AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ನೋ-ಬಾಲ್‌; ಅಗ್ರಸ್ಥಾನದಲ್ಲಿ ಜಡೇಜಾ

Ravindra Jadeja's No-Ball Nightmare: ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಎಸೆದ ನೋ-ಬಾಲ್‌ನಿಂದ ಟೀಂ ಇಂಡಿಯಾಕ್ಕೆ ನಿರ್ಣಾಯಕ ವಿಕೆಟ್ ಕೈತಪ್ಪಿತು. ಇದು ಕೇವಲ ಒಂದೇ ಘಟನೆಯಲ್ಲ; ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ನೋ-ಬಾಲ್‌ಗಳನ್ನು ಎಸೆದ ಸ್ಪಿನ್ನರ್ ಎಂಬ ಅನಗತ್ಯ ದಾಖಲೆ ಜಡೇಜಾ ಹೆಸರಿನಲ್ಲಿದೆ. ಅವರ ಈ ಪದೇ ಪದೇ ತಪ್ಪು ತಂಡಕ್ಕೆ ದೊಡ್ಡ ತಲೆನೋವಾಗಿದೆ. ಜಡೇಜಾ ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳುವುದು ಅನಿವಾರ್ಯ.

ಪೃಥ್ವಿಶಂಕರ
|

Updated on: Aug 18, 2026 | 9:41 PM

Share
ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ ಬ್ಯಾಟಿಂಗ್​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದಿದ್ದರೂ, ಬೌಲಿಂಗ್​ನಲ್ಲಿ ತಂಡಕ್ಕೆ ನೆರವಾಗಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ 3 ವಿಕೆಟ್‌ಗಳನ್ನು ಕಬಳಿಸಿದ್ದ ಜಡೇಜಾ ಎರಡನೇ ಇನ್ನಿಂಗ್ಸ್​ನಲ್ಲಿಯೂ ಶಿಸ್ತುಬದ್ಧ ದಾಳಿ ನಡೆಸುತ್ತಿದ್ದಾರೆ. ಆದಾಗ್ಯೂ ಜಡೇಜಾ ಮಾಡಿದ ಅದೊಂದು ತಪ್ಪು ವಿಕೆಟ್ ಕೈತಪ್ಪುವಂತೆ ಮಾಡಿತು(PC-PTI).

1 / 5
ಶ್ರೀಲಂಕಾದ ಎರಡನೇ ಇನ್ನಿಂಗ್ಸ್​ನ 16ನೇ ಓವರ್ ಬೌಲ್ ಮಾಡಿದ ರವೀಂದ್ರ ಜಡೇಜಾ ಓವರ್​ನ ಕೊನೆಯ ಎಸೆತದಲ್ಲಿ ವಿಕೆಟ್ ಸಿಗುವ ಅವಕಾಶ ಸೃಷ್ಟಿಸಿದರು. ಜಡೇಜಾ ಬೌಲಿಂಗ್​ನಲ್ಲಿ ಲಂಕಾ ನಾಯಕ ಧನಂಜಯ ಡಿ ಸಿಲ್ವಾ ನೀಡಿದ ಕ್ಯಾಚ್ ಅನ್ನು ಕೆಎಲ್ ರಾಹುಲ್​ ತೆಗೆದುಕೊಂಡರು. ಆದರೆ ಜಡೇಜಾ ಬೌಲ್ ಮಾಡಿದ ಆ ಚೆಂಡು ನೋ ಬಾಲ್ ಎಂದು ಮೂರನೇ ಅಂಪೈರ್ ಘೋಷಿಸುವ ಮೂಲಕ ಟೀಂ ಇಂಡಿಯಾದ ಸಂಭ್ರಮಕ್ಕೆ ತಣ್ಣೀರೆರೆಚಿದರು(PC-PTI).

2 / 5
ಇದರಿಂದಾಗಿ ತಂಡಕ್ಕೆ ಸಿಗಬೇಕಿದ್ದ ವಿಕೆಟ್ ಕೈತಪ್ಪಿತು. ಯಾವುದೇ ಬೌಲರ್ ಆಗಿರಲಿ ಪಂದ್ಯದಲ್ಲಿ ನೋ ಬಾಲ್ ಎಸೆಯುವುದನ್ನು ಅಕ್ಷಮ್ಯ ಎನ್ನಲಾಗುತ್ತದೆ. ಆದಾಗ್ಯೂ ಜಡೇಜಾ ಟೆಸ್ಟ್ ಕ್ರಿಕೆಟ್​ನಲ್ಲಿ ನೋ ಬಾಲ್ ಎಸೆಯುವಂತಹ ದೊಡ್ಡ ಅಪರಾಧವನ್ನು ಪದೇ ಪದೇ ಮಾಡುತ್ತಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ಜಡೇಜಾ ಆಗಾಗ್ಗೆ ನೋ ಬಾಲ್ ಎಸೆಯುವ ಕಯಾಲಿಯನ್ನು ಮುಂದವರೆಸಿದ್ದಾರೆ(PC-PTI).

3 / 5
ಇಂದಿನ ಪಂದ್ಯದಲ್ಲಿ ಮಾತ್ರವಲ್ಲ ಅಂಕಿಅಂಶಗಳನ್ನು ನೋಡಿದರೆ, ರವೀಂದ್ರ ಜಡೇಜಾ ಸ್ಪಿನ್ನರ್‌ಗಳಲ್ಲಿ ಅತಿ ಹೆಚ್ಚು ಟೆಸ್ಟ್ ನೋ-ಬಾಲ್‌ಗಳನ್ನು ಎಸೆದ ಬೇಡದ ದಾಖಲೆಯನ್ನು ಹೊಂದಿದ್ದಾರೆ. ಜಡೇಜಾ ಇದುವರೆಗೆ 84 ನೋ-ಬಾಲ್‌ಗಳನ್ನು ಎಸೆಯುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ(PC-PTI).

4 / 5
 ಪಾಕಿಸ್ತಾನದ ನೌಮನ್ ಅಲಿ 40 ನೋ-ಬಾಲ್‌ಗಳನ್ನು ಎಸೆಯುವ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಜಡೇಜಾ ಮತ್ತು ನೌಮನ್ ನಡುವಿನ ಅಂತರ ದೊಡ್ಡದಿದೆ. ಹೀಗಾಗಿ, ಜಡೇಜಾ ತಮ್ಮ ವೃತ್ತಿಜೀವನ ಮುಗಿಯುವ ಹಂತಕ್ಕೆ ಬಂದರೂ ತನ್ನ ಹಳೆಯ ತಪ್ಪನ್ನು ಸರಿಪಡಿಸಿಕೊಳ್ಳದೆ ಇರುವುದು ತಂಡಕ್ಕೆ ದೊಡ್ಡ ತಲೆನೋವಾಗಿದೆ(PC-PTI).

5 / 5
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್

ದಿನ ಭವಿಷ್ಯ: ರವಿ ಕನ್ಯಾ, ಚಂದ್ರ ಮೀನ ರಾಶಿಯ ರೇವತಿ ನಕ್ಷತ್ರದಲ್ಲಿ ಸಂಚಾರ

ಹಿಂದೂಗಳು ಯಾರ ಮೇಲೂ ಮುಗಿಬೀಳಲ್ಲ, ತಂಟೆಗೆ ಬಂದ್ರೆ ಸುಮ್ನೆ ಬಿಡಲ್ಲ: ಸಿಂಹ

ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು

ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ

ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ

ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್

ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ

ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ

ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು