AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid- 19 vaccine: “ಫೈಜರ್, ಮಾಡೆರ್ನಾಗಳಂತೆಯೇ ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪೆನಿಗೂ ರಕ್ಷಣೆ ನೀಡಬೇಕು”

ಫೈಜರ್ ಹಾಗೂ ಮಾಡೆರ್ನಾದಂಥ ವಿದೇಶಿ ಲಸಿಕೆ ಕಂಪೆನಿಗಳಿಗೆ ಸುರಕ್ಷತೆಯನ್ನು ನೀಡಿದಂತೆ ಸೆರಂ ಕಂಪೆನಿಗೂ ನೀಡಬೇಕು ಎಂಬ ಬೇಡಿಕೆ ಬಂದಿದೆ. ಏನಿದು ಸುರಕ್ಷತೆ ಮತ್ತು ಯಾಕೆ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

Covid- 19 vaccine: ಫೈಜರ್, ಮಾಡೆರ್ನಾಗಳಂತೆಯೇ ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪೆನಿಗೂ ರಕ್ಷಣೆ ನೀಡಬೇಕು
SII CEO ಅದರ್​ ಪೂನಾವಾಲ (ಸಂಗ್ರಹ ಚಿತ್ರ)
TV9 Web
| Edited By: |

Updated on:Jun 03, 2021 | 8:54 PM

Share

ಭಾರತದಲ್ಲಿ ಕೋವಿಡ್- 19 ಚುಚ್ಚುಮದ್ದಿಗೆ ಸಂಬಂಧಿಸಿದಂತೆ ವಿದೇಶಿ ಲಸಿಕೆ ಉತ್ಪಾದಕರಾದ ಫೈಜರ್, ಮಾಡೆರ್ನಾಗೆ ಭದ್ರತೆ ಒದಗಿಸಬೇಕು ಎಂದು ಚರ್ಚೆ ಆಗುತ್ತಿರುವ ಹಿನ್ನೆಲೆಯಲ್ಲಿ ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಕೂಡ ಈ ಜವಾಬ್ದಾರಿಯಿಂದ ರಕ್ಷಣೆ ಕೇಳಿದೆ ಎಂದು ಗುರುವಾರ ಮೂಲಗಳು ತಿಳಿಸಿವೆ. “ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಮಾತ್ರವಲ್ಲ, ವಿದೇಶೀ ಕಂಪೆನಿಗಳಿಗೆ ನೀಡುವಂತೆ ಎಲ್ಲ ಲಸಿಕೆ ಕಂಪೆನಿಗಳಿಗೆ ಭದ್ರತೆಯ ಸುರಕ್ಷತೆ ಸಿಗಬೇಕು,” ಮೂಲಗಳು ತಿಳಿಸಿವೆ. ಕಳೆದ ವರ್ಷದ ಆರಂಭದಲ್ಲಿ SII ಸಿಇಒ ಆದಾರ್ ಪೂನಾವಾಲಾ ಅವರು ಎಲ್ಲ ಲಸಿಕೆ ಉತ್ಪಾದಕರಿಗೆ ಭದ್ರತೆ ಒದಗಿಸಬೇಕು ಎಂದು ಅವುಗಳೆಲ್ಲದರ ಪರವಾಗಿ ಮಾತನಾಡಿದ್ದರು. ಉತ್ಪಾದಕರಾಗಿ ನಮಗೆ ಸರ್ಕಾರದ ಭದ್ರತೆ ಬೇಕು, ಅದರಲ್ಲೂ ಎಲ್ಲ ಉತ್ಪಾದಕರಿಗೆ ಎಲ್ಲ ಕಾನೂನು ವ್ಯಾಜ್ಯಗಳ ವಿರುದ್ಧ ಸುರಕ್ಷತೆ ಇರಬೇಕು. ಗಂಭೀರವಲ್ಲದ ವಾದಗಳು ಬರುತ್ತಲೇ ಇರುತ್ತವೆ ಮತ್ತು ಮಾಧ್ಯಮಗಳಲ್ಲಿ ಅಳತೆಗೆ ಮೀರಿ ಬರುತ್ತದೆ. ಸರಿಯಾದ ಸಂದೇಶದೊಂದಿಗೆ ಸರ್ಕಾರವು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಪೂನಾವಾಲಾ ಹೇಳಿದ್ದರು.

