Paytm IPO: ಪೇಟಿಎಂ ಐಪಿಒಗೆ ತಡೆ ನೀಡುವಂತೆ ಮಾಜಿ ನಿರ್ದೇಶಕರಿಂದ ಒತ್ತಾಯ; ಒತ್ತಡದಲ್ಲಿ ಸಿಲುಕಿಕೊಂಡ ಕಂಪೆನಿ
ಪೇಟಿಎಂ ಐಪಿಒಗೆ ತಡೆ ನೀಡಬೇಕು ಎಂದು ಕೋರಿ ಕಂಪೆನಿಯ ಮಾಜಿ ನಿರ್ದೇಶಕರೊಬ್ಬರು ಮನವಿ ಮಾಡಿದ್ದಾರೆ. ಏಕೆ ಹೀಗೆ ಎಂಬುದರ ವಿವರ ಇಲ್ಲಿದೆ.
ಪೇಟಿಎಂನ 2.2 ಬಿಲಿಯನ್ ಅಮೆರಿಕನ್ ಡಾಲರ್ ಐಪಿಒಗೆ ದೊಡ್ಡ ತಡೆ ಎದುರಾಗಿದೆ. 71 ವರ್ಷ ವಯಸ್ಸಿನ ಕಂಪೆನಿಯ ಮಾಜಿ ನಿರ್ದೇಶಕರೊಬ್ಬರು ಭಾರತದ ಮಾರುಕಟ್ಟೆ ನಿಯಂತ್ರಕ ಸಂಸ್ಥೆಗೆ ಒತ್ತಾಯ ಮಾಡಿ, ಈ ಐಪಿಒಗೆ ತಡೆ ಕೋರಿದ್ದಾರೆ. “ನಾನು ಪೇಟಿಎಂನ ಸಹ ಸಂಸ್ಥಾಪಕ. ಎರಡು ದಶಕದ ಹಿಂದೆ 27,500 ಅಮೆರಿಕನ್ ಡಾಲರ್ ಹೂಡಿಕೆ ಮಾಡಿದ್ದೆ. ಆದರೆ ಅದಕ್ಕೆ ಪ್ರತಿಯಾಗಿ ಯಾವುದೇ ಷೇರು ಪಡೆದಿಲ್ಲ,” ಎಂಬುದು ಆರೋಪ. ಈ ಬಗ್ಗೆ ವರದಿ ಮಾಡಿರುವ ರಾಯಿಟರ್ಸ್ ಸುದ್ದಿ ಸಂಸ್ಥೆ, ಕಾನೂನು ದಾಖಲಾತಿಗಳನ್ನು ನೋಡಿರುವುದಾಗಿ ತಿಳಿಸಿದೆ. ಆದರೆ ಪೇಟಿಎಂ ಇದಕ್ಕೆ ನೀಡಿದ ಉತ್ತರ ಏನೆಂದರೆ, ಅಶೋಕ್ ಕುಮಾರ್ ಸಕ್ಸೇನಾ ಮಾಡಿರುವ ಕ್ಲೇಮ್ ಹಾಗೂ ನವದೆಹಲಿಯ ಪೊಲೀಸ್ ಠಾಣೆಯಲ್ಲಿ ನೀಡಿರುವ ವಂಚನೆಯ ದೂರು ಸಂಸ್ಥೆಯನ್ನು ಶೋಷಿಸುವ ಕಿಡಿಗೇಡಿ ಪ್ರಯತ್ನ ಎಂದಿದೆ. ಆದರೂ ನಿಯಂತ್ರಕರ ಅನುಮತಿಗಾಗಿ ಪೇಟಿಎಂನಿಂದ ಜುಲೈನಲ್ಲಿ ಸಲ್ಲಿಸಲಾದ ಐಪಿಒ ಪ್ರಾಸ್ಪೆಕ್ಟಸ್ಗೆ ಈ ವ್ಯಾಜ್ಯ “ಕ್ರಿಮಿನಲ್ ಮೊಕದ್ದಮೆ” ಅಡಿಯಲ್ಲಿ ಬರುತ್ತದೆ.
