ಚೀನಾದ ಜನನ ನಿಯಂತ್ರಣ ನೀತಿಗಳು ಜಿನ್ಜಿಯಾಂಗ್ ಪ್ರಾಂತ್ಯದ ವೀಗರ್ ಸಮುದಾಯದಲ್ಲಿ ಸಾವಿರಾರು ಹುಟ್ಟುಗಳನ್ನು ನಿಯಂತ್ರಿಸಲಿವೆ!

ಚೀನಾದ ಜನನ ನಿಯಂತ್ರಣ ನೀತಿಗಳು ಜಿನ್ಜಿಯಾಂಗ್ ಪ್ರಾಂತ್ಯದ ವೀಗರ್ ಸಮುದಾಯದಲ್ಲಿ ಸಾವಿರಾರು ಹುಟ್ಟುಗಳನ್ನು ನಿಯಂತ್ರಿಸಲಿವೆ!
ಜಿನ್ಜಿಯಾಂಗನಲ್ಲಿರುವ ವೀಗರ್ ಸಮುದಾಯ

ಕೆಲ ಪಾಶ್ಚಿಮಾತ್ಯ ರಾಷ್ಟ್ರಗಳು ಜಿನ್ಜಿಯಾಂಗ ಪ್ರದೇಶಲ್ಲಿ ಜನನ ನಿಯಂತ್ರಣ ಅಂಗವಾಗಿ ಚೀನಾ ತೆಗೆದುಕೊಳ್ಳಲಿರುವ ಕ್ರಮಗಳು ಜನಾಂಗೀಯ ಹತ್ಯೆ ಎನಿಸಿಕೊಳ್ಳಲಿವೆಯೇ ಎನ್ನುವುದು ತನಿಖೆಯಾಗಬೇಕು ಅಂತ ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲೇ ಜರ್ಮನ್ ಸಂಶೋಧಕ ಆಡ್ರಿಯನ್ ಜೆನ್ ಅವರ ವರದಿ ಹೊರಬಿದ್ದಿದೆ.

TV9kannada Web Team

| Edited By: Arun Belly

Jun 08, 2021 | 1:54 AM

ಜರ್ಮನ್ನಿನ ಒಬ್ಬ ಸಂಶೋಧಕ ನೀಡಿರುವ ವಿಶ್ಲೇಷಣೆಯ ಪ್ರಕಾರ ಚೀನಾದ ಜನನ ನಿಯಂತ್ರಣ ನೀತಿಗಳಿಂದಾಗಿ ದಕ್ಷಿಣ ಜಿನ್ಜಿಯಾಂಗ ಪ್ರದೇಶಲ್ಲಿ ವಾಸವಾಗಿರುವ ವೀಗರ್ ಮತ್ತು ಇತರ ಅಲ್ಪಸಂಖ್ಯಾತರ ಜನಾಂಗಗಳಲ್ಲಿ 26 ರಿಂದ 45 ಲಕ್ಷದಷ್ಟು ಹುಟ್ಟುಗಳನ್ನು ಅಂದರೆ ಪ್ರಾಂತ್ಯದ ಪ್ರಸ್ತಾಪಿತ ಜನಸಂಖ್ಯೆಯ ಒಂದನೇ ಮೂರು ಭಾಗದದಷ್ಟು ಮುಂದಿನ 20 ವರ್ಷಗಳಲ್ಲಿ ಕಡಿಮೆ ಮಾಡಲಿದೆ. ಅವರ ವರದಿಯು ಈ ಹಿಂದೆ ಚೀನಾದ ತಜ್ಞರು ಮತ್ತು ಅಧಿಕಾರಿಗಳು ಜಿನ್ಜಿಯಾಂಗ ಪ್ರದೇಶಲ್ಲಿ ಜನನ್ ಪ್ರಮಾಣ ನಿಂಯತ್ರಿಸುವ ಬೀಜಿಂಗ್ ಉದ್ದೇಶ ಬಗ್ಗೆ ವರದಿಗಳನ್ನು ಬಹಿರಂಗಗೊಳಿಸಿದೆ. ವರದಿಗಳ ಪ್ರಕಾರ ಸದರಿ ಪ್ರಾಂತ್ಯದ 2017-2019 ರ ಅವಧಿಯ ಜನನ ಪ್ರಮಾಣವು ಶೇಕಡಾ 48.7 ಕುಸಿದಿದೆ.

