AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paytm IPO: ಪೇಟಿಎಂ ಆಡಳಿತ ಮಂಡಳಿಯಲ್ಲಿ ಚೀನೀ ನಾಗರಿಕರಿರುವ ಹುದ್ದೆಗಳಿಗೆ ಭಾರತೀಯರು, ಅಮೆರಿಕನ್ನರ ನೇಮಕ

ಪೇಟಿಎಂನ ಐಪಿಒ (ಸಾರ್ವಜನಿಕ ಆರಂಭಿಕ ವಿತರಣೆ) ಬರಲಿದೆ. ಆ ಹಿನ್ನೆಲೆಯಲ್ಲಿ ಪೇಟಿಎಂನ ಮಂಡಳಿಯಲ್ಲಿ ಇರುವ 11 ಚೀನೀಯರ ಜಾಗಕ್ಕೆ ಅಮೆರಿಕ ಮತ್ತು ಭಾರತೀಯ ನಾಗರಿಕರು ಬಂದಿದ್ದಾರೆ. ಇದರ ಹೊರತಾಗಿ ಸದ್ಯಕ್ಕೆ ಇರುವ ಷೇರು ಹೋಲ್ಡಿಂಗ್ಸ್ ನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ

Paytm IPO: ಪೇಟಿಎಂ ಆಡಳಿತ ಮಂಡಳಿಯಲ್ಲಿ ಚೀನೀ ನಾಗರಿಕರಿರುವ ಹುದ್ದೆಗಳಿಗೆ ಭಾರತೀಯರು, ಅಮೆರಿಕನ್ನರ ನೇಮಕ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Jul 07, 2021 | 8:24 PM

Share

ಹಣಕಾಸು ತಂತ್ರಜ್ಞಾನ ಕಂಪೆನಿ ಪೇಟಿಎಂನ ಐಪಿಒ (ಸಾರ್ವಜನಿಕ ಆರಂಭಿಕ ವಿತರಣೆ) ಬರಲಿದೆ. ಆ ಹಿನ್ನೆಲೆಯಲ್ಲಿ ಪೇಟಿಎಂನ ಮಂಡಳಿಯಲ್ಲಿ ಇರುವ 11 ಚೀನೀಯರ ಜಾಗಕ್ಕೆ ಅಮೆರಿಕ ಮತ್ತು ಭಾರತೀಯ ನಾಗರಿಕರು ಬಂದಿದ್ದಾರೆ. ಇದರ ಹೊರತಾಗಿ ಸದ್ಯಕ್ಕೆ ಇರುವ ಷೇರು ಹೋಲ್ಡಿಂಗ್ಸ್ ನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ. ಈಗ ಮಂಡಳಿಯಲ್ಲಿ ಯಾವುದೇ ಚೀನಾ ನಾಗರಿಕರಿಲ್ಲ. ಅಲಿಪೇ, ಆ್ಯಂಟ್ ಫೈನಾನ್ಷಿಯಲ್ಸ್, ಆಲಿಬಾಬದ ಸದಸ್ಯರು ಬದಲಾವಣೆ ಆಗುತ್ತಿದ್ದಾರೆ. ಕಂಪೆನಿಯ ಫೈಲಿಂಗ್ಸ್ ರಾಯಿಟರ್ಸ್ ನೋಡಿದ್ದು, ಈ ಬಗ್ಗೆ ವರದಿ ಮಾಡಿದೆ. ಸಾಮಾ ಕ್ಯಾಪಿಟಲ್ಸ್​ನ ಆಶಿತ್ ರಂಜಿತ್ ಲಿಲಾನಿ ಮತ್ತು ಸಾಫ್ಟ್​ಬ್ಯಾಂಕ್ ಪ್ರತಿನಿಧಿ ವಿಕಾಸ್ ಅಗ್ನಿಹೋತ್ರಿ ಮಂಡಳಿಯ ನಿರ್ದೇಶಕರಾಗಿ ಸೇರ್ಪಡೆ ಆಗಿದ್ದಾರೆ. ಇನ್ನು ಆ್ಯಂಟ್ ಸಮೂಹದ ಪರವಾಗಿ ಅಮೆರಿಕದ ನಾಗರಿಕ ಡಗ್ಲಾಸ್ ಫೀಗಿನ್ ಕೂಡ ಸೇರ್ಪಡೆ ಆಗಿದ್ದಾರೆ.

