AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crypto Currency: ಕಳುವು ಮಾಡಿದ್ದ ಕ್ರಿಪ್ಟೊಕರೆನ್ಸಿ ಹಿಂತಿರುಗಿಸಿದ ಹ್ಯಾಕರ್ಸ್; ಕದಿಯೋದು ಸುಲಭ ಕ್ಯಾಶ್ ಮಾಡಿಸೋದು ಕಷ್ಟ ಏಕೆ?

ಹ್ಯಾಕರ್​ಗಳು ಕಳುವು ಮಾಡಿದ್ದ ಕ್ರಿಪ್ಟೊ ಆಸ್ತಿಯಲ್ಲಿ ಶೇ 33ರಷ್ಟನ್ನು ಅಂದರೆ 260 ಮಿಲಿಯನ್ ಯುಎಸ್​ಡಿ ಹಿಂತಿರುಗಿಸಿದ ಪ್ರಕರಣ ವರದಿ ಆಗಿದೆ.

Crypto Currency: ಕಳುವು ಮಾಡಿದ್ದ ಕ್ರಿಪ್ಟೊಕರೆನ್ಸಿ ಹಿಂತಿರುಗಿಸಿದ ಹ್ಯಾಕರ್ಸ್; ಕದಿಯೋದು ಸುಲಭ ಕ್ಯಾಶ್ ಮಾಡಿಸೋದು ಕಷ್ಟ ಏಕೆ?
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Aug 12, 2021 | 12:00 PM

Share

ಯಾವ ಸಿನಿಮಾ ಕಥೆಗೂ ಕಡಿಮೆ ಇಲ್ಲದಂಥ ರೋಚಕತೆ ಒಳಗೊಂಡಿರುವ ವರದಿ ಇದು. ಈವರೆಗಿನ ಅತಿದೊಡ್ಡ ಕ್ರಿಪ್ಟೊಕರೆನ್ಸಿ ಕಳುವು ಪ್ರಕರಣದ ಸೂತ್ರಧಾರಿಗಳೆನಿಸಿಕೊಂಡ ಹ್ಯಾಕರ್​ಗಳು ಒಟ್ಟು ಮೊತ್ತದ ಶೇ 33ರಷ್ಟು, ಅಂದರೆ ಡಿಜಿಟಲ್ ಕಾಯಿನ್ ರೂಪದಲ್ಲಿ ಅಪಹರಿಸಿದ್ದರ ಪೈಕಿ 600 ಮಿಲಿಯನ್ ಅಮೆರಿಕನ್ ಡಾಲರ್​ ಹಿಂತಿರುಗಿಸಿದ್ದಾರೆ ಎಂದು ಬ್ಲಾಕ್​ಚೈನ್ ಸಂಶೋಧಕರು ಬುಧವಾರ ತಿಳಿಸಿದ್ದಾರೆ. ಪಾಲಿ ನೆಟ್​ವರ್ಕ್​ ಎಂಬುದು ಒಂದು ವಿಕೇಂದ್ರೀಕೃತ ಹಣಕಾಸು ಪ್ಲಾಟ್​ಫಾಮ್​. ಅದು ಈ ಹ್ಯಾಕ್​ ಬಗ್ಗೆ ಟ್ವಿಟ್ಟರ್​ನಲ್ಲಿ ಘೋಷಣೆ ಮಾಡಿತ್ತು. ಯಾವ ಡಿಜಿಟಲ್ ವ್ಯಾಲೆಟ್​ಗಳಿಗೆ ಆ ಟೋಕನ್​ಗಳು ಹೋಗಿವೆ ಎಂಬ ಮಾಹಿತಿಯನ್ನು ನೀಡಿತ್ತು. ಘೋಷಣೆ ಮಾಡುವ ಸಂದರ್ಭದಲ್ಲಿ ಕಾಯಿನ್​ಗಳ ಮೌಲ್ಯ 600 ಮಿಲಿಯನ್ ಯುಎಸ್​ಡಿಗಿಂತ ಸ್ವಲ್ಪ ಜಾಸ್ತಿ ಎನ್ನಲಾಗಿದೆ.