ಕೆಲ ಪಾಶ್ಚಿಮಾತ್ಯ ರಾಷ್ಟ್ರಗಳು ಜಿನ್ಜಿಯಾಂಗ ಪ್ರದೇಶಲ್ಲಿ ಜನನ ನಿಯಂತ್ರಣ ಅಂಗವಾಗಿ ಚೀನಾ ತೆಗೆದುಕೊಳ್ಳಲಿರುವ ಕ್ರಮಗಳು ಜನಾಂಗೀಯ ಹತ್ಯೆ ಎನಿಸಿಕೊಳ್ಳಲಿವೆಯೇ ಎನ್ನುವುದು ತನಿಖೆಯಾಗಬೇಕು ಅಂತ ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲೇ ಜರ್ಮನ್ ಸಂಶೋಧಕ ಆಡ್ರಿಯನ್ ಜೆನ್ ಅವರ ವರದಿ ಹೊರಬಿದ್ದಿದೆ. ಆದರೆ ಈ ಆರೋಪವನ್ನು ಬೀಜಿಂಗ್ ತಳ್ಳಿಹಾಕಿದೆ. ಜೆನ್ ಬಿಡುಗಡೆ ಮಾಡಿರುವ ವರದಿಯು ವಿಷಯಕ್ಕೆ ಸಂಬಂಧಿಸಿದಂತೆ ಮೊಟ್ಟ ಮೊದಲನೆಯ ವರದಿಯಾಗಿದೆ.

ಮಾನವ ಹಕ್ಕುಗಳಿಗಾಗಿ ಹೋರಾಡುವವರು, ಸಂಶೋಧಕರು ಮತ್ತ್ತು ಕೆಲ ನಾಗರಿಕರು ಹೇಳುವ ಪ್ರಕಾರ; ಚೀನಾದ ನೀತಿಗಳಲ್ಲಿ ವೀಗರ್ ಮತ್ತು ಮುಖ್ಯವಾಗಿ ಮುಸ್ಲಿಂ ಜನಾಂಗಳಿಗೆ ಸೀಮಿತವಾಗಿರುವುದು, ಕಾರ್ಮಿಕರನ್ನು ಬೇರೆ ಪ್ರಾಂತ್ಯಳಿಗೆ ವರ್ಗಾವಣೆ ಮಾಡುವುದು ಮತ್ತು ಸುಮಾರು 10 ಲಕ್ಷ ವೀಗರ್ ಹಾಗೂ ಇತರ ಅಲ್ಪ ಸಂಖ್ಯಾತ ಜನಾಂಗಗಳನ್ನು ವಶಕ್ಕೆ ತೆಗೆದುಕೊಳ್ಳವುದು ಸೇರಿವೆ.

‘ನನ್ನ ಸಂಶೋಧನೆಯು ವೀಗರ್ ಜನರ ಬಗ್ಗೆ ಚೀನಾ ಸರ್ಕಾರ ಬಹಳ ಸಮಯದಿಂದ ಇಟ್ಟುಕೊಂಡಿರುವ ಉದ್ದೇಶವನ್ನು ಬಯಲಿಗೆ ತರುತ್ತದೆ,’ ಎಂದು ಜೆನ್ ರಾಯಿಟರ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ವೀಗರ್ ಮತ್ತು ಇತರ ಅಲ್ಪಸಂಖ್ಯಾತರ ಪ್ರಮಾಣವನ್ನು ಕಡಿಮೆ ಮಾಡುವ ಬಗ್ಗೆ ಚೀನಾ ಸರ್ಕಾರ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ.