ಈ ವರ್ಷದ ಅಂತ್ಯದ ವೇಳೆಗೆ 2.3 ಬಿಲಿಯನ್ ಯುಎಸ್​ಡಿ ಮೌಲ್ಯದ ಐತಿಹಾಸಿಕ ಐಪಿಒಗೆ ಮುಂಚೆಯೇ ಪೇಟಿಎಂನ ಈ ಬದಲಾವಣೆಗಳು ಜಾರಿಗೆ ಬರುತ್ತವೆ. ಪೇಟಿಎಂ ಯೋಜನೆಗಳ ಪ್ರಕಾರ ನವೆಂಬರ್‌ನಲ್ಲಿ ನೋಂದಾಯಿಸಲಿದೆ. ಅದು ಅಂದಾಜು 25 ರಿಂದ 35 ಬಿಲಿಯನ್ ಯುಎಸ್​ಡಿ ಮೌಲ್ಯಮಾಪನದೊಂದಿಗೆ ಮಾಡಲಿದೆ. ತನ್ನ ಹೂಡಿಕೆದಾರರಾದ ಸಾಫ್ಟ್‌ಬ್ಯಾಂಕ್ ಮತ್ತು ಆ್ಯಂಟ್ ಫೈನಾನ್ಷಿಯಲ್‌ಗಳಿಂದ 1 ಬಿಲಿಯನ್ ಯುಎಸ್​ಡಿ ಹಣವನ್ನು ಸಂಗ್ರಹಿಸಿದ ನಂತರ 2019ರಲ್ಲಿ ಪೇಟಿಎಂ ಕಂಪೆನಿಯ ಮೌಲ್ಯಮಾಪನವು ಕೇವಲ 16 ಬಿಲಿಯನ್ ಯುಎಸ್​ಡಿ ಆಗಿತ್ತು.

ಪೇಟಿಎಂನ ಕಂಪೆನಿಯ ಪ್ರಮುಖ ಷೇರುದಾರರಲ್ಲಿ ಸಾಫ್ಟ್‌ಬ್ಯಾಂಕ್ ವಿಷನ್ ಫಂಡ್ ಕೂಡ ಒಂದಾಗಿದ್ದು, ಹತ್ತಿರಹತ್ತಿರ ಶೇ 19.63 ರಷ್ಟು ಪಾಲನ್ನು ಹೊಂದಿದೆ. ಆ್ಯಂಟ್ ಫೈನಾನ್ಷಿಯಲ್ಸ್ ಶೇ 29.71ರಷ್ಟು ಪಾಲನ್ನು ಹೊಂದಿದೆ. ಅದರ ಇತರ ಪ್ರಮುಖ ಷೇರುದಾರರಾದ SAIF ಪಾಲುದಾರರು ಶೇ 18.56 ರಷ್ಟು ಪಾಲನ್ನು ಹೊಂದಿದ್ದರೆ, ವಿಜಯ್ ಶೇಖರ್ ಶರ್ಮಾ ಶೇ 14.67 ರಷ್ಟು ಪಾಲನ್ನು ಹೊಂದಿದ್ದಾರೆ. ಇದರ ಸಣ್ಣ ಷೇರುದಾರರಲ್ಲಿ ಎಜಿಎಚ್ ಹೋಲ್ಡಿಂಗ್, ಟಿ ರೋವ್ ಪ್ರೈಸ್, ಡಿಸ್ಕವರಿ ಕ್ಯಾಪಿಟಲ್ ಮತ್ತು ಬರ್ಕ್‌ಶೈರ್ ಹಾಥ್‌ವೇ ಸೇರಿವೆ. ಇವೆಲ್ಲವೂ ಕಂಪೆನಿಯಲ್ಲಿ ಶೇಕಡಾ 10ಕ್ಕಿಂತ ಕಡಿಮೆ ಪಾಲನ್ನು ಹೊಂದಿವೆ.

