ಐಫೋನ್​ ರಿಪೇರಿಗೆ ಕೊಟ್ಟ ವಿದ್ಯಾರ್ಥಿನಿಯ ಬೆತ್ತಲೆ ಫೋಟೋ, ವಿಡಿಯೋ ಫೇಸ್​​ಬುಕ್​ಗೆ ಪೋಸ್ಟ್ ಮಾಡಿದ ಟೆಕ್ನೀಷಿಯನ್ಸ್​..

ಐಫೋನ್​ ರಿಪೇರಿಗೆ ಕೊಟ್ಟ ವಿದ್ಯಾರ್ಥಿನಿಯ ಬೆತ್ತಲೆ ಫೋಟೋ, ವಿಡಿಯೋ ಫೇಸ್​​ಬುಕ್​ಗೆ ಪೋಸ್ಟ್ ಮಾಡಿದ ಟೆಕ್ನೀಷಿಯನ್ಸ್​..
ಪ್ರಾತಿನಿಧಿಕ ಚಿತ್ರ

ಯುವತಿಯ ಪರ ವಕೀಲರು ಹಲವು ಮಿಲಿಯನ್​​ ಡಾಲರ್​ಗಳಷ್ಟು ಮೊತ್ತದ ಮಾನನಷ್ಟ ಮೊಕದ್ದಮೆಯನ್ನು ಈ ಐಫೋನ್​ ರಿಪೇರಿ ಸೆಂಟರ್​ ವಿರುದ್ಧ ಹೂಡಿದ್ದರು. ಇಲ್ಲಿ ಮೊತ್ತವನ್ನು ಉಲ್ಲೇಖಿಸಿಲ್ಲ.

TV9kannada Web Team

| Edited By: Lakshmi Hegde

Jun 07, 2021 | 4:57 PM

ಯುವತಿಯೊಬ್ಬಳ ಬೆತ್ತಲೆ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಆ್ಯಪಲ್​ ಐಫೋನ್​ ಸರ್ವೀಸ್​ ಕೇಂದ್ರ ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ಅದಾದ ನಂತರ ಆ್ಯಪಲ್​ ಆ ಯುವತಿಗೆ ಮಿಲಿಯನ್​ ಡಾಲರ್​ಗಳಷ್ಟು ಪರಿಹಾರ ನೀಡಿದೆ. ಇಂಥದ್ದೊಂದು ಮಹಾ ಎಡವಟ್ಟು ನಡೆದಿದ್ದು ಕ್ಯಾಲಿಫೋರ್ನಿಯಾದಲ್ಲಿ. ಪೆಗಾಟ್ರಾನ್​ ಮಾಲೀಕತ್ವದ ಆ್ಯಪಲ್​ ಐಫೋನ್ ದುರಸ್ತಿ ಕೇಂದ್ರದಲ್ಲಿ ಇದ್ದ ಇಬ್ಬರು ತಂತ್ರಜ್ಞರಿಂದ ಈ ಅವಾಂತರ ಆಗಿದೆ.

2016ರಲ್ಲಿ ಒರೆಗಾನ್​​ನ ಸ್ನಾತಕೋತ್ತರ ವಿದ್ಯಾರ್ಥಿನಿಯೋರ್ವಳು ತನ್ನ ಆ್ಯಪಲ್​ ಐಫೋನ್​​ನ್ನು ದುರಸ್ತಿಗೆಂದು ಈ ಸೆಂಟರ್​ಗೆ ಕೊಟ್ಟಿದ್ದಳು. ಆಕೆಯ ಫೋನ್​ ರಿಪೇರಿ ಮಾಡುತ್ತಿದ್ದ ಇಬ್ಬರು ಟೆಕ್ನಿಷಿಯನ್​ಗಳು, ಅದರಲ್ಲಿದ್ದ ವಿದ್ಯಾರ್ಥಿನಿಯ ಬೆತ್ತಲೆ ಫೋಟೋಗಳು, ಸೆಕ್ಸ್​ ವಿಡಿಯೋಗಳನ್ನು ಆಕೆಯದ್ದೇ ಫೇಸ್​​ಬುಕ್​​ ಅಕೌಂಟ್​​ನಲ್ಲಿ ಪೋಸ್ಟ್ ಮಾಡಿದ್ದರು. ಈ ವಿಷಯ ಆ ವಿದ್ಯಾರ್ಥಿನಿಗೆ ಅವಳ ಸ್ನೇಹಿತರಿಂದ ಗೊತ್ತಾಯಿತು. ನಂತರ ಫೇಸ್​​ಬುಕ್​ ಅಕೌಂಟ್​ನಿಂದ ವಿಡಿಯೋ, ಫೋಟೋಗಳನ್ನು ಡಿಲೀಟ್ ಮಾಡಲಾಗಿದ್ದರೂ, ವಿದ್ಯಾರ್ಥಿನಿ ಕಾನೂನು ಹೋರಾಟ ಶುರು ಮಾಡಿದ್ದಳು.

ಯುವತಿಯ ಪರ ವಕೀಲರು ಹಲವು ಮಿಲಿಯನ್​​ ಡಾಲರ್​ಗಳಷ್ಟು ಮೊತ್ತದ ಮಾನನಷ್ಟ ಮೊಕದ್ದಮೆಯನ್ನೂ ಈ ಐಫೋನ್​ ರಿಪೇರಿ ಸೆಂಟರ್​ ವಿರುದ್ಧ ಹೂಡಿದ್ದರು. ಇಲ್ಲಿ ಮೊತ್ತವನ್ನು ಉಲ್ಲೇಖಿಸಿಲ್ಲ. ಅದರ ಬದಲಿಗೆ ಮಲ್ಟಿ ಮಿಲಿಯನ್​ ಎಂದು ಉಲ್ಲೇಖಿಸಲಾಗಿದೆ ಎಂದು ಟೆಲಿಗ್ರಾಫ್​ ವರದಿ ಮಾಡಿದೆ. ಇದು ಗೌಪ್ಯತೆಯ ಉಲ್ಲಂಘನೆ ಎಂದು ಒಪ್ಪಿಕೊಂಡಿರುವ ಆ್ಯಪಲ್​, ಆ ಯುವತಿಗೆ ಇದರಿಂದ ತೀವ್ರವಾದ ಅವಮಾನ, ಮಾನಸಿಕ ಹಿಂಸೆ ಆಗುತ್ತದೆ ಎಂಬುದನ್ನೂ ಒಪ್ಪಿಕೊಂಡಿದೆ. ಇದೀಗ ಮೊಕದ್ದಮೆಯಲ್ಲಿ ಹೇಳಲಾದಷ್ಟು ಹಣವನ್ನು ಯುವತಿಗೆ ಪಾವತಿಸಿದೆ.

ಇದನ್ನೂ ಓದಿ: ಲಾಕ್​ಡೌನ್​ ಜಾರಿ ಆದಾಗಿನಿಂದಲೂ ಐಸಿಯುನಲ್ಲೇ ಇದ್ದ ಖ್ಯಾತ ಕಿರುತೆರೆ ನಟ

iPhone service centre post the students nude Photo, videos on Facebook in california

Follow us on

Related Stories

Most Read Stories

Click on your DTH Provider to Add TV9 Kannada