ಆದರೆ, ಅಧಿಕೃತ ಜನನ ಡಾಟಾ, ಭವಿಷ್ಯದ ಅಂಕಿ-ಆಂಶಗಳ ವಿವರಣೆ ಮತ್ತು ಜನಾಂಗಳ ಅನುಪಾತವನ್ನು ವಿಶ್ಲೇಷಣೆ ಮಾಡಿದ್ದ್ದೇಯಾದರೆ, ಬಹುಸಂಖ್ಯಾತ ಹ್ಯಾನ್ ಚೈನೀಸ್ ಜನಸಂಖ್ಯೆಯು ದಕ್ಷಿಣ ಜಿನ್ಜಿಯಾಂಗ್ ಪ್ರಾಂತ್ಯದಲ್ಲಿ ಶೇಕಡಾ 8.4 ರಿಂದ ಶೇಕಡಾ 25 ರಷ್ಟಯ ಹೆಚ್ಚಲಿದೆ.

ವೀಗರ್ ಜನಾಂಗ ಜನನ ಪ್ರಮಾಣವನ್ನು ನಿರ್ದಯತೆಯಿಂದ ಹತ್ತಿಕ್ಕಲು ಮಾಡುತ್ತಿರುವ ಕೆಲಸವನ್ನು ಚೀನಾ ಸರ್ಕಾರ ಮುಂದುವರಿಸಿದರೆ ತಾನು ಅಂದುಕೊಂಡಿರುವುದನ್ನು ಸುಲಭವಾಗಿ ಸಾಧಿಸುತ್ತೆ ಎಂದು ಜೆನ್​ ಹೇಳುತ್ತಾರೆ.

ಇದೇ ಸುದ್ದಿ ಸಂಸ್ಥೆಯೊಂದಿಗೆ ಮಾತಾಡಿರುವ ಚೀನಾದ ವಿದೇಶಾಂಗ ಸಚಿವರು, ‘ಜನಾಂಗೀಯ ಹತ್ಯೆ ಎಂದು ಕರೆಸಿಕೊಳ್ಳುತ್ತಿರುವ ವಾದದಲ್ಲಿ ಯಾವುದೇ ಹುರುಳಿಲ್ಲ. ಇದು ಚೀನಾ-ವಿರೋಧಿ ಬಣಗಳು ಮತ್ತು ಅಮೇರಿಕ ಹಾಗೂ ಪಶ್ಚಿಮ ರಾಷ್ಟ್ರಗಳ ಅಂತರಂಗದಲ್ಲಿ ಹುದುಗಿರುವ ದುಷ್ಟ ಯೋಜನೆಗಳನ್ನು ಸ್ಪಷ್ಟಪಡಿಸುತ್ತವೆ. ಇವರಿಗೆಲ್ಲ ಚೀನಾದ ಬಗ್ಗೆ ಭಯವಿದೆ,’ ಎಂದಿದ್ದಾರೆ.

‘ಜಿನ್ಜಿಯಾಂಗ್​ನಲ್ಲಿ 2017-2019 ರ ಅವಧಿಯಲ್ಲಿ ಕಂಡುಬರುವ ಜನನ ಪ್ರಮಾಣದ ಇಳಿಕೆ ನೈಜ್ಯ ಚಿತ್ರಣವನ್ನು ನೀಡುವುದಿಲ್ಲ. ವೀಗರ ಜನನ ಪ್ರಮಾಣ ಹ್ಯಾನ್ ಜನಾಂಗಕ್ಕಿಂತ ಜಾಸ್ತಿಯಿದೆ,’ ಎಂದು ಸಚಿವರು ಹೇಳಿದ್ದಾರೆ.

