AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Senior Citizens Fixed Deposits: ಹಿರಿಯ ನಾಗರಿಕರಿಗೆ ವಿವಿಧ ಬ್ಯಾಂಕ್​ಗಳಲ್ಲಿ ಸಿಗುವ ವಿಶೇಷ ಎಫ್​ಡಿ ದರ ಹೀಗಿದೆ

ಹಿರಿಯ ನಾಗರಿಕರಿಗಾಗಿ ಎಫ್​ಡಿಗಳ ಮೇಲೆ ವಿವಿಧ ಬ್ಯಾಂಕ್​ಗಳು ವಿಶೇಷ ಬಡ್ಡಿ ದರವನ್ನು ಒದಗಿಸುತ್ತಿವೆ. ಆ ಬಗ್ಗೆ ವಿವರಗಳು ಇಲ್ಲಿವೆ.

Senior Citizens Fixed Deposits: ಹಿರಿಯ ನಾಗರಿಕರಿಗೆ ವಿವಿಧ ಬ್ಯಾಂಕ್​ಗಳಲ್ಲಿ ಸಿಗುವ ವಿಶೇಷ ಎಫ್​ಡಿ ದರ ಹೀಗಿದೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Aug 12, 2021 | 3:10 PM

Share

ಹಿರಿಯ ನಾಗರಿಕರಿಗಾಗಿ ಇರುವ ವಿಶೇಷ ಫಿಕ್ಸೆಡ್ ಡೆಪಾಸಿಟ್ (ಎಫ್​ಡಿ) ಯೋಜನೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ), ಎಚ್​ಡಿಎಫ್​ಸಿ ಬ್ಯಾಂಕ್​ ಹಾಗೂ ಬ್ಯಾಂಕ್ ಆಫ್ ಬರೋಡಾದಿಂದ ಸೆಪ್ಟೆಂಬರ್ 30, 2021ರ ತನಕ ವಿಸ್ತರಣೆ ಮಾಡಲಾಗಿದೆ. ಐಸಿಐಸಿಐ ಬ್ಯಾಂಕ್​ ಮಾತ್ರ ಹಿರಿಯ ನಾಗರಿಕರಿಗಾಗಿ ಇರುವ Golden Years FDಯನ್ನು ಅಕ್ಟೋಬರ್ 7, 2021ರ ತನಕ ವಿಸ್ತರಿಸಿದೆ. ಬಡ್ಡಿ ದರಗಳು ದಿನೇ ದಿನೇ ಇಳಿಕೆ ಆಗುತ್ತಿರುವ ಈಗಿನ ದಿನಮಾನದಲ್ಲಿ ಈ ಬ್ಯಾಂಕ್​ಗಳು ಐದು ವರ್ಷ ಮತ್ತು ಅದಕ್ಕೂ ಮೇಲ್ಪಟ್ಟ ಅವಧಿಗೆ ಹಿರಿಯ ನಾಗರಿಕರಿಗಾಗಿ ವಿಶೇಷ ಎಫ್​ಡಿ ಯೋಜನೆಯನ್ನು ಕಳೆದ ವರ್ಷ ಆರಂಭಿಸಿದವು.

1. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ನಾಗರಿಕರ ವಿಶೇಷ ಎಫ್​ಡಿ ದರ ಎಸ್​ಬಿಐನಿಂದ ಇರುವ ವಿಶೇಷ ಎಫ್​ಡಿ ಸ್ಕೀಮ್ ಹೆಸರು We Care. ಈ ಸ್ಕೀಮ್ ಅಡಿಯಲ್ಲಿ 30 ಬೇಸಿಸ್ ಪಾಯಿಂಟ್​ ಅನ್ನು 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಎಫ್​ಡಿಗೆ ಹಿರಿಯ ನಾಗರಿಕರಿಗೆ ನೀಡಲಾಗುತ್ತದೆ. ಸದ್ಯಕ್ಕೆ ಸಾಮಾನ್ಯ ನಾಗರಿಕರಿಗೆ 5 ವರ್ಷದ ಅವಧಿಯ ಎಫ್​ಡಿಗೆ ಶೇ 5.4ರಷ್ಟು ಬಡ್ಡಿ ದರ ಇದೆ. ಹಿರಿಯ ನಾಗರಿಕರು ವಿಶೇಷ ಎಫ್​ಡಿ ಯೋಜನೆಯಲ್ಲಿ ಹಣ ಇಟ್ಟರೆ ಅದಕ್ಕೆ ಶೇ 6.20ರಷ್ಟು ಬಡ್ಡಿ ದರ ಸಿಗುತ್ತದೆ.

