AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರಳ ಸುಂದರಿ ದಿಯಾ ಮಿರ್ಜಾಳ ಫ್ಯಾಶನ್ ಸ್ಟೇಟ್​ಮೆಂಟ್​ ಸಹ ಸರಳ ಆದರೆ ಅಷ್ಟೇ ಸುಂದರ!

ಸರಳ ಸುಂದರಿ ದಿಯಾ ಮಿರ್ಜಾಳ ಫ್ಯಾಶನ್ ಸ್ಟೇಟ್​ಮೆಂಟ್​ ಸಹ ಸರಳ ಆದರೆ ಅಷ್ಟೇ ಸುಂದರ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 17, 2021 | 11:56 PM

ದಿಯಾ ಜರ್ಮನ್ ತಂದೆ ಫ್ರ್ಯಾಂಕ್ ಹ್ಯಾಂಡ್ರಿಕ್ ಮತ್ತು ಬೆಂಗಾಲೀ ತಾಯಿ ದೀಪಾ ಅವರ ಸಂತಾನ. ಹ್ಯಾಂಡ್ರಿಕ್ ರನ್ನು ಡಿವೋರ್ಸ್ ಮಾಡಿದ ನಂತರ ದೀಪಾ ಅವರು ಅಹ್ಮದ್ ಮಿರ್ಜಾ ಹೆಸರಿನ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದರು. ಮಲತಂದೆಯ ಸರ್ನೇಮ್ ಅನ್ನೇ ದಿಯಾ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

ವಿಡಿಯೋನಲ್ಲಿರುವ ಸುಂದರಿ ಯಾರೆಂದು ನಿಮಗೆ ಗೊತ್ತಿದೆ. ಬಾಲಿವುಡ್ ನಲ್ಲಿ ನಟಿಯಾಗುವ ಮೊದಲು ಹೈದರಾಬಾದಿನ ದಿಯಾ ಮಿರ್ಜಾ, ಫೆಮಿನಾ ಮಿಸ್ ಇಂಡಿಯ ಆಗಿದ್ದರು. ದಿಯಾರದ್ದು ಸರಳ ಸೌಂದರ್ಯವಾದರೂ ಮೊದಲ ನೋಟದಲ್ಲೇ ಗಮನ ಸೆಳೆಯುಂಥ ರೂಪಚದ ಒಡತಿ. ಮಾಡೆಲ್ ಆಗಿ ಹೆಸರು ಮಾಡಿದ ಬಳಿಕ ಬಾಲಿವುಡ್ ಸೈ ಅನಿಸಿಕೊಂಡವರು ದಿಯಾ. ಸರಳ ಸೌಂದರ್ಯದ ಹಾಗೆ ಸರಳ ಉಡುಗೆ-ತೊಡುಗೆ ತನ್ನ ಸ್ಟೈಲ್ ಸ್ಟೇಟ್ಮೆಂಟ್ ಅಂತ ಆಕೆ ಹೇಳುತ್ತಾರೆ. ಎರಡು ದಶಕಗಳಿಗಿಂತಲೂ ಹೆಚ್ಚಿನ ಸಮಯದಿಂದ ಫ್ಯಾಶನ್ ಮತ್ತು ಸಿನಿಮಾ ಪ್ರಪಂಚದಲ್ಲಿರುವ ದಿಯಾಗೆ ಡ್ರೆಸ್ ಸೆನ್ಸ್ ಬೇರೆಯವರಿಗಿಂತ ತುಸು ಜಾಸ್ತಿಯೇ ಇದೆ ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು.

