ZEEL- Sony Pictures Merger: ಭಾರತದ ಮನರಂಜನಾ ಲೋಕದಲ್ಲಿ ಮಹಾವಿಲೀನ, ಒಂದಾಗುತ್ತಿವೆ ಝೀ ಹಾಗೂ ಸೋನಿ
ಝೀ ಎಂಟರ್ಟೇನ್ಮೆಂಟ್ ಹಾಗೂ ಸೋನಿ ಚಾನೆಲ್ನ ವಿಲೀನದ ಬಗ್ಗೆ ಬುಧವಾರ ಘೋಷಣೆ ಮಾಡಲಾಗಿದೆ. ಆ ಬಗ್ಗೆ ವಿವರಗಳು ಇಲ್ಲಿವೆ.
ನಿರ್ದೇಶಕ ಮಂಡಳಿಯಿಂದ ಸೆ. 21ನೇ ತಾರೀಕಿನಂದು ನಡೆದ ಸಭೆಯಲ್ಲಿ ಸೋನಿ ಪಿಕ್ಚರ್ಸ್ ನೆಟ್ವರ್ಕ್ ಇಂಡಿಯಾ (SPNI) ಜತೆ ವಿಲೀನಗೊಳ್ಳಲು ಸರ್ವಾನುಮತದಿಂದ ತಾತ್ವಿಕ ಒಪ್ಪಿಗೆ ಸೂಚಿಸಲಾಯಿತು ಎಂದು ಬುಧವಾರ ಝೀ ಎಂಟರ್ಟೇನ್ಮೆಂಟ್ ಎಂಟರ್ಪ್ರೈಸಸ್ (ZEEL) ಘೋಷಣೆ ಮಾಡಿದೆ. ಈ ಒಪ್ಪಂದದ ಪ್ರಕಟಣೆಯ ನಂತರ ಬುಧವಾರದ ಆರಂಭಿಕ ವಹಿವಾಟಿನಲ್ಲಿ ಝೀ ಎಂಟರ್ಟೇನ್ಮೆಂಟ್ ಷೇರುಗಳು ಬಿಎಸ್‌ಇಯಲ್ಲಿ ಶೇ 20ಕ್ಕಿಂತ ಜಾಸ್ತಿ ಹೆಚ್ಚಾಗಿದೆ. ವಹಿವಾಟಿನ ಭಾಗವಾಗಿ ವಿಲೀನಗೊಂಡ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಪುನೀತ್ ಗೋಯೆಂಕಾ ಮುಂದುವರಿಯುತ್ತಾರೆ. ಝೀ ಟಿವಿಯಂತಹ ಬ್ರ್ಯಾಂಡ್‌ಗಳೊಂದಿಗೆ ಟೆಲಿವಿಷನ್ ಬ್ರಾಡ್‌ಕಾಸ್ಟಿಂಗ್ ಮತ್ತು ಡಿಜಿಟಲ್ ಮೀಡಿಯಾದಲ್ಲಿ ಅಸ್ತಿತ್ವವನ್ನು ಹೊಂದಿರುವ ಝೀ, ಇನ್ವೆಸ್ಕೋದಂತಹ ಪ್ರಮುಖ ಹೂಡಿಕೆದಾರರಿಂದ ಒತ್ತಡಕ್ಕೆ ಒಳಗಾಗಿತ್ತು. ಕಳೆದ ವಾರ ಮುಖ್ಯ ನಿರ್ದೇಶಕರಾದ ಪುನೀತ್ ಗೋಯೆಂಕಾ ಅವರ ನಿರ್ಗಮನ ಸೇರಿದಂತೆ ಮೂವರು ನಿರ್ದೇಶಕರನ್ನು ತೆಗೆದುಹಾಕಲು ಆ ಹೂಡಿಕೆದಾರರಿಂದ ಪ್ರಯತ್ನ ನಡೆದಿತ್ತು.
