ಬ್ರಿಟನ್​ನಲ್ಲಿ 12-15 ವಯೋಮಾನದ ಮಕ್ಕಳಿಗೆ ಫೈಜರ್ ಕೊರೊನಾವೈರಸ್ ಲಸಿಕೆ ನೀಡಲು ಅನುಮೋದನೆ

ಅಮೇರಿಕಾದಲ್ಲಿ ಬೆಳೆಯುವ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡುವುದು ಈಗಾಗಲೇ ಆರಂಭಗೊಂಡಿದೆ ಮತ್ತು ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳು ಅದನ್ನು ಈ ತಿಂಗಳು ಶುರು ಮಾಡಲಿವೆ.

ಬ್ರಿಟನ್​ನಲ್ಲಿ 12-15 ವಯೋಮಾನದ ಮಕ್ಕಳಿಗೆ ಫೈಜರ್ ಕೊರೊನಾವೈರಸ್ ಲಸಿಕೆ ನೀಡಲು ಅನುಮೋದನೆ
ಫೈಜರ್/ಬಯೋಎನ್​ಟೆಕ್ ಕೊರನಾವೈರಸ್ ಲಸಿಕೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 04, 2021 | 7:57 PM

ಲಂಡನ್: ಫೈಜರ್/ಬಯೋಎನ್​ಟೆಕ್ ಕೊರೊನಾವೈರಸ್ ಲಸಿಕೆಯನ್ನು 12-15 ವಯೋಮಾನದ ಮಕ್ಕಳಿಗೆ ನೀಡಲು ಬ್ರಿಟನ್ ಶುಕ್ರವಾರ ಅನುಮೋದನೆ ನೀಡಿದೆ. ಬ್ರಿಟನ್ನಿನ ಔಷಧ ನಿಯಂತ್ರಕ ಸಂಸ್ಥೆಯಾಗಿರುವ ಮೆಡಿಸಿನ್ಸ್ ಅಂಡ್​ ಹೆಲ್ತ್ ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರಿ ಏಜೆನ್ಸಿಯು (ಎಮ್​ಎಚ್​ಆರ್​ಎ) ಮಕ್ಕಳಲ್ಲಿ ಲಸಿಕೆಯ ಸುರಕ್ಷತೆ, ಅದರ ಗುಣಮಟ್ಟ ಮತ್ತು ಪರಿಣಾಮಕತ್ವ ಮುಂತಾದ ಅಂಶಗಳನ್ನು ಪರಿಶೀಲಿಸಿದ ನಂತರ ಲಸಿಕೆಯನ್ನು ಈ ವಯೋಮಾನದ ಮಕ್ಕಳಿಗೆ ನೀಡಲು ಸಮ್ಮತಿ ಸೂಚಿಸಿದೆ.

‘12-15 ವಯೋಮಾನದ ಮಕ್ಕಳಲ್ಲಿ ಕ್ಲಿನಿಕಲ್ ಟ್ರಯಲ್ ಡಾಟಾವನ್ನು ನಾವು ಬಹಳ ಜಾಗರೂಕತೆಯಿಂದ ಪರಿಶೀಲಿಸಿದ ನಂತರ ಫೈಜರ್/ಬಯೋಎನ್​ಟೆಕ್ ಕೊರನಾವೈರಸ್ ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆ. ಈ ವಯೋಮಾನದ ಮಕ್ಕಳಿಗೆ ಲಸಿಕೆ ನೀಡುವುದು ಪ್ರಯೋಜನಕಾರಿ ಆಗಿದೆಯೇ ಹೊರತು ಅದರಿಂದ ಯಾವುದೇ ಅಪಾಯವಿಲ್ಲ,’ ಎಂದು ಎಮ್​ಎಮ್ಎಚ್​ಆರ್​ಎ ಮುಖ್ಯ ನಿರ್ವಹಣಾಧಿಕಾರಿ ಜೂನ್ ರೈನಿ ಹೇಳಿದ್ದಾರೆ