ಅಸಲಿಗೆ ದಿಯಾ ಜರ್ಮನ್ ತಂದೆ ಫ್ರ್ಯಾಂಕ್ ಹ್ಯಾಂಡ್ರಿಕ್ ಮತ್ತು ಬೆಂಗಾಲೀ ತಾಯಿ ದೀಪಾ ಅವರ ಸಂತಾನ. ಹ್ಯಾಂಡ್ರಿಕ್ ರನ್ನು ಡಿವೋರ್ಸ್ ಮಾಡಿದ ನಂತರ ದೀಪಾ ಅವರು ಅಹ್ಮದ್ ಮಿರ್ಜಾ ಹೆಸರಿನ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದರು. ಮಲತಂದೆಯ ಸರ್ನೇಮ್ ಅನ್ನೇ ದಿಯಾ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

ದಿಯಾ ಮಿರ್ಜಾಗೆ ಈಗ 40 ರ ಪ್ರಾಯ. ಈ ವಯಸ್ಸಿನಲ್ಲಿ ಆಕೆ ತನ್ನ ಮೊದಲ ಮಗುವಿನ ತಾಯಿಯಾಗಿದ್ದಾರೆ. 35 ರ ನಂತರ ಮಹಿಳೆಯರು ಮೊದಲ ಬಾರಿಗೆ ಗರ್ಭಿಣಿಯಾದರೆ, ತೊಂದರೆಗಳು ಜಾಸ್ತಿ ಎಂದು ವೈದ್ಯಲೋಕ ಹೇಳುತ್ತದೆ. ದಿಯಾ ಅವರಿಗೆ ಅದೇ ಅಯಿತು. ಗರ್ಭಾವಸ್ಥೆ ಪೂರ್ತಿಗೊಳ್ಳುವ ಮೊದಲೇ ಆಕೆ ಜುಲೈನಲ್ಲಿ ಗಂಡುಮಗುವಿಗೆ ಜನ್ಮ ನೀಡಿದರು. ಮಗುವನ್ನು ಎರಡು ತಿಂಗಳು ಕಾಲ ಎನ್ ಐ ಸಿ ಯುನಲ್ಲಿಡಬೇಕಾಗಿತ್ತು. ಈಗ ಅವನು ಅಮ್ಮನ ಮಡಿಲು ಸೇರಿದ್ದಾನೆ.

ಅಂದಹಾಗೆ, ದಿಯಾಗೆ ಇದು ಎರಡನೇ ಮದುವೆ. ಬಿಸಿನೆಸ್ಮನ್ ವೈಭವ್ ರೇಖಿಯನ್ನು ಆಕೆ ಮದುವೆಯಾಗಿದ್ದಾರೆ. ದಿಯಾಗಿಂತ 5 ವರ್ಷ ಚಿಕ್ಕವರಾಗಿರುವ ರೇಖಿಗೆ ಮೊದಲ ಪತ್ನಿಯಿಂದ ಒಬ್ಬ ಮಗಳಿದ್ದಾಳೆ. ಬಿಸಿನೆಸ್ ಪಾಲುದಾರರಾಗಿದ್ದ ಸಾಹಿಲ್ ಸಂಘಾ ದಿಯಾ ಮೊದಲ ಗಂಡ. 2014 ರಲ್ಲಿ ಅವರು ಮದುವೆಯಾಗಿ 2019 ರಲ್ಲಿ ವಿಚ್ಛೇದನ ಪಡೆದುಕೊಂಡರು.

ದಿಯಾ, ರೇಖಿಯನ್ನು ಮದುವೆಯಾಗಿದ್ದು ಫೆಬ್ರುವರಿ 2021 ರಲ್ಲಿ. ಏಪ್ರಿಲ್ ನಲ್ಲಿ ತಾನು ಗರ್ಭಿಣಿ ಎಂದು ಆಕೆ ಹೇಳಿಕೊಂಡಿದ್ದರು. ತನ್ನ ಮೊದಲ ಹೆಂಡತಿಯ ಮಗುವನ್ನು ದಿಯಾ ತನ್ನ ಸ್ವಂತ ಮಗುವಿನಂತೆ ಪ್ರೀತಿಸುತ್ತಾಳೆ ಎಂದು ರೇಖಿ ಹೇಳಿದ್ದಾರೆ.

ಇದನ್ನೂ ಓದಿ:  ‘ನಾನು ಉಳಿಯುವ ರೀತಿ ಕಾಣುತ್ತಿಲ್ಲ’; ಹೊಸ ವಿಡಿಯೋ ಮಾಡಿ ಹರಿಬಿಟ್ಟ ನಟಿ ವಿಜಯಲಕ್ಷ್ಮಿ