ಸೋನಿ ಪಿಕ್ಚರ್ಸ್‌ನ ಷೇರುದಾರರು ವಿಲೀನಗೊಂಡ ಝೀ ಎಂಟರ್ಟೇನ್ಮೆಂಟ್ನಲ್ಲಿ ಹೆಚ್ಚಿನ ಪಾಲನ್ನು ಹೊಂದಿರುತ್ತಾರೆ. ವಿಲೀನದ ಭಾಗವಾಗಿ ಅವರು SPNIಗೆ ಬೆಳವಣಿಗೆಯ ಬಂಡವಾಳವನ್ನು ತುಂಬುತ್ತಾರೆ. ಅಂದರೆ SPNI ಮುಚ್ಚುವ ಸಮಯದಲ್ಲಿ ಸುಮಾರು 1.575 ಬಿಲಿಯನ್ ಅಮೆರಿಕನ್ ಡಾಲರ್ ಅನ್ನು ಹೊಂದಿದೆ. ಇತರ ಬೆಳವಣಿಗೆಯ ಅವಕಾಶಗಳನ್ನು ಮುಂದುವರಿಸಲು ಇದನ್ನು ಬಳಸುತ್ತದೆ. ಈಗ ZEEL ಹಾಗೂ SPNIನ ಅಂದಾಜು ಈಕ್ವಿಟಿ ಮೌಲ್ಯವು ನೋಡುವುದಾದದರೆ, ಸಾಂಕೇತಿಕವಾಗಿ ವಿಲೀನ ಅನುಪಾತವು ಶೇ 61.25ರಷ್ಟು ಝೀ ಪರವಾಗಿದೆ. ಆದರೂ ಈಗ SPNIಗೆ ಬೆಳವಣಿಗೆ ಬಂಡವಾಳ ಪೂರೈಕೆ ಪ್ರಸ್ತಾವದೊಂದಿಗೆ ವಿಲೀನ ಅನುಪಾತವು ವಿಲೀನಗೊಂಡ ಸಂಸ್ಥೆಯಲ್ಲಿ ಝೀನ ಷೇರುದಾರರಿಗೆ ಶೇ 47.07 ಆಗಬಹುದು. ಮತ್ತು ಬಾಕಿ ಶೇ 52.93ರಷ್ಟು ವಿಲೀನಗೊಂಡ ಸಂಸ್ಥೆಯ ಪಾಲು SPNI ಷೇರುದಾರರಿಗೆ ದೊರೆಯುತ್ತದೆ.
ಝೀ ಮತ್ತು ಸೋನಿ ಈ ಎರಡೂ ಕಂಪೆನಿಗಳಳು ತಮ್ಮ ಲೀನಿಯರ್ ಜಾಲಗಳು, ಡಿಜಿಟಲ್ ಆಸ್ತಿಗಳು, ಉತ್ಪಾದನಾ ಕಾರ್ಯಗಳು ಮತ್ತು ಕಾರ್ಯಕ್ರಮ ಲೈಬ್ರರಿಗಳನ್ನು ಸೇರಿಸಲು ನಾನ್- ಬೈಂಡಿಂಗ್ ಟರ್ಮ್ ಶೀಟ್ಗೆ ಒಪ್ಪಿಕೊಂಡಿವೆ. ಟರ್ಮ್ ಶೀಟ್ 90 ದಿನಗಳ ವಿಶೇಷ ಅವಧಿಯನ್ನು ಒದಗಿಸುತ್ತದೆ. ಈ ಸಮಯದಲ್ಲಿ ಎರಡೂ ಕಡೆಯಿಂದ ಪರಸ್ಪರ ಮಾತುಕತೆಯನ್ನು ನಡೆಸುತ್ತವೆ ಮತ್ತು ಅಂತಿಮ ಒಪ್ಪಂದ (ಗಳನ್ನು) ಕಾಯಂಗೊಳಿಸುತ್ತವೆ. ವಿಲೀನಗೊಂಡ ಘಟಕವು ಭಾರತದಲ್ಲಿ ಸಾರ್ವಜನಿಕವಾಗಿ ಲಿಸ್ಟೆಡ್ ಮಾಡಲಾದ ಕಂಪೆನಿಯಾಗಿರುತ್ತದೆ.