ದೇಶದಾದ್ಯಂತ ಕೋವಿಡ್- 19 ಲಸಿಕೆಗೆ ಕೊರತೆ ಇದೆ. ಒಂದು ವೇಳೆ ಏನಾದರೂ ಅಡ್ಡಪರಿಣಾಮಗಳು ಉಂಟಾದಲ್ಲಿ ಅದರಿಂದ ಇಂಡೆಮ್ನಿಟಿ ಬಾಂಡ್​ ದೊರಕಿಸಿಕೊಡಬೇಕು ಎಂದು ಅಮೆರಿಕದ ದೈತ್ಯ ಫಾರ್ಮಾ ಕಂಪೆನಿ ಫೈಜರ್ ಕೇಳಿದೆ. ಹೀಗೆ ಮಾಡುವುದರಿಂದ ಒಂದು ವೇಳೆ ಲಸಿಕೆಯಿಂದ ಅಡ್ಡ ಪರಿಣಾಮ ಎದುರಾದರೂ ಆ ಕಂಪೆನಿಗೆ ಕಾನೂನು ಬಾಧ್ಯತೆಗಳಿಂದ ಭದ್ರತೆ- ಸುರಕ್ಷತೆಯನ್ನು ಒದಗಿಸುತ್ತದೆ. ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪಾಲ್ ಮಾತನಾಡಿ, ಸರ್ಕಾರವು ಅಮೆರಿಕ ಫಾರ್ಮಾ ಕಂಪೆನಿಯ ಮನವಿಯನ್ನು ಪರಿಶೀಲಿಸುತ್ತಿದೆ ಎಂದು ಹೇಳಿದ್ದಾರೆ. ಇನ್ನೂ ಯಾವ ತೀರ್ಮಾನವನ್ನೂ ಕೈಗೊಂಡಿಲ್ಲ. ಜನರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಧಾರ ಕೈಗೊಳ್ತೀವಿ ಎಂದಿದ್ದಾರೆ.

ಭಾರತದ ಲಸಿಕೆ ಇತಿಹಾಸದಲ್ಲೇ ಯಾವಾಗಲೂ ಇಂಡೆಮ್ನಿಟಿ (ಸುರಕ್ಷತೆ) ನೀಡಿಲ್ಲ ಮತ್ತು ಸರ್ಕಾರವೇ ಲಸಿಕೆಯ ಅತಿ ದೊಡ್ಡ ಬಳಕೆದಾರ, ಅದು ಕೂಡ ಹಾಗೆ ಮಾಡಿಲ್ಲ ಎಂದು ಐಸಿಎಂಆರ್​ ಮಾಜಿ ಅಧ್ಯಕ್ಷ ಡಾ ಕೆ. ನಿರ್ಮಲ್ ಗಂಗೂಲಿ ಹೇಳಿದ್ದಾರೆ. ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ತಿಳಿಸಿರುವ ಪ್ರಕಾರ, ಇತರ ಅಂತರರಾಷ್ಟ್ರೀಯ ನಿಯಂತ್ರಕ ಸಂಸ್ಥೆಗಳು ಮಂಜೂರು ಮಾಡಿರುವ ಕೋವಿಡ್- 19 ಲಸಿಕೆಗಳಿಗೆ ನಿರ್ದಿಷ್ಟ ಪರೀಕ್ಷೆಗಳಿಂದ ವಿನಾಯಿತಿ ನೀಡಿತ್ತು. ಇಂಥದ್ದು ವಿದೇಶಿ ಕೋವಿಡ್- 19 ಲಸಿಕೆಗಳಾದ ಫೈಜರ್ ಮತ್ತು ಮಾಡೆರ್ನಾಗೆ ಹಾದಿ ಸುಲಭ ಮಾಡುತ್ತದೆ.

ಡಿಸಿಜಿಐ ಮುಖ್ಯಸ್ಥ ವಿ.ಜಿ.ಸೋಮಾನಿ ತಿಳಿಸಿರುವಂತೆ, ಈ ನಿರ್ಧಾರವು ಯುಎಸ್​ಎಫ್​ಡಿಎ, ಇಎಂಎ, ಯುಕೆಎಂಎಚ್​ಆರ್​ಎ, ಪಿಎಂಡಿಎ ಜಪಾನ್ ಅಥವಾ ವಿಶ್ವ ಆರೊಗ್ಯ ಸಂಸ್ಥೆಯಿಂದ ತುರ್ತು ಬಳಕೆಗಾಗಿ ಅನುಮೋದನೆಗೊಂಡ ಯಾವುದೇ ಲಸಿಕೆಗೆ ಅನ್ವಯ ಆಗುತ್ತದೆ. ಫೈಜರ್ ಹೇಳಿಕೆ ನೀಡಿ, ಭಾರತದ ಸರ್ಕಾರದ ಜತೆ ಮಾತುಕತೆ ನಡೆಯುತ್ತಿದೆ. ಸರ್ಕಾರದ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಬಳಸುವುದಕ್ಕೆ ಕೊರೊನಾ ಲಸಿಕೆ ದೊರೆಯುವಂತೆ ಮಾಡುವ ಕಡೆಗೆ ನಮ್ಮ ಪ್ರಯತ್ನ ನಡೆದಿದೆ ಎಂದು ಹೇಳಿದೆ.

ಇದನ್ನೂ ಓದಿ: ವಿದೇಶಿ ಲಸಿಕಾ ಕಂಪನಿಗಳಿಗೆ ಕೋರ್ಟ್ ಕೇಸ್​ಗಳಿಂದ ರಕ್ಷಣೆಗೆ ಒಪ್ಪಿಗೆ; ಜುಲೈ ವೇಳೆಗೆ ಭಾರತಕ್ಕೆ ಫೈಜರ್ ಲಸಿಕೆ ಸಾಧ್ಯತೆ

(After Moderna and Pfizer now corona vaccine manufacturer company Serum Institute Of India (SII) seeking protection in India)

Published On - 8:52 pm, Thu, 3 June 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