ವೃದ್ಧಾಪ್ಯ ವೇತನ ಬಂದಿಲ್ಲವೆಂದು ಅಜ್ಜಿಯ ಅಳಲು, ತಹಶೀಲ್ದಾರ್ಗೆ ವಿಡಿಯೋ ಕಾಲ್ ಮಾಡಿ ನೆರವಿಗೆ ಬಂದ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ
ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಈ ವೇಳೆ ತಕ್ಷಣವೇ ತಹಶೀಲ್ದಾರ್ಗೆ ವಿಡಿಯೋ ಕಾಲ್ ಮಾಡಿದ್ದಾರೆ. ಯಲಬುರ್ಗಾ ತಹಶೀಲ್ದಾರ್ ಶ್ರಿಶೈಲ್ ತಳವಾರಗೆ ವಿಡಿಯೋ ಕಾಲ್ ಮಾಡಿ ವೃದ್ಧೆಯನ್ನು ತೋರಿಸಿ, ತುಂಬಾ ಬಡವರಿದಾರೆ ವೃದ್ಧಾಪ್ಯ ವೇತನ ಮಂಜೂರು ಮಾಡಿ ಎಂದು ಸೂಚಿಸಿದ್ದಾರೆ.
ಕೊಪ್ಪಳ: ವೃದ್ಧಾಪ್ಯ ವೇತನಕ್ಕೆ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿಗೆ ವೃದ್ಧೆ ಮನವಿ ಮಾಡಿಕೊಂಡ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಜಿ ವೀರಾಪೂರ ಗ್ರಾಮದಲ್ಲಿ ನಡೆದಿದೆ. ತಿಮ್ಮವ್ವ ಹರಿಜನ್ ಎಂಬ ವೃದ್ಧೆ, ನನಗೆ ವೃದ್ಧಾಪ್ಯ ವೇತನ ಬಂದಿಲ್ಲ ಎಂದು ಮಾಜಿ ಸಚಿವರ ಬಳಿ ಅಳಲು ತೋಡಿಕೊಂಡಿದ್ದಾರೆ. ವೃದ್ದೆಯ ಸಮಸ್ಯೆ ಆಲಿಸಿದ ಮಾಜಿ ಸಚಿವರು,ತಹಶಿಲ್ದಾರ್ ವಿಡಿಯೋ ಕಾಲ್ ಮಾಡಿ ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದ್ದಾರೆ.
ಆರು ತಿಂಗಳಿಂದ ಬಾರದ ವೃದ್ದಾಪ್ಯ ವೇತನ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಜಿ ವೀರಾಪೂರ ಗ್ರಾಮದ ತಿಮ್ಮವ್ವ ಹರಿಜನ್ ಗೆ ಕಳೆದ ಆರು ತಿಂಗಳಿಂದ ವೃದ್ದಾಪ್ಯ ವೇತನ ನಿಂತು ಹೋಗಿದೆ. ಯಾಕಂದ್ರೆ ತಿಮ್ಮವ್ವನ ಆಧಾರ್ ಕಾರ್ಡ್ ಅಪಡೇಟ್ ಆಗದ ಕಾರಣ ಹಣ ಬಿಡುಗಡೆಯಾಗಿಲ್ಲ, ಹೀಗಾಗಿ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಜಿ ವೀರಾಪೂರ ಗ್ರಾಮಕ್ಕೆ ಕೆಲಸದ ನಿಮಿತ್ತ ಭೇಟಿ ಕೊಟ್ಟಿದ್ರು. ಈ ಸಮಯದಲ್ಲಿ ಬಸವರಾಜ್ ರಾಯರೆಡ್ಡಿ ಕಂಡ ವೃದ್ದೆ ತಿಮ್ಮವ್ವ ತನ್ನ ಸಮಸ್ಯೆ ಹೇಳಿಕೊಂಡರು. ನನಗೆ ವೃದ್ದಾಪ್ಯ ವೇತನ ಬರ್ತಿಲ್ಲ ಜೀವನ ನಡೆಸೋದು ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡಳು. ತಿಮ್ಮವ್ವ ನಿಗೆ ಮಕ್ಕಳು ಗಂಡ ಯಾರೂ ಇಲ್ಲ, ಒಬ್ಬಂಟಿಯಾಗಿದಾಳೆ, ಹೀಗಾಗಿ ನನ್ನ ನೋಡಿಕೊಳ್ಳೋರಿಲ್ಲ, ಹಣ ಬಂದ್ರೆ ಜೀವನ ನಡೆಸಬಹುದು ಎಂದು ರಾಯರೆಡ್ಡಿ ಮುಂದೆ ತನ್ನ ಸಮಸ್ಯೆ ಹೇಳಿಕೊಂಡಳು.
