AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cryptocurrency Bit Coin: ಬಿಟ್​ಕಾಯಿನ್​ಗೆ ಕಾನೂನು ಮಾನ್ಯತೆ ನೀಡುವ ಮೊದಲ ದೇಶವಾಗಲಿದೆ ಎಲ್​ ಸಲ್ವಡಾರ್

ಕ್ರಿಪ್ಟೊಕರೆನ್ಸಿ ಬಿಟ್ ಕಾಯಿನ್​ಗೆ ಅಧಿಕೃತ ಮಾನ್ಯತೆ ನೀಡುವ ಮೊದಲ ದೇಶವಾಗಲಿದೆ ಎಲ್ ಸಲ್ವಡಾರ್. ಮುಂದಿನ ವಾರ ಈ ಬಗ್ಗೆ ಅಲ್ಲಿನ ಸಂಸತ್​ನಲ್ಲಿ ಶಾಸನ ಮಂಡಿಸಲಾಗುವುದು.

Cryptocurrency Bit Coin: ಬಿಟ್​ಕಾಯಿನ್​ಗೆ ಕಾನೂನು ಮಾನ್ಯತೆ ನೀಡುವ ಮೊದಲ ದೇಶವಾಗಲಿದೆ ಎಲ್​ ಸಲ್ವಡಾರ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jun 07, 2021 | 11:19 PM

ಎಲ್ ಸಲ್ವಡಾರ್ ದೇಶದ ಅಧ್ಯಕ್ಷ ನಯೀಬ್ ಬುಕೆಲೆ ಅವರು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಕ್ರಿಪ್ಟೊಕರೆನ್ಸಿ ಬಿಟ್​ಕಾಯಿನ್​ಗೆ ತಮ್ಮ ದೇಶದಲ್ಲಿ ಕಾನೂನು ಮಾನ್ಯತೆ ನೀಡಲು ಮುಂದಿನ ವಾರ ಅಲ್ಲಿನ ಸಂಸತ್​ನಲ್ಲಿ ಶಾಸನ ಮಂಡಿಸಲಿದ್ದಾರೆ. ಬೇರೆ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಸಲ್ವಡಾರ್ ನಾಗರಿಕರು ತಮ್ಮ ತಾಯ್ನಾಡಿಗೆ ಹಣವನ್ನು ಈ ಬಿಟ್​ ಕಾಯಿನ್ ರೂಪದಲ್ಲಿ ಕಳುಹಿಸಬಹುದು ಎಂಬುದು ಅಧ್ಯಕ್ಷರ ಅಭಿಮತ. ಅಧ್ಯಕ್ಷ ನಯೀಬ್ ಬುಕೆಲೆ ಅವರು ಹೇಳಿರುವ ಪ್ರಕಾರ, ಬಿಟ್​ ಕಾಯಿನ್ ಅನ್ನು ಕಾನೂನು ಬದ್ಧವಾಗಿ ಮಾನ್ಯ ಮಾಡಿ, ಅದಕ್ಕೊಂದು ಮೌಲ್ಯಮಾಪನ ಗುರುತಿಸಲು ಕೆಲಸ ಮಾಡಲಾಗುತ್ತಿದೆ. ಒಂದು ವೇಳೆ ಈ ಬಗ್ಗೆ ಮಸೂದೆಗೆ ಅನುಮೋದನೆ ದೊರೆತಲ್ಲಿ ಬಿಟ್​ ಕಾಯಿನ್​ಗೆ ಮಾನ್ಯತೆ ನೀಡಿದ ಮೊದಲ ದೇಶ ಎಲ್ ಸಲ್ವಡಾರ್ ಆಗಲಿದೆ. ಆದರೆ ಈ ಬಗ್ಗೆ ಸಂಪೂರ್ಣವಾದ ಮಾಹಿತಿಯು ಸದ್ಯಕ್ಕೆ ಲಭ್ಯವಾಗಿಲ್ಲ.

