Hombale Films: ಹೊಂಬಾಳೆ 12ನೇ ಸಿನಿಮಾ ‘ರಾಘವೇಂದ್ರ ಸ್ಟೋರ್ಸ್’​ಗೆ ಜಗ್ಗೇಶ್​ ಹೀರೋ; ನಿರ್ದೇಶನ ಯಾರದ್ದು?

Raghavendra Stores: ವಿಜಯ್​ ಕಿರಂಗದೂರು ಆರು ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜತೆಗೆ ತಮ್ಮ ನಿರ್ಮಾಣದ 12ನೇ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ.

Hombale Films: ಹೊಂಬಾಳೆ 12ನೇ ಸಿನಿಮಾ ‘ರಾಘವೇಂದ್ರ ಸ್ಟೋರ್ಸ್’​ಗೆ ಜಗ್ಗೇಶ್​ ಹೀರೋ; ನಿರ್ದೇಶನ ಯಾರದ್ದು?
Hombale Films: ಹೊಂಬಾಳೆ 12ನೇ ಸಿನಿಮಾ ‘ರಾಘವೇಂದ್ರ ಸ್ಟೋರ್ಸ್​ಗೆ’ ಜಗ್ಗೇಶ್​ ಹೀರೋ; ನಿರ್ದೇಶನ ಯಾರದ್ದು?
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Sep 22, 2021 | 3:36 PM

‘ಕೆಜಿಎಫ್​ ಚಾಫ್ಟರ್​ 2’ನಂತಹ ಬಿಗ್​ ಬಜೆಟ್​ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ವಿಜಯ್​ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್​ ತಮ್ಮ 12ನೇ ಸಿನಿಮಾ ಘೋಷಣೆ ಮಾಡಿದೆ. ಅದಕ್ಕೆ ‘‘ರಾಘವೇಂದ್ರ ಸ್ಟೋರ್ಸ್’ ಎಂದು ಹೆಸರಿಡಲಾಗಿದ್ದು, ಜಗ್ಗೇಶ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂತೋಷ್​ ಆನಂದ್​ರಾಮ್​ ನಿರ್ದೇಶನ ಸಿನಿಮಾಗಿದೆ. ಇಂದು (ಸೆಪ್ಟೆಂಬರ್​ 22) ಸಿನಿಮಾದ ಟೈಟಲ್​ ಹಾಗೂ ಫಸ್ಟ್​ಲುಕ್​ ಬಿಡುಗಡೆ ಆಗಿದೆ.

ಜಗ್ಗೇಶ್​ ಬಾಣಸಿಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನವೆಂಬರ್​ 22ರಿಂದ ಸಿನಿಮಾ ಶೂಟಿಂಗ್​ ಆರಂಭಗೊಳ್ಳಲಿದೆ. ಈ ಸಿನಿಮಾದಲ್ಲಿ ಜಗ್ಗೇಶ್​ ಭಿನ್ನ ಅವತಾರಾದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್​ ಅಭಿಮಾನಿಗಳಿಗೆ ಇಷ್ಟವಾಗಿದೆ.

2014ರಲ್ಲಿ ತೆರೆಗೆ ಬಂದ ‘ನಿನ್ನಿಂದಲೇ’ ಸಿನಿಮಾ ಮೂಲಕ ವಿಜಯ್​ ಕಿರಗಂದೂರು ಸಿನಿಮಾ ನಿರ್ಮಾಣಕ್ಕೆ ಕಾಲಿಟ್ಟರು. ಇದಾದ ನಂತರ 2015ರಲ್ಲಿ ಇವರ ನಿರ್ಮಾಣದ ‘ಮಾಸ್ಟರ್​ಪೀಸ್​’ ತೆರೆಗೆ ಬಂತು. 2017ರಲ್ಲಿ ‘ರಾಜಕುಮಾರ’​ ಸಿನಿಮಾ ರಿಲೀಸ್​ ಆಯಿತು. ‘ಕೆಜಿಎಫ್​: ಚಾಪ್ಟರ್​ 1’ ನಿರ್ಮಾಣ ಮಾಡಿ 2018ರಲ್ಲಿ ಅದನ್ನು ರಿಲೀಸ್​ ಮಾಡಿತು ಹೊಂಬಾಳೆ ಫಿಲ್ಮ್ಸ್​. ಈ ಸಿನಿಮಾ ದೊಡ್ಡ ಯಶಸ್ಸು ಪಡೆಯಿತು. ಈ ವರ್ಷ ‘ಯುವರತ್ನ’ ಸಿನಿಮಾ ರಿಲೀಸ್​ ಆಗಿದೆ. ‘ಕೆಜಿಎಫ್​ 2’ 2022ಕ್ಕೆ ರಿಲೀಸ್ ಆಗುತ್ತಿದೆ. ಈ ಆರು ಸಿನಿಮಾಗಳ ಪೈಕಿ ಮೂರು ಚಿತ್ರಗಳಲ್ಲಿ ಪುನೀತ್​ ಹಾಗೂ ಮೂರು ಚಿತ್ರಗಳಲ್ಲಿ ಯಶ್​ ನಟಿಸಿದ್ದರು.

