Job Loss Insurance: ಉದ್ಯೋಗ ನಷ್ಟಕ್ಕೂ ಇದೆ ವಿಮೆ; ನಿಮಗೆ ಗೊತ್ತಿರಬೇಕಾದ ಮಾಹಿತಿಗಳಿವು

ಒಂದು ವೇಳೆ ಉದ್ಯೋಗ ಕಳೆದುಕೊಂಡರೆ ಹೇಗೆ ಎಂಬ ಆತಂಕ ಕಾಡುತ್ತಿದೆಯಾ? ಇಲ್ಲಿದೆ ಉದ್ಯೋಗ ನಷ್ಟವಾದಲ್ಲಿ ಇರುವ ವಿಮೆ ಬಗೆಗಿನ ಸಂಪೂರ್ಣ ಮಾಹಿತಿ.

Job Loss Insurance: ಉದ್ಯೋಗ ನಷ್ಟಕ್ಕೂ ಇದೆ ವಿಮೆ; ನಿಮಗೆ ಗೊತ್ತಿರಬೇಕಾದ ಮಾಹಿತಿಗಳಿವು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Aug 11, 2021 | 11:55 PM

ಕೊವಿಡ್-19 ಮತ್ತು ಆರ್ಥಿಕ ಬಿಕ್ಕಟ್ಟಿನಿಂದಾಗಿ ಕೆಲಸದಲ್ಲಿ ಸ್ಥಿರತೆ ಎಂಬುದು ಹಳೆಯ ಪರಿಕಲ್ಪನೆ ಎಂಬಂತೆ ಆಗಿದೆ. ಬಹುತೇಕವಾಗಿ ಸಂಬಳ ಪಡೆಯುವ ವರ್ಗವು ಉದ್ಯೋಗ ನಷ್ಟ ಮತ್ತು ವೇತನ ಕಡಿತದ ಭಯದಲ್ಲಿ ನಿರಂತರವಾಗಿ ಬಳಲುವಂತಾಗಿದೆ. ಹಿಂದೆಂದೂ ಕಾಣದ ಇಂತಹ ಅನಿಶ್ಚಿತತೆಯ ನಡುವೆ ಉದ್ಯೋಗ ನಷ್ಟ ವಿಮೆಯು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸುವ ಅತ್ಯುತ್ತಮ ವಿಧಾನಗಳಲ್ಲಿ ಒಂದು ಎಂಬುದು ನಿಮ್ಮ ಗಮನದಲ್ಲಿ ಇರಲಿ. ಸೆಂಟರ್ ಫಾರ್ ಮಾನಿಟರಿಂಗ್ ಆಫ್ ಇಂಡಿಯನ್ ಎಕಾನಮಿ (CMIE) ಪ್ರಕಟಿಸಿದ ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದ ನಿರುದ್ಯೋಗ ದರ ಆಗಸ್ಟ್ 8ಕ್ಕೆ ಕೊನೆಗೊಳ್ಳುವ ವಾರಕ್ಕೆ ಶೇ 7.24ಕ್ಕೆ ಏರಿಕೆಯಾಗಿದೆ.

ಅರ್ಹತಾ ಮಾನದಂಡ ಉದ್ಯೋಗ ವಿಮಾ ಪಾಲಿಸಿಗಳು ಕೆಲವು ಅರ್ಹತಾ ಮಾನದಂಡಗಳನ್ನು ಅನುಸರಿಸುತ್ತವೆ. ಬಹುಮುಖ್ಯ ಮಾನದಂಡ ಏನೆಂದರೆ, ಆತ/ಆಕೆ ನೋಂದಾಯಿತ ಕಂಪೆನಿಯ ಉದ್ಯೋಗಿಯಾಗಿರಬೇಕು.

ಕವರ್ ಉದ್ಯೋಗ ವಿಮೆ ಪಾಲಿಸಿಯು ಪಾಲಿಸಿದಾರರಿಗೆ ಮತ್ತು ಕುಟುಂಬಕ್ಕೆ ಭದ್ರತೆ ಒದಗಿಸುತ್ತದೆ. ಅದು ಎಂಥ ಸಂದರ್ಭದಲ್ಲಿ ಅಂದರೆ, ಆತ ಅಥವಾ ಆಕೆ ಕೆಲಸ ಕಳೆದುಕೊಂಡರೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಉದ್ಯೋಗ ನಷ್ಟದ ನಂತರ, ಪಾಲಿಸಿದಾರರು ನಿರ್ದಿಷ್ಟ ಅವಧಿಗೆ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ.

