‘ನಾನು ಸಿನಿಮಾ ಮಾಡಲ್ಲ ಅಂದ್ರೆ ಅನೇಕರಿಗೆ ಬೇಸರ ಆಗತ್ತೆ’; ಚಿತ್ರರಂಗಕ್ಕೆ ಬರುವ ಸೂಚನೆ ನೀಡಿದ ರಮ್ಯಾ?

2016ರಲ್ಲಿ ಬಂದ ‘ನಾಗರಹಾವು’ ಸಿನಿಮಾ ಬಳಿಕ ರಮ್ಯಾ ಬೇರೆ ಯಾವುದೇ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ರಾಜಕೀಯದಲ್ಲಿಯೂ ಅವರಿಗೆ ಕೊಂಚ ಹಿನ್ನಡೆ ಆಯಿತು. ಆದರೆ ಸೋಶಿಯಲ್​ ಮೀಡಿಯಾದಲ್ಲಿ ಅವರು ಸಕ್ರಿಯರಾಗಿದ್ದರು.

‘ನಾನು ಸಿನಿಮಾ ಮಾಡಲ್ಲ ಅಂದ್ರೆ ಅನೇಕರಿಗೆ ಬೇಸರ ಆಗತ್ತೆ’; ಚಿತ್ರರಂಗಕ್ಕೆ ಬರುವ ಸೂಚನೆ ನೀಡಿದ ರಮ್ಯಾ?

ನಟಿ ರಮ್ಯಾ ಚಿತ್ರರಂಗದಿಂದ ದೂರವೇ ಉಳಿದುಕೊಂಡಿದ್ದು ಅನೇಕರಿಗೆ ಬೇಸರ ತರಿಸಿದೆ. ಅವರನ್ನು ಮತ್ತೆ ತೆರೆಮೇಲೆ ನೋಡಬೇಕು ಎಂದು ಸಾಕಷ್ಟು ಮಂದಿ ಕಾದುಕೂತಿದ್ದಾರೆ. ರಮ್ಯಾ ಚಿತ್ರರಂಗದಿಂದ ದೂರವೇ ಇದ್ದರೂ ಅವರಿಗೆ ಬೇಡಿಕೆ ಕಡಿಮೆ ಆಗಿಲ್ಲ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ. ಈ ಮಧ್ಯೆ, ರಮ್ಯಾ ಮತ್ತೆ ರಾಜಕೀಯ ಅಥವಾ ಚಿತ್ರರಂಗಕ್ಕೆ ಬರುತ್ತಾರಾ? ಈ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ.

ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ರಮ್ಯಾ ಈ ಬಗ್ಗೆ ಮಾತನಾಡಿದ್ದಾರೆ. ರಮ್ಯಾ ರಾಜಕೀಯ ತೊರೆದು ಹಲವು ವರ್ಷಗಳು ಕಳೆದಿವೆ. ಅವರು ಮತ್ತೆ ರಾಜಕೀಯಕ್ಕೆ ಬರುತ್ತಾರಾ? ಈ ಪ್ರಶ್ನೆಗೆ ಅವರ ಕಡೆಯಿಂದ ಇಲ್ಲ ಎನ್ನುವ ಉತ್ತರ ಬಂದಿದೆ. ಈ ಮೂಲಕ ಅವರು ಮತ್ತೆ ರಾಜಕೀಯದಲ್ಲಿ ಸಕ್ರಿಯವಾಗಬಾರದು ಎಂಬುದನ್ನು ದೃಢವಾಗಿ ನಿಶ್ಚಯಿಸಿದ್ದಾರೆ. ಆದರೆ, ಚಿತ್ರರಂಗ? ಈ ಬಗ್ಗೆ ಅವರಲ್ಲಿ ಇನ್ನೂ ಒಂದು ಗೊಂದಲ ಉಳಿದುಕೊಂಡಿದೆ. ಅಭಿಮಾನಿಗಳಿಗೆ ಬೇಸರ ಮಾಡಬಾರದು ಎನ್ನುವುದು ರಮ್ಯಾಗೆ ಇನ್ನೂ ಇದೆ.

