ಕೊರೊನಾ ಲಸಿಕೆ ಖರೀದಿಗಾಗಿ ಜಾಗತಿಕ ಟೆಂಡರ್ ಕೈಬಿಟ್ಟ ಕರ್ನಾಟಕ ಸರ್ಕಾರ: ಮುಂದೇನು?

corona vaccine purchase: ಹಣಕಾಸು ದಾಖಲೆಗಳೂ ಸೇರಿ ಪೂರೈಕೆ ಖಾತರಿಯ ದಾಖಲೆ ಹಾಗೂ ಲಸಿಕೆಯ ತಾಂತ್ರಿಕ ದಾಖಲೆಗಳನ್ನು ನಿಗದಿತ ಸಮಯದಲ್ಲಿ ಸಲ್ಲಿಸಲು ಎರಡು ಕಂಪನಿಗಳು ವಿಫಲಗೊಂಡವು. ಎರಡು ಸಲ ವರ್ಚುಯಲ್‌ ಸಭೆಗಳನ್ನು ಕರೆದರೂ ಎರಡೂ ಕಂಪನಿಗಳ ಅಧಿಕಾರಿಗಳು ಭಾಗವಹಿಸಲಿಲ್ಲ.

ಕೊರೊನಾ ಲಸಿಕೆ ಖರೀದಿಗಾಗಿ ಜಾಗತಿಕ ಟೆಂಡರ್ ಕೈಬಿಟ್ಟ ಕರ್ನಾಟಕ ಸರ್ಕಾರ: ಮುಂದೇನು?
ಪ್ರಾತಿನಿಧಿಕ ಚಿತ್ರ
Follow us
ಸಾಧು ಶ್ರೀನಾಥ್​
|

Updated on: May 31, 2021 | 4:50 PM

ಬೆಂಗಳೂರು: ಜಾಗತಿಕವಾಗಿ ಕೋವಿಡ್‌ ಲಸಿಕೆ ಖರೀದಿ ಮಾಡಲು ಗ್ಲೋಬಲ್ ಟೆಂಡರ್ ಕರೆದಿದ್ದ ರಾಜ್ಯ ಸರ್ಕಾರ ಆ ಪ್ರಯತ್ನವನ್ನು ಕೈಬಿಟ್ಟಿದೆ. ಇ- ಟೆಂಡರ್‌ ಸಲ್ಲಿಸಿದ್ದ ಎರಡು ಕಂಪನಿಗಳು ಪೂರಕ ದಾಖಲೆ ಸಲ್ಲಿಸಲು ವಿಫಲವಾದ ಹಿನ್ನೆಲೆ ಟೆಂಡರ್ ಪ್ರಕ್ರಿಯೆನ್ನು ಸರ್ಕಾರ ಡ್ರಾಪ್ ಮಾಡಿದೆ. ಆದರ ಬದಲಿಗೆ ನೇರವಾಗಿ ಕಂಪನಿಗಳಿಂದಲೇ ಕೊವಿಡ್ ಲಸಿಕೆ ಖರೀದಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಕೋವಿಡ್‌ ಲಸಿಕೆ ಖರೀದಿಸಲು ಕರ್ನಾಟಕ ಸರ್ಕಾರ ಮೇ 15ರಂದು ಗ್ಲೋಬಲ್ ಟೆಂಡರ್ ಕರೆದಿತ್ತು. ಮುಂಬಯಿಯ ಬುಲಕ್‌ ಎಂಆರ್‌ಒ ಇಂಡಸ್ಟ್ರಿಯಲ್‌ ಸಪ್ಲೈ ಹಾಗೂ ಬೆಂಗಳೂರಿನ ತುಳಸಿ ಸಿಸ್ಟಮ್ಸ್‌ ಕಂಪನಿಗಳು ಟೆಂಡರ್‌ಗೆ ಅರ್ಜಿ ಸಲ್ಲಿಸಿದ್ದವು. ಈ ಎರಡೂ ಕಂಪನಿಗಳು ಲಸಿಕೆ ತಯಾರು ಮಾಡುವ ಕಂಪನಿಗಳಿಂದ ಲಸಿಕೆ ಪಡೆದು ರಾಜ್ಯಕ್ಕೆ ಪೂರೈಸುವುದಾಗಿ ಹೇಳಿದ್ದವು.

ಹಣಕಾಸು ದಾಖಲೆಗಳೂ ಸೇರಿ ಪೂರೈಕೆ ಖಾತರಿಯ ದಾಖಲೆ ಹಾಗೂ ಲಸಿಕೆಯ ತಾಂತ್ರಿಕ ದಾಖಲೆಗಳನ್ನು ನಿಗದಿತ ಸಮಯದಲ್ಲಿ ಸಲ್ಲಿಸಲು ಎರಡು ಕಂಪನಿಗಳು ವಿಫಲಗೊಂಡವು. ಎರಡು ಸಲ ವರ್ಚುಯಲ್‌ ಸಭೆಗಳನ್ನು ಕರೆದರೂ ಎರಡೂ ಕಂಪನಿಗಳ ಅಧಿಕಾರಿಗಳು ಭಾಗವಹಿಸಲಿಲ್ಲ. ರಷ್ಯಾ ಮೂಲದ ಸ್ಪುಟ್ನಿಕ್‌ ಲಸಿಕೆ ತಯಾರಿಸುವ ಕಂಪನಿಯ ಜತೆ ಮಾಡಿಕೊಂಡಿರುವ ಒಪ್ಪಂದದ ದಾಖಲೆಗಳನ್ನು ಸಲ್ಲಿಸುವಲ್ಲಿಯೂ ಎರಡು ಕಂಪನಿಗಳೂ ವಿಫಲವಾಗಿದ್ದವು.

ಈ ಹಿನ್ನೆಲೆಯಲ್ಲಿ ಜಾಗತಿಕ ಟೆಂಡರ್‌ ತಿರಸ್ಕೃತವಾದ ಕಾರಣ ಇದೀಗ ಮುಕ್ತ ಮಾರುಕಟ್ಟೆಯಲ್ಲಿ ನೇರವಾಗಿ ಲಸಿಕೆ ಖರೀದಿ ಮಾಡಲು ಕರ್ನಾಟಕ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಈ ಸಂಬಂಧ, ಈಗಾಗಲೇ ಜಾಗತಿಕ ಮಟ್ಟದಲ್ಲಿ ಲಸಿಕೆ ತಯಾರು ಮಾಡುವ ಎಲ್ಲಾ ಕಂಪನಿಗಳಿಗೆ ಸಂದೇಶ ರವಾನೆ ಮಾಡಲಾಗಿದೆ.

(as tender process incomplete karnataka goverment decided to purchase corona vaccine directly in open market)