ವಾಷಿಂಗ್ಟನಲ್ಲಿರುವ ‘ವಿಕ್ಟಿಮ್ಸ್ ಆಫ್ ಕಮ್ಯೂನಿಸಂ ಮೆಮೋರಿಯಲ್ ನಾನ್-ಪ್ರಾಫಿಟ್​ ಪೌಂಡೇಶನ್’ ಜೊತೆ ಸ್ವತಂತ್ರವಾಗಿ ಕೆಲಸ ಮಾಡುವ ಜೆನ್ ಅವರು ಈ ಹಿಂದೆ ವೀಗರ್ ಜನಾಂಗದ ಜನರನ್ನು ಚೀನಾ ಸರ್ಕಾರ ವಶಪಡಿಸಿಕೊಳ್ಳುವ, ಕಾರ್ಮಿಕರ ಸಾಮೂಹಿಕ ವರ್ಗಾವಣೆ ಮತ್ತು ಜಿನ್ನಯಾಂಗ್ ಪ್ರದೇಶದಲ್ಲಿ ಜನನ ನಿಯಂತ್ರಣದ ಬಗ್ಗೆ ಸಂಶೋಧನೆ ನಡೆಸಿ ವರದಿಯೊಂದನ್ನು ಪ್ರಕಟಿಸಿದಾಗ ಬೀಜಿಂಗ್ ಅದನ್ನು ತೀವ್ರವಾಗಿ ಖಂಡಿಸಿತ್ತು.

‘ಅವರು ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ, ಅವರು ಹೇಳುತ್ತಿರುವ ಸುಳ್ಳುಗಳು ಧಿಕ್ಕರಿಸಲಷ್ಟೇ ಯೋಗ್ಯ,’ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿತ್ತು.

ಜೆನ್ ಅವರ ಸಂಶೋಧನೆಯನ್ನು ಜೂನ್ 3 ರಂದು ಪರಿಶೀಲಿಸಿದ ನಂತರ ಸೆಂಟ್ರಲ್ ಏಷ್ಯನ್ ಸರ್ವೆ ಅದನ್ನು ಪ್ರಕಟಿಸಲು ಅಂಗೀಕರಿಸಿದೆ.

ಕೆಲವು ತಜ್ಞರು ಜನಸಂಖ್ಯೆಯ ಬಗ್ಗೆ ಮಾಡಿರುವ ಪ್ರೊಜೆಕ್ಷನ್​ಗಳ ಮೇಲೆ ಕೆಲ ಅನಿರೀಕ್ಷಿತ ಸಂಗತಿಗಳು ಮುಂದಿನ ದಶಕಗಳಲ್ಲಿ ಪರಿಣಾಮ ಬೀರಬಹುದೆಂದು ಹೇಳಿದ್ದಾರೆ. ಜಿನ್ಜಿಯಾಂಗ್ ಸರ್ಕಾರವು ದಕ್ಷಿಣ ಜಿನ್ಜಿಯಾಂಗ್ ಪ್ರಾಂತ್ಯದ ಜನರಿಗೆ ಅಧಿಕೃತ ಜನಾಂಗೀಯ ಕೋಟಾವಾಗಲಿ ಅಥವಾ ಜನಸಂಖ್ಯಾ ಪ್ರಮಾಣದ ಬಗ್ಗೆ ಗುರಿಗಳನ್ನಾಗಲೀ ಸಾರ್ವಜನಿಕವಾಗಿ ನಿಗದಿಪಡಿಸಿಲ್ಲ ಮತ್ತು ವಿಶ್ಲೇಷಣೆಗಲ್ಲಿ ಬಳಸಿರುವ ಕೋಟಾಗಳು ಚೀನಾದ ಅಧಿಕಾರಿಗಳು ಮತ್ತು ತಜ್ಞರು ಮಾಡಿರುವ ಪ್ರಸ್ತಾಪಗಳಾಗಿವೆ.

ವೀಗರ್ ಮತ್ತು ಇತರ ಅಲ್ಪಸಂಖ್ಯಾರ ಸಮುದಾಯಗಳಲ್ಲಿ ಜನನ ಪ್ರಮಾಣವನ್ನು ನಿಯಂತ್ರಿಸುವ ಕ್ರಮವು ಚೀನಾದ ವ್ಯಾಪಕ ಜನನ ನೀತಿಗಳಿಗೆ ತದ್ವಿರುದ್ಧವಾಗಿದೆ.

