Bitcoin: ಹೀಗೆ 6 ಲಕ್ಷ ರೂಪಾಯಿ ಹೂಡಿಕೆ 9 ವರ್ಷದಲ್ಲಿ 216 ಕೋಟಿ ರೂಪಾಯಿ ಆಗಿದ್ದು ಎಲ್ಲಾದರೂ ಉಂಟೇ?
9 ವರ್ಷಗಳ ಹಿಂದೆ ಮಾಡಿದ್ದ 6 ಲಕ್ಷ ರೂಪಾಯಿಯ ಹೂಡಿಕೆ ಇವತ್ತಿಗೆ 216 ಕೋಟಿ ರೂಪಾಯಿ ಆಗಿದೆ. ಯಾವುದು ಆ ಹೂಡಿಕೆ ಇಷ್ಟೊಂದು ಲಾಭ ಮಾಡಿಕೊಟ್ಟಿದೆ ಎಂಬ ಮಾಹಿತಿ ಇಲ್ಲಿದೆ.
BTC ‘ಹಾಡ್ಲರ್ಸ್’ಗಳ ಕಣ್ಸೆಳೆಯುತ್ತಿರುವುದರಿಂದ ಹಿಡಿದು, ಸುಮಾರು 28.35 ಮಿಲಿಯನ್ ಯುಎಸ್ಡಿ (216 ಕೋಟಿ ರೂಪಾಯಿ) ಮೌಲ್ಯದ 616.2004 ಬಿಟ್ ಕಾಯಿನ್ಗಳನ್ನು ಹೊಂದಿರುವ ಕ್ರಿಪ್ಟೋಕರೆನ್ಸಿ ವ್ಯಾಲೆಟ್ ಹಠಾತ್ ಚಲನೆಯನ್ನು ಕಂಡಿದೆ. ಸುಮಾರು ಒಂಬತ್ತು ವರ್ಷಗಳ ನಂತರ, ವ್ಯಾಲೆಟ್‌ನ ಮಾಲೀಕರು ಭಾನುವಾರ ಬಿಟ್‌ಕಾಯಿನ್‌ಗಳನ್ನು ಮತ್ತೊಂದು ವ್ಯಾಲೆಟ್‌ಗೆ ಸ್ಥಳಾಂತರಿಸಿದ್ದಾರೆ. ಬಿಟ್‌ಕಾಯಿನ್ ವ್ಯಾಲೆಟ್‌ನಲ್ಲಿನ ಚಲನೆಯನ್ನು ಮೊದಲು ಬ್ಲಾಕ್‌ಚೈನ್ ಎಕ್ಸ್‌ಪ್ಲೋರರ್ Blockchain.comನಲ್ಲಿ ವರದಿ ಮಾಡಿದೆ.
ವ್ಯಾಲೆಟ್‌ನ ವಿಶೇಷತೆ ಏನು? ಬಿಟ್ ಕಾಯಿನ್ ವ್ಯಾಲೆಟ್ ಸೃಷ್ಟಿಸಿದ ಘಾತೀಯ ರಿಟರ್ನ್ಸ್ ಹೂಡಿಕೆದಾರರನ್ನು ಅಚ್ಚರಿಗೆ ಗುರಿ ಮಾಡಿದೆ. ಡಿಸೆಂಬರ್ 10, 2012ರಂದು ಕ್ರಿಪ್ಟೋಕರೆನ್ಸಿ 13.30 ಯುಎಸ್ಡಿಯಲ್ಲಿ ವಹಿವಾಟು ಮಾಡುವಾಗ ವ್ಯಾಲೆಟ್ 616.2004 BTC ಅನ್ನು ಪಡೆಯಿತು. ಮಾಲೀಕರ ಒಟ್ಟು ಹೂಡಿಕೆ ಮೌಲ್ಯ 8,195 ಯುಎಸ್ಡಿ (ಅಂದಾಜು 6 ಲಕ್ಷ ರೂಪಾಯಿ). ಇಂದು, ಈ ವ್ಯಾಲೆಟ್ ಮೌಲ್ಯವು ಸುಮಾರು ಶೇ 3,59,284ರಷ್ಟು ಬೆಳೆದಿದೆ.
