How to book gas cylinder: ವಾಟ್ಸಾಪ್ ಮೂಲಕ ಇಂಡೇನ್, ಎಚ್​ಪಿ, ಭಾರತ್ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಹೇಗೆ?

ವಾಟ್ಸಾಪ್ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡುವುದು ಹೇಗೆ ಎಂಬ ಬಗ್ಗೆ ಹಂತಹಂತವಾದ ವಿವರಣೆ ಈ ಲೇಖನದಲ್ಲಿದೆ. ಬಹಳ ಸುಲಭವಾಗಿ ಈ ಮೂಲಕ ಸಿಲಿಂಡರ್ ಬುಕ್ ಮಾಡಬಹುದು.

How to book gas cylinder: ವಾಟ್ಸಾಪ್ ಮೂಲಕ ಇಂಡೇನ್, ಎಚ್​ಪಿ, ಭಾರತ್ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಹೇಗೆ?
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: Apr 13, 2021 | 1:29 PM

ನಿಮ್ಮ ಮನೆಗೆ ಅಡುಗೆ ಅನಿಲ ಸಿಲಿಂಡರ್ ಬುಕ್ ಮಾಡಬೇಕಾ? ಇದೀಗ ಬಹಳ ಸಲೀಸಾಗಿದೆ ಅನ್ನೋ ಸಂಗತಿ ನಿಮಗೆ ಗೊತ್ತಾ? ಎಲ್​ಪಿಜಿ ಸಿಲಿಂಡರ್​ಗಳ ಗ್ರಾಹಕರು ಈಗ ವಾಟ್ಸಾಪ್ ಮತ್ತು ಎಸ್ಸೆಮ್ಮೆಸ್ ಮೂಲಕ ಬುಕ್ ಮಾಡಬಹುದು. ಗ್ರಾಹಕರಿಗೆ ಅನುಕೂಲ ಆಗಲಿ ಅನ್ನೋ ಉದ್ದೇಶಕ್ಕಾಗಿಯೇ ಕಳೆದ ವರ್ಷ ಗ್ಯಾಸ್ ಕಂಪೆನಿಗಳು ಆನ್​ಲೈನ್ ಪ್ರಕ್ರಿಯೆಯನ್ನು ಅಭಿವೃದ್ಧಿ ಮಾಡಿದವು. ಗ್ಯಾಸ್ ಏಜೆನ್ಸಿಗಳು ಅಥವಾ ಡೀಲರ್​ಗಳಿಗೆ ತಿಳಿಸುವ ಮೂಲಕ, ವೆಬ್​ಸೈಟ್​ಗೆ ಭೇಟಿ ನೀಡಿ, ಸಂಸ್ಥೆಯ ವಾಟ್ಸಾಪ್ ಸಂಖ್ಯೆಗೆ ಟೆಕ್ಸ್ಟ್ ಸಂದೇಶ ಕಳುಹಿಸುವ ಮೂಲಕ ಕೂಡ ಎಲ್​ಪಿಜಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು. ಆದ್ದರಿಂದ ಇಂಡೇನ್, ಎಚ್​ಪಿ ಮತ್ತು ಭಾರತ್ ಗ್ರಾಹಕರು ವಾಟ್ಸಾಪ್ ಮೂಲಕ ಹೇಗೆ ಸಿಲಿಂಡರ್ ಬುಕ್ ಮಾಡುತ್ತಾರೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಇಂಡೇನ್ ಗ್ರಾಹಕರು ಇಂಡೇನ್ ಗ್ರಾಹಕರು 7718955555ಕ್ಕೆ ಕರೆ ಮಾಡುವ ಮೂಲಕ ಎಲ್​​ಪಿಜಿ ಸಿಲಿಂಡರ್ ಬುಕ್ ಮಾಡಬಹುದು. ಇದರ ಜತೆಗೆ ವಾಟ್ಸಾಪ್ ಬಳಸಿ REFILL ಅಂತ ಟೈಪ್ ಮಾಡಿ, ಅದನ್ನು ವಾಟ್ಸಾಪ್ ಸಂಖ್ಯೆ 7588888824ಕ್ಕೆ ಕಳುಹಿಸಬೇಕು. ಗ್ರಾಹಕರು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಾತ್ರ ಸಂದೇಶವನ್ನು ಕಳುಹಿಸಬೇಕು.

ಎಚ್​ಪಿ ಗ್ರಾಹಕರು ವಾಟ್ಸಾಪ್ ಮೂಲಕ 9222201122ಕ್ಕೆ ಸಂದೇಶ ಕಳುಹಿಸುವ ಮೂಲಕ ಎಚ್​ಪಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು. ಇನ್ನು ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಈ ಮೇಲ್ಕಂಡ ವಾಟ್ಸಾಪ್ ಸಂಖ್ಯೆಗೆ BOOK ಎಂದು ಟೈಪ್ ಮಾಡಿ, ಕಳುಹಿಸಿದರೂ ಸಾಕು. ಈ ಸಂಖ್ಯೆಯು ಹಲವು ಬಗೆಯ ಇತರ ಸೇವೆಗಳನ್ನು ಸಹ ಒದಗಿಸುತ್ತದೆ. ಎಲ್​ಪಿಜಿ ಕೋಟಾ, ಎಲ್​ಪಿಜಿ ಐಡಿ, ಸಬ್ಸಿಡಿ ಮತ್ತಿತರ ಮಾಹಿತಿಗಳನ್ನು ಪಡೆಯಬಹುದು.

ಭಾರತ್ ಗ್ರಾಹಕರು ಭಾರತ್ ಗ್ಯಾಸ್ ಗ್ರಾಹಕರು BOOK ಅಥವಾ 1 ಅಂತ ಟೈಪ್ ಮಾಡಿ 1800224344 ಸಂಖ್ಯೆಗೆ ತಮ್ಮ ನೋಂದಾಯಿತ ಸಂಖ್ಯೆಯಿಂದ ಸಂದೇಶ ಕಳುಹಿಸಬೇಕು. ಆ ನಂತರ ಗ್ಯಾಸ್ ಏಜೆನ್ಸಿಯಿಂದ ಬುಕ್ಕಿಂಗ್ ಮನವಿಯನ್ನು ಸ್ವೀಕರಿಸಲಾಗುತ್ತದೆ. ಮತ್ತು ವಾಟ್ಸಾಪ್ ಸಂಖ್ಯೆಗೆ ಖಾತ್ರಿ ಸಂದೇಶ ಬರುತ್ತದೆ.

ಇದನ್ನೂ ಓದಿ: ಮುಖ ದೃಢೀಕರಣದ ಮೂಲಕವೂ ಈಗ ಆಧಾರ್​ ಕಾರ್ಡ್​ ಡೌನ್​ಲೋಡ್ ಸಾಧ್ಯ; ಯುಐಡಿಎಐ ವೆಬ್​ಸೈಟ್​ಗೆ ಹೋಗಿ ಈ ಕ್ರಮಗಳನ್ನು ಅನುಸರಿಸಿ

(How to book LPG gas cylinder through WhatsApp? Here are the step-by-step details.)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