AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಹವಾಮಾನ: ಮುಂದಿನ 3 ದಿನಗಳ ಕಾಲ ಹೇಗಿರಲಿದೆ ವಾತಾವರಣ?

ರಾಜ್ಯಾದ್ಯಂತ ಮಾರ್ಚ್ ತಿಂಗಳಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗಿದ್ದು, ಜನಜೀವನ ಕಂಗೆಟ್ಟಿದೆ. ಹವಾಮಾನ ಇಲಾಖೆ ಕರ್ನಾಟಕದಲ್ಲಿ ತಾಪಮಾನ 2-3 ಡಿಗ್ರಿ ಹೆಚ್ಚಳದ ಮುನ್ಸೂಚನೆ ನೀಡಿದೆ. ಕಲಬುರಗಿ, ರಾಯಚೂರಿನಲ್ಲಿ ಹೀಟ್‌ ವೇವ್‌ ಎಚ್ಚರಿಕೆ ಇದೆ. ಬೆಂಗಳೂರು ಒಣ ಹವಾಮಾನ, ಮಧ್ಯಾಹ್ನ ಬಿಸಿಲು ಹೆಚ್ಚಿರುತ್ತದೆ. ಸಾರ್ವಜನಿಕರು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮಧ್ಯಾಹ್ನ ಹೊರಗೆ ಹೋಗುವುದನ್ನು ತಪ್ಪಿಸಿ, ಹೆಚ್ಚು ನೀರು ಕುಡಿಯಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಕರ್ನಾಟಕ ಹವಾಮಾನ: ಮುಂದಿನ 3 ದಿನಗಳ ಕಾಲ ಹೇಗಿರಲಿದೆ ವಾತಾವರಣ?
ಸಾಂದರ್ಬೀಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Mar 11, 2026 | 6:04 AM

Share

ಬೆಂಗಳೂರು, ಮಾ.11: ರಾಜ್ಯಾದ್ಯಂತ ಮಾರ್ಚ್ ತಿಂಗಳ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಜನಜೀವನ ಕಂಗೆಟ್ಟಿದೆ. ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಾಪಮಾನವು ವಾಡಿಕೆಗಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಇಂದು ಕೂಡ ಬಿಸಿಲಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ರಾಜಧಾನಿಯಲ್ಲಿ ಒಣ ಹವಾಮಾನ ಮುಂದುವರಿಯಲಿದ್ದು, ಗರಿಷ್ಠ ತಾಪಮಾನ 34°C ಮತ್ತು ಕನಿಷ್ಠ ತಾಪಮಾನ 21°C ದಾಖಲಾಗುವ ಸಾಧ್ಯತೆ ಇದೆ. ಮಧ್ಯಾಹ್ನದ ವೇಳೆ ಬಿಸಿಲಿನ ತಾಪ ಹೆಚ್ಚಿರಲಿದೆ. ಕಲಬುರಗಿ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಬಿಸಿಲು ಕಡು ತೀವ್ರವಾಗಿರಲಿದ್ದು, ತಾಪಮಾನವು 38°C ರಿಂದ 40°C ಗಡಿ ತಲುಪುವ ಸಾಧ್ಯತೆ ಇದೆ. ಹೀಗಾಗಿ ‘ಹೀಟ್ ವೇವ್’ (Heat Wave) ಬಗ್ಗೆ ಎಚ್ಚರಿಕೆ ನೀಡಲಾಗಿದೆ.

ಮಂಗಳೂರು ಮತ್ತು ಉಡುಪಿ ಭಾಗದಲ್ಲಿ ಹವಾಮಾನವು ಆರ್ದ್ರತೆಯಿಂದ ಕೂಡಿದ್ದು (Humid), ಸೆಖೆ ಹೆಚ್ಚಿರಲಿದೆ.ದಕ್ಷಿಣ ಒಳನಾಡಿನ ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಕಡೆಗಳಲ್ಲಿ ಸಂಜೆ ಅಥವಾ ರಾತ್ರಿ ವೇಳೆಗೆ ಲಘು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಗುಡ್ ನ್ಯೂಸ್: ಬಿಎಂಟಿಸಿ,ಮೆಟ್ರೋ ಪ್ರಯಾಣಕ್ಕೆ ಒಂದೇ ಸ್ಮಾರ್ಟ್ ಕಾರ್ಡ್ ಸಾಕು

ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ನೇರ ಬಿಸಿಲಿಗೆ ಒಡ್ಡಿಕೊಳ್ಳಬಾರದು ಮತ್ತು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹುಬ್ಬಳ್ಳಿ, ಬೆಳಗಾವಿ ಮತ್ತು ಉಡುಪಿ ನಗರಗಳ ಮುಂದಿನ 3 ದಿನಗಳ (ಮಾರ್ಚ್ 12 – ಮಾರ್ಚ್ 14) ಕಾಲ ವಾತಾವರಣದಲ್ಲಿ ತುಂಬಾ ಬದಲಾವಣೆಗಳು ಆಗಲಿದೆ. ಹೆಚ್ಚು ಬಿಸಿಲಿನ ವಾತಾವರಣದಿಂದ ಭಾಗದಲ್ಲಿ ಇರಲಿದೆ. ಉತ್ತರ ಕರ್ನಾಟಕ (ಹುಬ್ಬಳ್ಳಿ/ಬೆಳಗಾವಿ)ದಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಮಧ್ಯಾಹ್ನದ ವೇಳೆ ಮನೆಯಿಂದ ಹೊರಬರುವಾಗ ಎಚ್ಚರಿಕೆ ವಹಿಸಿ ಎಂದು ಹೇಳಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಶ್ಲೀಲ ಕಮೆಂಟ್ ಮಾಡಿದವರಿಗೆ 7 ವರ್ಷ ಜೈಲು ಶಿಕ್ಷೆ ಸಾಧ್ಯತೆ: ಶಾಕಿಂಗ್ ವಿಷಯ
ಅಶ್ಲೀಲ ಕಮೆಂಟ್ ಮಾಡಿದವರಿಗೆ 7 ವರ್ಷ ಜೈಲು ಶಿಕ್ಷೆ ಸಾಧ್ಯತೆ: ಶಾಕಿಂಗ್ ವಿಷಯ
ಇದೆಂಥಾ ಪ್ರಶ್ನೆ? ಪತ್ರಕರ್ತರ ಪ್ರಶ್ನೆಗೆ ಕೆರಳಿದ ಇಶಾನ್ ಕಿಶನ್
ಇದೆಂಥಾ ಪ್ರಶ್ನೆ? ಪತ್ರಕರ್ತರ ಪ್ರಶ್ನೆಗೆ ಕೆರಳಿದ ಇಶಾನ್ ಕಿಶನ್
ಅಶ್ಲೀಲ ಕಮೆಂಟ್ ಪ್ರಕರಣ: ರಮ್ಯಾ ಹಠ ಹಿಡಿದು ಕೇಸ್ ಹಾಕಿದ್ದಕ್ಕೆ ಇದೇ ಕಾರಣ
ಅಶ್ಲೀಲ ಕಮೆಂಟ್ ಪ್ರಕರಣ: ರಮ್ಯಾ ಹಠ ಹಿಡಿದು ಕೇಸ್ ಹಾಕಿದ್ದಕ್ಕೆ ಇದೇ ಕಾರಣ
ಆರ್​ ಅಶೋಕ್‌ ಹೇಳಿದ ಮನಕಲಕುವ ಸತ್ಯ ಘಟನೆಗೆ ಸದನವೇ ನಿಶ್ಯಬ್ದ
ಆರ್​ ಅಶೋಕ್‌ ಹೇಳಿದ ಮನಕಲಕುವ ಸತ್ಯ ಘಟನೆಗೆ ಸದನವೇ ನಿಶ್ಯಬ್ದ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ಆರ್ಥಿಕ ಪ್ರಗತಿ ಮತ್ತು ಆಕಸ್ಮಿಕ ಧನಯೋಗ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ಆರ್ಥಿಕ ಪ್ರಗತಿ ಮತ್ತು ಆಕಸ್ಮಿಕ ಧನಯೋಗ
ಅಶ್ಲೀಲ ಕಮೆಂಟ್ ಕೇಸು, ನ್ಯಾಯಾಲಯಕ್ಕೆ ಬಂದ ನಟಿ ರಮ್ಯಾ: ವಿಡಿಯೋ
ಅಶ್ಲೀಲ ಕಮೆಂಟ್ ಕೇಸು, ನ್ಯಾಯಾಲಯಕ್ಕೆ ಬಂದ ನಟಿ ರಮ್ಯಾ: ವಿಡಿಯೋ
ಯುಗಾದಿ ವರ್ಷ ಭವಿಷ್ಯ; ವೃಶ್ಚಿಕ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ವೃಶ್ಚಿಕ ರಾಶಿಗೆ ಈ ವರ್ಷ ಹೇಗಿರಲಿದೆ?
ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ
ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ
ಶಾರ್ಟ್​ ಸರ್ಕೂಟ್​ನಿಂದ ಹೊತ್ತಿ ಉರಿದ ಕೊಳ್ಳೇಗಾಲ ಸಿಪಿಐ ಕಚೇರಿ!
ಶಾರ್ಟ್​ ಸರ್ಕೂಟ್​ನಿಂದ ಹೊತ್ತಿ ಉರಿದ ಕೊಳ್ಳೇಗಾಲ ಸಿಪಿಐ ಕಚೇರಿ!
ಚಿನ್ನದ ಸರ ಕಸಿದು ಪರಾರಿಯಾಗಲು ಯತ್ನಿಸಿದ ಕಳ್ಳ; ಮುಂದೇನಾಯಿತು ನೋಡಿ
ಚಿನ್ನದ ಸರ ಕಸಿದು ಪರಾರಿಯಾಗಲು ಯತ್ನಿಸಿದ ಕಳ್ಳ; ಮುಂದೇನಾಯಿತು ನೋಡಿ