2. ಐಸಿಐಸಿಐ ಬ್ಯಾಂಕ್ ಐಸಿಐಸಿಐ ಬ್ಯಾಂಕ್​ನಿಂದ ಇರುವ ವಿಶೇಷ ಎಫ್​ಡಿ ಸ್ಕೀಮ್ ಹೆಸರು ICICI Bank Golden Years FD Scheme. ಈ ಸ್ಕೀಮ್ ಅಡಿಯಲ್ಲಿ 80 ಬೇಸಿಸ್ ಪಾಯಿಂಟ್​ ಹೆಚ್ಚು ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ವಿಶೇಷ ಎಫ್​ಡಿ ಯೋಜನೆಯಲ್ಲಿ ವರ್ಷಕ್ಕೆ ಶೇ 6.30ರಷ್ಟು ಬಡ್ಡಿ ದರ ದೊರೆಯುತ್ತದೆ.

3. ಎಚ್​ಡಿಎಫ್​ಸಿ ಬ್ಯಾಂಕ್ ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ಇರುವ ವಿಶೇಷ ಎಫ್​ಡಿ ಸ್ಕೀಮ್ ಹೆಸರು HDFC Senior Citizen Care. ಈ ಸ್ಕೀಮ್ ಅಡಿಯಲ್ಲಿ 75 ಬೇಸಿಸ್ ಪಾಯಿಂಟ್​ ಹೆಚ್ಚು ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ವಿಶೇಷ ಎಫ್​ಡಿ ಯೋಜನೆಯಲ್ಲಿ ವರ್ಷಕ್ಕೆ ಶೇ 6.25ರಷ್ಟು ಬಡ್ಡಿ ದರ ದೊರೆಯುತ್ತದೆ.

4. ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಆಫ್ ಬರೋಡಾದಿಂದ ಈ ಸ್ಕೀಮ್ ಅಡಿಯಲ್ಲಿ 100 ಬೇಸಿಸ್ ಪಾಯಿಂಟ್​ ಹೆಚ್ಚು ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ವಿಶೇಷ ಎಫ್​ಡಿ ಯೋಜನೆಯಲ್ಲಿ ವರ್ಷಕ್ಕೆ ಶೇ 6.25ರಷ್ಟು ಬಡ್ಡಿ ದರ ಬರುತ್ತದೆ.

ಇದನ್ನೂ ಓದಿ: Fixed Deposit Benefits: 3ರಿಂದ 5 ವರ್ಷದ ಅವಧಿಯ ಎಫ್​ಡಿ ಮೇಲೆ ಉತ್ತಮ ಬಡ್ಡಿ ನೀಡುವ ಟಾಪ್ 10 ಬ್ಯಾಂಕ್​ಗಳಿವು

ಇದನ್ನೂ ಓದಿ: Personal Finance: ಹಣದ ಎಮರ್ಜೆನ್ಸಿ ಇದ್ದಲ್ಲಿ ಎಫ್​ಡಿ ಮೇಲೆ ಸಾಲ ತೆಗೆದುಕೊಳ್ಳೋದಾ ಅಥವಾ ಎಫ್​ಡಿ ಮುರಿಸೋದಾ?

(Special Interest Rate On Fixed Deposits By Various Banks To Senior Citizens Here Is The Details)

2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