ಪಾಲಿ ನೆಟ್​ವರ್ಕ್​ ಆ ನಂತರ ಹ್ಯಾಕರ್​ಗಳನ್ನು ಒತ್ತಾಯಿಸಿ, ತನ್ನ ವಿವಿಧ ಡಿಜಿಟಲ್ ವಿಳಾಸಗಳಿಗೆ ಹಣ ಹಿಂತಿರುಗಿಸುವಂತೆ ತಿಳಿಸಿದೆ. ಕಾನೂನು ಕ್ರಮ ಕೈಗೊಳ್ಳುವ ಯೋಜನೆಯಲ್ಲಿದ್ದೇವೆ ಎಂದು ಬೆದರಿಕೆಯನ್ನೂ ಹಾಕಿದೆ. ಬ್ಲಾಕ್​ಚೈನ್ ಫೊರೆನ್ಸಿಕ್ಸ್ ಕಂಪೆನಿ ಚೈನಾಲಿಸಿಸ್ ಹೇಳಿದಂತೆ, ಹತ್ತಿರ ಹತ್ತಿರ 260.97 ಮಿಲಿಯನ್ ಡಾಲರ್​ ಮೌಲ್ಯದ ಕ್ರಿಪ್ಟೊಕರೆನ್ಸಿ ಕಾಯಿನ್​ಗಳ ಸ್ವರೂಪದಲ್ಲಿ ಹಿಂತಿರುಗಿದೆ. ಇನ್ನು ತಮಾಷೆ ಸಂಗತಿ ಏನೆಂದರೆ, ಹ್ಯಾಕರ್ಸ್​ ಈ ಕಳುವು ಮಾಡಿದ್ದು “ತಮಾಷೆಗಾಗಿ” ಎಂದು ಹೇಳಿಕೊಂಡಿದ್ದಾರೆ. ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎಂಬುದನ್ನು ಇತರರು ಬಯಲಿಗೆ ಇಡುವ ಮುನ್ನ ತಾವು ಆ ಕೆಲಸ ಮಾಡಲು ಮುಂದಾದೆವು ಎಂದಿರುವುದಾಗಿ ಎಲಿಪ್ಟಿಕ್ ಹಾಗೂ ಚೈನಾಲಿಸಿಸ್ ಸಂದೇಶದ ಮಾಹಿತಿ ಹಂಚಿಕೊಂಡಿವೆ. ಅಂದಹಾಗೆ ಇದು ಹ್ಯಾಕರ್​ಗಳ ಗುಂಪು ಮಾಡಿದೆಯೋ ಅಥವಾ ಒಬ್ಬ ವ್ಯಕ್ತಿಯ ಕೆಲಸವೋ ಎಂಬುದು ಗೊತ್ತಾಗಿಲ್ಲ. ಇನ್ನು ರಾಯಿಟರ್ಸ್ ಸುದ್ದಿ ಸಂಸ್ಥೆಯು ಅಂಥ ಯಾವ ಸಂದೇಶದ ಬಗ್ಗೆ ಖಾತ್ರಿ ಪಡಿಸಿಲ್ಲ.