‘ಸಿನಿಮಾ ಆಫರ್​ಗೆ ಒಕೆ ಎಂದು ಹೇಳುವ ಅವಕಾಶ ಇದ್ದಿದ್ದರೆ ಚೆನ್ನಾಗಿತ್ತು. ಏಕೆಂದರೆ ಇದರಿಂದ ಸಾಕಷ್ಟು ಮಂದಿಗೆ ಖುಷಿ ಆಗುತ್ತದೆ. ಸಿನಿಮಾ ತಂಡದವರು ನನ್ನನ್ನು ಅಪ್ರೋಚ್​ ಮಾಡಿದ್ದರು. ಆದರೆ, ಅವರಿಗೆ ನಾನು ಏನನ್ನೂ ಹೇಳಿಲ್ಲ. ಅವರಿಗೆ ನೋಡೋಣ ಎಂದು ಹೇಳಬೇಕು. ನಾನು ನೋ ಎಂದರೆ ಸಾಕಷ್ಟು ಜನರಿಗೆ ಬೇಸರವಾಗುತ್ತದೆ’ ಎಂದಿದ್ದಾರೆ ರಮ್ಯಾ.

ಮತ್ತೆ ಸಿನಿಮಾಗಳಲ್ಲಿ ರಮ್ಯಾ ತೊಡಗಿಕೊಳ್ಳಬೇಕು ಎಂಬುದು ಹಲವು ಅಭಿಮಾನಿಗಳ ಬಯಕೆ. ಆದರೆ ಅವರೆಲ್ಲರ ಆಸೆಗಳಿಗೆ ರಮ್ಯಾ ಇತ್ತೀಚೆಗೆ ತಣ್ಣೀರು ಎರಚಿದ್ದರು. ಖಡಾಖಂಡಿತವಾಗಿ ತಾವು ಮತ್ತೆ ಚಿತ್ರರಂಗಕ್ಕೆ ಮರಳುವುದಿಲ್ಲ ಎಂದು ಅವರು ಹೇಳಿದ್ದರು. ‘ನಿಮ್ಮನ್ನು ನಿರಾಸೆಗೊಳಿಸುತ್ತಿರುವುದಕ್ಕೆ ಕ್ಷಮೆ ಇರಲಿ. ನಾನು ಆಸಕ್ತಿ ಕಳೆದುಕೊಂಡಿದ್ದೇನೆ. ಆ ಕಾಲ ಯಾವಾಗಲೋ ಮುಗಿಯಿತು’ ಎಂದು ರಮ್ಯಾ ಇನ್​ಸ್ಟಾಗ್ರಾಮ್​ನಲ್ಲಿ ಹೇಳಿದ್ದರು.

2016ರಲ್ಲಿ ಬಂದ ‘ನಾಗರಹಾವು’ ಸಿನಿಮಾ ಬಳಿಕ ರಮ್ಯಾ ಬೇರೆ ಯಾವುದೇ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ರಾಜಕೀಯದಲ್ಲಿಯೂ ಅವರಿಗೆ ಕೊಂಚ ಹಿನ್ನಡೆ ಆಯಿತು. ಆದರೆ ಸೋಶಿಯಲ್​ ಮೀಡಿಯಾದಲ್ಲಿ ಅವರು ಸಕ್ರಿಯರಾಗಿದ್ದರು.

ಇದನ್ನೂ ಓದಿ: ಹೇಗಿದೆ ಸತೀಶ್​ ನೀನಾಸಂ ತಮಿಳು ಸಿನಿಮಾ ಲುಕ್​?; ರಮ್ಯಾ ರಿಲೀಸ್​ ಮಾಡಿದ್ರು ಪೋಸ್ಟರ್​

‘ಎಲ್ಲವೂ ಕೂಡಿ ಬಂದ್ರೆ ಕನ್ನಡದಲ್ಲೇ ರಮ್ಯಾ ಜತೆ ಸಿನಿಮಾ ಮಾಡ್ತೀನಿ’: ಸತೀಶ್ ನೀನಾಸಂ

Read Full Article

Click on your DTH Provider to Add TV9 Kannada