ಎಸ್​ಬಿಐ ಸೇರಿದಂತೆ ಒಟ್ಟು 14 ಬ್ಯಾಂಕ್​ಗಳಿಗೆ ಒಂದೇ ದಿನದಲ್ಲಿ 50 ಲಕ್ಷದಿಂದ 2 ಕೋಟಿ ತನಕ ದಂಡ ವಿಧಿಸಿದ ಆರ್​ಬಿಐ

ವಿವಿಧ ನಿಯಮ ಉಲ್ಲಂಘನೆಗಳಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸೇರಿದಂತೆ 14 ಬ್ಯಾಂಕ್‌ಗಳಿಗೆ ದಂಡ ವಿಧಿಸಿದೆ ಎಂದು ಕೇಂದ್ರ ಬ್ಯಾಂಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎಸ್​ಬಿಐ ಸೇರಿದಂತೆ ಒಟ್ಟು 14 ಬ್ಯಾಂಕ್​ಗಳಿಗೆ ಒಂದೇ ದಿನದಲ್ಲಿ 50 ಲಕ್ಷದಿಂದ 2 ಕೋಟಿ ತನಕ ದಂಡ ವಿಧಿಸಿದ ಆರ್​ಬಿಐ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jul 08, 2021 | 12:25 AM

ವಿವಿಧ ನಿಯಮ ಉಲ್ಲಂಘನೆಗಳಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜುಲೈ 7ರಂದು ಬಂಧನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸೇರಿದಂತೆ 14 ಬ್ಯಾಂಕ್‌ಗಳಿಗೆ ದಂಡ ವಿಧಿಸಿದೆ ಎಂದು ಕೇಂದ್ರ ಬ್ಯಾಂಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ 14 ಬ್ಯಾಂಕುಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು, ವಿದೇಶಿ ಬ್ಯಾಂಕ್, ಸಹಕಾರಿ ಬ್ಯಾಂಕುಗಳು ಮತ್ತು ಒಂದು ಸಣ್ಣ ಹಣಕಾಸು ಬ್ಯಾಂಕ್ ಸೇರಿವೆ. ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ ಸಾಲ ನೀಡುವುದು (ಎನ್‌ಬಿಎಫ್‌ಸಿ), ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪೆನಿಗಳಿಗೆ ಬ್ಯಾಂಕ್ ಹಣಕಾಸು (ಎನ್‌ಬಿಎಫ್‌ಸಿ) ಒದಗಿಸುವುದು ಮತ್ತು ಸಾಲಗಳು ಮತ್ತು ಮುಂಗಡಗಳು – ಶಾಸನಬದ್ಧ ಮತ್ತು ಇತರ ನಿರ್ಬಂಧಗಳು ಕುರಿತು ಆರ್‌ಬಿಐ ಹೊರಡಿಸಿರುವ ಕೆಲವು ನಿಬಂಧನೆಗಳ ಉಲ್ಲಂಘನೆ ಮಾಡಿರುವುದು ಇದರಲ್ಲಿ ಒಳಗೊಂಡಿವೆ ಎಂದು ಆರ್‌ಬಿಐ ಹೇಳಿದೆ.

ವಿವಿಧ ನಿಯಮ ಉಲ್ಲಂಘನೆಗಳಿಗಾಗಿ ಒಂದೇ ದಿನದಲ್ಲಿ ಆರ್‌ಬಿಐನಿಂದ ಅತಿ ಹೆಚ್ಚು ದಂಡವನ್ನು ಬ್ಯಾಂಕುಗಳಿಗೆ ದಂಡ ವಿಧಿಸುತ್ತಿರುವುದು ಇದು ಮೊದಲು. ಮೂಲವೊಂದರ ಪ್ರಕಾರ, ಈ ಬ್ಯಾಂಕುಗಳ ಮೇಲಿನ ಆರ್‌ಬಿಐ ವಿಧಿಸಿರುವ ದಂಡಗಳು ಮುಖ್ಯವಾಗಿ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ (ಡಿಎಚ್‌ಎಫ್ಎಲ್) ಮತ್ತು ಅದರ ಗುಂಪು ಕಂಪೆನಿಗಳೊಂದಿಗೆ ನಡೆಸಿರುವ ವ್ಯವಹಾರಗಳು ಕಾರಣ ಎನ್ನಲಾಗಿದೆ. “ಈ ಉಲ್ಲಂಘನೆಗಳು ಮುಖ್ಯವಾಗಿ ಡಿಎಚ್ಎಫ್ಎಲ್​ಗೆ ಸಂಬಂಧಿಸಿವೆ,” ಎಂದು ಮೂಲ ಹೇಳಿದೆ. ಆರ್‌ಬಿಐ ಒಂದು ಗುಂಪಿನ ಕಂಪೆನಿಗಳ ಖಾತೆಗಳಲ್ಲಿ ಪರಿಶೀಲನೆ ನಡೆಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆರ್‌ಬಿಐ ಹೊರಡಿಸಿದ ಒಂದು ಅಥವಾ ಅದಕ್ಕಿಂತ ಹೆಚ್ಚಿನ ನಿರ್ದೇಶನಗಳನ್ನು ಅನುಸರಿಸಲು ಬ್ಯಾಂಕ್​ಗಳು ವಿಫಲವಾಗಿವೆ ಹಾಗೂ/ ಅಥವಾ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರ ನಿಬಂಧನೆಗಳು ಉಲ್ಲಂಘಿಸಿವೆ ಎಂಬುದು ಗಮನಿಸಲಾಗಿದೆ ಎಂದು ಆರ್​ಬಿಐ ತಿಳಿಸಿದೆ. ಇಲ್ಲಿ ಗುಂಪು ಎಂದು ಮುಖ್ಯವಾಗಿ ಪ್ರಸ್ತಾವ ಮಾಡಿರುವುದು ಡಿಎಚ್‌ಎಫ್‌ಎಲ್.