ಭಾರತದಲ್ಲಿ, ಉದ್ಯೋಗ ನಷ್ಟ ವಿಮೆಯನ್ನು ಸ್ಟ್ಯಾಂಡ್ ಅಲೋನ್ ವಿಮಾ ಪಾಲಿಸಿಯಾಗಿ ಒದಗಿಸಿಲ್ಲ. ಇದನ್ನು ರೈಡರ್ ಪ್ರಯೋಜನವಾಗಿ ಪಡೆಯಬಹುದು. ಸಾಮಾನ್ಯವಾಗಿ, ಉದ್ಯೋಗ ನಷ್ಟ ವಿಮೆಯು ಆರೋಗ್ಯ ವಿಮೆ ಅಥವಾ ಗೃಹ ವಿಮಾ ಪಾಲಿಸಿಯೊಂದಿಗೆ ಬರುತ್ತದೆ.

ಪ್ರೀಮಿಯಂ ಸಾಮಾನ್ಯವಾಗಿ, ಉದ್ಯೋಗ ವಿಮೆಗೆ ಪ್ರೀಮಿಯಂ ಮಾಸ್ಟರ್ ಪಾಲಿಸಿಯ ಪ್ರೀಮಿಯಂನ ಮೇಲೆ, ಒಟ್ಟು ವ್ಯಾಪ್ತಿಯ ಶೇ 3 ರಿಂದ ಶೇ 5ರಲ್ಲಿ ಇರುತ್ತದೆ.

ಯಾವುದು ಒಳಗೊಳ್ಳಲ್ಲ ರೀ ಅಶ್ಯೂರೆನ್ಸ್ ಹೊರತಾಗಿಯೂ ಉದ್ಯೋಗ ವಿಮೆ ಬಹಳ ಸೀಮಿತ ವ್ಯಾಪ್ತಿಯನ್ನು ಒದಗಿಸುತ್ತದೆ. ಹೆಚ್ಚಿನ ಕಂಪೆನಿಗಳು ನಿವ್ವಳ ಆದಾಯದ ಶೇ 50ರಷ್ಟನ್ನು ನೀಡುತ್ತವೆ. ಈ ಕೆಳಗಿನ ಕೆಲವು ಸಾಮಾನ್ಯ ಪ್ರಕರಣಗಳಲ್ಲಿ ಉದ್ಯೋಗ ವಿಮೆ ಕವರೇಜ್ ಸಿಗುವುದಿಲ್ಲ:

– ಸ್ವ ಉದ್ಯೋಗಿ ಅಥವಾ ನಿರುದ್ಯೋಗಿ ವ್ಯಕ್ತಿಗೆ

– ಪ್ರೊಬೇಷನರಿ ಅವಧಿಯಲ್ಲಿನ ನಿರುದ್ಯೋಗಕ್ಕೆ

– ಆರಂಭಿಕ ನಿವೃತ್ತಿ ಅಥವಾ ಸ್ವಯಂಪ್ರೇರಿತ ರಾಜೀನಾಮೆ

– ಈಗಾಗಲೇ ಇರುವ ಅನಾರೋಗ್ಯ ಸಮಸ್ಯೆಯಿಂದಾಗಿ ಉದ್ಯೋಗ ನಷ್ಟವಾದಲ್ಲಿ

– ಅಮಾನತು, ವಜಾ, ಕಡಿಮೆ ಕಾರ್ಯಕ್ಷಮತೆ ಅಥವಾ ವಂಚನೆ ಕಾರಣಕ್ಕೆ ಕೆಲಸದಿಂದ ತೆಗೆದಲ್ಲಿ

ನವೀಕರಣ ಪ್ರಕ್ರಿಯೆ ಉದ್ಯೋಗ ನಷ್ಟ ವಿಮೆ ರೈಡರ್ ಅನುಕೂಲವಾಗಿ ಲಭ್ಯವಿರುವುದರಿಂದ ಪಾಲಿಸಿಯನ್ನು ನವೀಕರಿಸಲು ಪ್ರತ್ಯೇಕ ಪ್ರಕ್ರಿಯೆ ಇಲ್ಲ. ನೀವು ಒಮ್ಮೆ ಮುಖ್ಯ ಪಾಲಿಸಿಯನ್ನು ನವೀಕರಿಸಿದರೆ ಅದು ಸ್ವಯಂಚಾಲಿತವಾಗಿ ನವೀಕರಣ ಆಗುತ್ತದೆ.

ಇದನ್ನೂ ಓದಿ: Insurance On Deposits: ಬ್ಯಾಂಕ್​ಗಳ ಹಣಕಾಸು ನಿರ್ಬಂಧ, ವಂಚನೆಯಾದಲ್ಲಿ 90 ದಿನದೊಳಗೆ 5 ಲಕ್ಷ ರೂ. ಇನ್ಷೂರೆನ್ಸ್

ಇದನ್ನೂ ಓದಿ: LPG cylinder accident insurance: ಅಡುಗೆ ಅನಿಲ ಸಿಲಿಂಡರ್ ಅಪಘಾತಕ್ಕೆ ಡೀಲರ್ ಮೂಲಕವೇ ಸಿಗುತ್ತೆ ಇನ್ಷೂರೆನ್ಸ್

(Here Is The Must Know Details About Job Loss Insurance)

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್