AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲು ಪ್ರಯಾಣಿಕರೇ ಗಮನಿಸಿ: ಶಿವಮೊಗ್ಗ, ತಾಳಗುಪ್ಪ ಮಾರ್ಗದ ಹಲವು ರೈಲು ಸಂಚಾರ ರದ್ದು, ಮಾರ್ಗ ಬದಲಾವಣೆ

ಬೆಂಗಳೂರು, ಆ.19: ಮಲ್ಲಸಂದ್ರ-ಗುಬ್ಬಿ ನಡುವೆ ನಡೆಯುತ್ತಿರುವ ಇಂಜಿನಿಯರಿಂಗ್ ಕಾಮಗಾರಿಗಳಿಂದ ಆಗಸ್ಟ್ ತಿಂಗಳಲ್ಲಿ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ತಾಳಗುಪ್ಪ, ಶಿವಮೊಗ್ಗ, ಚಿಕ್ಕಮಗಳೂರು ಮಾರ್ಗದ ರೈಲುಗಳು ಭಾಗಶಃ/ಸಂಪೂರ್ಣ ರದ್ದುಗೊಂಡಿವೆ ಅಥವಾ ಮಾರ್ಗ ಬದಲಾವಣೆಗೊಂಡಿವೆ. ಪ್ರಯಾಣಿಕರು ಆಗಸ್ಟ್ 19, 22, 23, 26 ರಂದು ತಮ್ಮ ರೈಲು ವೇಳಾಪಟ್ಟಿ ಪರಿಶೀಲಿಸಿ ಪ್ರಯಾಣಿಸಲು ರೈಲ್ವೆ ಇಲಾಖೆ ಕೋರಿದೆ.

ರೈಲು ಪ್ರಯಾಣಿಕರೇ ಗಮನಿಸಿ: ಶಿವಮೊಗ್ಗ, ತಾಳಗುಪ್ಪ ಮಾರ್ಗದ ಹಲವು ರೈಲು ಸಂಚಾರ ರದ್ದು, ಮಾರ್ಗ ಬದಲಾವಣೆ
ಸಾಮದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Aug 19, 2026 | 10:51 AM

Share

ಬೆಂಗಳೂರು, ಆ.19: ಮಲ್ಲಸಂದ್ರ ಮತ್ತು ಗುಬ್ಬಿ ರೈಲ್ವೆ ನಿಲ್ದಾಣಗಳ ನಡುವೆ ಅತ್ಯಗತ್ಯ ಇಂಜಿನಿಯರಿಂಗ್ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಹಲವು ಪ್ರಮುಖ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ತಾಳಗುಪ್ಪ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಮಾರ್ಗದ ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ ಮತ್ತು ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಆಗಸ್ಟ್ ತಿಂಗಳಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ರೈಲು ವೇಳಾಪಟ್ಟಿಯನ್ನು ಪರಿಶೀಲಿಸಿ ಪ್ರಯಾಣ ಬೆಳೆಸಲು ಕೋರಲಾಗಿದೆ.

ಭಾಗಶಃ ಹಾಗೂ ಸಂಪೂರ್ಣ ರದ್ದಾಗಿರುವ ರೈಲುಗಳು:

ತಾಳಗುಪ್ಪ–ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ (20652): ಆಗಸ್ಟ್ 19, 22, 23 ಮತ್ತು 26 ರಂದು ಈ ರೈಲು ಅರಸೀಕೆರೆ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದಾಗಲಿದ್ದು, ಅರಸೀಕೆರೆಯಲ್ಲಿಯೇ ತನ್ನ ಪ್ರಯಾಣ ಮುಕ್ತಾಯಗೊಳಿಸಲಿದೆ.

ಆಗಸ್ಟ್ 19 ಮತ್ತು 26 ರಂದು ಸಂಪೂರ್ಣ ರದ್ದಾಗಿರುವ ರೈಲುಗಳು:

ಚಿಕ್ಕಮಗಳೂರು–ಯಶವಂತಪುರ (16239)

ಯಶವಂತಪುರ–ಚಿಕ್ಕಮಗಳೂರು (16240)

ಕೆಎಸ್ಆರ್ ಬೆಂಗಳೂರು–ಮೈಸೂರು ಒಡೆಯರ್ (12614)

ಕೆಎಸ್ಆರ್ ಬೆಂಗಳೂರು–ತುಮಕೂರು ಮೆಮು (66567)