ಪೇಟಿಎಂನ ಮಾತೃಸಂಸ್ಥೆ ಒನ್ 97 ಕಮ್ಯುನಿಕೇಷನ್ಸ್ ಹೊಸದಾಗಿ ಷೇರುಗಳನ್ನು ವಿತರಿಸುವ ಮೂಲಕ 12,000 ಕೋಟಿ ರೂಪಾಯಿ (1.6 ಬಿಲಿಯನ್ ಯುಎಸ್​ಡಿ) ಸಂಗ್ರಹಿಸಲು ಮುಂದಾಗಿದೆ. ರಾಯಿಟರ್ಸ್ ವರದಿಗಳ ಪ್ರಕಾರ, ಜುಲೈ 12ರಂದು ನಡೆಯಲಿರುವ ಇಜಿಎಂನಲ್ಲಿ ಈ ಐತಿಹಾಸಿಕ ಹೆಜ್ಜೆಗೆ ಅನುಮೋದನೆ ಪಡೆಯಲು ಯೋಜಿಸುತ್ತಿದೆ. 3 ಬಿಲಿಯನ್ ಡಾಲರ್ ಮೊತ್ತಕ್ಕೆ ಪೇಟಿಎಂ ಮಂಡಳಿಯಿಂದ ತಾತ್ವಿಕ ಅನುಮೋದನೆ ಪಡೆದಿದೆ. ಕಂಪೆನಿಯು ಈಗಿನ ಷೇರುದಾರರ ಷೇರುಗಳ ಮಾರಾಟದಿಂದ 4,600 ಕೋಟಿ ರೂಪಾಯಿ ಸಂಗ್ರಹಿಸುವ ಬಗ್ಗೆ ರಾಯಿಟರ್ಸ್ ವರದಿ ಮಾಡಿದೆ. ಇನ್ನು ಪೇಟಿಎಂ ಕಂಪೆನಿಯು ಐಪಿಒಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಸಿದ್ಧಪಡಿಸಲು ಸಜ್ಜಾಗಿದೆ.

ಇದರ ಜತೆಜತೆಗೆ ಪೇಟಿಎಂ ಕಂಪೆನಿಯಿಂದ ಆಫರ್ ಫಾರ್ ಸೇಲ್ (OFS) ಬಗ್ಗೆ ಕೂಡ ತಿಳಿಸಲಾಗಿದೆ. ಈ ಮೂಲಕ ಈಗಿನ ಐತಿಹಾಸಿಕ ಐಪಿಒನಲ್ಲಿ ತನ್ನ ಉದ್ಯೋಗಿಗಳು ಸಹ ಭಾಗವಹಿಸಲು ಮತ್ತು ಅವರ ಷೇರುಗಳನ್ನು ಮಾರಾಟ ಮಾಡಲು ಅವಕಾಶವನ್ನು ನೀಡುತ್ತಿದೆ ಎಂದು ಬ್ಲೂಮ್‌ಬರ್ಗ್ ವರದಿಯೊಂದು ತಿಳಿಸಿದೆ. ಕಂಪೆನಿಯು ಹಣಕಾಸು ವರ್ಷ 21ಕ್ಕೆ 3,186.60 ಕೋಟಿ ರೂಪಾಯಿ ಆದಾಯವನ್ನು ವರದಿ ಮಾಡಿದೆ ಮತ್ತು FY21 ರಲ್ಲಿನ ನಷ್ಟವನ್ನು 1,701 ಕೋಟಿ ರೂಪಾಯಿಗೆ ಇಳಿಸಿದೆ. ಕಂಪೆನಿಯ ನಷ್ಟದಲ್ಲಿ ಶೇಕಡಾ 42 ರಷ್ಟು ಕಡಿಮೆಯಾಗಿದ್ದು, ಹಣಕಾಸು ವರ್ಷ 20ರ 2,942.36 ಕೋಟಿ ರೂಪಾಯಿ ನಷ್ಟ ದಾಖಲಿಸಿದೆ. ಈ ಹಣಕಾಸು ವರ್ಷದಲ್ಲಿ ವಾರ್ಷಿಕ ಆದಾಯವು 2,100 ಕೋಟಿ ರೂಪಾಯಿ ತನಕ ಹೆಚ್ಚಳ ಆಗಿದೆ.

ಇದನ್ನೂ ಓದಿ: ಡಿಜಿಟಲ್ ಇಂಡಿಯಾ ಮಿಷನ್​ಗೆ 6 ವರ್ಷದ ಸಂಭ್ರಮ; ಎಲ್ಲ ವಹಿವಾಟುಗಳ ಮೇಲೂ ಪೇಟಿಎಂನಿಂದ ಕ್ಯಾಶ್​ಬ್ಯಾಕ್ ಆಫರ್

ಇದನ್ನೂ ಓದಿ: Paytm Postpaid Mini: ಪೋಸ್ಟ್​ಪೇಯ್ಡ್​ ಮಿನಿ ಆರಂಭಿಸಿದ ಪೇಟಿಎಂ; ರೂ. 1000 ತನಕ ಸಾಲ ನೀಡುವ ಹೊಸ ಯೋಜನೆ