33 ಮಿಲಿಯನ್​ ಡಾಲರ್ ಸ್ಥಗಿತ ಕ್ರಿಪ್ಟೊಕರೆನ್ಸಿ ಸಂಸ್ಥೆಯಾದ ಟೀಥರ್​ನ ಅಧಿಕಾರಿಯೊಬ್ಬರು ಟ್ವಿಟ್ಟರ್​ನಲ್ಲಿ ತಿಳಿಸಿರುವಂತೆ, ಹ್ಯಾಕ್​ಗೆ ಸಂಬಂಧಿಸಿದಂತೆ ಕಂಪೆನಿತು 33 ಮಿಲಿಯನ್​ ಡಾಲರ್ ಸ್ಥಗಿತಗೊಳಿಸಿದೆ. ಇನ್ನು ಮೇಲ್ಮಟ್ಟದ ಆಡಳಿತ ವರ್ಗವು ಪಾಲಿ ನೆಟ್​ವರ್ಕ್​ಗೆ ಸಹಾಯ ಮಾಡುವುದಾಗಿ ತಿಳಿಸಿದೆ. ಎಲಿಪ್ಟಿಕ್​ ಸಹ ಸಂಸ್ಥಾಪಕ ಮಾತನಾಡಿ, ಇಷ್ಟು ದೊಡ್ದ ಮೊತ್ತದ ಕಳುವು ಮಾಡಿದ ಕ್ರಿಪ್ಟೊ ಅಕ್ರಮ ವರ್ಗಾವಣೆ ಮಾಡುವುದು ತಲೆ ನೋವಿನ ಸಂಗತಿ. ಆದ್ದರಿಂದಲೇ ಹಿಂತಿರುಗಿಸಿರಬಹುದು ಎನ್ನುತ್ತಾರೆ. “ಕ್ರಿಪ್ಟೊಗಳನ್ನು ಕಳವು ಮಾಡಬಹುದು. ಆದರೆ ಅದನ್ನು ವರ್ಗಾವಣೆ ಮಾಡುವುದು ಹಾಗೂ ನಗದು ಮಾಡಿಸಿಕೊಳ್ಳುವುದು ವಿಪರೀತ ಕಷ್ಟ. ಏಕೆಂದರೆ ಬ್ಲಾಕ್​ಚೈನ್​ನಲ್ಲಿ ಪಾರದರ್ಶಕತೆ ಇದೆ. ಇದರ ಜತೆಗೆ ಹಣಕಾಸು ಸಂಸ್ಥೆಗಳು ಬ್ಲಾಕ್​ಚೈನ್ ಅನಲಿಟಿಕ್ಸ್​ ಅನ್ನು ವಿಶಾಲವಾಗಿ ಬಳಕೆ ಮಾಡುತ್ತವೆ,” ಎನ್ನುತ್ತಾರೆ ರಾಬಿನ್ಸನ್.

ಟೋಕಿಯೋದಲ್ಲಿ ಹೀಗೇ ಆಗಿತ್ತು ಈ ಪ್ರಕರಣದ ಬಗ್ಗೆ ಪಾಲಿ ನೆಟ್​ವರ್ಕ್ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. ತನಿಖಾ ಸಂಸ್ಥೆಗಳು ಈ ಬಗ್ಗೆ ಏನಾದರೂ ತನಿಖೆ ನಡೆಸುತ್ತಿವೆಯಾ ಎಂಬ ಮಾಹಿತಿ ಸಹ ಸಿಕ್ಕಿಲ್ಲ. ಈ ಹಿಂದೆ ಟೋಕಿಯೋ ಮೂಲದ ಎಕ್ಸ್​ಚೇಂಜ್​ ಕಾಯಿನ್​ಚೆಕ್​ನಿಂದ 2018ರಲ್ಲಿ 530 ಮಿಲಿಯನ್ ಡಾಲರ್ ಡಿಜಿಟಲ್ ಕಾಯಿನ್ ಕಳುವಾಗಿತ್ತು. Mt. Gox ಎಕ್ಸ್​ಚೇಂಜ್ ಕೂಡ ಟೋಕಿಯೋದಲ್ಲಿ ಇದ್ದು, 2014ನೇ ಇಸವಿಯಲ್ಲಿ 50 ಕೋಟಿ ಅಮೆರಿಕನ್​ ಡಾಲರ್​ನ ಬಿಟ್​ ಕಾಯಿನ್ ಕಳೆದುಕೊಂಡು, ಬರ್ಬಾದ್ ಆಯಿತು.