ತುಮಕೂರು–ಕೆಎಸ್ಆರ್ ಬೆಂಗಳೂರು ಮೆಮು (66572)

ಆಗಸ್ಟ್ 19, 22 ಮತ್ತು 26 ರಂದು ರದ್ದಾಗಿರುವ ರೈಲುಗಳು:

ಯಲಹಂಕ–ಅರಸೀಕೆರೆ (66505) ಮೆಮು

ಅರಸೀಕೆರೆ–ಯಲಹಂಕ (66506) ಮೆಮು

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್​:

ಮಾರ್ಗ ಬದಲಾವಣೆಯಾಗಿರುವ ರೈಲುಗಳು:

ಯಶವಂತಪುರ–ಶಿವಮೊಗ್ಗ ಟೌನ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ (20689): ಆಗಸ್ಟ್ 19, 22, 23 ಮತ್ತು 26 ರಂದು ಈ ರೈಲು ಚಿಕ್ಕಬಾಣಾವರ, ನೆಲಮಂಗಲ, ಹಾಸನ ಹಾಗೂ ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಪರಿಣಾಮ, ಈ ರೈಲಿಗೆ ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ಇದನ್ನೂ ಓದಿ: ‘ಪಿಎಂ-ಇ ಡ್ರೈವ್’ ಯೋಜನೆಯಡಿ 4,500 ಇವಿ ಬಸ್: ಬಿಎಂಟಿಸಿಯ ಡ್ರೈವರ್​ಗಳನ್ನೇ ನೇಮಕ ಮಾಡುವಂತೆ ಆಗ್ರಹ

ಪರ್ಯಾಯ ಮಾರ್ಗದಲ್ಲಿ ಸಂಚರಿಸುವ ಇತರ ರೈಲುಗಳು:

ವಾಸ್ಕೋ ಡ ಗಾಮ–ಯಶವಂತಪುರ ಎಕ್ಸ್‌ಪ್ರೆಸ್ (17310)

ಮೈಸೂರು–ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್ (20676) (ಈ ರೈಲುಗಳು ತಿಪಟೂರು ಮತ್ತು ತುಮಕೂರು ಬದಲಿಗೆ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲಿವೆ).

ರೈಲುಗಳು ಹೊರಡುವ ಸಮಯ ಮರುನಿಗದಿ

ಉದಯಪುರ ಸಿಟಿ–ಮೈಸೂರು ಎಕ್ಸ್‌ಪ್ರೆಸ್ (19667): ಆಗಸ್ಟ್ 17 ಮತ್ತು 24 ರಂದು ಉದಯಪುರದಿಂದ ಹೊರಡಬೇಕಿದ್ದ ರೈಲು ನಿಯಮಿತ ಸಮಯಕ್ಕಿಂತ 200 ನಿಮಿಷ (3 ಗಂಟೆ 20 ನಿಮಿಷ) ವಿಳಂಬವಾಗಿ ಹೊರಡಲಿದೆ.

ಶ್ರೀ ಗಂಗಾನಗರ–ತಿರುಚಿರಾಪಳ್ಳಿ ಎಕ್ಸ್‌ಪ್ರೆಸ್ (22497): ಆಗಸ್ಟ್ 17 ಮತ್ತು 24 ರಂದು 150 ನಿಮಿಷ (2.5 ಗಂಟೆ) ವಿಳಂಬವಾಗಿ ಹೊರಡಲಿದೆ.

ವೇಲಂಕಣ್ಣಿ–ವಾಸ್ಕೋ ಡ ಗಾಮ ಎಕ್ಸ್‌ಪ್ರೆಸ್ (17316): ಆಗಸ್ಟ್ 18 ಮತ್ತು 25 ರಂದು 60 ನಿಮಿಷ ವಿಳಂಬವಾಗಿ ಹೊರಡಲಿದೆ.

ಎಸ್‌ಎಸ್‌ಎಸ್ ಹುಬ್ಬಳ್ಳಿ–ತಿರುವನಂತಪುರಂ ನಾರ್ತ್ ಎಕ್ಸ್‌ಪ್ರೆಸ್ (12777): ಆಗಸ್ಟ್ 19 ಮತ್ತು 26 ರಂದು ಹುಬ್ಬಳ್ಳಿಯಿಂದ 90 ನಿಮಿಷ ವಿಳಂಬವಾಗಿ ಹೊರಡಲಿದೆ.

