AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paytm Postpaid Mini: ಪೋಸ್ಟ್​ಪೇಯ್ಡ್​ ಮಿನಿ ಆರಂಭಿಸಿದ ಪೇಟಿಎಂ; ರೂ. 1000 ತನಕ ಸಾಲ ನೀಡುವ ಹೊಸ ಯೋಜನೆ

ಪೇಟಿಎಂನಿಂದ ಪೋಸ್ಟ್​ ಪೇಯ್ಡ್​ ಮಿನಿ ಸೋಮವಾರ ಆರಂಭಿಸಲಾಗಿದೆ. ಬಳಕೆದಾರರಿಗೆ ಇದರಿಂದ ಸಣ್ಣ ಮೊತ್ತದ ಸಾಲವು ಯಾವುದೇ ಬಡ್ಡಿ ಇಲ್ಲದೆ 30 ದಿನಗಳ ಅವಧಿಗೆ ದೊರೆಯುತ್ತದೆ.

Paytm Postpaid Mini: ಪೋಸ್ಟ್​ಪೇಯ್ಡ್​ ಮಿನಿ ಆರಂಭಿಸಿದ ಪೇಟಿಎಂ; ರೂ. 1000 ತನಕ ಸಾಲ ನೀಡುವ ಹೊಸ ಯೋಜನೆ
ಪೇಟಿಎಮ್​ (ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on: Jul 05, 2021 | 6:29 PM

Share

ಡಿಜಿಟಲ್ ಪೇಮೆಂಟ್ಸ್ ಅಂಡ್ ಫೈನಾನ್ಷಿಯಲ್ ಸರ್ವೀಸಸ್ ಪ್ಲಾಟ್​ಫಾರ್ಮ್ ಆದ ಪೇಟಿಎಂನಿಂದ ಸೋಮವಾರ ಪೋಸ್ಟ್​ಪೇಯ್ಡ್​ ಮಿನಿ ಆರಂಭಿಸಲಾಗಿದೆ. Buy Now, Pay Later ಎಂಬ ಸೇವೆಯ ವಿಸ್ತರಣೆ ಭಾಗವಾಗಿ ಇದನ್ನು ಅನಾವರಣಗೊಳಿಸಲಾಗಿದೆ. ಯಾರಿಗೆ ಕೈಗೆಟುಕುವ ರೀತಿಯ ಸಾಲ ಬೇಕಾಗುತ್ತದೋ ಅಂಥವರಿಗೆ ಇದರಿಂದ ಅನುಕೂಲ ಆಗಲಿದೆ. ಸಣ್ಣ ಮೊತ್ತದ ಸಾಲವು ಬಳಕೆದಾರರಿಗೆ ಆರಾಮದಾಯಕವಾಗಿರುತ್ತದೆ. ಜತೆಗೆ ಈಗಿನ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಕುಟುಂಬದ ಖರ್ಚುಗಳು ನಿಭಾಯಿಸಲು ನಗದು ಲಭ್ಯವಾಗುತ್ತದೆ. ಈ ಸೇವೆಯನ್ನು ಆದಿತ್ಯ ಬಿರ್ಲಾ ಫೈನಾನ್ಸ್ ಸಹಯೋಗದಲ್ಲಿ ಆರಂಭಿಸಲಾಗಿದೆ. ಈ ಸಣ್ಣ ಮೊತ್ತದ ಸಾಲದ ಮರುಪಾವತಿಗೆ 30 ದಿನದ ಅವಕಾಶ ಇರುತ್ತದೆ. ಅದರ ಮೇಲೆ ಶೂನ್ಯ ಬಡ್ಡಿ ದರ ಇರಲಿದೆ. ಯಾವುದೇ ವಾರ್ಷಿಕ ಶುಲ್ಕ ಅಥವಾ ಆ್ಯಕ್ಟಿವೇಷನ್ ದರಗಳು ಇಲ್ಲ. ಕನಿಷ್ಠ ಪ್ರಮಾಣದ ಕನ್ವೀನಿಯೆನ್ಸ್ ಶುಲ್ಕ ಮಾತ್ರ ಇರುತ್ತದೆ.

