China Vaccine: ಚೀನಾ ಸರಕುಗಳಂತೆ ಚೀನಾ ಲಸಿಕೆಯೂ ಕಳಪೆ! ಚೀನಾದ ಲಸಿಕೆ ವಿರುದ್ಧ ಬಹರೇನ್, ಯುಎಇ‌ ನಿರ್ಧಾರ

6 ತಿಂಗಳ ಹಿಂದೆ ಎರಡು ಬಾರಿ ಚೀನಾದ ಸಿನೋಫಾರ್ಮ್ (Sinopharm vaccine) ಲಸಿಕೆಯನ್ನು ಪಡೆದವರೆಲ್ಲರಿಗೂ ಈಗ ಫೈಜರ್  ಬೂಸ್ಟರ್ ಡೋಸ್ ನೀಡಲು ಬಹರೇನ್​ ನಿರ್ಧರಿಸಿದೆ.  50 ವರ್ಷ ಮೇಲ್ಪಟ್ಟವರು, ದಢೂತಿ ದೇಹ ಹೊತ್ತವರು, ರೋಗ ನಿರೋಧಕ ಶಕ್ತಿ ಕ್ಷೀಣಿಸಿದವರು Pfizer ಅಥವಾ Sinopharm ಲಸಿಕೆ  ಪಡೆಯುವಂತೆ ಬಹರೇನ್​ ಸರ್ಕಾರ ಸಲಹೆ ನೀಡಿದೆ.

China Vaccine: ಚೀನಾ ಸರಕುಗಳಂತೆ ಚೀನಾ ಲಸಿಕೆಯೂ ಕಳಪೆ! ಚೀನಾದ ಲಸಿಕೆ ವಿರುದ್ಧ ಬಹರೇನ್, ಯುಎಇ‌ ನಿರ್ಧಾರ
China Vaccine: ಚೀನಾ ಸರಕುಗಳಂತೆ ಚೀನಾ ಲಸಿಕೆಯೂ ಕಳಪೆ! ಚೀನಾದ ಲಸಿಕೆ ವಿರುದ್ಧ ಬಹರೇನ್, ಯುಎಇ‌ ನಿರ್ಧಾರ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 04, 2021 | 1:55 PM

ದೆಹಲಿ: ಚೀನಾ ಸರಕುಗಳು ಕಳಪೆ; ಅವು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ ಎಂಬುದು ಜನಜನಿತ. ಅದೀಗ ಕೋವಿಡ್​ ಮಹಾಮಾರಿ ಕಾಲದಲ್ಲೂ ಸಾಬೀತಾಗುತ್ತಿದೆ. ಆದರೆ ಒಂದೇ ವ್ಯತ್ಯಾಸ ಅಥವಾ ದುರಾದೃಷ್ಟ ಅಂದ್ರೆ ಚೀನಾ ನಿರ್ಮಿತ ಎನ್ನಲಾಗುತ್ತಿರುವ ಕಪರೊನಾ ಸೋಂಕು ಮಾತ್ರ ಇಡೀ ಜಗತ್ತಿಗೆ ವ್ಯಾಪಿಸಿದ್ದು, ಅದರ ಆರ್ಭಟ ಜೋರಾಗಿಯೇ ಇದೆ. ಇದೀಗ ಕೊರೊನಾ ವೈರಸ್ ವಿರುದ್ಧ ಚೀನಾದ ಲಸಿಕೆ ಪರಿಣಾಮಕಾರಿ ಅಲ್ಲವೇ? ಎಂಬ ಪ್ರರ್ಶನೆ ಉದ್ಭವವಾಗಿದೆ. ಬಹರೇನ್, ಯುಎಇ ದೇಶಗಳಲ್ಲಿ ಚೀನಾದ ಲಸಿಕೆ ನೀಡಿಕೆ ಬಳಿಕವೂ ಕೊರೊನಾ ಕೇಸ್ ಹೆಚ್ಚಳವಾಗುತ್ತಿರುವುದೇ ಇದಕ್ಕೆ ಕಾರರಣವಾಗಿದೆ. ಹೀಗಾಗಿ ಈಗ ಬೂಸ್ಟರ್ ಡೋಸ್ ಆಗಿ ಫೈಜರ್ ಲಸಿಕೆ ನೀಡಲು ಬಹರೇನ್ ಮತ್ತು ಯುಎಇ‌ ನಿರ್ಧರಿಸಿದೆ. ದಾಖಲಾರ್ಹ ಸಂಗತಿಯೆಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೂ ಕೊರೊನಾ ಸೋಂಕು ಬಂದಿತ್ತು. ಆದರೆ ಎರಡು ದಿನಗಳ ಹಿಂದಷ್ಟೇ ಅವರು ಚೀನಾದ ಕೊರೊನಾ ಲಸಿಕೆ ಸಿನೋಫಾರ್ಮ್​ ಅನ್ನು ಚುಚ್ಚಿಸಿಕೊಂಡಿದ್ದರು. ಇನ್ನು ಪಾಕ್​ ತನ್ನ ಮಿತ್ರ ರಾಷ್ಟ್ರ ಚೀನಾದ ಸಹಕಾರದೊಂದಿಗೆ ಪಾಕ್​ವಾಕ್​ (PakVac) ಎಂಬ ಕೊವಿಡ್​ 19 ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದೆ. ಆದರೆ ಈಗ ಕೊಲ್ಲಿ ರಾಷ್ಟ್ರಗಳು ಚೀನಾದ ಕೊರೊನಾ ಲಸಿಕೆ ಮೇಲೆ ಅನುಮಾನ ವ್ಯಕ್ತಪಡಿಸಿದೆ.