ಅಲ್ಲದೆ, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರ ನಿಬಂಧನೆಗಳ ನಿರ್ದೇಶನಗಳು/ ಮಾರ್ಗದರ್ಶನಗಳನ್ನು ಪಾಲಿಸದಿದ್ದಕ್ಕಾಗಿ ದಂಡವನ್ನು ಏಕೆ ವಿಧಿಸಬಾರದು ಎಂಬ ಕಾರಣವನ್ನು ಕೇಳಿ ಬ್ಯಾಂಕ್​ಗಳಿಗೆ ಆರ್​ಬಿಐ ಶೋಕಾಸ್ ನೋಟಿಸ್ ನೀಡಲಾಗಿತ್ತು. ಅದಾದ ಮೇಲೆ ಪರೀಕ್ಷೆಯ ನಂತರ, ಉಲ್ಲಂಘನೆಗಳಾಗಿರುವ ಕಾರಣಕ್ಕೆ 14 ಬ್ಯಾಂಕುಗಳಿಗೆ ದಂಡವನ್ನು ವಿಧಿಸುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಆರ್​ಬಿಐ ತಿಳಿಸಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಕ್ರೆಡಿಟ್ ಸ್ಯೂಸ್, ಇಂಡಿಯನ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಕರ್ಣಾಟಕ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಮತ್ತು ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ಗೆ ಸಹ ದಂಡ ವಿಧಿಸಲಾಗಿದೆ.

1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 46 ಎ (1) (ಸಿ) ಸೆಕ್ಷನ್ 46 (4) (ಐ) ಮತ್ತು 51 (1) ರೊಂದಿಗೆ ಸೆಕ್ಷನ್ 47 ಎ (1) (ಸಿ) ನಿಬಂಧನೆಗಳ ಅಡಿಯಲ್ಲಿ ಆರ್‌ಬಿಐಗೆ ನೀಡಲಾಗಿರುವ ಅಧಿಕಾರವನ್ನು ಚಲಾಯಿಸಲು ತಲಾ 50 ಲಕ್ಷದಿಂದ 2 ಕೋಟಿ ರೂಪಾಯಿ ತನಕ ದಂಡ ವಿಧಿಸಲಾಗಿದೆ ಎಂದು ಆರ್​ಬಿಐ ಹೇಳಿದೆ. ಅಂದ ಹಾಗೆ ಆರ್​ಬಿಐನ ಈ ಕ್ರಮವು ರೆಗ್ಯುಲೇಟರ್ ವಿಚಾರದಲ್ಲಿನ ನ್ಯೂನತೆಗಳನ್ನು ಆಧರಿಸಿದೆ ಹೊರತು ಈ ಬ್ಯಾಂಕ್​ಗಳು ತಮ್ಮ ಗ್ರಾಹಕರೊಂದಿಗೆ ಮಾಡಿಕೊಂಡ ಯಾವುದೇ ವಹಿವಾಟು ಅಥವಾ ಒಪ್ಪಂದದ ಸಿಂಧುತ್ವಕ್ಕೆ ಸಂಬಂಧಿಸಿದ್ದಲ್ಲ ಎಂದು ಆರ್‌ಬಿಐ ತಿಳಿಸಿದೆ.

ಇದನ್ನೂ ಓದಿ: Reserve Bank Of India: ಗ್ರಾಹಕರ ಅನ್​ಕ್ಲೇಮ್ ಡೆಪಾಸಿಟ್ ಬಗ್ಗೆ ಆರ್​ಬಿಐ ಮಹತ್ವದ ತೀರ್ಮಾನ

ಇದನ್ನೂ ಓದಿ: 2000 Rupees Currency Printing: 2019ನೇ ಇಸವಿಯಿಂದಲೇ ರೂ. 2000 ಮುಖಬೆಲೆ ನೋಟು ಮುದ್ರಣವಾಗಿಲ್ಲ ಎಂದ ಆರ್​ಬಿಐ

(Reserve Bank Of India imposed penalty on 14 banks including State Bank Of India due to non compliance. Here is the details)

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