ಆದರೆ, ತಮ್ಮ ಮೇಲಿನ ಶೋಷಣೆ ಆರೋಪವನ್ನು ನಿರಾಕರಿಸಿದ್ದಾರೆ. ಇನ್ನೂ ಮುಂದುವರಿದು ಮಾತನಾಡಿ, ಪೇಟಿಎಂ ಹೈ ಪ್ರೊಫೈಲ್ ಸ್ಥಾನದಲ್ಲಿ ಇದ್ದು, ತನ್ನಂಥ ಖಾಸಗಿ ವ್ಯಕ್ತಿಗಳು ಕಂಪೆನಿಯನ್ನು ಶೋಷಿಸುವ ಸ್ಥಿತಿಯಲ್ಲಿ ಇಲ್ಲ ಎಂದಿದ್ದಾರೆ. ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದ ಬಳಿ ತೆರಳಿರುವ ಸಕ್ಸೇನಾ, ಐಪಿಒ ನಿಲ್ಲಿಸಬೇಕು ಎಂದು ಕೇಳಿಕೊಂಡಿದ್ದಾರೆ. ಒಂದು ವೇಳೆ ಕ್ಲೇಮ್ ನಿಜ ಎಂದು ಸಾಬೀತಾದಲ್ಲಿ ಹೂಡಿಕೆದಾರರು ಹಣವನ್ನು ಕಳೆದುಕೊಳ್ಳುತ್ತಾರೆ, ಎಂದು ಈ ಹಿಂದೆ ವರದಿ ಆಗದ ದೂರನ್ನು ಗಮನಿಸಿ, ರಾಯಿಟರ್ಸ್ ಸುದ್ದಿ ಸಂಸ್ಥೆ ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸೆಬಿ ನಿರಾಕರಿಸಿದೆ. ಷೇರುದಾರರ ಸಲಹಾ ಸಂಸ್ಥೆ InGovernಗೆ ಸೇರಿದ ಶ್ರೀರಾಮ್ ಸುಬ್ರಮಣಿಯನ್, ಈಗಿನ ತಿಕ್ಕಾಟದಿಂದ ನಿಯಂತ್ರಕರ ವಿಚಾರಣೆಗೆ ಮತ್ತು ಪೇಟಿಎಂ ಐಪಿಒ ಮಂಜೂರಾತಿ ವಿಳಂಬಕ್ಕೆ ಕಾರಣ ಆಗಬಹುದು. ಅಂದಹಾಗೆ ಈ ಐಪಿಒ ಮೌಲ್ಯ 25 ಬಿಲಿಯನ್ ಅಮೆರಿಕನ್ ಡಾಲರ್ ತನಕ ಆಗಲಿದೆ. ನಿಯಂತ್ರಕರು ಏನೇ ನಿರ್ಧಾರ ಕೈಗೊಳ್ಳಬಹುದು. ಈ ವ್ಯಾಜ್ಯವು ಕಾನೂನು ವಿಚಾರವಾಗಿ ತಲೆನೋವಾಗಿ ಪರಿಣಮಿಸಿದೆ. ಚೀನಾದ ಅಲಿಬಾಬ ಮತ್ತು ಜಪಾನ್ನ ಸಾಫ್ಟ್ಬ್ಯಾಂಕ್ ಕೂಡ ಹೂಡಿಕೆ ಮಾಡಿವೆ.
ಈ ವ್ಯಾಜ್ಯದ ಮುಖ್ಯ ಭಾಗವಾಗಿ ಒಂದು ಪುಟದ ದಾಖಲಾತಿಗೆ ಸಕ್ಸೇನಾ ಮತ್ತು ಪೇಟಿಎಂನ ಬಿಲಿಯನೇರ್ ಸಿಇಒ ವಿಜಯ್ ಶೇಖರ್ ಶರ್ಮಾ ಮಧ್ಯೆ 2001ರಲ್ಲಿ ಸಹಿ ಆಗಿದೆ. ಅದರಲ್ಲಿ ರಾಯಿಟರ್ಸ್ ನೋಡಿರುವ ಪ್ರಕಾರ, ಸಕ್ಸೇನಾಗೆ ಪೇಟಿಎಂನ ಮಾತೃ ಸಂಸ್ಥೆ One97 ಕಮ್ಯುನಿಕೇಷನ್ಸ್ನಲ್ಲಿ ಶೇ 55ರಷ್ಟು ಈಕ್ವಿಟಿ ಷೇರು ಬರುತ್ತದೆ. ಬಾಕಿ ಶರ್ಮಾಗೆ ಹೋಗುತ್ತದೆ. ಪೇಟಿಎಂ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಶರ್ಮಾ ಕೂಡ ಯಾವ ಪ್ರತಿಕ್ರಿಯೆ ನೀಡಲು ಒಪ್ಪಿಲ್ಲ.
ಇದನ್ನೂ ಓದಿ: Paytm IPO: ಪೇಟಿಎಂ ಆಡಳಿತ ಮಂಡಳಿಯಲ್ಲಿ ಚೀನೀ ನಾಗರಿಕರಿರುವ ಹುದ್ದೆಗಳಿಗೆ ಭಾರತೀಯರು, ಅಮೆರಿಕನ್ನರ ನೇಮಕ
(Former Director Urges India Market Regulators To Stall Paytm IPO Know The Reason Why)