Penalty to HDFC Bank: ಎಚ್​ಡಿಎಫ್​ಸಿ ಬ್ಯಾಂಕ್​ಗೆ ರೂ. 10 ಕೋಟಿ ದಂಡ ಹಾಕಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಅಡಿಯಲ್ಲಿನ ಕೆಲವು ನಿಯಮಾವಳಿಗೆ ಬದ್ಧವಾಗಿಲ್ಲ ಎಂಬ ಕಾರಣಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಎಚ್​ಡಿಎಫ್​ಸಿ ಬ್ಯಾಂಕ್​ಗೆ 10 ಕೋಟಿ ರೂ. ದಂಡ ಹಾಕಿದೆ.

Penalty to HDFC Bank: ಎಚ್​ಡಿಎಫ್​ಸಿ ಬ್ಯಾಂಕ್​ಗೆ ರೂ. 10 ಕೋಟಿ ದಂಡ ಹಾಕಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
HDFC ಬ್ಯಾಂಕ್ 18 ವರ್ಷದೊಳಗಿನ ಯಾವುದೇ ಮಕ್ಕಳಿಗಾಗಿ ಕಿಡ್ಸ್ ಅಡ್ವಾಂಟೇಜ್ ಅಕೌಂಟ್ ತೆರೆಯಬಹುದು. ಆದರೆ ಪಾಲಕರು ಅಥವಾ ಪೋಷಕರು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು. ಈ ಉಳಿತಾಯ ಖಾತೆಯು ರೂ. 5,000 ಕನಿಷ್ಠ ಬ್ಯಾಲೆನ್ಸ್ ಮಾನದಂಡದೊಂದಿಗೆ ಬರುತ್ತದೆ ಮತ್ತು ಅದನ್ನು ನಿರ್ವಹಿಸಬೇಕು. ಪಾಲಕರು ಅಥವಾ ಪೋಷಕರ ಸಾವಿನ ಸಂದರ್ಭದಲ್ಲಿ ಈ ಖಾತೆ ಮೂಲಕವಾಗಿ ಮಗುವಿಗೆ 1 ಲಕ್ಷ ರೂಪಾಯಿಗಳ ಉಚಿತ ಶಿಕ್ಷಣ ವಿಮಾ ರಕ್ಷಣೆ ಇದೆ. ಮನಿಮ್ಯಾಕ್ಸಿಮೈಸರ್ ಸೌಲಭ್ಯವೂ ಇದೆ. ಇದರಲ್ಲಿ ಮಗುವಿನ ಉಳಿತಾಯ ಖಾತೆಯಲ್ಲಿನ ಬ್ಯಾಲೆನ್ಸ್ ರೂ. 35,000 ಮೀರಿದರೆ ರೂ. 25,000 ಮೀರಿದ ಮೊತ್ತವು ಮಗುವಿನ ಹೆಸರಿನಲ್ಲಿ 1 ವರ್ಷ 1 ದಿನದ ಫಿಕ್ಸೆಡ್​ ಡೆಪಾಸಿಟ್​ ಆಗಿ ತಾನೇ ತಾನಾಗಿ ವರ್ಗಾವಣೆಯಾಗುತ್ತದೆ. 7 ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ಬ್ಯಾಂಕಿನಿಂದ ಎಟಿಎಂ, ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್‌ನಂತಹ ಸೌಲಭ್ಯಗಳನ್ನು ಒದಗಿಸಲಾಗಿದೆ. ಮಗುವು ಎಟಿಎಮ್‌ಗಳಲ್ಲಿ ರೂ. 2,500ವರೆಗೂ ಹಣವನ್ನು ಹಿಂಪಡೆಯಬಹುದು ಮತ್ತು ದಿನಕ್ಕೆ ರೂ. 10,000 ವ್ಯಾಪಾರ- ವಹಿವಾಟಿನ ಸ್ಥಳಗಳಲ್ಲಿ ಖರ್ಚು ಮಾಡಬಹುದು. ಆದರೆ ಇದಕ್ಕೆ ಪೋಷಕರ ಅನುಮತಿಯು ಬ್ಯಾಂಕ್‌ಗೆ ಬೇಕಾಗುತ್ತದೆ.
Follow us
Srinivas Mata
|

