ಬಿಗ್ ಬಾಸ್ ಅಗ್ನಿಪರೀಕ್ಷೆಯಿಂದ ಆಯ್ಕೆ ಆಗೋರು ಎಷ್ಟು? ಇಲ್ಲಿದೆ ವಿವರ
‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗಲೇ ಶೋ ಬಗ್ಗೆ ಒಂದು ದೊಡ್ಡ ಅಪ್ಡೇಟ್ ಸಿಕ್ಕಿದೆ. ಈ ಶೋನಲ್ಲಿ ಒಟ್ಟೂ ಆಯ್ಕೆ ಆಗುವವರ ಸಂಖ್ಯೆ ಕೇವಲ 3. ಈಬಗ್ಗೆ ಬಿಗ್ ಬಾಸ್ ಕಡೆಯಿಂದ ಅಧಿಕೃತ ಮಾಹಿತಿ ಸಿಕ್ಕಿದೆ. ತಂಡದವರೇ ಈ ಬಗ್ಗೆ ಹೇಳಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶೋ ಆರಂಭ ಆಗಲಿದೆ. ಅದಕ್ಕೂ ಮೊದಲು ಸಾಮಾನ್ಯ ಜನರ ಆಯ್ಕೆಗೆ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಆರಂಭಿಸಿದೆ. ಇದರಲ್ಲಿ ಮೊದಲ ಹಂತದಲ್ಲಿ 60 ಜನರ ಆಯ್ಕೆ ಮಾಡಲಾಗಿತ್ತು. ಇವರನ್ನು ಸಂಗೀತಾ ಶೃಂಗೇರಿ, ವಿನಯ್ ಗೌಡ, ಚಂದನ್ ಶೆಟ್ಟಿ ಹಾಗೂ ಶ್ರುತಿ ಜಡ್ಜ್ ಸ್ಥಾನದಲ್ಲಿ ಇದ್ದು ಕೆಲವರನ್ನು ಸೆಲೆಕ್ಟ್ ಮಾಡಿದ್ದಾರೆ. ಕೆಲವರು ಮುಂದಿನ ಹಂತಕ್ಕೆ ನೇರವಾಗಿ ಆಯ್ಕೆ ಆದರೆ, ಇನ್ನೂ ಕೆಲವರು ಹೋಲ್ಡ್ ಅಲ್ಲಿದ್ದಾರೆ. ಇವೆರಲ್ಲರ ಪೈಕಿ ಕೇವಲ ಮೂವರನ್ನು ಮಾತ್ರ ಬಿಗ್ ಬಾಸ್ ಮನೆಗೆ ಕಳುಹಿಸಲಾಗುತ್ತದೆ ಎಂಬ ಮಾಹಿತಿಯನ್ನು ಕಲರ್ಸ್ ಕನ್ನಡ ನೀಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us