ಕೊರೊನಾ ವೈರಸ್ ವಿರುದ್ಧ ಚೀನಾದ ಲಸಿಕೆ ಪರಿಣಾಮಕಾರಿ ಅಲ್ಲವೆಂದು ಬಹರೇನ್, ಯುಎಇ ದೇಶಗಳಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಫೈಜರ್ ಲಸಿಕೆ‌ಯನ್ನು ಬೂಸ್ಟರ್ ಡೋಸ್ ಆಗಿ  (Pfizer-BioNTech coronavirus vaccine) ನೀಡಲು ನಿರ್ಧರಿಸಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಇದುವರೆಗೂ ಕೊರೊನಾ ಲಸಿಕೆ  ಬಹುತೇಕ ಎಲ್ಲರಿಗೂ ಹಾಕಿಸಲಾಗಿದೆ. ಆದರೂ ಕೊರೊನಾ ಸೋಂಕು ಆ ರಾಷ್ಟ್ರಗಳನ್ನು ಬಾಧಿಸುತ್ತಿದೆ. ಇದರಿಂದ ಬೇಸತ್ತು, ಇದೀಗ ಫೈಜರ್ ಬೂಸ್ಟರ್ ಡೋಸ್ ಸಹ ನೀಡಲು ಮುಂದಾಗಿದೆ.

6 ತಿಂಗಳ ಹಿಂದೆ ಎರಡು ಬಾರಿ ಚೀನಾದ ಸಿನೋಫಾರ್ಮ್ (Sinopharm vaccine) ಲಸಿಕೆಯನ್ನು ಪಡೆದವರೆಲ್ಲರಿಗೂ ಈಗ ಫೈಜರ್  ಬೂಸ್ಟರ್ ಡೋಸ್ ನೀಡಲು ಬಹರೇನ್​ ನಿರ್ಧರಿಸಿದೆ.  50 ವರ್ಷ ಮೇಲ್ಪಟ್ಟವರು, ದಢೂತಿ ದೇಹ ಹೊತ್ತವರು, ರೋಗ ನಿರೋಧಕ ಶಕ್ತಿ ಕ್ಷೀಣಿಸಿದವರು Pfizer ಅಥವಾ Sinopharm ಲಸಿಕೆ  ಪಡೆಯುವಂತೆ ಬಹರೇನ್​ ಸರ್ಕಾರ ಸಲಹೆ ನೀಡಿದೆ.

(Mideast island nation Bahrain offers Pfizer-BioNTech coronavirus booster vaccine for some who got Chinese Sinopharm vaccine)

ಕೊರೊನಾ ಲಸಿಕೆ ಖರೀದಿಗಾಗಿ ಜಾಗತಿಕ ಟೆಂಡರ್ ಕೈಬಿಟ್ಟ ಕರ್ನಾಟಕ ಸರ್ಕಾರ: ಮುಂದೇನು?

Published On - 1:50 pm, Fri, 4 June 21

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?