ಪೇಟಿಎಂ ಲೆಂಡಿಂಗ್ ಸಿಇಒ ಭಾವೇಶ್ ಗುಪ್ತಾ ಮಾತನಾಡಿ, ಸಾಲ ಪಡೆಯುವುದಕ್ಕೆ ಹೊಸಬರಾದವರಿಗೆ ನಾವು ಸಹಾಯ ಮಾಡುವುದಕ್ಕೆ ಬಯಸುತ್ತೇವೆ. ಆರ್ಥಿಕ ಶಿಸ್ತು ಅಭಿವೃದ್ಧಿ ಮಾಡಿಕೊಳ್ಳಲು ನೆರವು ನೀಡಲು ಇಚ್ಛಿಸುತ್ತೇವೆ. ಪೋಸ್ಟ್​ಪೇಯ್ಸ್​ ಮೂಲಕವಾಗಿ ದೇಶದ ಆರ್ಥಿಕತೆಯಲ್ಲಿ ಬಳಕೆ ಹೆಚ್ಚಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಹೊಸ ಪೋಸ್ಟ್​ ಪೇಯ್ಡ್​ ಮಿನಿ ಸೇವೆಯು ಬಳಕೆದಾರರಿಗೆ ಸರಿಯಾದ ಸಮಯಕ್ಕೆ ಬಿಲ್​ಗಳನ್ನು ಪಾವತಿಸಿ, ನಗದು ನಿರ್ವಹಣೆಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಪೇಟಿಎಂನಿಂದ ಪೋಸ್ಟ್​ಪೇಯ್ಡ್​ ಮಿನಿ ಆರಂಭಿಸುವುದರೊಂದಿಗೆ 250 ರೂಪಾಯಿಯಿಂದ 1000 ರೂಪಾಯಿ ತನಕ ಸಾಲವನ್ನು ಒದಗಿಸುತ್ತದೆ. ಈಗಾಗಲೇ ಇರುವ ಪೇಟಿಎಂ ಪೋಸ್ಟ್​ಪೇಯ್ಡ್ ಇನ್​​ಸ್ಟಂಟ್ ಸಾಲ ರೂ. 60,000 ಜತೆಗೆ ಈಗ ಹೊಸದಾಗಿ ಸೇರ್ಪಡೆ ಆಗಿದೆ. ಇದರಿಂದ ಬಳಕೆದಾರರ ತಿಂಗಳ ವೆಚ್ಚವನ್ನು ಪಾವತಿಸಲು ಇದರಿಂದ ನೆರವಾಗುತ್ತದೆ. ಮೊಬೈಲ್ ಬಿಲ್, ಡಿಟಿಎಚ್ ರೀಚಾರ್ಜ್, ಗ್ಯಾಸ್ ಸಿಲಿಂಡರ್ ಬುಕ್ಕಿಂಗ್, ಎಲೆಕ್ಟ್ರಿಸಿಟಿ, ನೀರಿನ ಬಿಲ್, ಪೇಟಿಎಂ ಮಾಲ್​ನಲ್ಲಿ ಶಾಪಿಂಗ್​ ಮತ್ತಿತರ ಕೆಲಸಗಳಿಗೆ ನೆರವಾಗುತ್ತದೆ.

ದೇಶದಲ್ಲಿನ ಆನ್​ಲೈನ್- ಆಫ್​ಲೈನ್​ ಮರ್ಚಂಟ್ ಮಳಿಗೆಗಳಲ್ಲಿ ಬಳಕೆದಾರರು ಪಾವತಿಸಬಹುದು. ಪೇಟಿಎಂ ಪೋಸ್ಟ್​ಪೇಯ್ಡ್​ ಸದ್ಯಕ್ಕೆ ದೇಶದ ಸಾವಿರಾರು ಪೆಟ್ರೋಲ್​ ಬಂಕ್​ಗಳಲ್ಲಿ, ಕಿರಾಣಿ ಅಂಗಡಿಗಳಲ್ಲಿ ಅಥವಾ ಫಾರ್ಮಸಿಗಳಲ್ಲಿ, ಹೆಸರಾಂತ ಮಳಿಗೆಗಳು, ಇಂಟರ್​ನೆಟ್​ ಆ್ಯಪ್​ಗಳು ಮತ್ತಿತರ ಕಡೆಗಳಲ್ಲಿ ಸ್ವೀಕರಿಸಲಾಗುತ್ತದೆ. ಭಾರತದ 550ಕ್ಕೂ ಹೆಚ್ಚು ನಗರಗಳಲ್ಲಿ ಪೇಟಿಎಂ ಪೋಸ್ಟ್​ಪೇಯ್ಡ್ ಲಭ್ಯ ಇದೆ.

ಐಪಿಒ ಮೂಲಕವಾಗಿ 22 ಸಾವಿರ ಕೋಟಿ ರೂಪಾಯಿ ಸಂಗ್ರಹಿಸುವುದಕ್ಕೆ ಮೇ ತಿಂಗಳಲ್ಲಿ ಪೇಟಿಎಂ ಮಂಡಳಿಯಿಂದ ತಾತ್ವಿಕ ಒಪ್ಪಿಗೆ ಪಡೆಯಲಾಗಿದೆ. ಒಂದು ವೇಳೆ ಇದು ಯಶಸ್ವಿಯಾದಲ್ಲಿ ಭಾರತೀಯ ಕಂಪೆನಿಗಳಲ್ಲೇ ಅತಿ ದೊಡ್ಡ ಐಪಿಒ ಆಗಲಿದೆ. ಇನ್ನು ಪೇಟಿಎಂ 25ರಿಂದ 30 ಬಿಲಿಯನ್ ಯುಎಸ್​ಡಿ ಮೌಲ್ಯಮಾಪನದ ಗುರಿಯನ್ನು ಇರಿಸಿಕೊಂಡಿದೆ. ಸದ್ಯಕ್ಕೆ ಕಂಪೆನಿಯ ಮೌಲ್ಯಮಾಪನ 16 ಬಿಲಿಯನ್ ಯುಎಸ್​ಡಿ ಇದೆ.

ಇದನ್ನೂ ಓದಿ: ಡಿಜಿಟಲ್ ಇಂಡಿಯಾ ಮಿಷನ್​ಗೆ 6 ವರ್ಷದ ಸಂಭ್ರಮ; ಎಲ್ಲ ವಹಿವಾಟುಗಳ ಮೇಲೂ ಪೇಟಿಎಂನಿಂದ ಕ್ಯಾಶ್​ಬ್ಯಾಕ್ ಆಫರ್

(Paytm launched post paid mini scheme on Monday. Here is the details of the loan scheme)

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್