AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗ್ಗೆ 10 ಗಂಟೆಯಾದರೂ ಖಾಲಿ ಕಚೇರಿ; ಬೆಂಗಳೂರಿನ ಟ್ರಾಫಿಕ್ ವಿರುದ್ಧ ಉದ್ಯಮಿ ಆಕ್ರೋಶ

ಬೆಂಗಳೂರಿನ ಸಂಚಾರ ದಟ್ಟಣೆ ಉದ್ಯೋಗಿಗಳ ಸಮಯ ಮತ್ತು ಕೆಲಸದ ಸಾಮರ್ಥ್ಯವನ್ನು ಹಾಳು ಮಾಡುತ್ತಿದೆ ಎಂದು ಉದ್ಯಮಿ ಬಾಲಾ ಪನ್ನೀರ್‌ಸೆಲ್ವಂ ಹೇಳಿದ್ದಾರೆ. ಬೆಳಗ್ಗೆ 10.15ಕ್ಕೆ ತಮ್ಮ ಕಚೇರಿ ಬಹುತೇಕ ಖಾಲಿಯಾಗಿದ್ದ ಫೋಟೋ ಹಂಚಿಕೊಂಡಿರುವ ಅವರು, ಕಚೇರಿಗೆ ತಲುಪುವುದೇ ದೊಡ್ಡ ಸವಾಲಾಗಿರುವಾಗ ಉತ್ತಮ ಕೆಲಸ ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವುದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಬೆಳಗ್ಗೆ 10 ಗಂಟೆಯಾದರೂ ಖಾಲಿ ಕಚೇರಿ; ಬೆಂಗಳೂರಿನ ಟ್ರಾಫಿಕ್ ವಿರುದ್ಧ ಉದ್ಯಮಿ ಆಕ್ರೋಶ
ಬಾಲಾ ಪನ್ನೀರ್‌ಸೆಲ್ವಂ ಲಿಂಕ್ಡ್ ಇನ್ ಪೋಸ್ಟ್ ಫೋಟೊImage Credit source: Linkedin/Bala Panneerselvam
ಗಣಪತಿ ಶರ್ಮಾ
|

Updated on: Aug 19, 2026 | 10:20 AM

Share

ಮುಖ್ಯಾಂಶಗಳು

  • ಬೆಳಗ್ಗೆ ಕಚೇರಿ ಖಾಲಿ; ಟ್ರಾಫಿಕ್‌ ಬಗ್ಗೆ ದೂಷಣೆ
  • 17 ಕಿ.ಮೀ. ಪ್ರಯಾಣಕ್ಕೆ ಎರಡು ಗಂಟೆ!
  • ಉದ್ಯೋಗಿಗಳ ಉತ್ಪಾದಕತೆ ಕುಸಿತದ ಬಗ್ಗೆ ಆತಂಕ

ಬೆಂಗಳೂರು, ಆಗಸ್ಟ್ 19: ಬೆಂಗಳೂರು (Bengaluru) ಎಂದರೆ ಐಟಿ ಸಿಟಿ ಎಂದೇ ಗುರುತಿಸಿಕೊಂಡಿರುವ ನಗರ. ಅಷ್ಟೇ ಅಲ್ಲ, ಸ್ಟಾರ್ಟ್‌ಅಪ್‌ಗಳು ಹಾಗೂ ಉದ್ಯೋಗಾವಕಾಶಗಳ ನಗರಿ. ಆದರೆ ಇದೇ ನಗರದ ಸಂಚಾರ ದಟ್ಟಣೆ ಇದೀಗ ಉದ್ಯೋಗಿಗಳ ಉತ್ಪಾದಕತೆ ಮತ್ತು ಜೀವನಶೈಲಿಯ ಮೇಲೂ ಪರಿಣಾಮ ಬೀರುತ್ತಿದೆ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಬೆಂಗಳೂರಿನ ಉದ್ಯಮಿ ಹಾಗೂ ‘Applied AI Studio’ ಮತ್ತು ‘Applied AI Club’ ಸಂಸ್ಥೆಗಳ ಸ್ಥಾಪಕ ಬಾಲಾ ಪನ್ನೀರ್‌ಸೆಲ್ವಂ ಅವರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಳಗ್ಗೆ 10.15 ಆದರೂ ಕಚೇರಿ ಖಾಲಿ!

ಬಾಲಾ ಪನ್ನೀರ್‌ಸೆಲ್ವಂ ಅವರು ಬೆಳಗ್ಗೆ 10.15ಕ್ಕೆ ತಮ್ಮ ಕಚೇರಿ ಬಹುತೇಕ ಖಾಲಿಯಾಗಿದ್ದ ಫೋಟೋವನ್ನು ಹಂಚಿಕೊಂಡಿದ್ದಾರೆ. ಸಿಬ್ಬಂದಿ ಕಚೇರಿಗೆ ಸಮಯಕ್ಕೆ ಸರಿಯಾಗಿ ತಲುಪಲು ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಾಕಷ್ಟು ಸಮಯ ಕಳೆಯಬೇಕಾಗುತ್ತಿದೆ ಎಂದು ಅವರು ಹೇಳಿದ್ದಾರೆ. ‘ಸಮಸ್ಯೆ ಜನರದ್ದಲ್ಲ. ಕಚೇರಿಗೆ ತಲುಪಲು ಅವರು ಮಾಡಬೇಕಾಗುವ ಪ್ರಯತ್ನದಲ್ಲಿದೆ’ ಎಂಬ ಅರ್ಥದಲ್ಲಿ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವರ ಪ್ರಕಾರ, ಕಚೇರಿಗೆ ತಲುಪುವಷ್ಟರಲ್ಲಿ ಉದ್ಯೋಗಿಗಳು ಸಾಕಷ್ಟು ದಣಿದಿರುತ್ತಾರೆ. ಹೀಗಾಗಿ ಕೆಲಸದ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸುವುದು ಕಷ್ಟವಾಗುತ್ತಿದೆ.

4 ಕಿಮೀ ಪ್ರಯಾಣಕ್ಕೂ 30 ನಿಮಿಷ!

ಎಚ್‌ಎಸ್‌ಆರ್ ಲೇಔಟ್‌ ಸುತ್ತಮುತ್ತ 4 ಕಿ.ಮೀ. ದೂರವನ್ನು ಸ್ಕೂಟರ್‌ನಲ್ಲಿ ಕ್ರಮಿಸಲು ಸುಮಾರು 20 ನಿಮಿಷ ಹಾಗೂ ಕಾರಿನಲ್ಲಿ ಸುಮಾರು 30 ನಿಮಿಷ ಬೇಕಾಗುತ್ತದೆ ಎಂದು ಪನ್ನೀರ್‌ಸೆಲ್ವಂ ಹೇಳಿದ್ದಾರೆ. ಪೀಕ್ ಅವಧಿಯಲ್ಲಿ ಇದಕ್ಕೆ ಮತ್ತಷ್ಟು 10 ನಿಮಿಷ ಸೇರ್ಪಡೆಯಾಗುತ್ತದೆ. ಟ್ರಾಫಿಕ್‌ನಲ್ಲಿ ಪದೇಪದೆ ಬ್ರೇಕ್ ಹಾಕುವುದು, ಸಿಗ್ನಲ್‌ಗಳನ್ನು ಉಲ್ಲಂಘಿಸುವ ದ್ವಿಚಕ್ರ ವಾಹನಗಳು ಹಾಗೂ ವಾಹನ ದಟ್ಟಣೆಯ ನಡುವೆ ಪ್ರಯಾಣಿಸುವುದರಿಂದ ಕಚೇರಿ ತಲುಪುವಷ್ಟರಲ್ಲಿ ತಾಜಾತನ (ಫ್ರೆಶ್​​ನೆಸ್) ಕಳೆದುಹೋಗುತ್ತದೆ ಎಂದು ಅವರು ಹೇಳಿದ್ದಾರೆ.

ಪನ್ನೀರ್‌ಸೆಲ್ವಂ ಲಿಂಕ್ಡ್ ಇನ್ ಪೋಸ್ಟ್

ಸಂಜೆ 6 ಗಂಟೆಯ ನಂತರ ಕಚೇರಿಯಿಂದ ಹೊರಟರೆ ಮನೆ ತಲುಪಲು ಸಾಮಾನ್ಯಕ್ಕಿಂತ ಎರಡು ಪಟ್ಟು ಹೆಚ್ಚು ಸಮಯ ಬೇಕಾಗುತ್ತದೆ. 5 ಗಂಟೆಗೆ ಹೊರಟರೂ ಮನೆಗೆ ತಲುಪುವಷ್ಟರಲ್ಲಿ ಸಾಕಷ್ಟು ದಣಿವು ಉಂಟಾಗುತ್ತದೆ. ಇದರ ಪರಿಣಾಮ ಮರುದಿನ ಕಚೇರಿಗೆ ತಡವಾಗಿ ಬರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅವರು ಹೇಳಿದ್ದಾರೆ.

