ಭವ್ಯ ಐತಿಹಾಸಿಕ ಹಿನ್ನೆಲೆಯ ದಾವಣಗೆರೆಯಲ್ಲಿರುವ ದುರ್ಗಾಂಬಿಕಾ ದೇವಸ್ಥಾನ ಭಕ್ತರಿಗೆ ಒಂದು ಪುಣ್ಯಕ್ಷೇತ್ರ

ಭವ್ಯ ಐತಿಹಾಸಿಕ ಹಿನ್ನೆಲೆಯ ದಾವಣಗೆರೆಯಲ್ಲಿರುವ ದುರ್ಗಾಂಬಿಕಾ ದೇವಸ್ಥಾನ ಭಕ್ತರಿಗೆ ಒಂದು ಪುಣ್ಯಕ್ಷೇತ್ರ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 17, 2021 | 8:30 PM

ದುರ್ಗಾಂಬಿಕಾ ದೇವಾಲಯಕ್ಕೆ 200 ವರ್ಷಗಳ ಇತಿಹಾಸವಿದೆ. ದುಗಟ್ಟಿ ಹೆಸರಿನ ಗ್ರಾಮವೊಂದರಿಂದ ಒಂದು ಕಪ್ಪುಕಲ್ಲನ್ನು ತಂದು ಈ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತಂತೆ.

ಕರ್ನಾಟಕದ ಮ್ಯಾಂಚೆಸ್ಟರ್ ಅಂತ ಗುರುತಿಸಿಕೊಂಡಿರುವ ದಾವಣಗೆರೆ ಯಾರಿಗೆ ಕೆರೆ’ ಆಗಿತ್ತಂತೆ ಆದರೆ ಬರ್ತಾ ಬರ್ತಾ ಅದು ದಾವಣಗೆರೆಯಾಗಿ ಮಾರ್ಪಟ್ಟಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸುಮಾರು 250 ಕಿಮೀ ದೂರದಲ್ಲಿರುವ ದಾವಣಗೆರೆಯನ್ನು ಜವಳಿ ಕೇಂದ್ರ ಅಂತಲೂ ಕರೆಯುತ್ತಾರೆ. ದಾವಣಗೆರೆ ವ್ಯಾಪಾರಕ್ಕೆ ಖ್ಯಾತಿ ಹೊಂದಿರುವ ಹಾಗೆ ಜಿಲ್ಲೆಯಲ್ಲಿರುವ ಬೇರೆ ಬೇರೆ ದೇವಸ್ಥಾನಗಳಿಗೂ ಪ್ರಸಿದ್ಧಿ ಹೊಂದಿದೆ. ಅಂಥ ಒಂದು ಖ್ಯಾತಿವೆತ್ತ ಪುಣ್ಯಕ್ಷೇತ್ರ ಅಥವಾ ಸ್ಥಳವೆಂದರೆ, ದುರ್ಗಾಂಬಿಕಾ ದೇವಸ್ಥಾನ.

ಹಾಗೆ ನೋಡಿದರೆ, ದಾವಣಗೆರೆ ಶ್ರೀಮಂತ ಇತಿಹಾಸನ್ನು ಹೊಂದಿದೆ. ಚಾಳುಕ್ಯರ ಕಾಲದಲ್ಲಿ ಇದು ನೊಲಂಬವಾಡಿ ಪ್ರಾಂತ್ಯದ ಭಾಗವಾಗಿತ್ತು. ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಹಾಗೆ ಇಲ್ಲಿ ಕಾಲಕಾಲಕ್ಕೆ ಅರಸೊತ್ತಿಗೆ ಬದಲಾಗುತ್ತಾ ಹೋಯಿತು. ಚಾಳುಕ್ಯರ ನಂತರ ಪಾಂಡ್ಯರು, ಅಮೇಲೆ ಹೊಯ್ಸಳರು ಮತ್ತು ವಿಜಯನಗರದ ಅರಸರು ದರ್ಬಾರು ನಡೆಸಿದರು. ವಿಜಯನಗರ ಸಾಮ್ರಾಜ್ಯ ಬಿದ್ದು ಹೋದ ನಂತರ ದಾವಣಗೆರೆ ಕೆಲ ಸಮಯದವರೆಗೆ ಪಾಳೆಯಗಾರರೆನಿಸಿಕೊಂಡಿದ್ದ ನಾಯಕರ ನಿಯಂತ್ರಣದಲ್ಲಿತ್ತು.

ಅಮೇಲೆ ಮರಾಠರು ಇಲ್ಲಿ ರಾಜ್ಯಭಾರ ನಡೆಸಿದರು. ಆಮೇಲೆ ಹೈದರ್ ಅಲಿ ಮತ್ತು ಅವನ ಮಗ ಟಿಪ್ಪು ಸುಲ್ತಾನ ಮತ್ತು ಅಂತಿಮವಾಗಿ ಮೈಸೂರಿನಮ ಮಹಾರಾಜರು ದಾವಣಗೆರೆಯನ್ನು ಆಳಿದರು. ಒಡೆಯರ್ ಗಳ ಅರಸೊತ್ತಿಗೆ ಸಮಯದಲ್ಲಿ ದಾವಣಗೆರೆ ಪ್ರಮುಖ ಜವಳಿ ಕೇಂದ್ರವಾಗಿ ಗುರುತಿಸಿಕೊಂಡಿತು.

ದುರ್ಗಾಂಬಿಕಾ ದೇವಾಲಯಕ್ಕೆ 200 ವರ್ಷಗಳ ಇತಿಹಾಸವಿದೆ. ದುಗಟ್ಟಿ ಹೆಸರಿನ ಗ್ರಾಮವೊಂದರಿಂದ ಒಂದು ಕಪ್ಪುಕಲ್ಲನ್ನು ತಂದು ಈ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತಂತೆ. ನಂತರ ಜನ ಅದನ್ನು ದುರ್ಗಾದೇವಿ ಎಂದು ಪೂಜಿಲಾರಂಭಿಸಿದರು. ಈ ದೇವತೆಯನ್ನು ದುರ್ಗಮ್ಮ, ದುರ್ಗಾಂಬಿಕಾ, ದುರ್ಗವ್ವ ಅಂತಲೂ ಕರೆಯಲಾಗುತ್ತದೆ.

ಪ್ರತಿ ಎರಡು ವರ್ಷಕ್ಕೊಮ್ಮೆ ದುರ್ಗಾಂಬಿಕೆ ದೇವಸ್ಥಾನದ ಜಾತ್ರಾ ಮಹೋತ್ಸವ ನಡೆಯುತ್ತದೆ. ಸುತ್ತಮುತ್ತಲ ಪ್ರದೇಶಗಳ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಇದನ್ನೂ ಓದಿ:  ವೃದ್ಧಾಪ್ಯ ವೇತನ ಬಂದಿಲ್ಲವೆಂದು ಅಜ್ಜಿಯ ಅಳಲು, ತಹಶೀಲ್ದಾರ್​ಗೆ ವಿಡಿಯೋ ಕಾಲ್ ಮಾಡಿ ನೆರವಿಗೆ ಬಂದ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