ವಿಶ್ವ ಬ್ಯಾಂಕ್‌ನಿಂದ ಭಾರತಕ್ಕೆ ಸಾಲ: ಕೇಂದ್ರದ ಪ್ರಸ್ತಾವನೆ ಆಧಾರದಲ್ಲಿ ಸಣ್ಣ ಕೈಗಾರಿಕೆಗೆ ದೀರ್ಘಾವಧಿ ಸಾಲ; ಕರ್ನಾಟಕಕ್ಕೆ ಇಲ್ಲ

ವಿಶ್ವ ಬ್ಯಾಂಕ್‌ನಿಂದ ಭಾರತಕ್ಕೆ ಸಾಲ: ಕೇಂದ್ರದ ಪ್ರಸ್ತಾವನೆ ಆಧಾರದಲ್ಲಿ ಸಣ್ಣ ಕೈಗಾರಿಕೆಗೆ ದೀರ್ಘಾವಧಿ ಸಾಲ; ಕರ್ನಾಟಕಕ್ಕೆ ಇಲ್ಲ
ವರ್ಲ್ಡ್ ಬ್ಯಾಂಕ್‌ನಿಂದ ಭಾರತಕ್ಕೆ ಸಾಲ ಮಂಜೂರು; ಕೇಂದ್ರದ ಪ್ರಸ್ತಾವನೆ ಆಧಾರದಲ್ಲಿ ಸಣ್ಣ ಕೈಗಾರಿಕೆಗಳಿಗೆ ದೀರ್ಘಾವಧಿ ಸಾಲ

World Bank loan: ವಿಶ್ವ ಬ್ಯಾಂಕ್​ ಮತ್ತು ಅದರ ಖಾಸಗಿ ವಲಯದ ಸಂಸ್ಥೆಯಾದ ಅಂತಾರಾಷ್ಟ್ರೀಯ ಹಣಕಾಸು ನಿಗಮವೂ (International Finance Corporation -IFC) ಈ ಸಾಲ ಯೋಜನೆಯ ಅಂಗವಾಗಿ ಕೈಜೋಡಿಸುತ್ತದೆ. ಗುಜರಾತ್, ಮಹಾರಾಷ್ಟ್ರ, ಪಂಜಾಬ್​, ರಾಜಸ್ಥಾನ ಮತ್ತು ತಮಿಳುನಾಡಿಗೆ ಈ ಸಾಲದ ಮೊತ್ತ ವಿನಿಯೋಗವಾಗಲಿದೆ. ಮಂದಿನ ಹಂತದಲ್ಲಿ ಇತರೆ ರಾಜ್ಯಗಳೂ ಸಹ ಇದರ ಫಲಾನುಭವಿಯಾಗಬಹುದು- ವಿಶ್ವ ಬ್ಯಾಂಕ್‌

TV9kannada Web Team

| Edited By: sadhu srinath

Jun 07, 2021 | 4:29 PM

ವಾಷಿಂಗ್ಟನ್: ಭಾರತ ಸರ್ಕಾರದ ಪ್ರಸ್ತಾವನೆಯ ಆಧಾರದಲ್ಲಿ ವಿಶ್ವ ಬ್ಯಾಂಕ್‌ ಸಾಲ ಮಂಜೂರು ಮಾಡಿದೆ. ಭಾರತಕ್ಕೆ ಒಟ್ಟು 500 ದಶಲಕ್ಷ ರೂಪಾಯಿ ಸಾಲ ಮಂಜೂರು ಮಾಡಲಾಗಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಹಂತದ ಕೈಗಾರಿಕೆಗಳ ಪುನಃಶ್ಚೇತನಕ್ಕಾಗಿ (Micro, Small, and Medium Enterprises -MSME sector) ಸಾಲ ಕೇಳಿದ್ದ ಕೇಂದ್ರ ಸರ್ಕಾರಕ್ಕೆ ವಿಶ್ವ ಬ್ಯಾಂಕ್‌ (World Bank) ಈ ಸಾಲ ಮಂಜೂರಾಗಿದೆ.

ಕೊರೊನಾ ಸಾಂಕ್ರಾಮಿಕ ರೋಗದಿಂದ ಸಂಕಷ್ಟದಲ್ಲಿರುವ (COVID-19 crisis) ಭಾರತದ ನಾನಾ ರಾಜ್ಯಗಳಲ್ಲಿ MSME sector ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಸಾಲದ ಮೊತ್ತ ಬಳಕೆಯಾಗಲಿದೆ. 555,000 MSME ಕೈಗಾರಿಕೆಗಳ ಕಾರ್ಯಕ್ಷಮತೆಯನ್ನು ಅಭಿವೃದ್ಧಿಪಡಿಸಲಾಗುವುದು. ಭಾರತದಲ್ಲಿನ ಸರ್ಕಾರಗಳೂ ಸಹ ಈ ಬಾಬತ್ತಿನಲ್ಲಿ ಒಟ್ಟು 15.5 ಶತಕೋಟಿ ರೂಪಾಯಿ ನಿಧಿ ಕೊಡಮಾಡಲಿದೆ.

ಇದು ವಿಶ್ವ ಬ್ಯಾಂಕ್‌ ಮಂಜೂರು ಮಾಡುತ್ತಿರುವ ಎರಡನೆಯ ಸಾಲವಾಗಿದೆ. ಈ ಹಿಂದೆ 2020ರ ಜುಲೈನಲ್ಲಿ ಕೊರೊನಾದ ಮೊದಲ ಅಲೆಯ ಸಂದರ್ಭದಲ್ಲಿಯೂ MSME ಕೈಗಾರಿಕೆಗಳ ಅಭಿವೃದ್ಧಿಗಾಗಿ ವಿಶ್ವ ಬ್ಯಾಂಕ್‌ 750 ದಶಲಕ್ಷ ರೂಪಾಯಿ ಸಾಲ ನೀಡಿತ್ತು. ಈ ಸಾಲದಿಂದ ಇದುವರೆಗೂ ಸುಮಾರು 50 ಲಕ್ಷ MSME ಕೈಗಾರಿಕೆಗಳು ಆರ್ಥಿಕ ಸದುಪಯೋಗಪಡಿಸಿಕೊಂಡಿವೆ.

