PF Withdrawal Rules: ಪಿಎಫ್ ವಿಥ್​ಡ್ರಾ, ವರ್ಗಾವಣೆ ಮಾಡುವುದಕ್ಕೆ ಅನುಸರಿಸಬೇಕಾದ ನಿಯಮಗಳೇನು?

EPF Withdrawal Rules: ಪಿಎಫ್ ಆನ್​ಲೈನ್ ವರ್ಗಾವಣೆ ಅಥವಾ ವಿಥ್​ಡ್ರಾ ಮಾಡುವುದು ಹೇಗೆ? ಆನ್​ಲೈನ್ ಪ್ರಕ್ರಿಯೆ ಬಗ್ಗೆ ಇಲ್ಲಿದೆ ಹಂತಹಂತವಾದ ಮಾಹಿತಿ.

PF Withdrawal Rules: ಪಿಎಫ್ ವಿಥ್​ಡ್ರಾ, ವರ್ಗಾವಣೆ ಮಾಡುವುದಕ್ಕೆ ಅನುಸರಿಸಬೇಕಾದ ನಿಯಮಗಳೇನು?
ಸಾಂದರ್ಭಿಕ ಚಿತ್ರ
Follow us
Srinivas Mata
| Updated By: Digi Tech Desk

Updated on:May 29, 2021 | 12:04 PM

ಕಾರ್ಮಿಕರ ಭವಿಷ್ಯ ನಿಧಿ ಒಕ್ಕೂಟ (ಇಪಿಎಫ್​ಒ) ಎಂಬುದು ಸಾಮಾಜಿಕ ಭದ್ರತಾ ಸಂಸ್ಥೆ. ಅದರ ನಿರ್ವಹಣೆ ಮಾಡುವುದು ಭಾರತ ಸರ್ಕಾರ. ಇಪಿಎಫ್​ (ಕಾರ್ಮಿಕರ ಭವಿಷ್ಯ ನಿಧಿ) ಅನ್ನು ಆನ್​ಲೈನ್​ನಲ್ಲೇ ವೆಬ್​ಸೈಟ್​ ಮೂಲಕ ವಿಥ್​ಡ್ರಾ/ವರ್ಗಾವಣೆ ಮಾಡುವುದಕ್ಕೆ ಸಾಧ್ಯವಿದೆ. ಭಾರತದಲ್ಲಿ ಎಲ್ಲ ಸ್ಥಿರವಾದ ಸಿಬ್ಬಂದಿಗೂ ಬೇಸಿಕ್ ಪೇ- ಮೂಲವೇತನ (ಮತ್ತು ಅನ್ವಯ ಆಗುವಲ್ಲಿ ತುಟ್ಟಿಭತ್ಯೆ- ಡಿಯರ್​ನೆಸ್ ಅಲೋವೆನ್ಸ್)ನ ಶೇ 12ರಷ್ಟು ಪ್ರತಿ ತಿಂಗಳು ಕೊಡುಗೆ ನೀಡಬೇಕು. ಉದ್ಯೋಗಿ ಮತ್ತು ಉದ್ಯೋಗದಾತರು ಜಮೆ ಮಾಡುವ ಮೊತ್ತ ಮತ್ತು ಅದರ ಮೇಲಿನ ಬಡ್ಡಿ ಸಿಬ್ಬಂದಿಯ ಪಿಎಫ್​ ಖಾತೆಯಲ್ಲಿ ಇರುತ್ತದೆ. ಅದನ್ನು ಕೆಲವು ಷರತ್ತುಗಳೊಂದಿಗೆ ವಿಥ್​ಡ್ರಾ ಮಾಡಬಹುದು.

ಇಪಿಎಫ್ ಎಂಬುದು ಭಾರತದಲ್ಲಿ ಉದ್ಯೋಗಿಗಳಿಗೆ ಉಳಿತಾಯ, ಪೆನ್ಷನ್ ಮತ್ತು ವಿಮೆ ಅನುಕೂಲಗಳನ್ನು ಒದಗಿಸುತ್ತದೆ. ಸಿಬ್ಬಂದಿ ತಮ್ಮ ನಿವೃತ್ತಿ ಸಮಯದಲ್ಲಿ ಅಥವಾ ಎರಡು ತಿಂಗಳಿಗಿಂತ ಹೆಚ್ಚು ಅವಧಿಗೆ ನಿರುದ್ಯೋಗಿಗಳಾದಾಗ ಇಪಿಎಫ್​ ಖಾತೆಯಲ್ಲಿನ ಪೂರ್ತಿ ಮೊತ್ತವನ್ನು ವಿಥ್​ಡ್ರಾ ಮಾಡಬಹುದು. ಕೆಲವು ಸಂದರ್ಭದಲ್ಲಿ ಭಾಗಶಃ ವಿಥ್​ಡ್ರಾ ಮಾಡುವುದಕ್ಕೆ ಸಹ ಅವಕಾಶ ನೀಡಲಾಗಿದೆ. ಹಾಗಂದರೆ, ವೈದ್ಯಕೀಯ ತುರ್ತು, ಮದುವೆ, ವಿಪತ್ತು ಹಾಗೂ ಮನೆ ನವೀಕರಣಕ್ಕೆ ಭಾಗಶಃ ವಿಥ್​ಡ್ರಾ ಮಾಡಬಹುದು.

