AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fixed Deposit Benefits: 3ರಿಂದ 5 ವರ್ಷದ ಅವಧಿಯ ಎಫ್​ಡಿ ಮೇಲೆ ಉತ್ತಮ ಬಡ್ಡಿ ನೀಡುವ ಟಾಪ್ 10 ಬ್ಯಾಂಕ್​ಗಳಿವು

3ರಿಂದ 5 ವರ್ಷಗಳ ಅವಧಿಯ ಎಫ್​.ಡಿ. ಮೇಲೆ ಹೆಚ್ಚಿನ ಬಡ್ಡಿ ದರ ನೀಡುವ ದೇಶದ ಟಾಪ್​ ಟೆನ್​ ಬ್ಯಾಂಕ್​ಗಳ ವಿವರ ಇಲ್ಲಿದೆ.

Fixed Deposit Benefits: 3ರಿಂದ 5 ವರ್ಷದ ಅವಧಿಯ ಎಫ್​ಡಿ ಮೇಲೆ ಉತ್ತಮ ಬಡ್ಡಿ ನೀಡುವ ಟಾಪ್ 10 ಬ್ಯಾಂಕ್​ಗಳಿವು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Aug 05, 2021 | 4:38 PM

Share

ಉಳಿತಾಯ ಖಾತೆಗಳು (Savings Account), ಲಿಕ್ವಿಡ್​ ಫಂಡ್​ಗಳು, ಅಲ್ಪಾವಧಿ ನಿಧಿಗಳು (Short Term Funds), ನಿಶ್ಚಿತ ಠೇವಣಿಗಳು (Fixed Deposits), ಫಿಕ್ಸೆಡ್ ಮೆಚ್ಯೂರಿಟಿ ಪ್ಲಾನ್​ಗಳು, ಟ್ರೆಷರಿ ಬಿಲ್‌ಗಳು, ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಅಕೌಂಟ್, ರೆಕರಿಂಗ್ ಡೆಪಾಸಿಟ್ಸ್ (RD) ಇವೇ ಮೊದಲಾದವು ಜನಸಾಮಾನ್ಯರಿಗೆ 3 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯಕ್ಕೆ (ಅಲ್ಪಾವಧಿಯ ಹಣಕಾಸಿನ ಉದ್ದೇಶಗಳಿಗಾಗಿ) ಸೂಕ್ತ ಆಗಬಹುದಾದ ಜನಪ್ರಿಯ ಆಯ್ಕೆಗಳು. ಅತ್ಯುನ್ನತ ರಿಸಲ್ಟ್​ಗೆ ಹೂಡಿಕೆದಾರರು 3 ರಿಂದ 5 ವರ್ಷಗಳವರೆಗೆ ಅಲ್ಪಾವಧಿಯ ಇನ್​ಸ್ಟ್ರುಮೆಂಟ್​ಗಳಲ್ಲಿ ಹೂಡಿಕೆ ಮಾಡುವುದನ್ನು ಶಿಫಾರಸು ಮಾಡಲಾಗುವುದು; ಆದ್ದರಿಂದ ಇಲ್ಲಿ ಲಿಕ್ವಿಡಿಟಿ ಎಂಬ ಅಂಶವನ್ನು ಪರಿಗಣಿಸಿಲ್ಲ. ಆದರೂ ಈ ಲೇಖನದಲ್ಲಿ ಖಚಿತವಾದ ಆದಾಯ ಎಂಬ ಸಂಗತಿಯನ್ನು ಪರಿಗಣಿಸಲಾಗಿದೆ. ಡಿಐಸಿಜಿಸಿ ನೀಡುವ 5 ಲಕ್ಷದವರೆಗೆ ಠೇವಣಿ ಸುರಕ್ಷತೆ (ಡೆಪಾಸಿಟ್ ಮೇಲಿನ ಇನ್ಷೂರೆನ್ಸ್), ಹಿರಿಯ ನಾಗರಿಕರಿಗೆ ಹೆಚ್ಚುವರಿ ಆದಾಯ ಮತ್ತು ಹೂಡಿಕೆದಾರರಿಗೆ ಅಪಾಯವಿಲ್ಲದ ಫಿಕ್ಸೆಡ್​ ಡೆಪಾಸಿಟ್​ಗಳನ್ನು ಆಯ್ಕೆ ಮಾಡಲಾಗಿದೆ. ಸಾಮಾನ್ಯ ಮತ್ತು ಹಿರಿಯ ನಾಗರಿಕರಿಗೆ 3 ರಿಂದ 5 ವರ್ಷಗಳ ನಿಶ್ಚಿತ ಠೇವಣಿಗಳ (2 ಕೋಟಿಗಿಂತ ಕಡಿಮೆ) ಅತ್ಯುತ್ತಮ ಬಡ್ಡಿದರಗಳನ್ನು ನೀಡುತ್ತಿರುವ ಟಾಪ್ 10 ಬ್ಯಾಂಕ್​ಗಳ ಬಗೆಗಿನ ಮಾಹಿತಿ ಇಲ್ಲಿದೆ.

