AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LPG cylinder accident insurance: ಅಡುಗೆ ಅನಿಲ ಸಿಲಿಂಡರ್ ಅಪಘಾತಕ್ಕೆ ಡೀಲರ್ ಮೂಲಕವೇ ಸಿಗುತ್ತೆ ಇನ್ಷೂರೆನ್ಸ್

ಎಲ್​ಪಿಜಿ ಅಡುಗೆ ಅನಿಲ ಸಿಲಿಂಡರ್ ಅಪಘಾತವೇನಾದರೂ ಸಂಭವಿಸಿದರೆ ಮೃತ ವ್ಯಕ್ತಿಯ ಕುಟುಂಬಕ್ಕೆ 6 ಲಕ್ಷ ರೂ. ಇನ್ಷೂರೆನ್ಸ್ ಮತ್ತು ವೈದ್ಯಕೀಯ ವೆಚ್ಚಕ್ಕೆ ಪ್ರತ್ಯೇಕವಾಗಿ 2 ಲಕ್ಷ ರೂ. ದೊರೆಯುತ್ತದೆ.

LPG cylinder accident insurance: ಅಡುಗೆ ಅನಿಲ ಸಿಲಿಂಡರ್ ಅಪಘಾತಕ್ಕೆ ಡೀಲರ್ ಮೂಲಕವೇ ಸಿಗುತ್ತೆ ಇನ್ಷೂರೆನ್ಸ್
ಸಾಂದರ್ಭಿಕ ಚಿತ್ರ
Srinivas Mata
|

Updated on: May 22, 2021 | 1:58 PM

Share

ಎಲ್​ಪಿಜಿ ಅಡುಗೆ ಅನಿಲ ಸಿಲಿಂಡರ್​ನ ಅಪಾಯದ ಬಗ್ಗೆ ಬಳಕೆದಾರರಲ್ಲಿ ಒಂದು ಜಾಗೃತಿ ಇದ್ದೇ ಇದೆ. ಒಂದು ವೇಳೆ ಅನಿಲ ಸೋರಿಕೆಯಾದಲ್ಲಿ ತಕ್ಷಣವೇ ಮಾಡಬೇಕಾದದ್ದು ಏನು ಎಂಬ ಬಗ್ಗೆ ಪ್ರಾಥಮಿಕವಾದ ಮಾಹಿತಿ ಇದೆ. ಆದರೆ ನಿಜವಾಗಿಯೂ ಬಹಳ ಮಂದಿಗೆ ಗೊತ್ತಾಗಬೇಕಾದದ್ದು ಏನೆಂದರೆ, ಎಲ್​ಪಿಜಿ ಅಡುಗೆ ಅನಿಲ ಸಿಲಿಂಡರ್ ಬಳಸುವ ಗ್ರಾಹಕರಿಗೆ ವೈದ್ಯಕೀಯ ವೆಚ್ಚದ ಕವರೇಜ್ 2 ಲಕ್ಷ ರೂಪಾಯಿ ಜತೆಗೆ ಪ್ರತ್ಯೇಕವಾಗಿ 6 ಲಕ್ಷ ರೂಪಾಯಿ ಅಪಘಾತ ವಿಮೆ ಕವರ್ ಆಗುತ್ತದೆ. ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್​ನಂಥ ಸರ್ಕಾರಿ ಸ್ವಾಮ್ಯದ ತೈಲ ಮಾರ್ಕೆಟಿಂಗ್ ಕಂಪೆನಿಗಳು ಮತ್ತು ಆ ಕಂಪೆನಿಗಳ ಡೀಲರ್​ಗಳು ಎಲ್​ಪಿಜಿ ಅನಿಲ ಇನ್ಷೂರೆನ್ಸ್​ ಪಾಲಿಸಿ ಆರಿಸಿಕೊಳ್ಳುತ್ತಾರೆ. ಅದು ಗುಂಪು ಇನ್ಷೂರೆನ್ಸ್ ಕವರ್ ಹೊಂದಿರುತ್ತದೆ.

ಎಲ್​ಪಿಜಿಗೆ ಸಂಬಂಧಿಸಿದ ಅಪಘಾತಗಳಲ್ಲಿ ತೊಂದರೆಗೆ ಈಡಾಗುವ ವ್ಯಕ್ತಿಗೆ ವೇಗವಾಗಿ ಪರಿಹಾರ ದೊರೆಯಲಿ ಎಂಬ ಕಾರಣಕ್ಕೆ ಪಬ್ಲಿಕ್ ಲಯಬಿಲಿಟಿ ಪಾಲಿಸಿ ಫಾರ್ ಆಯಿಲ್ ಇಂಡಸ್ಟ್ರೀಸ್ ಅಡಿಯಲ್ಲಿ ಸಮಗ್ರ ಇನ್ಷೂರೆನ್ಸ್ ಪಾಲಿಸಿ ತರಲಾಗಿದೆ. ಇದಕ್ಕಾಗಿ ಕಂಪೆನಿಗಳು ಮತ್ತು ಡೀಲರ್​ಗಳು ಪ್ರೀಮಿಯಂ ಪಾವತಿಸುತ್ತಾರೆ. ಗ್ರಾಹಕರು ಏನನ್ನೂ ಪಾವತಿಸುವ ಅಗತ್ಯ ಇಲ್ಲ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಿಂದ 2019ರ ಜುಲೈನಲ್ಲಿ ರಾಜ್ಯಸಭೆಗೆ ಒದಗಿಸಿದ ಮಾಹಿತಿ ಪ್ರಕಾರ, ಎಲ್​ಪಿಜಿ ಸಿಲಿಂಡರ್​ಗಳಿಗೆ ಸಂಬಂಧಿಸಿದ ಅಪಘಾತಗಳಲ್ಲಿ ಎಲ್ಲ ಸಂತ್ರಸ್ತರಿಗೂ ಈ ಕವರೇಜ್ ಉಚಿತವಾಗಿ ದೊರೆಯುತ್ತದೆ.

