AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೃದ್ಧಾಪ್ಯ ವೇತನದಲ್ಲಿ ಗೋಲ್​ಮಾಲ್​; ಸಾರ್ವಜನಿಕವಾಗಿ ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಶಾಸಕ

ನಾಗಮಂಗಲ ತಾಲೂಕಿನ ಜಯಮ್ಮ ಎಂಬ ವೃದ್ಧೆಗೆ ನೀಡಬೇಕಾಗಿದ್ದ ವೃದ್ಧಾಪ್ಯ ವೇತನದ ಹಣವನ್ನು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾಂಡವಪುರದ ಜಯಮ್ಮ ಎಂಬುವರ ಖಾತೆಗೆ ಜಮಾ ಮಾಡಿದ್ದರು. ಈ ಮೂಲಕ ಸಿಬ್ಬಂದಿ ಹಣ ಹೊಡೆದಿದ್ದರು.

ವೃದ್ಧಾಪ್ಯ ವೇತನದಲ್ಲಿ ಗೋಲ್​ಮಾಲ್​; ಸಾರ್ವಜನಿಕವಾಗಿ ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಶಾಸಕ
ಅಧಿಕಾರಿ, ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡ ಶಾಸಕ
Lakshmi Hegde
| Updated By: ಸಾಧು ಶ್ರೀನಾಥ್​|

Updated on:Nov 26, 2020 | 1:39 PM

Share

ಮಂಡ್ಯ: ವೃದ್ಧಾಪ್ಯ ವೇತನದಲ್ಲಿ ಗೋಲ್​ಮಾಲ್​ ಮಾಡಿದ್ದ ಸಿಬ್ಬಂದಿಗೆ ಶಾಸಕ ಸುರೇಶ್​ ಗೌಡ ಸಾರ್ವಜನಿಕ ಸಭೆಯಲ್ಲಿ ಹಿಗ್ಗಾಮುಗ್ಗಾ ಬೈದಿದ್ದಾರೆ. ಯಾರಿಗೂ ಸೇರಬೇಕಾದ ಹಣವನ್ನು ನಕಲಿ ದಾಖಲೆ ಸೃಷ್ಟಿಸಿ ಇನ್ನೋರ್ವರಿಗೆ ಮಂಜೂರು ಮಾಡಿದ ವಿಷಯ ತಿಳಿದ ಜೆಡಿಎಸ್​ ಶಾಸಕ ಸುರೇಶ್​ ಗೌಡ, ಬಡವರ ಹಣ ತಿಂದು, ನಮಗ್ಯಾಕೆ ಕೆಟ್ಟ ಹೆಸರು ತರುತ್ತೀರಿ ಎಂದು ಕೂಗಾಡಿದ್ದಾರೆ.

ಅದಲುಬದಲು ಮಾಡಿದ್ದ ಅಧಿಕಾರಿಗಳು ನಾಗಮಂಗಲ ತಾಲೂಕಿನ ಜಯಮ್ಮ ಎಂಬ ವೃದ್ಧೆಗೆ ನೀಡಬೇಕಾಗಿದ್ದ ವೃದ್ಧಾಪ್ಯ ವೇತನದ ಹಣವನ್ನು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾಂಡವಪುರದ ಜಯಮ್ಮ ಎಂಬುವರ ಖಾತೆಗೆ ಜಮಾ ಮಾಡಿದ್ದರು. ಈ ಮೂಲಕ ಸಿಬ್ಬಂದಿ ಹಣ ಹೊಡೆದಿದ್ದರು. ವಿಚಾರ ಬಯಲಾಗುತ್ತಿದ್ದಂತೆ ನಾಗಮಂಗಲದ ಜಯಮ್ಮನವರಿಗೆ 20 ಸಾವಿರ ರೂ. ಹಣ ಹಿಂದಿರುಗಿಸಲಾಗಿತ್ತು. ಅದನ್ನು ತಿಳಿದ ಶಾಸಕರು ಸಭೆಯಲ್ಲಿ ಅಧಿಕಾರಿ ಜಯಶ್ರೀ ಹಾಗೂ ಸಿಬ್ಬಂದಿ ವಿರುದ್ಧ ಕೂಗಾಡಿದ್ದಾರೆ.

ನಿಮಗೆ ಸರ್ಕಾರ ಸಂಬಳ ಕೊಡೋದಿಲ್ವಾ? ನಾವು ನಿಮ್ಮ ಬಳಿ ಯಾವತ್ತಾದರೂ ಏನಾದರೂ ಕೇಳಿದ್ದೀವಾ? ನಿಮ್ಮ ಅಕ್ರಮಗಳೆಲ್ಲ ನನಗೆ ಗೊತ್ತಿವೆ. ನೀನು ಹೆಣ್ಣುಮಗಳು ಎಂದು ಸುಮ್ಮನಿದ್ದೇನೆ. ಇಲ್ಲದಿದ್ದರೆ ಸಸ್ಪೆಂಡ್ ಮಾಡುತ್ತಿದ್ದೆ ಎಂದು ಅಧಿಕಾರಿ ಜಯಶ್ರೀಗೆ ಬೈದಿದ್ದಾರೆ.

Published On - 1:35 pm, Thu, 26 November 20

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