ಸಣ್ಣ ಹಣಕಾಸು ಬ್ಯಾಂಕ್​ಗಳಲ್ಲಿ 3ರಿಂದ 5 ವರ್ಷದ ಅವಧಿಯ ಎಫ್​ಡಿ​ಗಳ ಮೇಲೆ ಉತ್ತಮ ಬಡ್ಡಿ ನೀಡುವಂಥವು: 1. ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 7.25 ಹಾಗೂ ಹಿರಿಯ ನಾಗರಿಕರಿಗೆ- ಶೇ 7.75 2. ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 6.75 ಹಾಗೂ ಹಿರಿಯ ನಾಗರಿಕರಿಗೆ- ಶೇ 7.25 3. ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 6.75 ಹಾಗೂ ಹಿರಿಯ ನಾಗರಿಕರಿಗೆ- ಶೇ 7.25 4. ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 6.75 ಹಾಗೂ ಹಿರಿಯ ನಾಗರಿಕರಿಗೆ- ಶೇ 6.75 5. ಫಿನ್​ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 6.25 ಹಾಗೂ ಹಿರಿಯ ನಾಗರಿಕರಿಗೆ- ಶೇ 6.75 6. ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 6.25 ಹಾಗೂ ಹಿರಿಯ ನಾಗರಿಕರಿಗೆ- ಶೇ 6.75 7. ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 6 ಹಾಗೂ ಹಿರಿಯ ನಾಗರಿಕರಿಗೆ- ಶೇ 6.50 8. ಕ್ಯಾಪಿಟಲ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 6 ಹಾಗೂ ಹಿರಿಯ ನಾಗರಿಕರಿಗೆ- ಶೇ 6.50 (1 ವರ್ಷದಿಂದ 5 ವರ್ಷದೊಳಗೆ) 9. ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 6 ಹಾಗೂ ಹಿರಿಯ ನಾಗರಿಕರಿಗೆ- ಶೇ 6.50 10. ಇಎಸ್​ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 5.75 ಹಾಗೂ ಹಿರಿಯ ನಾಗರಿಕರಿಗೆ- ಶೇ 6.25 (ಮೂಲ: ಬ್ಯಾಂಕ್ ವೆಬ್​ಸೈಟ್​ಗಳು)

ಖಾಸಗಿ ಬ್ಯಾಂಕ್​ಗಳಲ್ಲಿ 3ರಿಂದ 5 ವರ್ಷದ ಅವಧಿಯ ಫಿಕ್ಸೆಡ್​ ಡೆಪಾಸಿಟ್​ಗಳ ಮೇಲೆ ಉತ್ತಮ ಬಡ್ಡಿ ನೀಡುವಂಥವು: 1. ಡಿಸಿಬಿ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 6.50 ಹಾಗೂ ಹಿರಿಯ ನಾಗರಿಕರಿಗೆ- ಶೇ 7 2. ಆರ್​ಬಿಎಲ್​ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 6.30 ಹಾಗೂ ಹಿರಿಯ ನಾಗರಿಕರಿಗೆ- ಶೇ 6.80 3. ಯೆಸ್​ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 6.25 ಹಾಗೂ ಹಿರಿಯ ನಾಗರಿಕರಿಗೆ- ಶೇ 7 4. ಇಂಡಸ್​ಇಂಡ್ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 6 ಹಾಗೂ ಹಿರಿಯ ನಾಗರಿಕರಿಗೆ- ಶೇ 6.50 5. ಐಡಿಎಫ್​ಸಿ ಫಸ್ಟ್​ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 6 ಹಾಗೂ ಹಿರಿಯ ನಾಗರಿಕರಿಗೆ- ಶೇ 6.50 6. ಆಕ್ಸಿಸ್ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 5.40 ಹಾಗೂ ಹಿರಿಯ ನಾಗರಿಕರಿಗೆ- ಶೇ 5.90 7. ಐಸಿಐಸಿಐ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 5.35 ಹಾಗೂ ಹಿರಿಯ ನಾಗರಿಕರಿಗೆ- ಶೇ 5.85 8. ಎಚ್​ಡಿಎಫ್​ಸಿ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 5.30 ಹಾಗೂ ಹಿರಿಯ ನಾಗರಿಕರಿಗೆ- ಶೇ 5.80 9. ಬಂಧನ್ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 5.25 ಹಾಗೂ ಹಿರಿಯ ನಾಗರಿಕರಿಗೆ- ಶೇ 6 10. ಕೊಟಕ್ ಮಹೀಂದ್ರಾ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 5.20 ಹಾಗೂ ಹಿರಿಯ ನಾಗರಿಕರಿಗೆ- ಶೇ 5.70 (ಮೂಲ: ಬ್ಯಾಂಕ್ ವೆಬ್​ಸೈಟ್​ಗಳು)