ಆನ್​ಲೈನ್ ಇಪಿಎಫ್​ ವರ್ಗಾವಣೆ ಮಾಡುವುದು ಹೇಗೆ? 1) ಯೂನಿಫೈಡ್​ ಮೆಂಬರ್ ಪೋರ್ಟಲ್​ಗೆ ಭೇಟಿ ನೀಡಬೇಕು ಮತ್ತು ಯೂನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಮೂಲಕ ಹಾಗೂ ಪಾಸ್​ವರ್ಡ್ ಮೂಲಕ ಲಾಗಿನ್ ಆಗಬೇಕು.

2) ಆನ್​ಲೈನ್ ಸರ್ವೀಸಸ್​ಗೆ ತೆರಳಿ, ಅಲ್ಲಿ ಒನ್​ ಮೆಂಬರ್- ಒನ್ ಇಪಿಎಫ್​ ಅಕೌಂಟ್ (ಟ್ರಾನ್ಸ್​ಫರ್ ರಿಕ್ವೆಸ್ಟ್) ಅನ್ನು ಕ್ಲಿಕ್ ಮಾಡಬೇಕು.

3) ವೈಯಕ್ತಿಕ ಮಾಹಿತಿ ಮತ್ತು ಸದ್ಯಕ್ಕಿರುವ ಉದ್ಯೋಗದ ಪಿಎಫ್​ ಖಾತೆಯನ್ನು ಪರಿಶೀಲಿಸಿಕೊಳ್ಳಬೇಕು.

4) ಗೆಟ್ ಡೀಟೇಲ್ಸ್ ಕ್ಲಿಕ್ ಮಾಡಿದರೆ ಈ ಹಿಂದಿನ ಉದ್ಯೋಗದ ಪಿಎಫ್​ ಖಾತೆ ಮಾಹಿತಿಯು ಕಾಣಿಸಿಕೊಳ್ಳುತ್ತದೆ.

5) ಒಂದೋ ಈ ಹಿಂದಿನ ಉದ್ಯೋಗದಾತರು ಅಥವಾ ಈಗಿನ ಉದ್ಯೋಗದಾತರು ಯಾರು ಎಂಬುದನ್ನು ಅರ್ಜಿ ಹಾಕುವ ಮುನ್ನ ಆಯ್ಕೆ ಮಾಡಿಕೊಳ್ಳಿ.

6) ಯುಎಎನ್​ಗೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುವುದಕ್ಕೆ ಗೆಟ್ ಒಟಿಪಿ ಎಂಬುದರ ಮೇಲೆ ಕ್ಲಿಕ್ ಮಾಡಿ. ಒಟಿಪಿಯನ್ನು ನಮೂದಿಸಿ, ಸಬ್​ಮಿಟ್ ಎಂಬುದರ ಮೇಲೆ ಕ್ಲಿಕ್ ಮಾಡಿ.

ಒಟಿಪಿಯನ್ನು ಸಲ್ಲಿಸಿದ ಮೇಲೆ ಕೆಲವು ಸ್ಕ್ಯಾನ್ಡ್ ದಾಖಲಾತಿಗಳ ಅಗತ್ಯ ಬರಬಹುದು. ಕ್ಲೇಮ್​ ಅರ್ಜಿಯನ್ನು ಭರ್ತಿ ಮಾಡಿರುತ್ತೀರಲ್ಲಾ ಅದಕ್ಕೆ ಪೂರಕವಾದ ದಾಖಲಾತಿಗಳಿವು. ಯೂನಿಫೈಡ್ ಪೋರ್ಟಲ್​ನಲ್ಲಿ ಉದ್ಯೋಗದಾತರಿಗೆ ಇಂಟರ್​ಫೇಸ್ ಇರುತ್ತದೆ. ಅವರು ಆ ಮೂಲಕ ಇಪಿಎಫ್​ ವರ್ಗಾವಣೆಗೆ ಡಿಜಿಟಲ್​ ಆಗಿಯೇ ಮಂಜೂರು ಮಾಡುತ್ತಾರೆ. ಇದಕ್ಕೆ 15ರಿಂದ 20 ದಿನ ಸಮಯ ಆಗಬಹುದು. ಇಪಿಎಫ್ ಖಾತೆಗೆ ಜೋಡಣೆಯಾದ ಬ್ಯಾಂಕ್ ಖಾತೆಗೆ ಹಣ ಬರುತ್ತದೆ. ಈ ಮಾಹಿತಿಯನ್ನು ಇಪಿಎಫ್​ಒ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲೂ ಹಂಚಿಕೊಂಡಿದೆ. ಇಪಿಎಫ್​ಒದಿಂದ ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್​ಗಳನ್ನು ನಿವೃತ್ತಿ ನಂತರದ ಆರ್ಥಿಕ ಭದ್ರತೆಗೆ ನಿರ್ವಹಣೆ ಮಾಡಲಾಗುತ್ತದೆ.

ಇದನ್ನೂ ಓದಿ: PF Benefits: ಇನ್ಷೂರೆನ್ಸ್​ನಿಂದ ಪೆನ್ಷನ್​ ತನಕ ಪ್ರಾವಿಡೆಂಟ್ ಫಂಡ್ 5 ಅನುಕೂಲಗಳು

(Here is the PF withdrawal rule to follow to get the money from EPFO or for transfer money from one account to another)

Published On - 11:22 am, Sat, 29 May 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