ತಹಶಿಲ್ದಾರ್ ಗೆ ವಿಡಿಯೋ ಕಾಲ್ ಮಾಡಿದ ಬಸವರಾಜ್ ರಾಯರೆಡ್ಡಿ ವೃದ್ದೆಯ ಸಮಸ್ಯೆ ಆಲಿಸಿದ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಸೀದಾ ಯಲಬುರ್ಗಾ ತಹಶಿಲ್ದಾರ್ ಶ್ರಿಶೈಲ್ ತಳವಾರಗೆ ವಿಡಿಯೋ ಕಾಲ್ ಮಾಡಿದ್ರು.ವಿಡಿಯೋ ಕಾಲ್ ನಲ್ಲಿ ವೃದ್ದೆಯ ಮುಖ ತೋರಿಸಿ ವೃದ್ದೆಗೆ ವೃದ್ದಾಪ್ಯ ವೇತನ ಬಂದಿಲ್ಲ, ಜೀವನ ನಡೆಸೋದು ಕಷ್ಟವಾಗಿದೆ. ಸಮಸ್ಯೆ ಬಗೆ ಹರಿಸಿ ಎಂದು ತಾಕೀತು ಮಾಡಿದ್ರು.ವೃದ್ದೆ ತಿಮ್ಮವ್ವನಿಗೆ ಕಳೆದ ಆರು ತಿಂಗಳದ ವೃದ್ದಾಪ್ಯ ವೇತನ ಬಂದಿಲ್ಲ,ಯಾಕೆ ಏನಾಗಿದೆ ಎಂದು ತಹಶಿಲ್ದಾರ್ ಗೆ ಸ್ಥಳದಲ್ಲೆ ನಿಂತು ವಿಡಿಯೋ ಕಾಲ್ ಮಾಡಿ ತಹಶಿಲ್ದಾರ್ ಗಮನಕ್ಕೆ ತಂದ್ರು. ಆ ಕಡೆ ಮಾತಾನಡಿದ ತಹಶಿಲ್ದಾರ್ ಶ್ರಿಶೈಲ್ ತಳವಾರ ಸರಿ ಸರ್ ನಾನು ಸಿಬ್ಬಂದಿ ಕಳಿಸಿ ವಿಚಾರಿಸುತ್ತೇನೆ ಎಂದರು. ಸ್ಥಳದಲ್ಲೆ ವಿಡಿಯೋ ಕಾಲ್ ಮಾಡಿದ ಬಸವರಾಜ್ ರಾಯರೆಡ್ಡಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.