ಸಾರ್ವಜನಿಕ ವಲಯದ ಬ್ಯಾಂಕ್​ಗಳಲ್ಲಿ 3ರಿಂದ 5 ವರ್ಷದ ಅವಧಿಯ ಫಿಕ್ಸೆಡ್​ ಡೆಪಾಸಿಟ್​ಗಳ ಮೇಲೆ ಉತ್ತಮ ಬಡ್ಡಿ ನೀಡುವಂಥವು: 1. ಯೂನಿಯನ್ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 5.50 ಹಾಗೂ ಹಿರಿಯ ನಾಗರಿಕರಿಗೆ- ಶೇ 6 2. ಕೆನರಾ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 5.50 ಹಾಗೂ ಹಿರಿಯ ನಾಗರಿಕರಿಗೆ- ಶೇ 6 3. ಎಸ್​ಬಿಐ: ಸಾಮಾನ್ಯ ಎಫ್​ಡಿ ದರ- ಶೇ 5.30 ಹಾಗೂ ಹಿರಿಯ ನಾಗರಿಕರಿಗೆ- ಶೇ 5.80 4. ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 5.30 ಹಾಗೂ ಹಿರಿಯ ನಾಗರಿಕರಿಗೆ- ಶೇ 5.80 5. ಐಡಿಬಿಐ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 5.30 ಹಾಗೂ ಹಿರಿಯ ನಾಗರಿಕರಿಗೆ- ಶೇ 5.80 6. ಬ್ಯಾಂಕ್ ಆಫ್ ಬರೋಡ: ಸಾಮಾನ್ಯ ಎಫ್​ಡಿ ದರ- ಶೇ 5.25 ಹಾಗೂ ಹಿರಿಯ ನಾಗರಿಕರಿಗೆ- ಶೇ 5.75 7. ಪಂಜಾಬ್ ನ್ಯಾಷನಲ್ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 5.25 ಹಾಗೂ ಹಿರಿಯ ನಾಗರಿಕರಿಗೆ- ಶೇ 5.75 8. ಇಂಡಿಯನ್ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 5.25 ಹಾಗೂ ಹಿರಿಯ ನಾಗರಿಕರಿಗೆ- ಶೇ 5.75 9. ಇಂಡಿಯನ್ ಓವರ್​ಸೀಸ್ ಬ್ಯಾಂಕ್: ಸಾಮಾನ್ಯ ಎಫ್​ಡಿ ದರ- ಶೇ 5.20 ಹಾಗೂ ಹಿರಿಯ ನಾಗರಿಕರಿಗೆ- ಶೇ 5.70 10. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ: ಸಾಮಾನ್ಯ ಎಫ್​ಡಿ ದರ- ಶೇ 5 ಹಾಗೂ ಹಿರಿಯ ನಾಗರಿಕರಿಗೆ- ಶೇ 5.50 (ಮೂಲ: ಬ್ಯಾಂಕ್ ವೆಬ್​ಸೈಟ್​ಗಳು)

Published On - 4:36 pm, Thu, 5 August 21

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್