ಸದ್ಯಕ್ಕೆ ಕರ್ನಾಟಕಕ್ಕೆ ಈ ಸಾಲಾವಕಾಶ ಇಲ್ಲವಾಗಿದೆ.. ವಿಶ್ವ ಬ್ಯಾಂಕ್​ ಮತ್ತು ಅದರ ಖಾಸಗಿ ವಲಯದ ಸಂಸ್ಥೆಯಾದ ಅಂತಾರಾಷ್ಟ್ರೀಯ ಹಣಕಾಸು ನಿಗಮವೂ (International Finance Corporation -IFC) ಈ ಸಾಲ ಯೋಜನೆಯ ಅಂಗವಾಗಿ ಕೈಜೋಡಿಸುತ್ತದೆ. ಅಗ್ರ ಚಲನಶೀಲ ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ಪಂಜಾಬ್​, ರಾಜಸ್ಥಾನ ಮತ್ತು ತಮಿಳುನಾಡಿಗೆ ಈ ಸಾಲದ ಮೊತ್ತ ವಿನಿಯೋಗವಾಗಲಿದೆ. ಆದರೆ ಕರ್ನಾಟಕಕ್ಕೆ ಸದ್ಯಕ್ಕೆ ಈ ಸಾಲಾವಕಾಶ ಇಲ್ಲವಾಗಿದೆ. ಮಂದಿನ ಹಂತದಲ್ಲಿ ಇತರೆ ರಾಜ್ಯಗಳೂ ಸಹ ಇದರ ಫಲಾನುಭವಿಯಾಗಬಹುದು ಎಂದು ವಿಶ್ವ ಬ್ಯಾಂಕ್‌ನ ಭಾರತದ ನಿರ್ದೇಶಕ ಜುನೈದ್​ ಅಹಮದ್ ಹೇಳಿದ್ದಾರೆ.

ವಿಶ್ವ ಬ್ಯಾಂಕಿನ ಅಂಗ ಸಂಸ್ಥೆಯಾದ ಪುನರ್​ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ಅಂತರಾಷ್ಟ್ರೀಯ ಬ್ಯಾಂಕ್​ (International Bank for Reconstruction and Development- IBRD) ಮುಖಾಂತರ ಈ ಸಾಲ ವಿತರಣೆಯಾಗಲಿದ್ದು, 18.5 ವರ್ಷಗಳ ಕಾಲದ ದೀರ್ಘಾವಧಿ ಸಾಲವಾಗಿದೆ. ಇದರಲ್ಲಿ 5.5 ವರ್ಷ ಗ್ರೇಸ್​ ಅವಧಿ ಸಹ ಇರುತ್ತದೆ.

MSME ಕೈಗಾರಿಕೆಗಳಿಗೆ ತಕ್ಷಣಕ್ಕೆ ಅಗತ್ಯವಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಸೋಲದ ನೆರವನ್ನು ವಿಶ್ವ ಬ್ಯಾಂಕಿನ ಈ ಸಾಲದಿಂದ ಪೂರೈಸಬಹುದಾಗಿದೆ. MSME ಕೈಗಾರಿಕೆಗಳ ಉತ್ಪಾದಕತೆ ಹೆಚ್ಚಿಸುವ ಸಲುವಾಗಿ ಈ ಹಣ ಬಳಕೆಯಾಗಲಿದೆ. MSME ಕೈಗಾರಿಕೆಗಳು ಭಾರತದ ಆರ್ಥಿಕತೆಯ ಬೆನ್ನೆಲುಬು. ದೇಶದ ಜಿಡಿಪಿಗೆ ಶೇ. 30ರಷ್ಟು ಕೊಡುಗೆ ನೀಡುತ್ತಿವೆ. ದೇಶದ ರಫ್ತು ಪ್ರಮಾಣದಲ್ಲಿ ಶೇ. 40ರಷ್ಟು ಪಾಲು ನೀಡುತ್ತಿವೆ. ಸುಮಾರು 58 ದಶಲಕ್ಷ MSME ಕೈಗಾರಿಕೆಗಳ ಪೈಕಿ ಶೇ. 40 ರಷ್ಟು ಕೈಗಾರಿಕೆಗಳಿಗೆ ಔಪಚಾರಿಕ ಮೂಲಗಳಿಂದ ಹಣಕಾಸು ಸೌಲಭ್ಯವೆ ಸಿಗುವುದಿಲ್ಲ ಎಂದು ವಿಶ್ವ ಬ್ಯಾಂಕ್‌ನ ಭಾರತದ ನಿರ್ದೇಶಕ ಜುನೈದ್​ ಅಹಮದ್ ವಿವರಿಸಿದ್ದಾರೆ.

(Post-COVID Resilience Programme to revitalize MSME sector in india World Bank to give 500 million rupees loan) ಸಾಲಗಾರರಿಗೆ ಸೇರಿದ ರೂ. 404 ಕೋಟಿ ರೂ. ಮೌಲ್ಯದ ಚಿನ್ನವನ್ನು ಹರಾಜು ಹಾಕಿದ ಮಣಪ್ಪುರಂ ಫೈನಾನ್ಸ್

Follow us on

Related Stories

Most Read Stories

Click on your DTH Provider to Add TV9 Kannada