2016ರಲ್ಲಿ ಚೀನಾ, ತ್ವರಿತವಾಗಿ ವಯಸ್ಸಾಗುತ್ತಿರುವ ಜನರ ದೇಶವಾಗುತ್ತಿದೆ ಎನ್ನುವ ಅಂಶ ವ್ಯಾಪಕವಾಗಿ ಚರ್ಚೆ ಆಗಲಾರಂಭಿಸಿದ ನಂತರ ದಂಪತಿಗಳು ಪ್ರಸ್ತುತ ಎರಡರ ಬದಲಿಗೆ ಮೂರು ಮಕ್ಕಳನ್ನು ಹೊಂದಲು ಅವಕಾಶ ನೀಡವ ಹೊಸ ನೀತಿಯನ್ನು ಕಳೆದ ವಾರ ಜಾರಿಗೆ ತಂದಿತು. ಈ ಘೋಷನೆಯಲ್ಲಿ ಯಾವುದೇ ನಿರ್ದಿಷ್ಟ ಜನಾಂಗವನ್ನು ಸರ್ಕಾರ ಉಲ್ಲೇಖಿಸಿರಲಿಲ್ಲ.

ಇದಕ್ಕೆ ಮೊದಲು ದೇಶದ ಪ್ರಮುಖ ಸಮುದಾಯವಾಗಿರುವ ಹ್ಯಾನ್ ಮತ್ತು ವೀಗರ್​ ಸೇರಿದಂತೆ ಇತರ ಅಲ್ಪಸಂಖ್ಯಾತ ಸಮುದಾಯಗಳು ಎರಡು ಮತ್ತುಗ್ರಾಮೀಣ ಪ್ರದೇಶಗಳಲ್ಲಿ ಮೂರು ಮಕ್ಕಳನ್ನು ಹೊಂದಬಹುದಾದ ಘೋಷನೆ ಮಾಡಿತ್ತು. ಆದರೆ, ಅಲ್ಪಸಂಖ್ಯಾತರಿಗೆ ಪ್ರಯೋಜನವಾಗುವಂತೆ ರೂಪಿಸಲಾಗಿರುವ ನೀತಿಗಳಲ್ಲಿ ವೀಗರ್ ಮತ್ತು ಇನ್ನಿತರ ಜನಾಂಗೀಯ ಅಲ್ಪಸಂಖ್ಯಾತ ಸಮುದಾಯಗಳನ್ನು ಭಾಗಶಃ ಹೊರಗಿಡಲಾಗಿತ್ತು.

2020ರಲ್ಲಿ ಸೋರಿಕೆಯಾದ ಕಮ್ಯೂನಿಸ್ಟ್ ಪಕ್ಷದ ದಾಖಲೆಯ ಪ್ರಕಾರ, ಇದನ್ನು ಜೆನ್​ ಸಹ ಉಲ್ಲೇಖಿಸಿದ್ದಾರೆ-ದಕ್ಷಿಣ ಜಿನ್ಜಿಯಾಂಗ್ ಪ್ರದೇಶ್ ಕರಾಕ್ಯಾಕ್ಸ್ ಎಂಬಲ್ಲಿ 149 ಜನನ ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸಲಾಗಿತ್ತು ಎಂದು ಹೇಳಲಾಗಿತ್ತು. ಆದರೆ ಚೀನಾ ಸರ್ಕಾರ ಅದನ್ನು ಸುಳ್ಳು ಎಂದು ಹೇಳಿತ್ತು.

2017ರಿಂದ ಮೈನಾರಿಟಿ ಸಮುದಾಯಗಳಿಗೆ ಜನನ ಕೋಟಾ ಕಟ್ಟುನಿಟ್ಟಾಗಿ ಜಾರಿಗೆ ಬಂದಿವೆ. ವೀಗರ್ ಸಮುದಾಯದ ಇಬ್ಬರು ತಮ್ಮ ಕುಟುಂಬದ ಸದಸಯರನ್ನು ಅತಿ ಹೆಚ್ಚು ಮಕ್ಕಳರಿರುವ ಕಾರಣಕ್ಕೆ ಬಂಧಿಸಲಾಗತ್ತು ಎಂದು ಹೇಳಿದ್ದರು. ಆದರೆ ರಾಯಿಟರ್ ಈ ಬಂಧನಗಳ ಸ್ವತಂತ್ರವಾಗಿ ಪರಿಶೀಲನೆ ನಡೆಸಿರಲಿಲ್ಲ.