‘ಯನೈಟೆಡ್​ ಕಿಂಗಡಮ್​ನಲ್ಲಿ ಬಳಸಲು ಅನುಮೋದನೆ ಪಡೆದಿರುವ ಎಲ್ಲ ಕೊವಿಡ್-19 ಲಸಿಕೆಗಳನ್ನು ಸಮಗ್ರ ಸುರಕ್ಷತೆಯ ಪರೀಕ್ಷಣೆಗೆ ಒಳಪಡಿಸಿ ಅವುಗಳ ಸುರಕ್ಷತೆಯನ್ನು ಸತತವಾಗಿ ಮಾನಿಟರ್​ ಮಾಡುತ್ತಿರುತ್ತೇವೆ. ಅದರಲ್ಲಿ ಈಗ 12-15 ವಯೋಮಾನದ ಮಕ್ಕಳ ಗುಂಪು ಸಹ ಸೇರಲಿದೆ,’ ಎಂದು ಆಕೆ ಹೇಳಿದ್ದಾರೆ.

ನಿರೀಕ್ಷಿತ ಮಟ್ಟದ ಸುರಕ್ಷತೆ, ಕ್ವಾಲಿಟಿ ಮತ್ತು ಪರಿಣಾಮಕತ್ವ ಸಿಗದೆ ಹೋದರೆ ಲಸಿಕೆ ಅನಮೋದನೆಗೆ ಯೋಗ್ಯವಲ್ಲ ಅಂತ ನಾವು ಪರಿಗಣಿಸುತ್ತೇವೆ ಎಂದು ಜೂನ್ ಹೇಳಿದ್ದಾರೆ.

ಈ ವಯೋಮಾನದವರು ಲಸಿಕೆ ಹಾಕಿಸಿಕೊಳ್ಳುವ ಯೋಜನೆಯಡಿ ಬರುತ್ತಾರೋ ಇಲ್ಲವೋ ಅಂತ ನಿರ್ಧರಿಸುವುದು ವ್ಯಾಕ್ಸಿನೇಶನ್ ಮತ್ತು ಇಮ್ಯುನೈಜೇಷನ್ ಮೇಲಿನ ಜಂಟಿ ಸಮತಿಯ ವಿವೇಚನೆಗೆ ಬಿಟ್ಟ ಸಂಗತಿಯಾಗಿದೆ ಎಂದು ಜೂನ್ ಹೇಳಿದ್ದಾರೆ.

ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ಮತ್ತು ಯುಎಸ್ ಫುಡ್​ ಮತ್ತು ಡ್ರಗ್ ಅಡ್ಮಿನಿಸ್ಟ್ರೇಷನ್ ಕಳೆದ ತಿಂಗಳು ಯುವ ಜನರನ್ನು ಸಹ ಲಸಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿಸಲು ಮತ್ತು ಫೈಜರ್/ಬಯೋಎನ್​ಟೆಕ್ ಕೊರನಾವೈರಸ್ ಲಸಿಕೆ ಪಡೆಯಲು ಅನುಮೋದನೆ ನೀಡಿದ ನಂತರ ಬ್ರಿಟಿಷ್ ಔಷಧ ನಿಯಂತ್ರಕ ಸಂಸ್ಥೆಯು ತನ್ನ ಸಮ್ಮತಿಯನ್ನು ಸೂಚಿಸಿದೆ

ಅಮೇರಿಕಾದಲ್ಲಿ ಬೆಳೆಯುವ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡುವುದು ಈಗಾಗಲೇ ಆರಂಭಗೊಂಡಿದೆ ಮತ್ತು ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳು ಅದನ್ನು ಈ ತಿಂಗಳು ಶುರು ಮಾಡಲಿವೆ.

ಇದನ್ನೂ ಓದಿ: Covid- 19 vaccine: “ಫೈಜರ್, ಮಾಡೆರ್ನಾಗಳಂತೆಯೇ ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪೆನಿಗೂ ರಕ್ಷಣೆ ನೀಡಬೇಕು”