2000 Rupees Currency Printing: 2019ನೇ ಇಸವಿಯಿಂದಲೇ ರೂ. 2000 ಮುಖಬೆಲೆ ನೋಟು ಮುದ್ರಣವಾಗಿಲ್ಲ ಎಂದ ಆರ್​ಬಿಐ

ಭಾರತದಲ್ಲಿ ಚಲಾವಣೆಯಲ್ಲಿ ಇರುವ ಅತಿ ದೊಡ್ಡ ಮುಖಬೆಲೆಯ ಕರೆನ್ಸಿ ಆದ ರೂ. 2000 ಅನ್ನು 2019ನೇ ಇಸವಿಯಿಂದಲೇ ಮುದ್ರಣ ಮಾಡಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವರದಿಯಲ್ಲಿ ತಿಳಿಸಿದೆ.

2000 Rupees Currency Printing: 2019ನೇ ಇಸವಿಯಿಂದಲೇ ರೂ. 2000 ಮುಖಬೆಲೆ ನೋಟು ಮುದ್ರಣವಾಗಿಲ್ಲ ಎಂದ ಆರ್​ಬಿಐ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: May 29, 2021 | 3:47 PM

ನವದೆಹಲಿ: 2021- 22ರ ಹಣಕಾಸು ವರ್ಷದಲ್ಲಿ ಹೊಸದಾಗಿ 2000 ರೂಪಾಯಿ ನೋಟು ಪೂರೈಕೆ ಆಗಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. 2019ರಿಂದಲೂ 2000 ರೂಪಾಯಿ ನೋಟಿನ ಮುದ್ರಣವನ್ನು ನಿಲ್ಲಿಸಲಾಗಿದೆ. ಅಂದಹಾಗೆ ಸದ್ಯಕ್ಕೆ ಅತಿ ದೊಡ್ಡ ಮುಖಬೆಲೆಯ ನೋಟು ಅದೇ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಾರ್ಷಿಕ ವರದಿ 2021ರಲ್ಲಿ ಇದನ್ನು ತಿಳಿಸಲಾಗಿದೆ. ಹೆಚ್ಚಿನ ಮುಖಬೆಲೆಯ ನೋಟುಗಳಾದ ರೂ. 500 ಮತ್ತು ರೂ. 2000 ಇವೆರಡರ ಮೌಲ್ಯವನ್ನು ಒಗ್ಗೂಡಿಸಿದರೆ ಭಾರತದಲ್ಲಿನ ಒಟ್ಟು ಬ್ಯಾಂಕ್​ ನೋಟುಗಳ ಮೌಲ್ಯದ ಶೇ 85.7ರಷ್ಟಾಗುತ್ತದೆ. ದೇಶದಲ್ಲಿ ಹೆಚ್ಚಿನ ಮುಖಬೆಲೆಯ ನೋಟುಗಳು ಕಡಿಮೆ ಇರಬೇಕು ಎಂಬ ಕಾರಣಕ್ಕೆ ಸಂಖ್ಯೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಡಿಮೆ ಮಾಡಿದೆ ಎಂದು ವರದಿ ಆಗಿದೆ.

2020ರಲ್ಲಿ ಆರ್​ಬಿಐ ಹೇಳಿದ್ದ ಪ್ರಕಾರ, 2019ರ ಸಮಯದಲ್ಲೇ ರೂ. 2000 ಬ್ಯಾಂಕ್​ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದೆ. ಭದ್ರತಾ ಕಾರಣಗಳಿಗಾಗಿ ರೂ. 2000 ಮುಖಬೆಲೆಯ ನೋಟುಗಳನ್ನು ಮುದ್ರಿಸುವುದು ಆರ್​ಬಿಐ ನಿಲ್ಲಿಸಿತು ಎನ್ನಲಾಗಿದೆ. ಆರ್​ಬಿಐ ವಾರ್ಷಿಕ ವರದಿ 2020ರ ಪ್ರಕಾರ, 2018ರ ಮಾರ್ಚ್​ವರೆಗೆ 2000 ರೂಪಾಯಿಯ ಬ್ಯಾಂಕ್​ ನೋಟುಗಳು ಅಂದಾಜು 33,632 ಲಕ್ಷ ತುಂಡು(ಪೀಸ್​) ಗಳು ಚಲಾವಣೆಯಲ್ಲಿ ಇದ್ದವು. 2019ರ ಮಾರ್ಚ್ ಹೊತ್ತಿಗೆ ಆ ಸಂಖ್ಯೆ 32,910 ಲಕ್ಷಕ್ಕೆ ಇಳಿಯಿತು. 2020ರ ಕೊನೆ ಹೊತ್ತಿಗೆ 27,398 ಲಕ್ಷ ತುಂಡುಗಳಿಗೆ ಇಳಿದಿದೆ.

2016ರ ನವೆಂಬರ್ 8ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆಗ ಚಲಾವಣೆಯಲ್ಲಿದ್ದ ದೊಡ್ಡ ಮುಖಬೆಲೆಯ ನೋಟುಗಳಾದ ರೂ. 500 ಮತ್ತು ರೂ. 1000ವನ್ನು ನಿಷೇಧಿಸಿತು. ಅದಾದ ನಂತರ 2000 ರೂಪಾಯಿ ಮುಖಬೆಲೆಯ ನೋಟನ್ನು ತರಲಾಯಿತು. ಕಪ್ಪು ಹಣದ ನಿಯಂತ್ರಣ ಹಾಗೂ ಭಯೋತ್ಪಾದನೆಗೆ ಹಣಕಾಸು ನೆರವು ನಿಲ್ಲಬೇಕು ಎಂಬ ಕಾರಣಕ್ಕೆ ಈ ತೀರ್ಮಾನಕ್ಕೆ ಬರಲಾಯಿತು.

ಇದನ್ನೂ ಓದಿ: Fake Currency: 500 ರೂಪಾಯಿ ನಕಲಿ ನೋಟುಗಳ ಪ್ರಮಾಣ ಒಂದು ವರ್ಷದಲ್ಲಿ ಶೇ 31ರಷ್ಟು ಹೆಚ್ಚಳ

(RBI said in it’s annual report that, Rs 2000 currency has not been printed since 2019)

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?