ಫ್ಲೋರಿಡಾದಲ್ಲಿ ಸಮಾವೇಶವೊಂದರಲ್ಲಿ ಬುಕೆಲೆ ಮಾತನಾಡಿ, ಸಣ್ಣದಾಗಿ ಹೇಳಬೇಕು ಅಂದಲ್ಲಿ ಇದರಿಂದ ಉದ್ಯೋಗ ಸೃಷ್ಟಿ ಆಗುತ್ತದೆ. ಜತೆಗೆ ಸಂಘಟಿತ ವಲಯದ ಆಚೆಗೆ ಇರುವವರಿಗೆ ಹಣಕಾಸು ಒಳಗೊಳ್ಳುವಿಕೆಗೆ ನೆರವು ನೀಡುತ್ತದೆ. ಇದರಿಂದ ದೇಶದೊಳಕ್ಕೆ ಹೂಡಿಕೆ ಬರುವುದಕ್ಕೆ ಸಹಾಯ ಆಗುತ್ತದೆ ಎಂದಿದ್ದಾರೆ. ಮೊದಲ ಬಿಟ್​ಕಾಯಿನ್ ದೇಶ ಅಂದರೆ ಏನು ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಬೇಕಿದೆ. ಆದರೆ ಎಲ್​ಸಲ್ವಡಾರ್ ದೇಶವು ಆರ್ಥಿಕವಾಗಿ ಅಸ್ಥಿರವಾಗಿದ್ದು, ಬಡತನದಿಂದ ಕೂಡಿದೆ. ಇಲ್ಲಿನ ಶೇ 70ರಷ್ಟು ನಾಗರಿಕರಿಗೆ ಬ್ಯಾಂಕ್ ಖಾತೆ ಕೂಡ ಇಲ್ಲ.

ಎಲ್ ಸಲ್ವಡಾರ್​ ಜಿಡಿಪಿ 2020ರಲ್ಲಿ 2460 ಕೋಟಿ ಅಮೆರಿಕನ್ ಡಾಲರ್ ಇತ್ತು. ಸದ್ಯಕ್ಕೆ ದೇಶಕ್ಕೆ ವರ್ಗಾವಣೆ ಆಗುತ್ತಿರುವ ಹಣದ ಪ್ರಮಾಣ ಕಡಿಮೆ ಇದೆ. ಮಧ್ಯದಲ್ಲೇ ಆ 600 ಕೋಟಿ ಅಮೆರಿಕನ್ ಡಾಲರ್​ನಲ್ಲಿ (43,680 ಕೋಟಿ ರೂಪಾಯಿ) ದೊಡ್ಡ ಭಾಗ ಹೊರಟು ಹೋಗುತ್ತಿದೆ. ಒಂದು ವೇಳೆ ಬಿಟ್​ ಕಾಯಿನ್ ಬಳಸಿದಲ್ಲಿ ಕಡಿಮೆ ಆದಾಯದ ಕುಟುಂಬಗಳಿಗೆ ಬರುವ ಆದಾಯವು ನೂರಾರು ಕೋಟಿ ಅಮೆರಿಕನ್ ಡಾಲರ್ ಹೆಚ್ಚುತ್ತದೆ ಎಂದಿದ್ದಾರೆ ಬುಕೆಲೆ. ಎಲ್ ಸಲ್ವಡಾರ್​ನ ಶೇ 70ರಷ್ಟು ಜನಸಂಖ್ಯೆಯು ಬ್ಯಾಂಕ್ ಖಾತೆಯನ್ನು ಹೊಂದಿಲ್ಲ ಮತ್ತು ಅಸಂಘಟಿತ ಆರ್ಥಿಕತೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಣಕಾಸು ಒಳಗೊಳ್ಳುವಿಕೆ ಎನ್ನುವುದು ನೈತಿಕ ಜವಾಬ್ದಾರಿ ಮಾತ್ರವಲ್ಲ, ನಾಗರಿಕರಿಗೆ ಸಾಲ, ಉಳಿತಾಯ ಖಾತೆ, ಹೂಡಿಕೆ, ಸುರಕ್ಷಿತ ವಹಿವಾಟಿಗೆ ಅವಕಾಶ ದೊರೆತಂತಾಗುತ್ತದೆ ಎಂದು ಬುಕೆಲೆ ಹೇಳಿದ್ದಾರೆ.

ಇದನ್ನೂ ಓದಿ: Tv9 Digital Live | ಬಿಟ್​ ಕಾಯಿನ್​ Bitcoin ಎಂದರೇನು? ಭಾರತಕ್ಕೆ ಬರುತ್ತಾ ಡಿಜಿಟಲ್​ ಕರೆನ್ಸಿ?

( El Salvador to be world’s first country to accept legal tender of cryptocurrency bit coin)

Published On - 11:17 pm, Mon, 7 June 21

ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು