AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದತ್ತಪೀಠವನ್ನು ಹಿಂದೂಗಳಿಗೆ ವಹಿಸುವ ಬುದ್ಧಿ ಬಿಜೆಪಿಗೆ ಬರಲಿ: ಪ್ರಮೋದ್​ ಮುತಾಲಿಕ್

ದತ್ತಪೀಠ ಹಿಂದೂಗಳಿಗೆ ಹಸ್ತಾಂತರಿಸಲು ಶ್ರೀ ರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹುಕ್ಕೇರಿ ಪಟ್ಟಣದ ದತ್ತ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ದತ್ತಪೀಠವನ್ನು ಹಿಂದೂಗಳಿಗೆ ವಹಿಸುವ ಬುದ್ಧಿ ಬಿಜೆಪಿಗೆ ಬರಲಿ: ಪ್ರಮೋದ್​ ಮುತಾಲಿಕ್
ದತ್ತ ಮಂದಿರದಲ್ಲಿ ಪ್ರಮೋದ್ ಮುತಾಲಿಕ್ ವಿಶೇಷ ಪೂಜೆ
ಆಯೇಷಾ ಬಾನು
ಆಯೇಷಾ ಬಾನು|

Updated on:Nov 26, 2020 | 1:07 PM

Share

ಬೆಳಗಾವಿ: ಚಿಕ್ಕಮಗಳೂರು ತಾಲ್ಲೂಕು ಬಾಬಾಬುಡನ್​ಗಿರಿಯಲ್ಲಿರುವ ದತ್ತಪೀಠವನ್ನು ಶೀಘ್ರ ಹಿಂದೂಗಳಿಗೆ ಹಸ್ತಾಂತರಿಸಬೇಕೆಂದು ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದ ದತ್ತಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸುವ ಬುದ್ದಿ ಬಿಜೆಪಿ ಪಕ್ಷಕ್ಕೆ ಬೇಗನೇ ಬರಲಿ ಎಂದು ಪ್ರಾರ್ಥಿಸಿದರು.

ದತ್ತಾತ್ರೇಯ ಅನುಗ್ರಹದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಈ ವಿಚಾರದಲ್ಲಿ ನಿರ್ಲಕ್ಷ್ಯವಹಿಸಿದರೆ ಅದಕ್ಕೆ ದತ್ತನ ಶಾಪ ತಟ್ಟಲಿ ಎಂದು ಕಿಡಿಕಾರಿದರು.

ದತ್ತಪೀಠದ ಹೋರಾಟದಿಂದಲೇ ಬಿಜೆಪಿ ಅಧಿಕಾರಕ್ಕೆ ಬಂತು. ಸಿ.ಟಿ. ರವಿ‌, ಸುನಿಲ್ ಕುಮಾರ್ ದತ್ತಪೀಠದ ಹೋರಾಟದಿಂದಲೇ ಶಾಸಕರು, ಸಚಿವರಾದವರು. ಆದರೆ ದತ್ತಪೀಠಕ್ಕೆ ಮುಕ್ತಿ ಕೊಡುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿಲ್ಲ ಎಂದು ವಿಷಾದಿಸಿದರು.

ದತ್ತಪೀಠವನ್ನ ಹಿಂದೂಗಳಿಗೆ ಕೊಡಬೇಕು, ಅಲ್ಲಿರುವ ಸಮಾಧಿಗಳನ್ನು ಸ್ಥಳಾಂತರಿಸಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದರು.

Published On - 1:03 pm, Thu, 26 November 20

Follow Us
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಹೈಕೋರ್ಟ್​ನಲ್ಲಿ ದರ್ಶನ್ ಪರ ಆದೇಶ ಬಂದಿದ್ದು ಹೇಗೆ? ವಿವರ ನೀಡಿದ ವಕೀಲರು
ಹೈಕೋರ್ಟ್​ನಲ್ಲಿ ದರ್ಶನ್ ಪರ ಆದೇಶ ಬಂದಿದ್ದು ಹೇಗೆ? ವಿವರ ನೀಡಿದ ವಕೀಲರು
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!
ಟ್ರಾಲಿ ಬ್ಯಾಗ್​ನಲ್ಲಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳು ವಶಕ್ಕೆ 
ಟ್ರಾಲಿ ಬ್ಯಾಗ್​ನಲ್ಲಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳು ವಶಕ್ಕೆ 
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಕೆಎನ್ ರಾಜಣ್ಣ ನಡೆ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಕೆಎನ್ ರಾಜಣ್ಣ ನಡೆ
ಸಿಎಂ ಡಿಕೆಶಿ ಆರೋಗ್ಯದಲ್ಲಿ ಕೊಂಚ ಏರುಪೇರು: ವೈದ್ಯರು ದೌಡು, ಏನಾಯ್ತು?
ಸಿಎಂ ಡಿಕೆಶಿ ಆರೋಗ್ಯದಲ್ಲಿ ಕೊಂಚ ಏರುಪೇರು: ವೈದ್ಯರು ದೌಡು, ಏನಾಯ್ತು?
ಬಿಗ್​​ಬಾಸ್​: ತಾಂಡವ್ ‘ಖಾಲಿ ಪಲಾವ್, ಗಗನ್ ‘ಕೊಳೆತ ಟೊಮ್ಯಾಟೊ’
ಬಿಗ್​​ಬಾಸ್​: ತಾಂಡವ್ ‘ಖಾಲಿ ಪಲಾವ್, ಗಗನ್ ‘ಕೊಳೆತ ಟೊಮ್ಯಾಟೊ’
ರಸ್ತೆ ಕಾಮಗಾರಿ ಗುದ್ದಲಿ ಪೂಜೆ ವೇಳೆ MLC-MLA ನಡುವೆ ಮಾತಿನ ಚಕಮಕಿ
ರಸ್ತೆ ಕಾಮಗಾರಿ ಗುದ್ದಲಿ ಪೂಜೆ ವೇಳೆ MLC-MLA ನಡುವೆ ಮಾತಿನ ಚಕಮಕಿ
ಆ್ಯಕ್ಟಿವಿಟಿ ಮಾಡದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕನಿಂದ ಅಮಾನವೀಯ ಹಲ್ಲೆ
ಆ್ಯಕ್ಟಿವಿಟಿ ಮಾಡದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕನಿಂದ ಅಮಾನವೀಯ ಹಲ್ಲೆ
ಆರೋಪಗಳೆಲ್ಲ ಸುಳ್ಳು, ಹಣ ಕೂಡ ಅವರು ಕೊಟ್ಟದ್ದಲ್ಲ: ಪ್ರಜ್ವಲ್ ದೇವರಾಜ್
ಆರೋಪಗಳೆಲ್ಲ ಸುಳ್ಳು, ಹಣ ಕೂಡ ಅವರು ಕೊಟ್ಟದ್ದಲ್ಲ: ಪ್ರಜ್ವಲ್ ದೇವರಾಜ್