ವ್ಯವಹಾರಗಳನ್ನು ಬೆಳೆಸಲು ಉತ್ತಮ ಸ್ವಸ್ತಿಕ ಇನ್ವೆಸ್ಟ್‌ಮಾರ್ಟ್ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಸಂತೋಷ್ ಮೀನಾ, “ಸೋನಿ ಜೊತೆಗಿನ ಒಪ್ಪಂದದ ಬಗೆಗಿನ ಇತ್ತೀಚಿನ ಪ್ರಕಟಣೆಯು ಝೀ ಲಿಮಿಟೆಡ್‌ಗೆ ಅತ್ಯಂತ ಪಾಸಿಟಿವ್ ಉತ್ತೇಜನವಾಗಿದೆ. ಒಪ್ಪಂದವು ಅನಿರ್ಬಂಧಿತವಾಗಿದ್ದರೂ ಹೆಚ್ಚಿನ ಸ್ಪಷ್ಟತೆಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ ಈ ಒಪ್ಪಂದವು ಎರಡೂ ಕಂಪೆನಿಗಳಿಗೆ ತಮ್ಮ ವ್ಯವಹಾರಗಳನ್ನು ಬೆಳೆಸಲು ಉತ್ತಮವಾದ ಸಹಕಾರವನ್ನು ತರುತ್ತದೆ ಮತ್ತು ಸಂಯೋಜಿತ ಘಟಕವು ಉದ್ಯಮದಲ್ಲಿ ಅತಿದೊಡ್ಡದಾಗಿ ನಿಲ್ಲುತ್ತದೆ,” ಎಂದಿದ್ದಾರೆ.
ಮುಂದುವರಿದು ಮಾತನಾಡಿದ ಮೀನಾ, ಸ್ಟಾಕ್ ಅತ್ಯಂತ ಆಕರ್ಷಕ ಮೌಲ್ಯಮಾಪನದಲ್ಲಿ ವಹಿವಾಟು ನಡೆಸುತ್ತಿದೆ ಮತ್ತು ಇದು ಮಾಧ್ಯಮ ವಲಯದಲ್ಲಿ ಪ್ರಬಲ ಮತ್ತು ಎಫ್‌ಐಐಗಳ ನೆಚ್ಚಿನ ಸ್ಟಾಕ್‌ಗಳಲ್ಲಿ ಒಂದಾಗಿದೆ. ಈ ಒಪ್ಪಂದವು ಮುಕ್ತಾಯವಾದರೆ ನಾವು ಕೌಂಟರ್‌ನಲ್ಲಿ ದೊಡ್ಡ ರಿಟರ್ನ್ ಕಾಣಬಹುದು. ತಾಂತ್ರಿಕವಾಗಿ, “ಇದು ಚಾನೆಲ್ ರಚನೆಯ ಕುಸಿತಕ್ಕೆ ಸಾಕ್ಷಿಯಾಗುತ್ತಿದೆ ಮತ್ತು 300 ರೂಪಾಯಿ ಷೇರಿನ ಬೆಲೆ ಎಲ್ಲ ತಕ್ಷಣದ ಮತ್ತು ಮಾನಸಿಕ ಅಡಚಣೆಯಾಗಿರುವ ಪ್ರಮುಖ ಮೂವಿಂಗ್ ಸರಾಸರಿಗಳಿಗಿಂತ ಮೇಲೆ ವಹಿವಾಟಿಗಾಗಿ ನಿರ್ವಹಿಸುತ್ತದೆ; ಇದಕ್ಕಿಂತ ಮೇಲೆ, 350ರತ್ತ ಸಾಗುವ ಸಾಧ್ಯತೆಯಿದೆ. ಕೆಳಮಟ್ಟದಲ್ಲಿ, 250ಕ್ಕೆ ಬಲವಾದ ಬೆಂಬಲವಾಗಿ ಕಾಣುತ್ತಿದೆ,” ಎಂದು ಅವರು ಹೇಳಿದರು.