ಜನನ ನಿಂಯಂತ್ರಣ ನಿಯಮಗಳು ವೀಗರ್ ಮತ್ತು ಇತರ ಜನಾಂಗೀಯ ಸಮುದಾಯಗಳ ವಿರುದ್ಧ ಹೆಚ್ಚು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆಯೇ ಎಂದು ರಾಯಿಟರ್ ಕೇಳಿದ ಪ್ರಶ್ನೆಗೆ ಜಿನ್ಜಿಯಾಂಗ ಸರ್ಕಾರ ಉತ್ತರಿಸಿಲ್ಲ. ಜಿನ್ಜಿಯಾಂಗ ಅಧಿಕಾರಿಗಳೂ ಎಲ್ಲ ಪ್ರಕ್ರಿಯೆಗಳು ಕಡ್ಡಾಯ ಎಂದು ಈ ಮೊದಲು ಹೇಳಿದ್ದರು.

ಅಷ್ಟಾಗಿಯೂ ವೀಗರ್ ಮತ್ತು ಅಲ್ಪಸಂಖ್ಯಾತ ಸುಮುದಾಯಗಳು ಪ್ರಬಲವಾಗಿರುವ ಜಿನ್ಜಿಯಾಂಗ ಕೌಂಟಿಗಳಲ್ಲಿ 2019ರಲ್ಲಿ ಜನನ ಪ್ರಮಾಣವು ಹ್ಯಾನ್ ಕೌಂಟಿಗಳಲ್ಲಿ ಮೆಜಾರಿಟಿ ಎನಿಸಿಕೊಂಡಿರುವ ಹ್ಯಾನ್​ ಸಮುದಾಯಗಳ ಶೇಕಡಾ 19.7 ಕ್ಕೆ ಹೋಲಿಸಿದರೆ ಶೇಕಡಾ 50.1 ರಷ್ಟು ತಗ್ಗಿತ್ತು ಎಂದು ಜೆನ್ ಅವರ ವರದಿ ತಿಳಿಸುತ್ತದೆ.

ಸರ್ಕಾರದ ಹಣಕಾಸು ನೆರವಿನಿಂದ ತಜ್ಞರು ಮತ್ತು ಅಧಿಕಾರಿಗಳು 2014 ರಿಂದ 2020 ರ ಅವಧಿಯಲ್ಲಿ ನಡೆಸಿರುವ ಸಂಶೋಧನೆಗಳು ರಾಷ್ಟ್ರೀಯ ಭದ್ರತೆ ಕಳವಳದ ಹಿನ್ನೆಲೆಯಲ್ಲಿ, ನೀತಿಗಳ ಕಟ್ಟಿನಿಟ್ಟು ಪಾಲನೆ ಮತ್ತು ವೀಗರ್ ಜನಸಖ್ಯೆಯನ್ನು ಕಡಿಮೆ ಮಾಡಿ ಹ್ಯಾನ್ ವಲಸೆಯನ್ನು ಹೆಚ್ಚಿಸಿ ಆಡಳಿತಾರೂಢ ಕಮ್ಯೂನಿಸ್ಟ್​ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಮಾಡಲಾಗಿದೆ ಎಂದು ಜೆನ್ ಅವರ ವರದಿ ಹೇಳುತ್ತದೆ.

