AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜನೀಕಾಂತ್ ಸಿನಿಮಾನಲ್ಲಿ ಶ್ರೀಲೀಲಾ, ಚಿತ್ರೀಕರಣದಲ್ಲಿ ಭಾಗಿ

ತೆಲುಗಿನಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲೇ ಸ್ಟಾರ್ ನಟಿಯಾಗಿ ಹೆಸರು ಗಳಿಸಿಕೊಂಡ ಶ್ರೀಲೀಲಾ, ತೆಲುಗಿನ ಸ್ಟಾರ್ ನಟರುಗಳಾದ ಪವನ್ ಕಲ್ಯಾಣ್, ಮಹೇಶ್ ಬಾಬು, ನಂದಮೂರಿ ಬಾಲಕೃಷ್ಣ, ರವಿತೇಜ, ರಾಮ್ ಇನ್ನೂ ಕೆಲವರೊಟ್ಟಿಗೆ ನಟಿಸಿ ಬೇಡಿಕೆಯ ನಟಿ ಎನಿಸಿಕೊಂಡಿದ್ದರು. ತಮಿಳಿಗೆ ಹೋಗಿ ಅಲ್ಲಿಯೂ ಸಹ ಒಂದರ ಹಿಂದೊಂದು ದೊಡ್ಡ ಅವಕಾಶಗಳನ್ನು ಬಾಚಿಕೊಳ್ಳುತ್ತಿರುವ ಶ್ರೀಲೀಲಾ ಇದೀಗ ರಜನೀಕಾಂತ್ ಸಿನಿಮಾನಲ್ಲಿ ನಟನೆ ಮಾಡುತ್ತಿದ್ದಾರೆ.

ರಜನೀಕಾಂತ್ ಸಿನಿಮಾನಲ್ಲಿ ಶ್ರೀಲೀಲಾ, ಚಿತ್ರೀಕರಣದಲ್ಲಿ ಭಾಗಿ
Sreeleela Rajinikanth
ಮಂಜುನಾಥ ಸಿ.
|

Updated on: Sep 30, 2026 | 6:05 PM

Share

ಮುಖ್ಯಾಂಶಗಳು

  • ರಜನೀಕಾಂತ್ ಸಿನಿಮಾನಲ್ಲಿ ಶ್ರೀಲೀಲಾ
  • ‘ಧರ್ಮನ್’ ಸಿನಿಮಾನಲ್ಲಿ ಶ್ರೀಲೀಲಾ ನಟನೆ
  • ರಜನೀಕಾಂತ್ ಮಗಳ ಪಾತ್ರದಲ್ಲಿ ನಟಿ?

ಕನ್ನಡದ ನಟಿ ಶ್ರೀಲೀಲಾ ಈಗ ಪ್ಯಾನ್ ಇಂಡಿಯಾ ನಟಿ. ಕನ್ನಡ ಸಿನಿಮಾ ಮೂಲಕ ನಟನೆ ಆರಂಭಿಸಿದ ಚೆಲುವೆ ಈಗ ಪರ ಭಾಷೆ ಸಿನಿಮಾಗಳಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ತೆಲುಗಿನಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲೇ ಸ್ಟಾರ್ ನಟಿಯಾಗಿ ಹೆಸರು ಗಳಿಸಿಕೊಂಡ ಶ್ರೀಲೀಲಾ, ತೆಲುಗಿನ ಸ್ಟಾರ್ ನಟರುಗಳಾದ ಪವನ್ ಕಲ್ಯಾಣ್, ಮಹೇಶ್ ಬಾಬು, ನಂದಮೂರಿ ಬಾಲಕೃಷ್ಣ, ರವಿತೇಜ, ರಾಮ್ ಇನ್ನೂ ಕೆಲವರೊಟ್ಟಿಗೆ ನಟಿಸಿ ಬೇಡಿಕೆಯ ನಟಿ ಎನಿಸಿಕೊಂಡಿದ್ದರು. ತಮಿಳಿಗೆ ಹೋಗಿ ಅಲ್ಲಿಯೂ ಸಹ ಒಂದರ ಹಿಂದೊಂದು ದೊಡ್ಡ ಅವಕಾಶಗಳನ್ನು ಬಾಚಿಕೊಳ್ಳುತ್ತಿರುವ ಶ್ರೀಲೀಲಾ ಇದೀಗ ರಜನೀಕಾಂತ್ ಸಿನಿಮಾನಲ್ಲಿ ನಟನೆ ಮಾಡುತ್ತಿದ್ದಾರೆ.

ರಜನೀಕಾಂತ್ ಅವರು ‘ಜೈಲರ್ 2’ ಸಿನಿಮಾ ಮುಗಿಸಿದ್ದು, ಇದೀಗ ‘ಧರ್ಮನ್’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದು, ಆ ಸಿನಿಮಾಕ್ಕೆ ಕಮಲ್ ಹಾಸನ್ ನಿರ್ಮಾಪಕ. ಸಿನಿಮಾನಲ್ಲಿ ರಜನೀಕಾಂತ್ ಅವರು ವೈದ್ಯನ ಪಾತ್ರದಲ್ಲಿ ನಟನೆ ಮಾಡುತ್ತಿದ್ದು ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಸಿನಿಮಾನಲ್ಲಿ ದೊಡ್ಡ ತಾರಾಗಣವೇ ಇದ್ದು, ಇದೇ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಶ್ರೀಲೀಲಾ ಸಹ ನಟಿಸಲಿದ್ದು, ಸಿನಿಮಾದ ಚಿತ್ರೀಕರಣದಲ್ಲಿ ಸಹ ಶ್ರೀಲೀಲಾ ಪಾಲ್ಗೊಂಡಿದ್ದಾರೆ.