ಮಾರ್ಗಮಧ್ಯೆ ರೈಲುಗಳ ವಿಳಂಬ/ನಿಯಂತ್ರಣ :

ಯಶವಂತಪುರ–ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ (12649): ಆಗಸ್ಟ್ 19 ಮತ್ತು 26 ರಂದು ಮಾರ್ಗಮಧ್ಯೆ 15 ನಿಮಿಷ ತಡೆಯಲಾಗುವುದು.

ವಾಸ್ಕೋ ಡ ಗಾಮ–ಯಶವಂತಪುರ ಎಕ್ಸ್‌ಪ್ರೆಸ್ (17310): ಆಗಸ್ಟ್ 21 ಮತ್ತು 22 ರಂದು ಮಾರ್ಗಮಧ್ಯೆ 20 ನಿಮಿಷ ತಡೆಯಲಾಗುವುದು.

ಹಾಸನ, ಹೊಳೆನರಸೀಪುರ ಮಾರ್ಗದ ಹಲವು ರೈಲುಗಳು ರದ್ದು, ಮಾರ್ಪಾಡು

ನೈರುತ್ಯ ರೈಲ್ವೆ ವ್ಯಾಪ್ತಿಯ ಹಾಸನ ಹಾಗೂ ಹೊಳೆನರಸೀಪುರ ರೈಲ್ವೇ ಯಾರ್ಡ್‌ಗಳಲ್ಲಿ ಅತ್ಯಗತ್ಯ ನಿರ್ವಹಣಾ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಈ ಮಾರ್ಗದಲ್ಲಿ ಸಂಚರಿಸುವ ಹಲವು ಪ್ರಮುಖ ರೈಲುಗಳ ಸಂಚಾರವನ್ನು ಸಂಪೂರ್ಣ ರದ್ದು, ಭಾಗಶಃ ರದ್ದು ಹಾಗೂ ವೇಳಾಪಟ್ಟಿಯಲ್ಲಿ ಮಾರ್ಪಾಡು (ನಿಯಂತ್ರಣ) ಮಾಡಲಾಗಿದೆ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕಣಮಡಿ ತಿಳಿಸಿದ್ದಾರೆ.

ಸಂಪೂರ್ಣ ರದ್ದಾಗಿರುವ ರೈಲುಗಳು :

ಅರಸೀಕೆರೆ – ಮೈಸೂರು ಡೈಲಿ ಪ್ಯಾಸೆಂಜರ್ (ರೈಲು ಸಂಖ್ಯೆ: 56267): ಈ ರೈಲಿನ ಸಂಚಾರವನ್ನು ಆಗಸ್ಟ್ 19, 2026 ರಂದು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

ಮೈಸೂರು – ಅರಸೀಕೆರೆ ಡೈಲಿ ಪ್ಯಾಸೆಂಜರ್ (ರೈಲು ಸಂಖ್ಯೆ: 56268): ಈ ರೈಲಿನ ಸಂಚಾರವನ್ನು ಆಗಸ್ಟ್ 25, 2026 ಮತ್ತು ಸೆಪ್ಟೆಂಬರ್ 01, 2026 ರಂದು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

ಭಾಗಶಃ ರದ್ದಾಗಿರುವ ರೈಲುಗಳು :

ಮೈಸೂರು – ಶಿವಮೊಗ್ಗ ಟೌನ್ ಡೈಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 16225): ಈ ರೈಲು ಆಗಸ್ಟ್ 19, 2026 ರಂದು ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದಾಗಲಿದೆ (ಅರಸೀಕೆರೆಯಿಂದ ಶಿವಮೊಗ್ಗಕ್ಕೆ ಎಂದಿನಂತೆ ಸಂಚರಿಸಲಿದೆ).

ಶಿವಮೊಗ್ಗ ಟೌನ್ – ಮೈಸೂರು ಡೈಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 16226): ಈ ರೈಲು ಆಗಸ್ಟ್ 25, 2026 ಮತ್ತು ಸೆಪ್ಟೆಂಬರ್ 01, 2026 ರಂದು ಅರಸೀಕೆರೆ ಮತ್ತು ಮೈಸೂರು ನಡುವೆ ಭಾಗಶಃ ರದ್ದಾಗಲಿದೆ.