17 ಕಿಮೀ ಪ್ರಯಾಣಿಸಲು ಎರಡು ಗಂಟೆ

ತಮ್ಮದೇ ಅನುಭವವನ್ನು ಹಂಚಿಕೊಂಡಿರುವ ಉದ್ಯಮಿ, ಸಂಜೆ 4 ಗಂಟೆ ಸುಮಾರಿಗೆ ವೈಟ್‌ಫೀಲ್ಡ್‌ನಿಂದ ಎಚ್‌ಎಸ್‌ಆರ್ ಲೇಔಟ್‌ಗೆ 17 ಕಿ.ಮೀ. ಪ್ರಯಾಣಿಸಲು ಎರಡು ಗಂಟೆ ಬೇಕಾಯಿತು ಎಂದು ಹೇಳಿದ್ದಾರೆ. ಆ ಸಮಯವನ್ನು ಅವರು ಪೀಕ್ ಅವಧಿಯಲ್ಲದ ಸಮಯ ಎಂದು ಉಲ್ಲೇಖಿಸಿದ್ದು, ಮಳೆ ಅಥವಾ ಇತರೆ ಯಾವುದೇ ವಿಶೇಷ ಕಾರಣವೂ ಇರಲಿಲ್ಲ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿನ ಸುತ್ತಮುತ್ತಲಿನ ಗದ್ದಲ, ಸಂಚಾರ ದಟ್ಟಣೆ ಹಾಗೂ ನಿರಂತರ ಪ್ರಯಾಣದ ಒತ್ತಡದಿಂದ ಉತ್ತಮವಾಗಿ ಯೋಚಿಸುವ ಮತ್ತು ಕೆಲಸ ಮಾಡುವ ಸಾಮರ್ಥ್ಯವೇ ಕುಗ್ಗುತ್ತಿದೆ ಎಂಬುದು ಅವರ ವಾದ.

ಸಾಮಾಜಿಕ ಜಾಲತಾಣದಲ್ಲೂ ಭಾರೀ ಪ್ರತಿಕ್ರಿಯೆ

ಪನ್ನೀರ್‌ಸೆಲ್ವಂ ಅವರ ಪೋಸ್ಟ್‌ಗೆ ಸಾಮಾಜಿಕ ಜಾಲತಾಣ ಬಳಕೆದಾರರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಹಲವರು ತಮ್ಮ ದೈನಂದಿನ ಸಂಚಾರದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಪ್ರತಿದಿನ 1.5ರಿಂದ 2 ಗಂಟೆಗಳವರೆಗೆ ಪ್ರಯಾಣದಲ್ಲೇ ಕಳೆಯಬೇಕಾಗುತ್ತದೆ ಎಂದು ಹೇಳಿದ್ದಾರೆ. ಮತ್ತಷ್ಟು ಮಂದಿ ಗುಂಡಿ ಬಿದ್ದ ರಸ್ತೆಗಳು ಹಾಗೂ ಕೆಟ್ಟ ರಸ್ತೆಗಳಿಂದ ಪ್ರಯಾಣ ಮತ್ತಷ್ಟು ಕಷ್ಟಕರವಾಗಿದೆ ಎಂದು ದೂರಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಕಿರಿಕಿರಿ: ಕೋಲ್ಕತ್ತಾ ತಲುಪುವ ಫ್ಲೈಟ್ ಜರ್ನಿಗಿಂತ ಏರ್‌ಪೋರ್ಟ್ ರಸ್ತೆ ಪ್ರಯಾಣವೇ ಲಾಂಗ್!

ಕಚೇರಿಗೆ ತಲುಪಲು ಬೇಕಾಗುವ ಸಮಯಕ್ಕಿಂತಲೂ, ಅಲ್ಲಿಗೆ ತಲುಪುವಷ್ಟರಲ್ಲಿ ಉಂಟಾಗುವ ದೈಹಿಕ ಮತ್ತು ಮಾನಸಿಕ ಆಯಾಸವೇ ಉತ್ಪಾದಕತೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