ಎಲ್​ಪಿಜಿ ಸಿಲಿಂಡರ್​ ಅಪಘಾತದಿಂದ ಮೃತಪಟ್ಟಲ್ಲಿ ಈ ಪಾಲಿಸಿಯಲ್ಲಿ 6 ಲಕ್ಷ ರೂಪಾಯಿ ಕವರೇಜ್ ದೊರೆಯುತ್ತದೆ. ಇದರ ಹೊರತುಪಡಿಸಿ ಒಂದು ಕುಟುಂಬಕ್ಕೆ 30 ಲಕ್ಷ ರೂಪಾಯಿ ತನಕ ಹಾಗೂ ಒಬ್ಬ ವ್ಯಕ್ತಿಗೆ ಗರಿಷ್ಠ ರೂ. 2 ಲಕ್ಷದ ತನಕ ವೈದ್ಯಕೀಯ ವೆಚ್ಚ ಕವರೇಜ್ ಆಗುತ್ತದೆ. ಒಂದು ವೇಳೆ ಆಸ್ತಿ ಹಾನಿ ಆಗಿದ್ದಲ್ಲಿ, ಅಧಿಕೃತವಾದ ಗ್ರಾಹಕರು ತಮ್ಮ ಆ ಬಗ್ಗೆ ದಾಖಲಿಸಿದ್ದಲ್ಲಿ ಗರಿಷ್ಠ 2 ಲಕ್ಷ ರೂಪಾಯಿ ದೊರೆಯುತ್ತದೆ.

ಸಂತ್ರಸ್ತರು ಅಥವಾ ಸಂತ್ರಸ್ತರ ಕುಟುಂಬದವರು ಎಲ್​ಪಿಜಿ ಡೀಲರ್​ಗೆ ಬರವಣಿಗೆಯಲ್ಲಿ ವಿಚಾರವನ್ನು ತಿಳಿಸಬೇಕು. ಎಲ್​ಪಿಜಿ ಗ್ರಾಹಕರು/ಸಂತ್ರಸ್ತರು ಬೇರೆ ಯಾರನ್ನೂ ಎಲ್​ಪಿಜಿ ಇನ್ಷೂರೆನ್ಸ್ ವಿಷಯದಲ್ಲಿ ಸಂಪರ್ಕಿಸುವ ಅಗತ್ಯ ಇಲ್ಲ. ಆ ನಂತರ ತೈಲ ಮಾರ್ಕೆಟಿಂಗ್ ಕಂಪೆನಿಗಳನ್ನು ಮತ್ತು ಇನ್ಷೂರೆನ್ಸ್ ಕಂಪೆನಿಗಳನ್ನು ಡೀಲರ್ ಸಂಪರ್ಕಿಸುತ್ತಾರೆ. ತೈಲ ಮಾರ್ಕೆಟಿಂಗ್ ಕಂಪೆನಿ ಮತ್ತು ಇನ್ಷೂರೆನ್ಸ್ ಪರವಾಗಿ ಪರಿಶೀಲನೆ ನಡೆಸಲಾಗುತ್ತದೆ. ಆ ನಂತರ ಕ್ಲೇಮ್ ನಿಯಮಾವಳಿಗಳನ್ನು ಪೂರ್ತಿ ಮಾಡಬೇಕಾಗುತ್ತದೆ.

ಈ ಕ್ಲೇಮ್ ವಿವಿಧ ಹಂತಗಳನ್ನು ದಾಟಿ, ಮೃತರ ಅಥವಾ ಬಾಧಿತ ಕುಟುಂಬದ ಬ್ಯಾಂಕ್ ಖಾತೆಗೆ ಹಣ ಜಮೆ ಆಗುವುದಕ್ಕೆ ಕನಿಷ್ಠ 10ರಿಂದ 14 ವರ್ಕಿಂಗ್ ಡೇಸ್ ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ: How to book gas cylinder: ವಾಟ್ಸಾಪ್ ಮೂಲಕ ಇಂಡೇನ್, ಎಚ್​ಪಿ, ಭಾರತ್ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಹೇಗೆ?

(LPG customers covered under insurance in case of accident by cylinder. Premium borne by dealers and OMC)

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್