ರೈಲು ಸಂಚಾರ ವೇಳಾಪಟ್ಟಿ ನಿಯಂತ್ರಣ :

ತಾಳಗುಪ್ಪ – ಮೈಸೂರು ಕುವೆಂಪು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 16221): ಆಗಸ್ಟ್ 19, 2026 ರಂದು ಪ್ರಾರಂಭವಾಗುವ ಈ ರೈಲಿನ ಸಂಚಾರವನ್ನು ಮಾರ್ಗಮಧ್ಯೆ 90 ನಿಮಿಷಗಳ ಕಾಲ (1 ಗಂಟೆ 30 ನಿಮಿಷ) ನಿಯಂತ್ರಿಸಲಾಗುತ್ತದೆ (ವಿಳಂಬವಾಗಿ ತಲುಪಲಿದೆ).

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:48 am, Wed, 19 August 26

Follow Us
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಹೈಕೋರ್ಟ್​ನಲ್ಲಿ ದರ್ಶನ್ ಪರ ಆದೇಶ ಬಂದಿದ್ದು ಹೇಗೆ? ವಿವರ ನೀಡಿದ ವಕೀಲರು
ಹೈಕೋರ್ಟ್​ನಲ್ಲಿ ದರ್ಶನ್ ಪರ ಆದೇಶ ಬಂದಿದ್ದು ಹೇಗೆ? ವಿವರ ನೀಡಿದ ವಕೀಲರು
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!
ಟ್ರಾಲಿ ಬ್ಯಾಗ್​ನಲ್ಲಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳು ವಶಕ್ಕೆ 
ಟ್ರಾಲಿ ಬ್ಯಾಗ್​ನಲ್ಲಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳು ವಶಕ್ಕೆ 
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಕೆಎನ್ ರಾಜಣ್ಣ ನಡೆ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಕೆಎನ್ ರಾಜಣ್ಣ ನಡೆ
ಸಿಎಂ ಡಿಕೆಶಿ ಆರೋಗ್ಯದಲ್ಲಿ ಕೊಂಚ ಏರುಪೇರು: ವೈದ್ಯರು ದೌಡು, ಏನಾಯ್ತು?
ಸಿಎಂ ಡಿಕೆಶಿ ಆರೋಗ್ಯದಲ್ಲಿ ಕೊಂಚ ಏರುಪೇರು: ವೈದ್ಯರು ದೌಡು, ಏನಾಯ್ತು?
ಬಿಗ್​​ಬಾಸ್​: ತಾಂಡವ್ ‘ಖಾಲಿ ಪಲಾವ್, ಗಗನ್ ‘ಕೊಳೆತ ಟೊಮ್ಯಾಟೊ’
ಬಿಗ್​​ಬಾಸ್​: ತಾಂಡವ್ ‘ಖಾಲಿ ಪಲಾವ್, ಗಗನ್ ‘ಕೊಳೆತ ಟೊಮ್ಯಾಟೊ’
ರಸ್ತೆ ಕಾಮಗಾರಿ ಗುದ್ದಲಿ ಪೂಜೆ ವೇಳೆ MLC-MLA ನಡುವೆ ಮಾತಿನ ಚಕಮಕಿ
ರಸ್ತೆ ಕಾಮಗಾರಿ ಗುದ್ದಲಿ ಪೂಜೆ ವೇಳೆ MLC-MLA ನಡುವೆ ಮಾತಿನ ಚಕಮಕಿ
ಆ್ಯಕ್ಟಿವಿಟಿ ಮಾಡದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕನಿಂದ ಅಮಾನವೀಯ ಹಲ್ಲೆ
ಆ್ಯಕ್ಟಿವಿಟಿ ಮಾಡದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕನಿಂದ ಅಮಾನವೀಯ ಹಲ್ಲೆ
ಆರೋಪಗಳೆಲ್ಲ ಸುಳ್ಳು, ಹಣ ಕೂಡ ಅವರು ಕೊಟ್ಟದ್ದಲ್ಲ: ಪ್ರಜ್ವಲ್ ದೇವರಾಜ್
ಆರೋಪಗಳೆಲ್ಲ ಸುಳ್ಳು, ಹಣ ಕೂಡ ಅವರು ಕೊಟ್ಟದ್ದಲ್ಲ: ಪ್ರಜ್ವಲ್ ದೇವರಾಜ್