‘ಧರ್ಮನ್’ ಸಿನಿಮಾದ ಚಿತ್ರೀಕರಣ ಮೈಸೂರು ಸಮೀಪದ ಟಿ.ನರಸೀಪುರ ತಾಲೂಕಿನ ಐತಿಹಾಸಿಕ ಸೋಮನಾಥಪುರ ದೇವಾಲಯ ಹಾಗೂ ಅದರ ಸುತ್ತ-ಮುತ್ತ ನಡೆಯುತ್ತಿದ್ದು, ರಜನೀಕಾಂತ್ ಅವರು ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ವಿಶೇಷವೆಂದರೆ ಇಂದು (ಸೆಪ್ಟೆಂಬರ್ 30) ಸಿನಿಮಾ ಚಿತ್ರೀಕರಣದಲ್ಲಿ ಆಟೋನಲ್ಲಿ ಬಂದಿದ್ದರು. ಇದೇ ದಿನ ಶ್ರೀಲೀಲಾ ಸಹ ‘ಧರ್ಮನ್’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಶ್ರೀಲೀಲಾ ಅವರಿಗೆ ‘ಧರ್ಮನ್’ ಸಿನಿಮಾದ ಮೊದಲ ಶೆಡ್ಯೂಲ್ ಇದಾಗಿದ್ದು, ರಜನೀಕಾಂತ್ ಅವರ ಪುತ್ರಿಯ ಪಾತ್ರದಲ್ಲಿ ಶ್ರೀಲೀಲಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಬೆಂಗಳೂರು-ಹೈದರಾಬಾದ್ ತೊರೆದು ಮುಂಬೈಗೆ ಹೊರಟ ಶ್ರೀಲೀಲಾ

ಸೋಮನಾಥಪುರ ದೇವಾಲಯದ ಬಳಿ ಸಿನಿಮಾದ ಹಾಡಿನ ಚಿತ್ರೀಕರಣ ನಡೆಯಲಿದ್ದು, ಶ್ರೀಲೀಲಾ ಅವರು ಸುಂದರವಾದ ಸೀರೆ ಉಟ್ಟು ದೇವಾಲಯದ ಬಳಿ ಕಾಣಿಸಿಕೊಂಡಿದ್ದಾರೆ. ರಜನೀಕಾಂತ್ ಸಹ ಕೆಂಪು ಬಣ್ಣದ ಶರ್ಟು, ಬಿಳಿ ಪಂಚೆ ತೊಟ್ಟು ಕಾಣಿಸಿಕೊಂಡಿದ್ದಾರೆ. ಹಾಡಿನ ಚಿತ್ರೀಕರಣ ಮಾತ್ರವೇ ಅಲ್ಲದೆ ಕೆಲವು ದೃಶ್ಯಗಳ ಚಿತ್ರೀಕರಣವನ್ನು ಸಹ ಇಲ್ಲಿಯೇ ಚಿತ್ರತಂಡ ನಡೆಸಲಿದೆ.

‘ಧರ್ಮನ್’ ಸಿನಿಮಾನಲ್ಲಿ ಸಿಮ್ರನ್ ಹಾಗೂ ರಾಶಿ ಖನ್ನಾ ಸಹ ನಾಯಕಿಯರಾಗಿ ನಟಿಸುತ್ತಿದ್ದಾರೆ. ಸಿನಿಮಾನಲ್ಲಿ ತೆಲುಗಿನ ಜನಪ್ರಿಯ ನಟ ರಾಮ್ ಸಹ ನಟಿಸುತ್ತಿದ್ದು, ರಾಮ್ ಅವರು ವಿಲನ್ ಪಾತ್ರದಲ್ಲಿ ನಟನೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ರಾಮ್ ಈ ವರೆಗೆ ಕೇವಲ ಹೀರೋ ಪಾತ್ರಗಳಲ್ಲಿ ಮಾತ್ರವೇ ನಟಿಸಿದ್ದರು. ಇದೇ ಮೊದಲ ಬಾರಿಗೆ ಅವರು ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕಮಲ್ ಹಾಸನ್ ನಿರ್ಮಾಣ ಮಾಡಿರುವ ಈ ಸಿನಿಮಾ ಅನ್ನು ಅಶ್ವತ್ಥ್ ಮಾರಿಮುತ್ತು ನಿರ್ದೇಶನ ಮಾಡುತ್ತಿದ್ದಾರೆ. ಮುಂದಿನ ವರ್ಷ ಸಂಕ್ರಾಂತಿ ವೇಳೆಗೆ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!