ವೃದ್ದಾಪ್ಯ ವೇತನ ಬಾರದಿರೋದಕ್ಕೆ ಅಸಲಿ ಸಮಸ್ಯೆ ಏನು ಜಿ ವೀರಾಪೂರ ನಿವಾಸಿಯಾದ ತಿಮ್ಮವ್ವ ಹರಿಜನ್ ಗೆ ಕಳೆದ ಆರು ತಿಂಗಳಿಂದ ವೃದ್ದಾಪ್ಯ ವೇತನ ನಿಂತು ಹೋಗಿದೆ.ಈ ಹಿಂದೆ ಮನೆಗೆ ಬಂದು ಹಣ ತಂದು ಕೊಡ್ತಿದ್ರು.ಆದ್ರೆ ಇದೀಗ ನೇರವಾಗಿ ಹಣ ಫಲಾನುಭವಿಗಳ ಅಕೌಂಟ್ ಗೆ ಜಮೆಯಾಗುತ್ತಿದೆ.ಆದ್ರೆ ತಿಮ್ಮವ್ವನ ಆಧಾರ್ ಕಾರ್ಡ್ ಇದುವರೆಗೂ ಅಕೌಂಟ್ ನಂಬರ್ ಗೆ ಲಿಂಕ್ ಆಗಿಲ್ಲ, ಹಾಗಾಗಿ ವೃದ್ದಾಪ್ಯ ವೇತನ ನಿಂತು ಹೋಗಿದೆ. ಯಾವಾಗ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ತಹಶಿಲ್ದಾರ್ ಗಮನಕ್ಕೆ ತಂದ್ರೋ ಕೂಡಲೇ ಅಧಿಕಾರಿಗಳು ತಿಮ್ಮವ್ವನ ಮನೆಗೆ ಹೋಗಿ ದಾಖಲೆ ಒಟ್ಟಾಗಿ ಪರಿಶೀಲನೆ ಮಾಡಿದ್ದಾರೆ.ಇದುವರೆಗೂ ಆಧಾರ್ ಕಾರ್ಡ್ ಲಿಂಕ್ ಆಗದೆ ಇರೋದಕ್ಕೆ ಹಣ ಬಂದಿಲ್ಲ ಅನ್ಮೋದು ಅಧಿಕಾರಿಗಳ ಮಾತು.
ಇನ್ನು ಮನೆಯಲ್ಲಿ ಒಬ್ಬಳೇ ಇರೋ ಕಾರಣ ತಿಮ್ಮವ್ವ ದಾಖಲಾತಿಯನ್ನು ಯಾರ ಕೈಗೂ ಕೊಡ್ತಿಲ್ಲವಂತೆ. ಕೆಲವರು ಆಧಾರದ ಕಾರ್ಡ್ ಕೇಳಿದ್ರೆ ಇಲ್ಲ ಎಂದು ಕಳಿಸಿದ್ದಾಳೆ. ಈ ಕುರಿತು ಟಿವಿ9 ಡಿಜಿಟಲ್ ನೊಂದಿಗೆ ಮಾತನಾಡಿದ ಯಲಬುರ್ಗಾ ತಹಶಿಲ್ದಾರ್ ಶ್ರಿಶೈಲ್ ತಳವಾರ ಬಸವರಾಜ್ ರಾಯರೆಡ್ಡಿ ವಿಡಿಯೋ ಕಾಲ್ ಮೂಲಕ ಸಮಸ್ಯೆ ಗಮನಕ್ಕೆ ತಂದ್ರು, ನಾನು ಸಿಬ್ಬಂದಿ ಕಳಸಿ ಚೆಕ್ ಮಾಡಿಸಿದೆ, ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಆ ಕಾರಣಕ್ಕೆ ಹಣ ಬಿಡುಗಡೆ ಆಗಿಲ್ಲ. ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರೆಯತ್ತೆ ಎಂದರು.
ಟಿವಿ9 ಡಿಜಿಟಲ್ ನೊಂದಿಗೆ ಮಾತನಾಡಿದ ವೃದ್ದೆ ತಿಮ್ಮವ್ವ ಕಳೆದ ಐದಾರು ತಿಂಗಳಿಂದ ಹಣ ಬಂದಿಲ್ಲ, ಸಾಹೇಬ್ರು ಉರಿಗೆ ಬಂದಿದ್ದರು, ಅವರಿಗೆ ರೊಕ್ಕ ಬಂದಿಲ್ಲ ಅಂತಾ ಹೇಳಿದೆ. ಅವರ ಆಪೀಸರ್ ಗೆ ಫೋನ್‌ಮಾಡಿದ್ರೂ, ಆಫಿಸರ್ಸ್ ಬಂದ ಹೋಗ್ಯಾರ ಆದಷ್ಟು ಬೇಗ ಹಣ ಬಂದ್ರೆ ನನ್ನ ಜೀವನ ನಡೆಯತ್ತೆ ಎಂದರು.
ಇದನ್ನೂ ಓದಿ: ವೃದ್ಧಾಪ್ಯ ವೇತನದಲ್ಲಿ ಗೋಲ್ಮಾಲ್; ಸಾರ್ವಜನಿಕವಾಗಿ ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಶಾಸಕ
Published On - 11:24 am, Thu, 16 September 21