Updated on:May 28, 2021 | 8:47 PM

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಎಚ್​ಡಿಎಫ್​ಸಿ ಬ್ಯಾಂಕ್​ ಲಿಮಿಟೆಡ್​ ಮೇಲೆ 10 ಕೋಟಿ ರೂಪಾಯಿ ದಂಡವನ್ನು ಹಾಕಿದೆ. ಮೇ 27ರಂದು ಈ ಬಗ್ಗೆ ಆದೇಶವನ್ನು ಹೊರಡಿಸಿದ್ದು, ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯ್ದೆ, 1949ರ ಸೆಕ್ಷನ್ 6(2) ಹಾಗೂ ಸೆಕ್ಷನ್ 8ರ ನಿಯಮಾವಳಿಗಳನ್ನು ಮೀರಿದ್ದರಿಂದ ಬ್ಯಾಂಕ್​ಗೆ ಈ ದಂಡ ಹಾಕಲಾಗಿದೆ ಎಂದು ಆರ್​ಬಿಐ ತಿಳಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಕಾಯ್ದೆಯಲ್ಲಿ ಸೆಕ್ಷನ್ 47A (1) (c) ಜತೆಗೆ ಸೆಕ್ಷನ್ 46(4)(i) ಅಡಿ ಇರುವ ಅಧಿಕಾರವನ್ನು ಬಳಸಿಕೊಂಡು, ಎಚ್​ಡಿಎಫ್​ಸಿ ಬ್ಯಾಂಕ್​ನ ಮೇಲೆ ಹತ್ತು ಕೋಟಿ ದಂಡವನ್ನು ಹಾಕಿದ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಬ್ಯಾಂಕ್​ನ ವಾಹನ ಸಾಲದ ಪೋರ್ಟ್​ಫೋಲಿಯೋದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ವಿಷಲ್ ಬ್ಲೋವರ್ ಒಬ್ಬರು ದೂರು ನೀಡಿದ್ದರು. ಅದರ ಆಧಾರದಲ್ಲಿ ಪರಿಶೀಲಿಸಿದಾಗ ತಪ್ಪುಗಳು ಕಂಡುಬಂದಿದ್ದರಿಂದ ಈ ಕ್ರಮವನ್ನು ಕೇಂದ್ರ ಬ್ಯಾಂಕ್ ತೆಗೆದುಕೊಂಡಿದೆ.

ನಿಯಂತ್ರಣ ಸಂಸ್ಥೆಯ ನಿಯಮಾವಳಿಗಳನ್ನು ಅನುಸರಿಸದೆ ಕೊರತೆ ಕಂಡುಬಂದಿರುವ ಆಧಾರದಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಯಾವುದೇ ಗ್ರಾಹಕರ ಜತೆಗೆ ಮಾಡಿಕೊಂಡ ಒಪ್ಪಂದ ಅಥವಾ ವಹಿವಾಟಿನ ಹಿನ್ನೆಲೆಯಲ್ಲಿ ಬ್ಯಾಂಕ್ ವಿರುದ್ಧ ತೆಗೆದುಕೊಂಡ ಕ್ರಮ ಇದಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಚಿಷಲ್ ಬ್ಲೋವರ್ ದೂರಿನ ನಂತರ ಮಾರ್ಕೆಟಿಂಗ್ ಮತ್ತು ಸೇಲ್ ಥರ್ಡ್ ಪಾರ್ಟಿ ಹಣಕಾಸೇತರ ಉತ್ಪನ್ನಗಳ ದಾಖಲಾತಿಗಳ ಪರಿಶೀಲನೆ ಮಾಡಿದ ಮೇಲೆ ಬ್ಯಾಂಕಿಂಗ್ ನಿಯಮಾವಳಿಗೆ ಸೆಕ್ಷನ್​ಗಳನ್ನು ಮೀರಲಾಗಿದೆ ಎಂಬುದು ಗಮನಕ್ಕೆ ಬಂದಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದಕ್ಕೂ ಮುಂಚಿತವಾಗಿ ಎಚ್​ಡಿಎಫ್​ಸಿ ಬ್ಯಾಂಕ್​ಗೆ ನೋಟಿಸ್​ ನೀಡಿ, ಹೀಗೆ ನಿಯಮಾವಳಿಗಳನ್ನು ಮೀರಿರುವುದರಿಂದ ಏಕೆ ದಂಡ ಹಾಕಬಾರದು ಎಂಬುದಕ್ಕೆ ಸಮರ್ಥನೆ ಇದ್ದಲ್ಲಿ ನೀಡಬಹುದು ಎಂದು ತಿಳಿಸಲಾಗಿತ್ತು. ಶೋಕಾಸ್ ನೋಟಿಸ್​ಗೆ ಬ್ಯಾಂಕ್​ನ ಉತ್ತರ, ವೈಯಕ್ತಿಕ ಅಹವಾಲು ಆಲಿಕೆ ವೇಳೆಯಲ್ಲಿನ ಮೌಖಿಕ ಹೇಳಿಕೆ ಮತ್ತು ಸ್ಪಷ್ಟನೆ ಹಾಗೂ ದಾಖಲಾತಿಗಳನ್ನು ಪರಿಶೀಲನೆ ಮಾಡಿದ ಮೇಲೆ ಆರ್​ಬಿಐ ಈ ನಿರ್ಧಾರಕ್ಕೆ ಬಂದು ಹಣಕಾಸು ರೂಪದ ದಂಡವನ್ನು ಹಾಕಲಾಗಿದೆ.

ಇದನ್ನೂ ಓದಿ: Housing loan: ಹೋಮ್ ಲೋನ್ ಪ್ರಮಾಣದಲ್ಲಿ ಹೆಚ್ಚಳ, ಅಲ್ಪಾವಧಿಗೆ ಸಾಲ ತೆಗೆದುಕೊಳ್ಳೋರು ಜಾಸ್ತಿ ಇದ್ಯಾಕೆ ಹೀಗೆ?

(Reserve Bank Of India imposes monetary penalty of Rs 10 crore on HDFC Bank ltd due to non compliance of certain banking regulation provisions)

Published On - 8:46 pm, Fri, 28 May 21

ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