ಮನರಂಜನಾ ಕಂಪೆನಿಯಾಗಿ ಹೆಚ್ಚಿನ ಬೆಳವಣಿಗೆ ಎಕ್ಸ್ಚೇಂಜ್ಗೆ ಬುಧವಾರ ಸಲ್ಲಿಸಿದ ಫೈಲಿಂಗ್ನಲ್ಲಿ, ವಿಲೀನವು ಎಲ್ಲ ಷೇರುದಾರರು ಮತ್ತು ಪಾಲುದಾರರ ಹಿತದೃಷ್ಟಿಯಿಂದ ಮತ್ತು ದಕ್ಷಿಣ ಏಷ್ಯಾದ ಪ್ರಮುಖ ಮಾಧ್ಯಮ ಮತ್ತು ಮನರಂಜನಾ ಕಂಪೆನಿಯಾಗಿ ಹೆಚ್ಚಿನ ಬೆಳವಣಿಗೆ ಹಾಗೂ ಲಾಭದಾಯಕತೆಯನ್ನು ಸಾಧಿಸುವ ZEEL ಕಾರ್ಯತಂತ್ರಕ್ಕೆ ಅನುಗುಣವಾಗಿದೆ ಎಂದು ತೀರ್ಮಾನಿಸಿದೆ ಎಂದು ಹೇಳಲಾಗಿದೆ. ಅಂದಹಾಗೆ, ಅಂತಿಮವಾಗಿ ವಹಿವಾಟು ಪೂರ್ಣಗೊಳ್ಳುವುದು ನಿರ್ಣಾಯಕ ಒಪ್ಪಂದಗಳ ಪೂರ್ಣಗೊಳಿಸುವುದಕ್ಕೆ ಒಳಪಟ್ಟಿರುತ್ತದೆ ಮತ್ತು ಕಾರ್ಪೊರೇಟ್ ಷೇರುದಾರರ ಮತಗಳನ್ನು ಒಳಗೊಂಡಂತೆ ಕಾರ್ಪೊರೇಟ್, ನಿಯಂತ್ರಕ ಮತ್ತು ಥರ್ಡ್ ಪಾರ್ಟಿ ಅನುಮೋದನೆಗಳು ಅಗತ್ಯವೆಂದು ನಿರೀಕ್ಷಿಸಲಾಗಿದೆ.
ಈ ವಿಲೀನದ ಅರ್ಥ ಏನೆಂದರೆ, ಎರಡೂ ಸಂಸ್ಥೆಗಳು ಸೇರಿ ಎಸ್ಪಿಎನ್ಐನ 26 ಹಾಗೂ ಝೀನ 49 ಚಾನೆಲ್ ಸೇರಿ, ಒಟ್ಟಾರೆ 75 ಚಾನೆಲ್ಗಳನ್ನು ನಡೆಸುತ್ತವೆ. ಝೀ ಚಾನೆಲ್ 173 ದೇಶಗಳಲ್ಲಿ ಅಸ್ತಿತ್ವ ಹೊಂದಿದ್ದು, 130 ಕೋಟಿಗೂ ಹೆಚ್ಚು ಮಂದಿಯನ್ನು ಜಾಗತಿಕ ಮಟ್ಟದಲ್ಲಿ ಹಾಗೂ ಭಾರತದಲ್ಲಿ 60 ಕೋಟಿ ಮಂದಿಯನ್ನು ಪ್ರತಿ ವಾರ ಭಾರತದಲ್ಲಿ ತಲುಪುತ್ತದೆ. ಇನ್ನು ಸೋನಿ ಭಾರತದಲ್ಲಿ 70 ಕೋಟಿ ವೀಕ್ಷಕರನ್ನು ತಲುಪುತ್ತದೆ ಮತ್ತು 167 ದೇಶಗಳಲ್ಲಿ ಲಭ್ಯ ಇದೆ. ZEE5 ಹಾಗೂ SonyLIV ಹೆಸರಲ್ಲಿ ಎರಡಕ್ಕೂ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಇದೆ. ಪ್ರಾದೇಶಿಕವಾಗಿ ನೋಡುವುದಾದರೆ ದಕ್ಷಿಣ ಭಾರತದಲ್ಲಿ ಝೀ ನೆಟ್ವರ್ಕ್ಗೆ ಶೇ 20ರಷ್ಟು ವೀಕ್ಷಕರ ಪಾಲಿದೆ.
ಇದನ್ನೂ ಓದಿ: Zee Entertainment: ಈ ಮೀಡಿಯಾ ಕಂಪೆನಿ ಷೇರು ಒಂದೇ ದಿನದಲ್ಲಿ ಶೇ 40ರಷ್ಟು ಏರಿಕೆ; ಏಕೆ, ಏನು ಇಲ್ಲಿದೆ ಮಾಹಿತಿ
(Zee Entertainment And Sony In Principle Merger Announced Here Is The Details)
Published On - 11:29 am, Wed, 22 September 21