ಈಗ ಹೊಂಬಾಳೆ ಫಿಲ್ಮ್ಸ್​ ಬೇರೆಬೇರೆ ನಟರ ಜತೆ ಸಿನಿಮಾ ಮಾಡುತ್ತಿದೆ. ತೆಲುಗಿನ ‘ಸಲಾರ್​’ ಸಿನಿಮಾ ನಿರ್ಮಾಣ ಜವಾಬ್ದಾರಿ ಹೊಂಬಾಳೆ ಹೊತ್ತುಕೊಂಡಿದೆ. ಈ ಸಿನಿಮಾದಲ್ಲಿ ಪ್ರಭಾಸ್​ ಹೀರೋ. ಶ್ರೀಮುರಳಿ ನಟನೆಯ ‘ಭಗೀರ’, ಪುನೀತ್​ ನಟನೆಯ ‘ದ್ವಿತ್ವ’, ರಕ್ಷಿತ್​ ಶೆಟ್ಟಿ ನಿರ್ದೇಶನದ ‘ರಿಚರ್ಡ್​ ಆ್ಯಂಟೋನಿ’ ರಿಷಬ್​ ಶೆಟ್ಟಿ ಆ್ಯಕ್ಷನ್​ ಕಟ್​ ಹೇಳುತ್ತಿರುವ ‘ಕಾಂತಾರ’ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಹಣ ಹೂಡುತ್ತಿದೆ.

ವಿಜಯ್​ ಕಿರಂಗದೂರು ಆರು ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜತೆಗೆ ತಮ್ಮ ನಿರ್ಮಾಣದ 12ನೇ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ‘ಪ್ರತಿಯೊಬ್ಬರಲ್ಲೂ ಹಸಿವಿದೆ. ಪ್ರತಿ ಅಗಳಿನಲ್ಲೂ ತಿನ್ನುವವರ ಹೆಸರಿದೆ ಅನ್ನದಾತೋ ಸುಖೀಭವ’ ಎಂದು ಹೊಂಬಾಳೆ ಫಿಲ್ಮ್ಸ್​ ಬರೆದುಕೊಂಡಿತ್ತು.

ಇದನ್ನೂ ಓದಿ: ಸಡನ್​ ಆಗಿ ‘ಕಿಚ್ಚು’ ಹೊತ್ತಿಸಿದ ಹೊಂಬಾಳೆ ಫಿಲ್ಮ್ಸ್​; 11ನೇ ಸಿನಿಮಾ ಬಗ್ಗೆ ಕೆಜಿಎಫ್​ ನಿರ್ಮಾಪಕರ ಬ್ರೇಕಿಂಗ್​ ನ್ಯೂಸ್

Hombale Films: ಹೊಂಬಾಳೆ ಫಿಲ್ಮ್ಸ್​ನ 11ನೇ ಚಿತ್ರ ಕಾಂತಾರ; ನಿರ್ದೇಶಕ ಮತ್ತು ನಾಯಕನಾಗಿ ರಿಷಬ್ ಶೆಟ್ಟಿ

Published On - 3:20 pm, Wed, 22 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