‘ಹಾಡ್ಲರ್ಸ್’ಗೆ ಹೆಚ್ಚಿನ ಮೆರುಗು ಇಡೀ ಪ್ರಸಂಗವು ಬಿಟ್‌ಕಾಯಿನ್ ಉತ್ಸಾಹಿಗಳು ಜನರಲ್ಲಿ ಪ್ರಚಾರ ಮಾಡಲು ಪ್ರಯತ್ನಿಸುತ್ತಿರುವ ಸಂದೇಶವನ್ನು ನೀಡುತ್ತದೆ – ‘ಹೋಡ್ಲ್ ಮತ್ತು ಮರೆತುಬಿಡಿ!’. HODL, “ಹೋಲ್ಡ್”ನ ತಪ್ಪಾದ ಉಚ್ಚಾರ, ಬಿಟ್ ಕಾಯಿನ್ ಮತ್ತು ಇತರ ಕ್ರಿಪ್ಟೋಕರೆನ್ಸಿಗಳ ಸಂದರ್ಭದಲ್ಲಿ ಖರೀದಿ ಮತ್ತು ಹಾಗೇ ಇರಿಸಿಕೊಳ್ಳುವ ತಂತ್ರಗಳನ್ನು ಸೂಚಿಸುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಸಂದೇಶಗಳು ಹರಿದಾಡುತ್ತಿವೆ. ಜನರು ಬಿಟ್‌ಕಾಯಿನ್ ಅನ್ನು ಇಳಿಕೆ ಸಂದರ್ಭದಲ್ಲಿ ಖರೀದಿಸಿ, ಏರಿಕೆ- ಇಳಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಹಾಗೇ ಉಳಿಸಿಕೊಳ್ಳುವ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಕ್ರಿಪ್ಟೋಕರೆನ್ಸಿಗಳ ಮೌಲ್ಯ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.
ಈ ವರ್ಷ ಬಿಟ್ ಕಾಯಿನ್ ನಿಜವಾದ ವಿನ್ನರ್ ಕಾಯಿನ್ಡೆಸ್ಕ್ ಡೇಟಾ ಪ್ರಕಾರ, ಬಿಟಿಸಿಯ ಬೆಲೆ 2021ರ ಜನವರಿಯಿಂದ ಈಚೆಗೆ ಶೇ 44.81ರಷ್ಟು ಹೆಚ್ಚಾಗಿದೆ. ಅದೇ ಬೇರೆಯ ಹೂಡಿಕೆಗೆ ಹೋಲಿಸಿದರೆ ಚಿನ್ನವು ಶೇ -6.44ರಷ್ಟು ಕುಸಿದಿದೆ, ಆದರೆ S&P 500 ಸೂಚ್ಯಂಕವು ಶೇ 17.66ರಷ್ಟು ಏರಿಕೆ ಕಂಡಿದೆ. ಅಸ್ಥಿರ ವ್ಯಾಪಾರದಲ್ಲಿ ಆಗಸ್ಟ್ ನಂತರ ಮೊದಲ ಬಾರಿಗೆ ಬಿಟ್ ಕಾಯಿನ್ ಬುಧವಾರ 40,000 ಯುಎಸ್ಡಿಗಿಂತ ಕೆಳಗೆ ಕುಸಿದಿದೆ. ವರ್ಚುವಲ್ ಕರೆನ್ಸಿಯ ಕುಸಿತದ ಸತತ ಮೂರನೇ ದಿನ ಇದು. ಈ ಕುಸಿತವು ಮಂಗಳವಾರ ಕ್ರಿಪ್ಟೋಕರೆನ್ಸಿಗಳ ಮೇಲಿನ ಚರ್ಚೆಯ ಫಲಿತಾಂಶವಾಗಿದೆ. ಯುಎಸ್ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ ಅಧ್ಯಕ್ಷ ಗ್ಯಾರಿ ಜೆನ್ಸ್ಲರ್ ಅವರು ಮಾತನಾಡಿ, ಬ್ಯಾಂಕ್ಗಳು ಮತ್ತು ಇತರ ಸಂಸ್ಥೆಗಳು ಖಾಸಗಿ ಸ್ವರೂಪದ ಹಣವನ್ನು ನೀಡುವ ಈ ಹಿಂದಿನ ಪ್ರಕರಣಗಳು ವಿಫಲವಾಗಿವೆ ಎಂಬುದನ್ನು ಹೇಳಿದ್ದರು.
(Investment Of Rs 6 Lakhs Become Rs 216 Crores In 9 Years Know How)