Decentralised Finance (DeFi) ಪ್ಲಾಟ್​ಫಾರ್ಮ್​ಗಳು ವ್ಯಕ್ತಿಗಳಿಗೆ ಕ್ರಿಪ್ಟೊಕರೆನ್ಸಿಯಲ್ಲಿ ವಹಿವಾಟು ನಡೆಸಲು ಅವಕಾಶ ಮಾಡಿಕೊಡುತ್ತವೆ. ಇದಕ್ಕೆ ಬ್ಯಾಂಕ್​ಗಳು, ಎಕ್ಸ್​ಚೇಂಜ್​ಗಳ ಅಗತ್ಯ ಇರುವುದಿಲ್ಲ. ಕಳೆದ ವರ್ಷದಿಂದ ಈಚೆಗೆ ಈ ವಲಯ ಭಾರೀ ಮಟ್ಟದಲ್ಲಿ ಬೆಳೆದಿದೆ. ಪ್ಲಾಟ್​ಫಾರ್ಮ್​ಗಳು 80 ಬಿಲಿಯನ್​ ಡಾಲರ್​ಗೂ ಹೆಚ್ಚು ಮೌಲ್ಯದ ಡಿಜಿಟಲ್ ಕಾಯಿನ್​ಗಳನ್ನು ನಿರ್ವಹಣೆ ಮಾಡುತ್ತಿವೆ. DeFi ಹೇಳುವಂತೆ, ಜನರಿಗೆ ಹಾಗೂ ಉದ್ಯಮಗಳಿಗೆ ಹಣಕಾಸು ಸೇವೆ ಬೇಕೆಂದಾಗ ಸಲೀಸಾದ ಸಂಪರ್ಕ ಒದಗಿಸುತ್ತದೆ. ತಂತ್ರಜ್ಞಾನದ ಸಹಾಯದಿಂದ ವೆಚ್ಚ ಕಡಿಮೆ ಆಗುತ್ತದೆ ಹಾಗೂ ಆರ್ಥಿಕ ಚಟುವಟಿಕೆಗೆ ಉತ್ತೇಜನ ಸಿಗುತ್ತದೆ. ಆದರೆ ತಾಂತ್ರಿಕ ದೌರ್ಬಲ್ಯಗಳ ಕಾರಣಕ್ಕೆ ಹ್ಯಾಕರ್​ಗಳ ದಾಳಿಗೆ ತುತ್ತಾಗುತ್ತಿದೆ.

ಇದನ್ನೂ ಓದಿ: Cryptocurrency Bit Coin: ಬಿಟ್​ಕಾಯಿನ್​ಗೆ ಕಾನೂನು ಮಾನ್ಯತೆ ನೀಡುವ ಮೊದಲ ದೇಶವಾಗಲಿದೆ ಎಲ್​ ಸಲ್ವಡಾರ್

(Hackers Returned 260 Million USD Crypto Assets Value That Is Third Of They Stolen)

ಅಂಥ ಅಭಿಮಾನಿಗಳಿಗೆ ಸ್ಟಾರ್ ನಟರು ಬುದ್ಧಿ ಹೇಳಬೇಕು: ರಾಕ್​ಲೈನ್ ವೆಂಕಟೇಶ್
ಅಂಥ ಅಭಿಮಾನಿಗಳಿಗೆ ಸ್ಟಾರ್ ನಟರು ಬುದ್ಧಿ ಹೇಳಬೇಕು: ರಾಕ್​ಲೈನ್ ವೆಂಕಟೇಶ್
ಆಂಗ್ಲರಿಗೆ ಉಚಿತವಾಗಿ ತನ್ನ ವಿಕೆಟ್ ನೀಡಿದ ಶುಭ್​ಮನ್ ಗಿಲ್
ಆಂಗ್ಲರಿಗೆ ಉಚಿತವಾಗಿ ತನ್ನ ವಿಕೆಟ್ ನೀಡಿದ ಶುಭ್​ಮನ್ ಗಿಲ್
ಪೊಲೀಸರ ಎದುರಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ; ವಿಡಿಯೋ ಇಲ್ಲಿದೆ ನೋಡಿ
ಪೊಲೀಸರ ಎದುರಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ; ವಿಡಿಯೋ ಇಲ್ಲಿದೆ ನೋಡಿ
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