2015ರಲ್ಲಿ ಜಿನ್ಜಿಯಾಂಗ್ ತಾರಿಮ್ ಯೂನಿವರ್ಸಿಟಿಯಲ್ಲಿ ಭೂಗೋಳ ಮತ್ತು ಇತಿಹಾಸದ ಡೀನ್ ಆಗಿರುವ ಲಿಯೊ ಝೋಯು ಅವರು, ಜಿನ್ಜಿಯಾಂಗ್​ನಲ್ಲಿ ವೀಗರ್​ ಸಮುದಾಯದ ಪ್ರಾಬಲ್ಯವನ್ನು ಕೊನೆಗಾಣಿಸಬೇಕು ಎಂದು ಹೇಳಿದ್ದರು.

1948 ಕನ್ವೆನ್ಶನ್ ಆನ್ ದಿ ಪ್ರಿವೆನ್ಶನ್ ಅಂಡ್ ಪನಿಶ್​ಮೆಂಟ್​ ಆಫ್​ ದಿ ಕ್ರೈಮ್ ಆಫ್ ಜಿನೋಸೈಡ್ ಕಾಯ್ದೆಯು, ಒಂದು ಜನಾಂಗೀಯ ಗುಂಪನ್ನು ಗುರಿಯಾಗಿಸಿ ಜನನ ನಿಯಂತ್ರಣ ನೀತಿಯನ್ನು ಹೇರುವ ಕೃತ್ಯವು ಜನಾಂಗೀಯ ಹತ್ಯೆ ಎನಿಸಿಕೊಳ್ಳಲು ಅರ್ಹವಾಗಿರುತ್ತದೆ ಅಂತ ಹೇಳಿರುವುದನ್ನು ಜೆನ್ ಮತ್ತು ಇತರ ತಜ್ಞರು ಉಲ್ಲೇಖಿಸಿದ್ದಾರೆ.

ಅಮೇರಿಕ ಮತ್ತು ಕೆನಡಾ ಹಾಗೂ ಬ್ರಿಟನ್​ ಸೇರಿದಂತೆ ಇತರ ರಾಷ್ಟ್ರಗಳ ಸಂಸತ್​ಗಳು ಜಿನ್ಜಿಯಾಂಗನಲ್ಲಿ ಚೀನಾ ಹೇರುತ್ತಿರುವ ಜನನ ನಿಯಂತ್ರಣ ಪಾಲಿಸಿಗಳು ಮತ್ತು ಜನರ ಸಾಮೂಹಿಕ ಬಂಧನ ಜನಾಂಗೀಯ ಹತ್ಯೆಯಾಗಿದೆ ಎಂದು ಹೇಳಿವೆ.

ಆದರೆ, ಸೂಕ್ತವಾದ ಸಾಕ್ಷ್ಯ ಮತ್ತು ಪುರಾವೆಗಳು ಲಭ್ಯವಿಲ್ಲದಿರುವುದರಿಂದ ಚೀನಾ ಮತ್ತು ಜಿನ್ಜಿಯಾಂಗ ಅಧಿಕಾರಗಳ ವಿರುದ್ಧ ಅಧಿಕೃತವಾಗಿ ಕ್ರಿಮಿನಲ್ ಮಿಕದ್ದಮೆಗಳನ್ನು ದಾಖಲಿಸಿಲ್ಲ.

ಅಲ್ಲದೆ ಚೀನಾವು, ಜನಾಂಗೀಯ ಹತ್ಯೆ ಮತ್ತು ಇತರ ಗಂಭೀರ ಸ್ವರೂಪದ ಪ್ರಕರಣಗಳನ್ನು ವಿಚಾರಣೆ ನಡೆಸುವ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟಿನ (ಐಸಿಸಿ) ಸದಸ್ಯ ಆಗಿಲ್ಲದಿರುವುದರಿಂದ ಅದರ ವಿರುದ್ಧ ಕ್ರಮ ಜರುಗಿಸಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: China Vaccine: ಚೀನಾ ಸರಕುಗಳಂತೆ ಚೀನಾ ಲಸಿಕೆಯೂ ಕಳಪೆ! ಚೀನಾದ ಲಸಿಕೆ ವಿರುದ್ಧ ಬಹರೇನ್, ಯುಎಇ‌ ನಿರ್ಧಾರ

Follow us on

Most Read Stories

Click on your DTH Provider to Add TV9 Kannada