ಕುಮಾರ್​ ನಟನೆಯ ಬೆಲ್​ ಬಾಟಮ್​ ಸಿನಿಮಾ ಇತ್ತೀಚೆಗೆ ತೆರೆಗೆ ಬಂದಿತ್ತು. ಕೊವಿಡ್​ ಕಾರಣದಿಂದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮೇಲೆ ಹೊಡೆತ ಬಿದ್ದಿತ್ತು.

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?